ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಝೆನ್ ಕತೆಗಳು - ಓ ಎಲ್ ಎನ್ ಸ್ವಾಮಿ

ಝೆನ್ ೨: ಶೌನ್ ಮತ್ತು ಅವನ ತಾಯಿ

August 5, 2005 - 3:12pm — olnswamy

ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು.
ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.
ಸಂನ್ಯಾಸಿ ಮೀನು ತಿನ್ನುವಂತಿರಲಿಲ್ಲ. ಆದರೆ ಅಮ್ಮನಿಗೆ ಮೀನು ಎಂದರೆ ಆಸೆ. ಶೌನ್ ತಾಯಿಗೆಂದು ಮೀನು ತರುತ್ತಿದ್ದ. ಅದನ್ನು ಕಂಡು ಜನ ಹಾಸ್ಯಮಾಡುತ್ತಿದ್ದರು. ಶೌನ್ ಅದನ್ನು ಲೆಕ್ಕಕ್ಕೇ ಇಡುತ್ತಿರಲಿಲ್ಲ.
ತನ್ನ ಮಗನನ್ನು ಜನ ಲೇವಡಿ ಮಾಡುವುದು ಕಂಡು ತಾಯಿಗೆ ಬೇಸರವಾಯಿತು. “ನಾನೂ ಸಂನ್ಯಾಸಿನಿ ಆಗುತ್ತೇನೆ. ಸಸ್ಯಾಹಾರವನ್ನೇ ತೆಗೆದುಕೊಳ್ಳುತ್ತೇನೆ” ಎಂದಳು. ಸರಿ. ತಾಯಿ ಮಗ ಇಬ್ಬರೂ ಒಟ್ಟಿಗೇ ಅಧ್ಯಯನ ಮಾಡತೊಡಗಿದರು.
ಶೌನ್‌ಗೆ ಸಂಗೀತವೆಂದರೆ ಪ್ರಾಣ. ಬಹಳ ಚೆನ್ನಾಗಿ ವಾದ್ಯಗಳನ್ನು ನುಡಿಸುತ್ತಿದ್ದ. ಕೆಲವೊಮ್ಮೆ ಅವನ ತಾಯಿ ಕೂಡ ದನಿಗೂಡಿಸುತ್ತಿದ್ದಳು. ಹುಣ್ಣಿಮೆಯ ರಾತ್ರಿಗಳಂದು ಇಬ್ಬರೂ ಹಾಡುತ್ತಾ, ವಾದ್ಯ ನುಡಿಸುತ್ತಾ ಇದ್ದರು.
ಅಂಥ ಒಂದು ರಾತ್ರಿ ಅವರ ಮನೆಯ ಮುಂದೆ ಹೋಗುತ್ತಿದ್ದ ಹೆಂಗಸೊಬ್ಬಳು ಇವರ ಸಂಗೀತ ಕೇಳಿ ಮರುಳಾದಳು. ತನ್ನ ಮನೆಗೆ ಬಂದು ಹಾಡುವಂತೆ ಶೌನ್‌ನನ್ನು ಬೇಡಿಕೊಂಡಳು. ಅವನೂ ಒಪ್ಪಿದ.
ಕೆಲವು ದಿನಗಳಾದಮೇಲೆ ಆ ಹೆಂಗಸು ರಸ್ತೆಯಲ್ಲಿ ಎದುರಾದಳು. ಅವಳು ತೋರಿಸಿದ ಪ್ರೀತಿ, ವಿಶ್ವಾಸ, ಆತಿಥ್ಯಗಳಿಗೆ ಹೃದಯತುಂಬಿ ಕೃತಜ್ಞತೆ ಹೇಳಿದ ಶೌನ್. ಅದನ್ನ ಕಂಡು ಬೀದಿಯಲ್ಲಿ ಓಡಾಡುವ ಜನ ನಕ್ಕರು. ಆ ಹೆಂಗಸೊಬ್ಬ ವೇಶ್ಯೆ. ಅವಳಿಗೆ ಕೃತಜ್ಞತೆ ಹೇಳುವುದೇ ಎಂದು ಆಡಿಕೊಂಡರು.
ಒಮ್ಮೆ ಶೌನ್ ದೂರದ ಊರಿಗೆ ಉಪನ್ಯಾಸ ನೀಡಲು ಹೋಗಿದ್ದ. ಹಿಂದಿರುಗುವುದಕ್ಕೆ ಕೆಲವು ತಿಂಗಳೇ ಬೇಕಾದವು. ಅವನು ವಾಪಸ್ಸು ಬರುವ ಹೊತ್ತಿಗೆ ತಾಯಿ ತೀರಿಕೊಂಡಿದ್ದಳು. ಸುದ್ದಿ ತಿಳಿಸುವ ಬಗೆ ತಿಳಿಯದೆ ಅವನ ಗೆಳೆಯರು ಅಂತ್ಯಸಂಸ್ಕಾರಕ್ಕೆ ಸಿದ್ಧಮಾಡಿದ್ದರು. ಶವವನ್ನು ಆಗಲೇ ಪೆಟ್ಟಿಗೆಯಲ್ಲಿ ಇಟ್ಟಿದ್ದರು.
ಶೌನ್ ಸೀದಾ ಶವಪೆಟ್ಟಿಗೆಯ ಹತ್ತಿರಕ್ಕೆ ಹೋಗಿ, ಕೈಯಲ್ಲಿದ್ದ ದಂಡದಿಂದ ಒಮ್ಮೆ ಅದನ್ನು ತಟ್ಟಿ, “ಅಮ್ಮಾ ನಾನು ಬಂದಿದ್ದೇನೆ” ಎಂದ.
“ತುಂಬಾ ಸಂತೋಷವಪ್ಪಾ” ಎಂದಳು ತಾಯಿ.
“ನನಗೂ ಅಷ್ಟೇ ಅಮ್ಮಾ” ಎಂದ ಮಗ. ಸೇರಿದ್ದ ಜನರತ್ತ ತಿರುಗಿ “ಅಂತ್ಯಕ್ರಿಯೆಗಳು ಮುಗಿದವು, ನೀವಿನ್ನು ಮಣ್ಣುಮಾಡಬಹುದು” ಅಂದ.
ಶೌನ್‌ಗೆ ವಯಸ್ಸಾಯಿತು. ಕೊನೆಗಾಲ ಸಮೀಪಿಸಿತು ಎಂದವನಿಗೆ ತಿಳಿಯಿತು. ಅಂದು ಬೆಳಗ್ಗೆ ತನ್ನ ಶಿಷ್ಯರನ್ನೆಲ್ಲ ಕರೆದ. “ಇವತ್ತು ಮಧ್ಯಾಹ್ನ ನಾನು ಹೋಗುತ್ತೇನೆ” ಎಂದ. ಒಂದು ಪದ್ಯ ಬರೆದ.
ವರ್ಷ ಐವತ್ತಾರು ಹೋದವು
ಲೋಕದಲ್ಲಿ ನನ್ನ ದಾರಿ ನಾನೇ ಮಾಡಿಕೊಂಡು ಬದುಕಿದೆ
ಮಳೆ ನಿಂತಿದೆ ಮೋಡ ಕರಗಿದೆ
ನೀಲಿಯಾಕಾಶದಲ್ಲಿ ಹೊಳೆದಿದ್ದಾನೆ ಚಂದ್ರ.
ಶಿಷ್ಯರು ಅವನ ಸುತ್ತ ಸೇರಿ ಸೂತ್ರಗಳನ್ನು ಪಠಿಸತೊಡಗಿದರು. ಅವರು ಹಾಗೆ ಸೂತ್ರಗಳನ್ನು ಹೇಳುತ್ತಲಿದ್ದಾಗಲೇ ಶೌನ್ ಸತ್ತುಹೋದ.

‹ ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆಮೇಲಿನ ಪುಟಕ್ಕೆಝೆನ್ ೬ : ಬೆಂಕಿಯಂತೆ ಉರಿಯುತ್ತಿದೆ ನನ್ನ ಹೃದಯ ›
  • ಕಥಾ ಮಾಲಿಕೆ
  • ಝೆನ್ ಕಥೆಗಳು (ಕಥಾ ಮಾಲಿಕೆ)
~.~
  • Printer-friendly version
  • Login or register to post comments
  • 1081 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ್ ಕತೆ ೧೩: ಮೌನ ದೇವಾಲಯ
  • ಝೆನ್ ಕತೆ: ೨೭ ಬದಲಾವಣೆ
  • ಮಕ್ಕಳಿಗೆ ಅವರ ತಾಯಿ ಸುಂದರ ! ಇದು ನಿಜಕ್ಕೂ ಅತಿ ಸುಂದರವಾದ ಕಲ್ಪನೆ ! ಆದರೆ.....
  • ಓ ಗೆಳೆಯ ಗೆಳತಿಯರೆ ಕೇಳಿ!
  • ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator