ಮಧ್ಯ ಬೆರಳಿನ ಪುರಾಣ - History of the Middle Finger
ಮಧ್ಯ ಬೆರಳಿನ ಪುರಾಣ
ಯಾವಾಗ್ಲಾದ್ರೂ, I mean ಒಂದ್ಸಲನಾದ್ರೂ, ನೀವು ಯಾರಮೇಲಾದ್ರೂ ಫುಲ್ಲ್ ಉರ್ಕೊಂಡು, ಖರಾಬ್ ಮೂಡಲ್ಲಿ ಇದ್ದಾಗ..
ಬಲಗೈನ ಮಧ್ಯದ ಬೆರಳನ್ನು ಎತ್ತಿ (ಮಿಕ್ಕೆಲ್ಲಾ ಬೆರಳನ್ನು ಮಡಿಚಿಕೊಂಡು) ಬಾಯಲ್ಲಿ "F**K You" ಅಂತಾ ಹೇಳಿ ತೋರಿಸಿದೀರಾ ತಾನೇ ? ಅಥವಾ ಈ ಥರಾ ಯಾರಾದ್ರೂ ಮಾಡೋದನ್ನು ನೋಡಿದೀರಾ ತಾನೆ ?
ಆ particular gesture ಯಾಕೆ ಬಂತು ಅನ್ನೋದು ಗೊತ್ತಾ ? ಓದಿ....
ದೇವ್ರಾಣೇಗ್ಲೂ ಇದರ ಬಗ್ಗೆ ಮುಂಚೆ ಗೊತ್ತಿರ್ಲಿಲ್ಲಾ. ಸ್ನೇಹಿತ ಶ್ರೀಕಾಂತ್ (ಶ್ವ್ರೀ) ಇದರ ಬಗ್ಗೆ ಹೇಳಿ, ಈ ಮೇಲ್ ಕಳಿಸುವ ತನಕ.
ಗೊತ್ತಾದ ಮೇಲೆ ಎಲ್ಲರಿಗೂ ತಿಳಿಸಬೇಕೆಂಬ ಆಸೆ, ಚಪಲ. ಎಲ್ರಿಗೂ ಹೇಳ್ಕೊಂಡು ಬರೋಕ್ಕಂತೂ ಆಗಲ್ಲಾ, ಅದಕ್ಕೆ ಬ್ಲಾಗಿನಲ್ಲಿ ಹಾಕಿದರೆ ಸರಿ ಅನ್ನುಸ್ತು.
Isnt History more fun when you know something about it ?
ಮುಂಚಿಂದಲೂ ಕೂಡಾ ಫ್ರೆಂಚ್ ಹಾಗು ಇಂಗ್ಲಿಷರಿಗೆ ಹತ್ತಿದ್ದು ಹರೀತಿರ್ಲಿಲ್ಲಾ ಅನ್ನೋದು ಎಲ್ಲರಿಗೂ ಸುಮಾರಾಗಿ ತಿಳಿದಿರುವ ವಿಚಾರ. ಈ ಮಧ್ಯ ಬೆರಳನ್ನು ತೋರಿಸುವ ಪರಿಪಾಠದ ಜನನ ಇವರಿಂದಲೇ.
ಮಧ್ಯಪ್ರಾಚ್ಯ ಯೂರೋಪಿನ ಏಜಿನ್ಕೋರ್ಟ್ ಕಾಳಗಕ್ಕೂ ಮುನ್ನ (Battle of Agincourt A.D. 1415) ಫ್ರೆಂಚರು, ಬ್ರಿಟಿಷರನ್ನು ಸೋಲಿಸುವ ಉದ್ದೇಶದಿಂದ ಅವರ ಬಳಿ ಸೆರೆಹಿಡಿಯಲಾಗಿದ್ದ ಬ್ರಿಟಿಷ್ ಯುದ್ಧಖೈದಿಗಳ ಬಲಗೈ ಮಧ್ಯಬೆರಳನ್ನು ಕತ್ತರಿಸುವ ಪರಿಪಾಠ ಬೆಳೆಸಿಕೊಂಡರು. ಮಧ್ಯದ ಬೆರಳಿಲ್ಲದಿದ್ದರೆ ಬ್ರಿಟಿಷರು ತಮ್ಮ ಬಿಲ್ಲಿನ ಹುರಿಯನ್ನು ಸಮರ್ಥವಾಗಿ ಎಳೆಯಲು ಅಸಾಧ್ಯ. ಬ್ರಿಟನ್ನಿನ ಬಿಲ್ಲು ತುಂಬಾ ಖ್ಯಾತವಾದದ್ದು. ಅದನ್ನು ಇಂಗ್ಲಿಷಿನಲ್ಲಿ "ENGLISH LONGBOW" ಎನ್ನುತ್ತಾರೆ.
ಈ ಬಿಲ್ಲನ್ನು ಇಂಗ್ಲೆಡಿನ್ನಲ್ಲೇ ಕಾಣಸಿಗುವ "YEW" ಎನ್ನುವ ಮರದಿಂದ ಮಾಡಲಾಗುತ್ತಿತ್ತು. ಹಾಗಾಗಿ ಬಿಲ್ಲಿನ ಹುರಿಯನ್ನು ಎಳೆದು ಬಾಣವನ್ನು ಬಿಡುವುದಕ್ಕೆ "Plucking the YEW" ಅಥವಾ "Pluck YEW" ಎನ್ನುತ್ತಿದ್ದರು. ಹೀಗೆ ಮಧ್ಯದ ಬೆರಳನ್ನು ಕತ್ತರಿಸಿ, ಬ್ರಿಟಿಷ್ ಬಿಲ್ಗಾರರನ್ನು ಕೈಲಾಗದವರಂತೆ ಮಾಡಿ ಯುದ್ಧವನ್ನು ಗೆಲ್ಲುವ ಇರಾದೆ ಇತ್ತು ಫ್ರೆಂಚರಿಗೆ.
ಅಶ್ಚರ್ಯವೆಂಬಂತೆ, ಫ್ರೆಂಚರು ಮಾಡಿದ ಒಂದು ಸಣ್ಣ ತಪ್ಪಿಗೆ ಬ್ರಿಟಿಷರು ಮೇಲುಗೈ ಸಾಧಿಸಿ ಜಯಗಳಿಸಿದರು. ಹೀಗೆ ಆದ್ಮೇಲೆ ಸುಮ್ನಿರೋದಕ್ಕೆ ಆಗುತ್ತಾ ? ಸೋತ ಫ್ರೆಂಚರನ್ನು ಅಣಕ ಮಾಡಿ ಉರಿಸಲು ಶುರು ಮಾಡಿದರು. ಹೇಗೆ ??
ತಮ್ಮ ಬಲಗೈನ ಮಧ್ಯ ಬೆರಳನ್ನು ತೋರಿಸಿ - "ನೋಡ್ರಪ್ಪಾ, ನಾವು ಬಾಣ ಬಿಡಲು ಸಾಧ್ಯ (See, We can still Pluck the YEW)" ಎಂದು.
PLUCK YEW ಅಂತಾ ಹೇಳೋದು ಕಷ್ಟವೆಂದು, ಅದನ್ನು ಅವರ ಅನುಗುಣವಾಗಿ F ಗೆ ತಿದ್ದಿಕೊಂಡರು. ಇದನ್ನು LABODENTALS FRICTAVE ಅನ್ನುತ್ತಾರೆ.
ಅಂದರೆ PL (ಪ್ಲ) ಅನ್ನುವ ಜಾಗದಲ್ಲಿ F (ಫ) ಎನ್ನುತ್ತಾರೆ. ಹಾಗಾಗಿ PLUCK YEW ಅನ್ನೋದು F**K YEW ಆಯಿತು.
ಹಾಗಾಗಿ ಈ ಪದವು ಮಧ್ಯ ಬೆರಳಿನ ಸೆಲ್ಯೂಟಿನ (Middle Finger Salute) ಸಂಕೇತವಾಯಿತು.
ಬ್ರಿಟಿಷರ ಪ್ರಕಾರ ಇವತ್ತಿಗೂ ಇದು ಫ್ರೆಂಚರಿಗೆ ಸೆಲ್ಯೂಟ್ ಮಾಡುವ ಸರಿಯಾದ ರೀತಿಯಂತೆ.
AND YEW THOUGHT YEW KNEW EVERY PLUCKING THING
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com

- Login or register to post comments
- 360 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮಧ್ಯ ಬೆರಳಿನ ಪುರಾಣ - History of the Middle Finger
ಹೌದೆ, ಗೊತ್ತೇ ಇರ್ಲಿಲ್ಲ! ನಾನು ಅಪಾರ್ಥ ಮಾಡಿಕೊಂಡು ಕೋಪ ಮಾಡ್ಕೋತಿದ್ದೆ. ತುಂಬ ಜನಕ್ಕೆ ಇದು ಗೊತ್ತಿರೊಲ್ಲ ಅನ್ಸತ್ತೆ.
~ಕಲ್ಪನ
ಉ: ಮಧ್ಯ ಬೆರಳಿನ ಪುರಾಣ - History of the Middle Finger
ಶಂಕ್ರ,
ತುಂಬಾ ಒಳ್ಳೇ ಮಾಹಿತಿ.
ಬಹಳಷ್ಟು ಜನಕ್ಕೆ ಈ ಮಾಹಿತಿ ತಿಳಿದಿರುವುದಿಲ್ಲ ಅಂತ ಅನ್ಸುತ್ತೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಮಧ್ಯ ಬೆರಳಿನ ಪುರಾಣ - History of the Middle Finger
ತಪ್ಪು ತಿಳಿಬೇಡಿ, ಆದರೆ ನಿಮ್ಮ ಹೇಳಿಕೆಗೆ [citation needed] ಅಂತ ವಿಕಿಪೀಡಿಯ ಸ್ಟೈಲಿನಲ್ಲಿ ಹೇಳಬೇಕಾಗುತ್ತದೆ.
ಈ ಕಥೆ ಯಾರೋ ಜನರ ಭೋಳೇ ಸ್ವಭಾವವನ್ನು ದುರುಪಯೋಗ ಮಾಡಿಕೊಂಡು ಮಜಾ ತೆಗೆದುಕೊಳ್ಳುವವರು ಬರೆದ ಹಾಗೆ ಇದೆ.
ಇದರ ಮೇಲಿನ ವಿಕಿಪೀಡಿಯಾ ಲೇಖನ ಇದನ್ನು urban legend (ಅಡಗೂಲಜ್ಜಿ ಕಥೆ) ಅಂತ ಸ್ಪಷ್ಟವಾಗಿ ಹೇಳುತ್ತದೆ.
ಬ್ರಿಟಿಷರ ಪ್ರಕಾರ ಇವತ್ತಿಗೂ ಇದು ಫ್ರೆಂಚರಿಗೆ ಸೆಲ್ಯೂಟ್ ಮಾಡುವ ಸರಿಯಾದ ರೀತಿಯಂತೆ.
ಇದನ್ನು ಓದಿಯಂತೂ ಬ್ರಿಟೀಷರ ಮತ್ತು ಪ್ರೆಂಚರ ನಡುವೆ ಇರುವ ’ಪ್ರೀತಿಯ’ ಹಿನ್ನೆಲೆಯಲ್ಲಿ ಸಿಕ್ಕಾಪಟ್ಟೆ ನಗು ಬಂತು.
- Summer Glau
ಉ: ಮಧ್ಯ ಬೆರಳಿನ ಪುರಾಣ - History of the Middle Finger
"Citation needed" ವಿಕಿಪೀಡಿಯಾದಲ್ಲಿ ಕೊಟ್ಟಿದೆ ನಿಜ. ಆದ್ರೆ ವಿಕಿಪೀಡಿಯಾದಲ್ಲಿರುವ ಮಾಹಿತಿ ಕೂಡಾ 100% ನಿಜವೇ ?
ನಾನು ಹಾಕಿರೋದ್ರಿಂದ ಅದೇ ಸರಿ ಅನ್ನೋಥರಾ ನಾನು ಹೇಳ್ತಾ ಇಲ್ಲಾ. ಆದ್ರೆ, ಇದೂ ಕೂಡಾ ಒಂದು ಥಿಯರಿ ಅಷ್ಟೆ.
ಆದ್ರೆ, ಬ್ರಿಟಿಷರು ಹಾಗು ಫ್ರೆನ್ಚರುಗಳು ಇವತ್ತಿಗೂ ಕಿತ್ತಾಡ್ತಾರೆ.
ನಾವು ತಮಿಳರು ಕಿತ್ತಾಡೋ ಥರಾ.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ಮಧ್ಯ ಬೆರಳಿನ ಪುರಾಣ - History of the Middle Finger
ವಿಕಿಪೀಡಿಯಾದಲ್ಲಿ ಇರುವ ಮಾಹಿತಿ ಯಾವಾಗಲೂ ನಿಜ ಅಂತ ಅಲ್ಲ. ಆದರೆ ಸಾಧಾರಣವಾಗಿ ವಿಕಿಪೀಡಿಯದಲ್ಲಿ ಯಾವುದೇ statement ಹಿಂದೆ ಒಂದು ರೆಫರೆನ್ಸ್ ಇರುತ್ತೆ. ನೀವು ಆ ಲೇಖನ ನೋಡಿದಿರೋ ಇಲ್ಲವೋ ಗೊತ್ತಿಲ್ಲ ಆದರೆ ಈ ವಿಶಯ urban legend ಅಂತ ಹೇಳೋಕೆ http://snopes.com/language/apocryph/pluckyew.asp ನ ರೆಫರೆನ್ಸ್ ಕೊಟ್ಟಿದ್ದಾರೆ. snopes.com ಈ ರೀತಿಯ urban legend ಗಳ ವಿಶಯದಲ್ಲಿ ಬಹಳ ನಂಬಿಕಾರ್ಹವಾದ ಸೈಟ್.
ನೀವು ದಯವಿಟ್ಟು ಪರ್ಸನಲ್ಲಾಗಿ ತೊಗೋಬೇಡೀ ಸಾರ್. ನೀವು ತಪ್ಪು ಅಂತ ನಾನು ಹೇಳ್ತಾ ಇಲ್ಲ. ಈ ವಿಶಯ ತಪ್ಪು ಮತ್ತು ಕೇವಲ ಅಡಗೂಲಜ್ಜಿ ಕಥೆ ಅಂತ ಅಷ್ಟೆ ಹೇಳ್ತಾ ಇರೋದು. ಎರಡಕ್ಕೂ ಬಹಳ ವ್ಯತ್ಯಾಸವಿದೆ.
ಬ್ರಿಟೀಶರು ಪ್ರೆಂಚರು ಎಣ್ಣೆ-ಸೀಗೆಕಾಯಿ. ಅದಕ್ಕೆ ನಾನು ’ಪ್ರೀತಿಯ’ ಅನ್ನೋ ಶಬ್ದಕ್ಕೆ ಕೋಟ್ ತೊಡಿಸಿದ್ದು. ನನಗೆ ನಗು ಬಂದಿದ್ದು ಯಾಕೆ ಅಂದ್ರ ಈ ಲೇಖನ ಓದಿ ಯಾರದರೂ ಪ್ರೆಂಚರಿಗೆ ಈ ರೀತಿಯ ’ಸಲ್ಯೂಟ್’ ಮಾಡಿದರೆ ಪರಿಣಾಮ ಏನಾಗುತ್ತದೆ ಅಂತ ನೆನೆಸಿಕೊಂಡು
- Summer Glau
ಉ: ಮಧ್ಯ ಬೆರಳಿನ ಪುರಾಣ - History of the Middle Finger
ಇಲ್ಲಾ ಸಾರ್. ನಾನೇನು ಪರ್ಸನಲ್ ಆಗಿ ತಗೋತಾ ಇಲ್ಲಾ..
ನಾನು ಕೂಡಾ http://snopes.com/language/apocryph/pluckyew.asp ನಾ ನೋಡಿದೀನಿ.
ಸರಿ ಬಿಡಿ. ನಾನು ಇದನ್ನು ಒಂದು ಥಿಯರಿ ಅಂತಾ ಹಾಕಿದೀನಿ ಅಷ್ಟೆ.
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ಮಧ್ಯ ಬೆರಳಿನ ಪುರಾಣ - History of the Middle Finger
ಅಡ್ಡ ಬಿದ್ದೆ ಗುರೂ...ಅಡ್ಡ ಬಿದ್ದೆ..........
ಉ: ಮಧ್ಯ ಬೆರಳಿನ ಪುರಾಣ - History of the Middle Finger
ಶಿವಕುಮಾರರೆ.. ಯಾಕೆ ಸ್ವಾಮಿ ಅಡ್ಡ ಬೀಳ್ತೀರಾ ?
ಇಂತಿ,
ಶಂಕರ ಪ್ರಸಾದ
ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte.blogspot.com
ಉ: ಮಧ್ಯ ಬೆರಳಿನ ಪುರಾಣ - History of the Middle Finger
ಚೆನ್ನಾಗಿದೆ. ;D
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಮಧ್ಯ ಬೆರಳಿನ ಪುರಾಣ - History of the Middle Finger