ನಾಯಿಂದನ ಇಕ್ಕಟ್ಟು
ಒಂದೂರಿನಲ್ಲಿ ಒಬ್ಬ ನಾಯಿಂದ ಇದ್ದ, ಆ ಊರಿಗೆಲ್ಲ ಒಬ್ಬನೆ ನಾಯಿಂದ. ಯಾರಿಗೆ ತಲೆ ಗಡ್ಡಗಳಾಗಬೇಕಾದರೂ ಇವನ ಅಂಗಡಿಗೆ ಬರಬೇಕು, ಇಲ್ಲ ಅವರಾಗಿಯೆ ಮಾಡಿಕೊಳ್ಳಬೇಕು. ನಮ್ಮ ಈ ನಾಯಿಂದ ಒಂದು ವ್ರತ ತೊಟ್ಟಿದ್ದ: ತಾನು ಕ್ಷೌರ ಮಾಡಬೇಕಾದರೆ ಅದು ತಾವೇ ಮಾಡಿಕೊಳ್ಳದವರಿಗೆ ಮಾತ್ರ; ತಾವೇ ಕ್ಷೌರ ಮಾಡಿಕೊಂಡವರಿಗೆ ಮಾಡಲಾರ.
ಈಗ ಹೇಳಿ: ಈ ನಾಯಿಂದನಿಗೆ ಕ್ಷೌರ ಮಾಡುವವರಾರು?
[ ನಿಮ್ಮಲ್ಲನೇಕರಿಗೆ ಇದು ತಿಳಿದಿರ ಬಹುದು; ಹೆಸರುವಾಸಿ ಗಣಿತಜ್ಞ ಬೆರ್ಟ್ರಂಡ್ ರಸೆಲ್ ಹಾಕಿದ ಪ್ರಶ್ನೆ ಇದು ]

- Login or register to post comments
- 785 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ನಾಯಿಂದನ ಇಕ್ಕಟ್ಟು
ಇದನ್ನು ಮತ್ತು ಇಂಥದೇ ಇನ್ನೂ ಕೆಲ ವಿರೋಧಾಭಾಸಗಳನ್ನು ವಿಚಿತ್ರಾನ್ನದ 'ರಾಧಾಮಾಧವ ವಿರೋಧಾಭಾಸ' ಎಂಬ ಶೀರ್ಷಿಕೆಯುಳ್ಳ ಸಂಚಿಕೆಯಲ್ಲಿ ನಾನು ಬಳಸಿಕೊಂಡಿದ್ದೆ.
- ಶ್ರೀವತ್ಸ ಜೋಶಿ
ಗಡ್ಡಧಾರಿ
ಅವನೊಬ್ಬ ದೊಡ್ಡ ಗಡ್ಡಧಾರಿಯಾಗಿಯೂ, ಉತ್ತಮ ಸಾಹಿತಿಯಾಗಿಯೂ ಇದ್ದಿರಬೇಕು. ಅಲ್ವೇ?
ಏನೇ ಆಗಲಿ ಇಂತಹ ಚಿಂತನೆಗಳೆಲ್ಲಾ ಬರುವುದು ದೊಡ್ಡ ಮನುಷ್ಯರುಗಳಿಗೆ ಮಾತ್ರ (ತಮಾಷೆಗಾಗಿ).
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net