24
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ

February 12, 2006 - 6:45pm
olnswamy
To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಕವಿ ಡಾ|| ಜಿ ಎಸ್ ಶಿವರುದ್ರಪ್ಪನವರ ಸಂದರ್ಶನ. ತಾವು ಅನೇಕರು ಜಿ ಎಸ್ ಎಸ್ ಅವರ ಎಷ್ಟೋ ಕವಿತೆಗಳನ್ನು ಓದಿದ್ದೀರಿ, ಹಾಡುಗಳನ್ನ ಕೇಳಿದ್ದೀರಿ, ಕನ್ನಡದ ತುಂಬ ಜನ ಪ್ರೀತಿಯನ್ನು ಗಳಿಸಿಕೊಂಡಿರುವ, ನಮ್ಮ ಎಷ್ಟೋ ಭಾವನೆಗಳಿಗೆ ಮಾತನ್ನು ಕೊಟ್ಟಿರುವ ಬಹಳ ಮುಖ್ಯವಾದ ಕವಿ ಅವರು. ಮೊನ್ನೆ ತಾನೆ, ಅಂದರೆ ಫೆಬ್ರುವರಿ ೭ನೇ ತಾರೀಖು ನಮ್ಮ ಜಿ ಎಸ್ ಎಸ್ ಅವರಿಗೆ ೮೦ ವರ್ಷ ತುಂಬಿ, ಈಗ ೮೧ರ ಹರೆಯಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಡೆದ ಈ ಸಂದರ್ಶನದಲ್ಲಿ:

೧. ಕಾವ್ಯೋದ್ಯಮ ಶುರು ಮಾಡಿದ್ದು, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದು, ಬಾಲ್ಯ

೨. ಕಾವ್ಯಗಳಲ್ಲಿ 'ಕತ್ತಲು ಬೆಳಕು' ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ಅಂತರಜಾಲದ ಕನ್ನಡಿಗರಿಗಾಗಿ ತಮ್ಮ ನೆಚ್ಚಿನ ಮೂರು ಕವನಗಳನ್ನೂ ಓದಿ, ತಮ್ಮ ಧ್ವನಿಯಲ್ಲೇ ನಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

>ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ.

(೨೮ MB) ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:

gss-oln
Dr G S Shivarudrappa

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Submitted by pandita on

manyare
nAnu sampadavannu kutUhaladinda nODabayasuvavaralli obba. adannu nIvu kElvala unicode nalli prakaTisuttiruvudarinda sAmanya windows98 iruvavaru nODalu sAdhyavAguttilla. Addarinda unicode vyApakavAgi balakege baruvavarege windows 98 AvRttiyannU prakaTisuvudu agatya.

athavA weft rUpadalli font hangillade nOdalAdaru AgabEku.

prItiyinda
paNDitArAdhya

Submitted by hpn on

Unicode text *can* be viewed on Windows 98.

Please [:http://sampada.net/fonthelp#win98|see the fonthelp page for more].

(ಕಂಗ್ಲಿಷ್ ಬಳಸೋದಕ್ಕಿಂತ ಇಂಗ್ಲಿಷ್ ಬಳಸೋದು ಹೆಚ್ಚು ಉಚಿತವಾಗಿ ತೋರಿದ್ದರಿಂದ ಮೇಲೆ ಇಂಗ್ಲೀಷಿನಲ್ಲಿ ಬರೆದಿರುವೆ)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by freespirit on

podcast ಕೇಳಿ ತುಂಬ ಖುಷಿಯಾಯ್ತು. ನಿಮ್ಮ ಕೆಲಸ ಹೀಗೆ ಮುಂದುವರೆಸಿ.

ಮಾನ್ಯ ಶಿವರುದ್ರಪ್ಪನವರ ಸಂದರ್ಶನ್ದ podcast ನಲ್ಲಿ ಏನೊ ತಪ್ಪುಗಳಿವೆ ಅನಿಸಿತು. ಸಂದ್ರಶನ ಮುಗಿಯುವದರೊಳಗೆ ಕಡತ ಚುಟುಕಗೊಂಡು ಪೂರ್ತಿ ಸಂದರ್ಶನ ಕೇಳಲಿಕ್ಕೆ ಆಗಲಿಲ್ಲವೇ ಎಂಬ ವ್ಯಥೆ. ದಯವಿಟ್ಟು ಈ Technical problemನ ಸರಿಪಡಿಸಿ.

ಧನ್ಯವಾದಗಳೊಂದಿಗೆ,
freespirit

Submitted by hpn on

ಇನ್ಯಾರಿಗಾದ್ರೂ ಹೀಗೇ ಆಗಿದೆಯಾ? ನನಗೆ ತಿಳಿದ ಮಟ್ಟಿಗೆ ಆಡಿಯೋ ಸಂಪೂರ್ಣವಾಗಿ ಅಪ್ಲೋಡ್ ಆಗಿದೆ.

ಕೊನೆಗೆ ಶಾಮರಾಯರ ಬಗ್ಗೆ ಅವರು ಹೇಳಿರುವ ಮಾತುಗಳು ಬಹುಶಃ ಸರಿಯಾದ ಕ್ರಮದಲ್ಲಿ ಬಂದಿಲ್ಲವೆಂದೆನಿಸಬಹುದು, ಅಷ್ಟೆ. ಅದನ್ನು seperate ಆಗಿ ರೆಕಾರ್ಡು ಮಾಡಿದ್ದರಿಂದ ಕೊನೆಗೆ ಎಡಿಟ್ ಮಾಡುವಾಗ ಎತ್ತ ಸೇರಿಸೋದು ಎಂಬ ಪ್ರಶ್ನೆ ಉದ್ಭವಿಸಿ, ಎಲ್ಲೂ ತೂರಿಸಲಾಗದೆ ಅಂತಿಮವಾಗಿ ಕೊನೆಯ 'ಟ್ರಾಕ್'ಗೆ ಸೇರಿಸಲಾಯಿತು.

ಧನ್ಯವಾದಗಳು,

- ಹೆಚ್ ಪಿ

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by bhatpp on

ನನಗೂ ಹಾಗೆಯೆ ಅನ್ನಿಸಿತ್ತು (ಆಡಿಯೋ ಅಪೂರ್ಣವೆಂದು), ಆದರೆ ಶ್ಯಾಮರಾಯರ ಬಗೆಗಿನ ಈ ಸ್ಪಷ್ಚೀಕರಣದ ಬಗ್ಗೆ ತಿಳಿದಿರಲಿಲ್ಲ. ಆಡಿಯೋ ಅಪೂರ್ಣವೊ, ಸಂಪೂರ್ಣವೊ ಎಂದು ತಿಳಿಯಲು ಮತ್ತೊಮ್ಮೆ ಕೇಳಬೇಕಾಯಿತು ...

Submitted by pqrshanth on

ಈ podcastನ file size ಎಷ್ಟಿದೆ ?? ೧೦mb ಗಿಂತಲೂ ಕಡಿಮೆಯಿದ್ದರೆ, ಮೈಲ್ attachment ಆಗಿ ಕಳುಹಿಸಲು ಆಗುತ್ತದೆಯೆ ??

ಯಾಕೆಂದರೆ ನಮ್ಮ officeನಲ್ಲಿ mp3 play option block ಮಾಡಿದ್ದಾರೆ :(

Submitted by hpn on

... ಈ‌ ಪಾಡ್ ಕ್ಯಾಸ್ಟ್ ಸ್ವಲ್ಪ ದೊಡ್ಡದು. ೨೮ MB ಇದೆ. ಆದರೂ ಇ-ಮೇಯ್ಲ್ ನಲ್ಲಿ ಕಳಿಸಬಲ್ಲೆ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

Submitted by ravigowda on
ಎಷ್ಟೋ ಕವಿ ಮಹಾಶಯರು ಎಲೆ ಮರೆ ಕಾಯಿಯ೦ತೆ ಹೊರಟು ಹೊಗಿದ್ದಾರೆ, ಇ೦ತಹವರನ್ನು ನಮಗೆಲ್ಲ ದರ್ಶನ ಮಾಡಿಸುತ್ತಿರುವ ಸ೦ಪದ ತ೦ಡಕ್ಕೆ ನನ್ನ ಹ್ರುದಯ ತು೦ಬು ಧನ್ಯವಾದಗಳು. ಈ ಕಾರ್ಯಕ್ರಮ ಹೀಗೆ ನಡೆಯಬೇಕು.. ಎ೦ದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ. ಧನ್ಯವಾದಗಳು ರವಿ

ಟ್ವಿಟ್ಟರಿನಲ್ಲಿ ಸಂಪದ