ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಮೊಳಗುವ ಹಾಡುಗಳು

February 20, 2006 - 2:28am — hpn

ತೂ ಬಿನ್ ಬತಾಯೇ ಮುಜೆ ಲೇ ಚಲ್ ಕಹೀ...
ಜಹಾನ್ ತೂ ಮುಸ್ಕುರಾಯೇ ಮೇರಿ ಮಂಝಿಲ್ ವಹೀ...

ಅದ್ಯಾಕೋ 'ರಂಗ್ ದೇ ಬಸಂತಿ' ಸಿನಿಮಾದ ಈ ಹಾಡು ಕೇಳಿದ ಮೇಲೆ ತಲೆಯಿಂದ ಆಚೆಯೇ ಹೋಗ್‌ವಲ್ದು.

ರೂಮಿನಿಂದ ಹೊರಬರುತ್ತಿದ್ದಂತೆಯೇ ಇದನ್ನ ಮುಂಜಾನೆ ಹಾಡಿ ಅಪ್ಪನ ಕೈಲಿ "ಬೆಳಗಾಗಿ ದೇವರನಾಮ ಇಲ್ಲ, ಸಂಧ್ಯಾವಂದನೆ - ಪೂಜೆ ಪುನಸ್ಕಾರವಂತೂ ಇಲ್ಲವೇ ಇಲ್ಲ... ಕೆಟ್ಟ ರಾಗದಲ್ಲಿ ಸಿನಿಮಾ ಹಾಡು ಹೇಳ್ತೀಯ! ಅಚಾರ ವಿಚಾರ ಒಂದೂ ಇಲ್ಲ" ಅಂತ ಬೈಸಿಕೊಂಡದ್ದಾಯಿತು.

ಮಧ್ಯಾಹ್ನ ಕ್ರಿಕೆಟ್ ನೋಡಲು ಕುಳಿತು ಭಾರತದವರು ಗೆಲ್ಲುತ್ತಿರುವ ಸಂಭ್ರಮದಲ್ಲಿ ಮತ್ತೊಮ್ಮೆ ಬಾಯ್ಬಿಟ್ಟಾಗ ಹಚ್ ಜಾಹಿರಾತಿನಲ್ಲಿ ಬರುವಂತೆ ನಮ್ಮಣ್ಣನ ಮಗನೂ (ಜಾಹಿರಾತಿನ ಮಗುವಿನಂತೆಯೇ) ಅಳೋಕೆ ಶುರುಮಾಡ್ದಾಗ ನನಗೆ ಗೊತ್ತಿಲ್ಲದೇಯೇ ನನ್ನ ಬಾಯಲ್ಲಿ ಬರುತ್ತಿರೋ ಈ ಹಾಡಿನ ಬಗ್ಗೆ ಒಂದಷ್ಟು cautious ಆಗಿ ಇರೋದು ನನಗೇ ಒಳಿತು ಎಂದು ಮನಸ್ಸಿನೊಳಗೇ ತೀರ್ಮಾನವಾಯ್ತು.

ಆದರೇನು ಮಾಡೋದು, ಎರಡು ಮೂರು ದಿನಗಳಿಂದ ನನ್ನ ಪ್ಲೇಲಿಸ್ಟಿನಲ್ಲಿ ಈ ಹಾಡುಗಳು ಇದ್ದದ್ದರ ಪರಿಣಾಮವಾಗಿ ಕೊನೆಗೆ ಮನಸ್ಸಿನಲ್ಲಿ ಅದೇ ಹಾಡು ತಂತಾನೇ ಗುನುಗುತ್ತ ಈಗ ತಲೆಯಿಂದ ಆಚೆ ಹೋಗದೆ ಹಾಡಿನ ಅಹ್ಲಾದ ಹೋಗಿ ರೇಜಿಗೆಯಾಗಿಬಿಟ್ಟಿದೆ! ಎಂಥ ಮಹಾತ್ಮೆ, ಸಂಗೀತದ್ದು.

ಹೀಗಾಗಿದ್ದು ಮೊದಲ ಬಾರಿಯೇನಲ್ಲ. ಹಿಂದೆ ಹಲವು ಹಾಡುಗಳು ಹೀಗೆಯೇ ತಲೆಯಿಂದ ಹೊರಗೆ ಹೋಗುವ ಮಾತೆತ್ತದೇ ಕೂತದ್ದುಂಟು. ಒಮ್ಮೆ ಶಿವಮೊಗ್ಗದಲ್ಲಿ ಕ್ಲಾಸಿಕಲ್ ಹಾಡೊಂದರ ಟ್ಯೂನು ಗೊಣಗುತ್ತ ಮನೆಯೆದುರು ಆಗ ತಾನೇ ಫ್ರೆಶ್ ಆಗಿ ರೋಡನ್ನಲಂಕರಿಸಿದ್ದ ಸಗಣಿಯ ಮೇಲೆ ಪಾದವಿರಿಸಿ ಪ್ರಾಕ್ಟಿಕಲ್ ಕ್ಲಾಸು ಚಕ್ಕರ್ ಹಾಕುವಂತೆ ಮಾಡಿಕೊಂಡುಬಿಟ್ಟಿದ್ದೆ. (ಬಸವನಗುಡಿಯಲ್ಲಿ ಓಡಾಡಿದವರಿಗೆ ಇಂತಹ ಅನುಭವಗಳು ಬೇಕಾದಷ್ಟಾಗಿರುತ್ತೆ. ಸರ್ಕಾರದ ರೋಡು ತಮ್ಮ ಧನಕರುಗಳ ಕೊಟ್ಟಿಗೆಯೆಂದೇ ನಂಬಿರುವವರು ಬಸವನಗುಡಿಯಂತೆ ಶಿವಮೊಗ್ಗದಲ್ಲೂ ಬಹಳ ಮಂದಿ). ಪುಣ್ಯಾತ್ಮರಾದ ಜೂನಿಯರ್ ಲೆಕ್ಚರರ್ ಒಬ್ಬರು ಕೊನೆಯಲ್ಲಿ ಗುಟ್ಟಾಗಿ ಅಟೆಂಡೆನ್ಸ್ ಹಾಕಿ ಪ್ರಾಕ್ಟಿಕಲ್ ತಪ್ಪಿಸಿಕೊಂಡಿದ್ದರಿಂದ ಆಗಬಹುದಾಗಿದ್ದ ಅನಾಹುತ ಸ್ವಲ್ಪದರಲ್ಲೇ ತಪ್ಪಿಸಿ ನನ್ನ ಮಾರ್ಕುಗಳನ್ನು ಉಳಿಸಿದ್ದರು.

ಮತ್ತೊಮ್ಮೆ ಅದೇ ಶಿವಮೊಗ್ಗದಲ್ಲಿ ಎ ಪಿ ಎಮ್ ಸಿ ಯಾರ್ಡಿನಲ್ಲಿ ಲೂನಾ ಓಡಿಸಿಕೊಂಡು ಹೋಗುತ್ತಿರುವಾಗ ಅವತ್ತಿನವರೆಗೂ ನನ್ನ ಬಾಯಲ್ಲಿದ್ದ ಹಾಡೊಂದರ ಟ್ಯೂನು ಹಟಾತ್ತನೆ ತಪ್ಪಿಹೋಗಿ ಅದನ್ನು ನೆನಪು ಮಾಡಿಕೊಳ್ಳಲು ತಲೆಕೆಡಿಸಿಕೊಂಡಿದ್ದೆ. ತಲೆಕೆಡಿಸಿಕೊಂಡು ಆಗಿದ್ದ ಅವಾಂತರದಲ್ಲಿ ಎ ಪಿ ಎಮ್ ಸಿ ಗೇಟು ದಾಟಿದ ಕ್ಷಣದಲ್ಲೇ ಅಡ್ಡಬಂದ ಹಂದಿಯನ್ನು ತಪ್ಪಿಸಹೋಗಿ ಪಕ್ಕದಲ್ಲಿ ಮನೆಯೊಂದರ ಕಾಂಪೌಂಡಿಗೆ ಹೋಗಿ ಗುದ್ದಿದ್ದೆ! ಶಿವಮೊಗ್ಗದಲ್ಲಿ ಸುಸುಜ್ಜಿತ ಬಡಾವಣೆಗಳು - ಸ್ಲಮ್ಮು ಎಂಬ ಭೇದವಿಲ್ಲದೇ ರಾಜಾರೋಷವಾಗಿ ಹಂದಿಗಳು ಓಡಾಡಿಕೊಂಡಿರುತ್ತವೆ. ಆ ಸರ್ತಿ ಮಾತ್ರ ಅದರ ರಾಜಾರೋಷ ಹೆಚ್ಚಾಗಿ ನನಗೆ ಬುದ್ಧಿ ಕಲಿಸಲೆಂದೇ ಅದು ಅಡ್ಡ ಬಂದಿತ್ತೋ ಏನೊ. ಒಟ್ನಲ್ಲಿ ಲೂನ ಆಗಿದ್ದರಿಂದ ಅಷ್ಟಾಗಿ ಪೆಟ್ಟುಗಳಾಗದೆ ಪಾರಾಗಿದ್ದೆ.

ಇನ್ನು ಪರೀಕ್ಷೆ ಬರೆಯುವಾಗ ತಲೆಯೊಳಗೊಂದು ಟ್ಯೂನು ಸುಳಿದರೆ ಅವತ್ತಿನ ಕಥೆ ಮುಗೀತಿತ್ತು. ಒಂದೆರಡು ಸಾರಿ ಬೇರೊಂದು ಟ್ಯೂನು ಹೇಳಿಕೊಳ್ಳೋದೊ ಅಥವಾ ಮತ್ತೇನೋ ವದರಿಕೊಂಡು ಹಳೇ ಟ್ಯೂನು ಮರೆಯುವಂತೆ ಮಾಡಿಕೊಂಡು ಮುಂದಕ್ಕೆ ಸಾಗಬೇಕಿತ್ತು. ಹಾಗಾಗದಿದ್ದಾಗೆಲ್ಲ ಇಂಜಿನೀಯರಿಂಗ್ ನಲ್ಲಿ ಬಂದ ಅಂಕಗಳು ೫೦ರ ಕೆಳಗೇ!

ಮೊನ್ನೆ ಯಾಹೂನಲ್ಲಿಯೂ ('Ask yahoo'ನಲ್ಲಿ) ನನ್ನಂತೆಯೇ ಪರದಾಡಿದವನೊಬ್ಬ ಇದರ ಬಗ್ಗೆಯೇ ಪ್ರಶ್ನೆ ಹಾಕಿದ್ದು ನೋಡಿ ಈ ಕಷ್ಟ ನನ್ನೊಬ್ಬನದೇ ಅಲ್ಲ ಎಂದು ಖುಷಿಯಾಯ್ತು. ಹೀಗಾಗುವುದು ಯಾಕೆ ಎಂಬುದು ಇದುವರೆಗೂ ಮಾನವನ ತಿಳುವಳಿಕೆಗೆ ಬಾರದ ನಿಗೂಢಗಳಲ್ಲೊಂದು ಎಂದೂ ತಿಳಿದು ಬೇಸರವಾಯ್ತು. ಆದರೆ ಮತ್ತೆ ಮತ್ತೆ ಅದೇ ಹಾಡುಗಳನ್ನ ಕೇಳೋದರಿಂದ ಹೀಗಾಗಬಹುದಂತೆ. ಬಿ ಬಿ ಸಿ ಲೇಖನದ ಪ್ರಕಾರ ಹಾಡುಗಳು ಕೇಳಿದ ೯೬% - ೯೭% ಜನರಿಗೆ ಈ ಕಷ್ಟ ಒದಗಿಬರುತ್ತದಂತೆ!
ಯಾವ ಹುಳವೂ ಕಿವಿ ಹೊಕ್ಕದಿದ್ದರೂ ತಲೆತಿನ್ನುವಂತೆ ಕೊರೆಯುವ ಈ ತಾಪತ್ರಯಕ್ಕೆ "earworm" ಅಂತ ಕರೀತಾರಂತೆ!!

- ಹೆಚ್ ಪಿ

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 674 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 20, 2006 - 8:20am — ಶ್ರೀನಿಧಿ

ಹಾಡಿನ ಹುಚ್ಚು??

ಶ್ರೀನಿಧಿ's picture

ಇದಕ್ಕೇ ಅಲ್ವೆ "ತಲೇಲಿ ಹುಳ ಬಿಡೋದು" ಅನ್ನೋದು?? Smiling

ಹೀಗೆ ಮೊನ್ನೆ ನನ್ಗೂ ಆಯ್ತು. ಶನಿವಾರ ಕಾಲೇಜ್ನಲ್ಲಿ ಯಾರೂ ಇರಲ್ಲ ಅಂತ ಲ್ಯಾಬ್ನಲ್ಲಿ ಜೋರಾಗಿ ರಾಗ ಹಾಡ್ಕೋತಿದ್ದೆ. ನಾನು ಮಾಡೋ ಆಲಾಪನೆ ನನಗೇ ಕೆಳಕ್ಕಾಗಲ್ಲ. ಆಷ್ಟರಲ್ಲಿ ಒಬ್ಬ ಅಮೇರಿಕನ್ ಲ್ಯಾಬ್ ಒಳಗೆ ಬಂದು ಸಣ್ಣಗೆ ನಕ್ಕು "sorry, just wanted to make sure everything is ok" ಅಂದ್ಬಿಟ್ಟು ಹೋಗ್ಬಿಟ್ಟ. ಪಾಪ ಯಾರ್ಗೋ ಏನೂ ಆಯ್ತು ಅಂತ ಬಂದ ಅನ್ಸುತ್ತೆ.

ನನ್ನ ಅಪ್ಪ ಹೇಳಿದ ಮಾತು ನೆನಪಾಗುತ್ತೆ. ನೀನು ಹಾಡಿದ್ರೆ ಮನೇಗೆ ಕಳ್ಳರ ಕಾಟ ಇರಲ್ಲ ಅಂತ. ಈವಾಗ ಅದರ ಅರ್ಥ ಏನು ಅಂಥ ಗೊತ್ತಾಗ್ತಿದೆ. Smiling

________________________________________________________________________________

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 21, 2006 - 7:34am — sinchanabhat

ವಾವ್

sinchanabhat's picture

ಕಳ್ಳರನ್ನು ಓಡಿಸುವ ನಿಮ್ಮ ಪ್ರತಿಭೆ ಬೆಳಕಿಗೆ ಬಂದಂತಾಯ್ತು.ನಮ್ಮ ಮನೆಯಲ್ಲೂ ಅಂತ ಅದ್ಭುತ ಪ್ರತಿಭೆ ಇರೋರು ಇದಾರೆ.ಪರಿಚಯಿಸ್ಕೋಬೇಕು ಅಂತನಿಸಿದ್ರೆ ಒಮ್ಮೆ ಲ್ಯಾಬಿಂದ ಹೊರಗ್ಬಂದು ಹಾಡಿ,ಎಲ್ಲಿದ್ರು ಓಡೋಡಿ ಬರ್ತಾರೆ.Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2006 - 10:28am — ashwin

Bathroom singing

ashwin's picture

ನಿಮ್ಮ lab ಸಂಗೀತ ಕೇಳಿ ನೆನಪಾಯ್ತು ನೋಡಿ ... ಹೋದ ತಿಂಗಳು ನಮ್ಮ student flat-ನ ಬಚ್ಚಲು ಬಾಗಿಲಿನ ಒಳ ಚಿಲಕ ಮುರಿದೋಯ್ತು. ಚಿಲಕ ಸರಿಮಾಡಲು ೨-೩ ದಿನವಾಯ್ತು. ಅಲ್ಲಿಯವರೆಗೂ ನಾವು flat-ನ ಮೂರು ಜನ ಈ ಬಚ್ಚಲುಮನೆಯನ್ನು ಉಪಯೋಗಿಸಿದಾಗೆಲ್ಲ ಹಾಡುವುದೇ ಗತಿಯಾತ್ತು Eye-wink

~ಅಶ್
--
http://ash.webhop.net/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 20, 2006 - 9:42am — koumodiki

Readers Digest Prakara

koumodiki's picture

Kelavu tingalu gala hinde Readers Digest alli ondu lekhane prakatavagittu. Adaralli talealli uliyuva mattu repeat aguva hadugalige "Tortune" anta karediddare. Tortune = Torturous + Tunes : ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 20, 2006 - 4:59pm — pqrshanth

ನನಗೂ ಆಗಿದೆ ಈ ರೀತಿ

pqrshanth's picture

ನನಗೂ ಬಹಳಷ್ಟು ಸಲ ಈ ರೀತಿ ಆಗಿದೆ. ನನ್ನ ಸಹೋದ್ಯೋಗಿಯೊಬ್ಬ (ನನ್ನ ಪಕ್ಕದಲ್ಲೇ ಕೂರುತ್ತಾನೆ) ಒಂದು ಹಾಡು ಇಷ್ಟವಾದರೆ ಅವನ PCನಲ್ಲಿ ವಾರಗಳಾಗಟ್ಟಲೆ ಅದೊಂದೇ ಹಾಡು play ಆಗ್ತಾ ಇರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2006 - 10:35am — ashwin

exam tune ಕಾಟ

ashwin's picture

ನನಗೂ ಹಾಗೆ ರೀ! exam-ನಲ್ಲಿ ಬೇರೆ ನಿಶ್ಶಬ್ದವಾದ ವಾತಾವರಣ, ತಲೆಯಲ್ಲಿ ಯಾವುದಾದರು ಒಂದು ಹಾಳಾದ tune ಸಿಕ್ಕಿ ಕೊಳ್ಳುತ್ತೆ!

~ಅಶ್
--
http://ash.webhop.net/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆನಪುಗಳು, ನೆನಪಿನಂಗಳದ ಹೊರಗೆ
  • ಹುಡುಗಿಯರ ಹಾಡುಗಳ ಪಾಡು
  • ಸಂಗೀತಕ್ಕೆ ಕನ್ನಡ ಹಿಂದಿ ಒಗ್ಗಿದಷ್ಟು ಒಗ್ಗುವುದಿಲ್ಲವೆ?
  • ಎದೆ ಝಲ್ಲೆನೆ ..
  • ಐಟಂ ಹಾಡುಗಳು - ಮಡಿವಂತರು ಬೇಜಾರು ಮಾಡಿಕೊಳ್ಳಬೇಡಿ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
  • ಕಾರಂತರ ಜೀವಂತ ಪಾತ್ರಗಳು ೧೩ (೨)
  • ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
  • LTTE ಭಯೋತ್ಪಾದಕ ಸಂಘಟನೆಯಲ್ಲವೇ?
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಗು೦ಡ ಮತ್ತು ಕತ್ತೆ!!!!!
  • ಕಾರಂತರ ಜೀವಂತ ಪಾತ್ರಗಳು ೧೩ (೧)

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 7:48am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:53am
  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 124 ಅತಿಥಿಗಳು ಆನ್ಲೈನ್ ಇರುವರು.


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator