ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಕುಳಿ ಮಾಗೋಡು ಜಲಧಾರೆಯನ್ನು ಹುಡುಕಿದ್ದು ...

September 18, 2008 - 10:13pm — rajeshnaik111

ಲಾಲ್ಗುಳಿ ಮಿಶನ್ ವೈಫಲ್ಯದ ಬಳಿಕ ಹಿಂತಿರುಗುವಾಗ ಕುಳಿ ಮಾಗೋಡು ಜಲಧಾರೆಯ ಬಗ್ಗೆ, ’ಕುಳಿ ಮಾಗೋಡು ಜಲಧಾರೆ ಇದೆ’ ಎಂದು ನಾಲ್ಕು ಶಬ್ದಗಳ ಮಾಹಿತಿಯನ್ನು ಉತ್ತರ ಕನ್ನಡದ ಜಲಧಾರೆಗಳ ಬಗ್ಗೆ ಬಂದಿದ್ದ ಲೇಖನವೊಂದರಲ್ಲಿ ಓದಿದ್ದ ನೆನಪಾಯಿತು. ಅನಿಲನಲ್ಲಿ ಹೇಳಿದಾಗ ಹುಡುಕೋಣವೆಂದು ಉತ್ಸಾಹದಿಂದಲೇ ಒಪ್ಪಿದ.

ಮಾಹಿತಿ ಪಡೆಯಲು ಕುಳಿ ಮಾಗೋಡಿನಲ್ಲಿ ಮನೆಯೊಂದಕ್ಕೆ ತೆರಳಿದೆವು. ಅಲ್ಲೊಬ್ಬ ನಾಲ್ಕನೇ ತರಗತಿ ಓದುವ ಪೋರ, ಬಲಕ್ಕೆ ಹೋಗಿ ಎಡಕ್ಕೆ ಹೋಗಿ ನೇರಕ್ಕೆ ಹೋಗಿ ಎಡಕ್ಕೆ ಹೋಗಿ ಎಂದು ಕನ್ಫ್ಯೂಸ್ ಮಾಡಿಬಿಟ್ಟ. ನಂತರ ಆತನ ಅಜ್ಜ, ದಾರಿ ಸರಿಯಾಗಿ ಹೇಳಲು ಆಗುದಿಲ್ಲವೆಂದೂ, ಬಹಳ ಕಡೆ ಅಲ್ಲಲ್ಲಿ ಎಡಕ್ಕೆ ಬಲಕ್ಕೆ ತಿರುಗಬೇಕೆಂದು ಹೇಳಿ ಪ್ರಮುಖ ರಸ್ತೆಯಿಂದ ಎಲ್ಲಿ ತಿರುವು ಪಡೆಯಬೇಕೆಂಬ ಮಾಹಿತಿ ನೀಡಿದರು.

ಆ ಹಿರಿಯರು ಹೇಳಿದಲ್ಲಿ ತಿರುವು ತಗೊಂಡು ನೇರವಾಗಿ ಮುನ್ನಡೆದೆವು. ಒಂದು ಕಿ.ಮಿ. ಬಳಿಕ ಅಲ್ಲೊಂದಷ್ಟು ಮನೆಗಳು. ವಿಚಾರಿಸಿದಾಗ, ಸ್ವಲ್ಪ ಮೊದಲೇ ಸಿಗುವ ನಾವು ನಿರ್ಲಕ್ಷಿಸಿ ಬಂದಿದ್ದ ಕವಲು ದಾರಿಯಲ್ಲಿ ತೆರಳಬೇಕೆಂದು ತಿಳಿಯಿತು. ಹಾಗೆ ಹಿಂದೆ ಬಂದರೆ ಅಲ್ಲಿ ಒಂದೇ ಪಾರ್ಶ್ವದಲ್ಲಿ ೩ ದಾರಿಗಳು. ಆದದ್ದಾಗಲಿ ಎಂದು ಒಂದು ರಸ್ತೆಯಲ್ಲಿ ತೆರಳಿದೆವು. ಸ್ವಲ್ಪ ಮುಂದೆ ಮತ್ತೆ ೪ ಕವಲುಗಳು! ಇಲ್ಲೊಂದು ರಸ್ತೆಯನ್ನು ಆಯ್ಕೆ ಮಾಡಿ ಅದರಲ್ಲಿ ತೆರಳಿದೆವು. ಮುಂದೆ ಮತ್ತೆರಡು ಕಡೆ ದಾರಿಗಳು ಕವಲೊಡೆದಿದ್ದವು. ಆದರೂ ನೇರ ರಸ್ತೆಯಲ್ಲೇ ಮುಂದೆ ಸಾಗಿದಾಗ, ರಸ್ತೆ ಕೊನೆಗೊಂಡು ಕಾಲುದಾರಿ ಆರಂಭವಾಯಿತು.

ಸುಮಾರು ೨೦ ನಿಮಿಷ ನಡೆದ ಬಳಿಕ ಇಳಿಜಾರಿನಲ್ಲಿ ಮನೆಯೊಂದು ಕಾಣಿಸಿತು. ನಾವಿನ್ನೂ ಪೊದೆಗಳ ಮರೆಯಲ್ಲಿದ್ದೆವು ಮತ್ತು ಮನೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ’ಯಾರು..ಯಾರು..ಅಲ್ಲೇ ನಿಲ್ಲಿ...ಏನು ಬೇಕು?’ ಎಂಬ ಹೆಣ್ಣು ಧ್ವನಿ ಕೇಳಿಸಿದಾಗ ಅಲ್ಲೇ ನಿಂತೆವು. ಜಲಧಾರೆಯ ಬಗ್ಗೆ ಕೇಳಿದಾಗ, ’ಇಲ್ಯಾಕೆ ಬಂದ್ರಿ..ಹೋಗಿ ಹೋಗಿ..ನಾಯಿ ಬಿಡ್ತೆ..ಶಿರ್ಲು ಇಲ್ಲಿಲ್ಲ..ಬೇರೆ ದಾರಿ..ಹೋಗಿ ಹೋಗಿ... ಮುಂದೆ ಬಂದ್ರೆ ನಾಯಿ ಬಿಡ್ತೆ’ ಎಂದು ಮನೆಯ ಅಂಗಳದಿಂದ ಸಿದ್ಧಿ ಹೆಂಗಸೊಬ್ಬಳ ಅಸ್ಪಷ್ಟ ಆಕೃತಿ ಅರಚಾಡುವುದು ಕಾಣಿಸಿತು. ಆಕೆಯ ೨ ನಾಯಿಗಳು ನಮ್ಮ ಬಳಿ ಬಾಲ ಅಲ್ಲಾಡಿಸುತ್ತಾ ಬಿಸ್ಕಿಟ್ ತಿನ್ನುತ್ತಿರುವುದನ್ನು ಆಕೆ ಗಮನಿಸಿರಲಿಲ್ಲ! ಆಕೆಯ ವರ್ತನೆಯ ಬಗ್ಗೆ ಗುಮಾನಿ ಬಂದರೂ ಇನ್ನು ಅಲ್ಲಿರುವುದು ವ್ಯರ್ಥ ಎಂದೆನೆಸಿ ಹಿಂತಿರುಗಿದೆವು.

ನಂತರ ಕವಲೊಡೆದ ಹಲವಾರು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅದರಲ್ಲಿ ಸುಮಾರು ೧೦ ನಿಮಿಷ ನಡೆದರೂ ಯಾವುದೇ ಮನೆಯ ಅಥವಾ ಜನರ ಸುಳಿವಿಲ್ಲ. ಇನ್ನೊಂದು ಕವಲೊಡೆದಿದ್ದ ರಸ್ತೆಯಲ್ಲಿ ತೆರಳಿದರೆ ಅದೂ ವ್ಯರ್ಥ. ಇಷ್ಟೆಲ್ಲಾ ಅಡ್ಡಾಡಿದ ಬಳಿಕ ಏನೇ ಆಗಲಿ ಈ ಕುಳಿ ಮಾಗೋಡು ಜಲಧಾರೆಯನ್ನು ಹುಡುಕಿಯೇ ಸಿದ್ಧ ಎಂದು ಅನಿಲ ಪಣತೊಟ್ಟೇಬಿಟ್ಟ. ಈಗ ಮಗದೊಂದು ಕವಲೊಡೆದ ದಾರಿಯಲ್ಲಿ ಅನಿಲ ಬೈಕನ್ನು ಓಡಿಸಿದ. ಇಲ್ಲಿಯೂ ಮನೆಯೊಂದಿತ್ತು. ಆದರೆ ಮನೆಗೆ ಬೀಗ ಜಡಿಯಲಾಗಿತ್ತು.

ಅಲ್ಲಿಂದ ಹಿಂತಿರುಗಿ ಎಲ್ಲಿ ಹೋಗಬೇಕೆಂದು ತಿಳಿಯದೇ ಸಿಕ್ಕಿದ ಇನ್ನೊಂದು ದಾರಿಯಲ್ಲಿ ತೆರಳಿದೆವು. ಸ್ವಲ್ಪ ದೂರ ಬೈಕು ಓಡಿಸಿ ದೂರದಲ್ಲಿ ತೋಟವೊಂದು ಕಾಣಿಸಿದಾಗ ನಡೆಯಲಾರಂಭಿಸಿದೆವು. ಇಲ್ಲಿ ೨ ಮನೆಗಳಿದ್ದವು. ಸಮೀಪವಿದ್ದ ಮನೆಯ ಬಳಿ ತೆರಳಿದೆವು. ಈ ಮನೆಯಲ್ಲಿ ನಾಲ್ಕಾರು ಮಕ್ಕಳು ಮತ್ತು ಒಬ್ಬ ಯುವ ಸಿದ್ಧಿ ಹೆಂಗಸು. ಈಕೆ ಕೂಡಾ ನಮ್ಮನ್ನು ನೋಡಿ ವ್ಯಾಘ್ರಿಣಿಯಂತೆ ಘರ್ಜಿಸತೊಡಗಿದಳು. ’ಶಿರ್ಲುಗೆ ಹೋಗ್ಬೇಕು..ದಾರಿ ಯಾವುದು’ ಎಂದು ಕೇಳಿದಾಗ, ’ಇದು ದಾರಿ ಅಂತ ಯಾರು ಹೇಳೀರು ನಿಮ್ಗೆ, ಹೋಗಿ ಹೋಗಿ...ಆ ಕಡೆ ಹೋಗ್ಬೇಕು’ ಎಂದು ಕೈಯನ್ನು ಆಗಸದೆಡೆ ತೋರಿಸಿದಳು! ಕುಡಿಯಲು ನೀರು ಕೇಳಿದಾಗ ಆಕೆ ನೀಡಿದ ನೀರನ್ನು ನೋಡಿ ಅನಿಲ್, ’ನಾವು ನೀರು ಕೇಳಿದ್ದು ಕುಡೀಲಿಕ್ಕೆ...ಕಾಲು ತೊಳೀಲಿಕ್ಕಲ್ಲ’ ಎಂದಾಗ, ಮತ್ತಷ್ಟು ಸಿಟ್ಟುಗೊಂಡ ಆಕೆ, ’ಅದೇಯ ನೀರು..ಕಾಲು, ಮುಖ ಎಲ್ಲಾ ತೊಳೀಲಿಕ್ಕೆ...ಕುಡೀಲಿಕ್ಕೆ...ಎಲ್ಲಾ ಅದೇ ನೀರೇಯ...ನೀರಂತೆ ನೀರು...ಬೇಡಾದ್ರೆ ನಿಮ್ಗ್ಯಾರು ಕುಡೀಲಿಕ್ಕೆ ಹೇಳೀರು...’ ಎಂದು ಗೊಣಗತೊಡಗಿದಾಗ ನನಗಂತೂ ನಗು ಬರತೊಡಗಿತ್ತು. ಇವರೆಲ್ಲಾ ಈ ರೀತಿ ಯಾಕೆ ವರ್ತಿಸುತ್ತಿದ್ದರು ಎಂಬುದು ನಿಗೂಢ.

ನಂತರ ಇನ್ನೊಂದು ಮನೆಯ ದಾರಿಯಲ್ಲಿ ಸಾಗಿದೆವು. ನಮ್ಮ ಅದೃಷ್ಟಕ್ಕೆ ಇದು ಸಿದ್ಧಿ ಮನೆಯಾಗಿರಲಿಲ್ಲ! ಇಲ್ಲಿ ದಾರಿ ಕೇಳಿದಾಗ ಮನೆಯ ಬಳಿ ಹರಿಯುತ್ತಿದ್ದ ಸಣ್ಣ ಮೋರಿಯಲ್ಲೇ ಹೋಗಲು ಹೇಳಲಾಯಿತು. ಈ ಸಣ್ಣ ಕಾಲುವೆಯಲ್ಲಿ ಒಂದೈದು ನಿಮಿಷ ನಡೆದ ಬಳಿಕ ಅಂತೂ ಕೊನೆಗೆ ಕುಳಿ ಮಾಗೋಡು ಜಲಧಾರೆಯ ದರ್ಶನವಾಯಿತು. ಎರಡು ತಾಸು ಮತ್ತು ೧೫ ನಿಮಿಷದ ಹುಡುಕಾಟದ ಬಳಿಕ ಸಿಕ್ಕಿದ ಕುಳಿ ಮಾಗೋಡು ನಿರಾಸೆ ಮಾಡಲಿಲ್ಲ. ನೀರಿನ ಹರಿವು ಕಡಿಮೆ ಇದ್ದರೂ ಸೌಂದರ್ಯಕ್ಕೆ ಕುಳಿ ಮಾಗೋಡಿಗೆ ತನ್ನದೇ ಸ್ಥಾನ ಇದೆ. ಕರಿಕಲ್ಲಿನ ಅಡ್ಡಗೋಡೆಗೆ ಸವರಿಕೊಂಡೇ ಸುಮಾರು ೭೦-೮೦ ಅಡಿಯಷ್ಟು ಎತ್ತರದಿಂದ ಬಳಿಕುತ್ತಾ ಇಳಿಯುವ ಜಲಧಾರೆಯ ತಂಪು ನೋಟ. ಅನಿಲನಂತೂ ಅದಾಗಲೇ ಸ್ನಾನ ಮಾಡತೊಡಗಿದ್ದ. ಮುಖ್ಯ ರಸ್ತೆಯಿಂದ ಜಲಧಾರೆ ಹುಡುಕಲು ನಮಗೆ ೧೩೫ ನಿಮಿಷಗಳು ಬೇಕಾದರೆ ಹಿಂತಿರುಗುವಾಗ ಕೇವಲ ೨೨ ನಿಮಿಷದಲ್ಲಿ ಮುಖ್ಯ ರಸ್ತೆಗೆ ಬಂದಿದ್ದೆವು!

ಒಂದೇ ತಿಂಗಳ ಬಳಿಕ ಅಗೋಸ್ಟ್-ನಲ್ಲಿ ಮತ್ತೊಮ್ಮೆ ಇಲ್ಲಿಗೆ ಬಂದಿದ್ದೆ. ಜಲಧಾರೆಯ ಕರಿಕಲ್ಲಿನ ಗೋಡೆಯೇ ಕಾಣಿಸುತ್ತಿರಲಿಲ್ಲ. ನೀರಿನ ಅಗಾಧ ಹರಿವು ಕುಳಿ ಮಾಗೋಡಿನ ಇನ್ನೊಂದು ರೂಪವನ್ನು ಕಣ್ಣ ಮುಂದೆ ಇಟ್ಟಿತ್ತು. ಅಷ್ಟೆಲ್ಲಾ ನೀರು ಬೀಳುತ್ತಿದ್ದರೂ ಜಲಧಾರೆಯ ಅತ್ಯಂತ ಸಮೀಪ ಅಂದರೆ ನೀರು ಬೀಳುವಲ್ಲಿಂದ ಕೇವಲ ನಾಲ್ಕೈದು ಅಡಿ ದೂರದವರೆಗೂ ಯಾವುದೇ ಅಪಾಯವಿಲ್ಲದೆ ಸಾಗಬಹುದು.

  • ಪ್ರವಾಸ ಕಥನ
~.~
  • Login or register to post comments
  • 275 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 19, 2008 - 3:14pm — palachandra

ಉ: ಕುಳಿ ಮಾಗೋಡು ಜಲಧಾರೆಯನ್ನು ಹುಡುಕಿದ್ದು ...

palachandra's picture

ಚೆನ್ನಾಗಿದೆ ನಿಮ್ಮ ಸಾಹಸ ಕಥೆ, ಸಿದ್ದಿಯವರು ಅಂದರೆ ಆಫ್ರಿಕಾದವರ ರೀತಿ ಇರುತ್ತಾರಲ್ಲ ಅವರೇ?

ಮಾಗೋಡು ನೋಡಿದ್ದೆ, "ಕುಳಿ ಮಾಗೋಡು" ಹೆಸ್ರು ಹೊಸ್ತಾಗಿ ಕೇಳಿದ್ದು,,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 20, 2008 - 1:39pm — Deeparavishankar

ಉ: ಕುಳಿ ಮಾಗೋಡು ಜಲಧಾರೆಯನ್ನು ಹುಡುಕಿದ್ದು ...

Deeparavishankar's picture

ಆಹಾಹಾಹ!! ಬಿಡಿ ಅಷ್ಟು ಸುತ್ತಿಸಿ ಸುತ್ತಿಸಿ ತನ್ನ ಸೌ೦ದರ್ಯವನ್ನು ಹೆಚ್ಚಿಸಿಕೊ೦ಡಿತು ಕುಳಿ ಮಾಗೋಡು..ಅದು ನಿಮ್ಮ ಕರ್ಮ. ನಮ್ಮ ಮಜ ನೋಡಿ ಕೂತ ಕಡೆ ನೋಡಿ ಆನ೦ದ ಪಟ್ವಿ. ತು೦ಬಾ ಧನ್ಯವಾದಗಳು. ಸು೦ದರವಾದ ಫೋಟೊ. ಅಭಿನ೦ದನೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2008 - 1:47pm — rajeshnaik111

ಉ: ಕುಳಿ ಮಾಗೋಡು ಜಲಧಾರೆಯನ್ನು ಹುಡುಕಿದ್ದು ...

rajeshnaik111's picture

ಪಾಲಚಂದ್ರ,
ಬ್ರಿಟಿಷರು ಆಫ್ರಿಕಾದಿಂದ ಗುಲಾಮಗಿರಿ ಮಾಡಲು ತರಿಸಿಕೊಂಡವರ ಸಂತತಿ ಬೆಳೆದು ಅವರನ್ನು ಸಿದ್ಧಿ ಎಂದು ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ ಮತ್ತು ಜೋಯಿಡಾ ತಾಲೂಕುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಇವರು ನೆಲೆಸಿದ್ದಾರೆ. ರೂಪ ಪಕ್ಕಾ ಅಫ್ರಿಕಾ ಖಂಡದವರಂತೆ.. ಆದರೆ ಮಾತು ಶುದ್ಧ ಕನ್ನಡ ಮತ್ತು ಕೆಲವೆಡೆ ಮರಾಠಿ.

ದೀಪಾ,
ಕೂತಲ್ಲೇ ಮಜಾ ಅನುಭವಿಸಿದಿರಾ? ಸಂತೋಷ. ಆದರೆ ಜಲಧಾರೆಯ ಹುಡುಕಾಟದಲ್ಲಿ ಸಿಗುವ ಮಜಾ ನೀವು ಅನುಭವಿಸಿರಲಿಕ್ಕಿಲ್ಲ! ಅದು ನೀವು ಕೂತಲ್ಲೇ ಅನುಭವಿಸಿದ ಮಜಾಕ್ಕಿಂತ ಎಷ್ಟೋ ಪಾಲು ಹೆಚ್ಚು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕುಳಿ ಮಾಗೋಡು ಜಲಧಾರೆ
  • ಕುಳಿ ಮಾಗೋಡು ಜಲಧಾರೆ
  • ಕುಳಿ ಮಾಗೋಡು ಜಲಧಾರೆ
  • ಕುಳಿ ಮಾಗೋಡು ಜಲಧಾರೆ
  • ಎಮ್ಮೆಶಿರ್ಲ ಜಲಪಾತದ ವೈಭವ
Syndicate content

ಲೇಖಕರು

rajeshnaik111's picture

ಪರಿಚಯ

ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
  • ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
  • ಮಕ್ಕಳ ಹಾಡು
  • ಉಗ್ರವಾದ - ಇದೊಂದು ಹಳೇ ಉದ್ಯೋಗ
  • ಹೀಗೊ೦ದು ರಸಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:58pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
  • benaka
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 1:52pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 12:55pm
  • mahesha
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:39pm
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 449 ಅತಿಥಿಗಳು ಆನ್ಲೈನ್ ಇರುವರು.


ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator