ಇವರಲ್ಯಾರು ನನ್ನವರು?
ಬಂದು ಹೋದವರು ನನ್ನ ಹಾದಿಯಲಿ ಬಹಳವಲ್ಲ
ಆದರೂ ನನ್ನಿಂದ ಅವರ ಲೆಕ್ಕ ಇಡಲಾಗಲಿಲ್ಲ
ನಿನ್ನೆಯ ಆಗುಹೋಗುಗಳು ಇಂದು ನೆನಪಿಲ್ಲ
ಮುಖ್ಯ ಘಟನೆಗಳ ಮಾತ್ರ ನಾ ಮರೆಯೋಲ್ಲ
ಸುಭಿಕ್ಷ ಕಾಲದಲಿ ಹಿಂದೆ ಇದ್ದವರು ನೂರು
ದುರ್ಭಾಗ್ಯ ಬರಲು ಉಳಿದವರು ಮೂರೇ ಮೂರು
ಕಾಸಿಲ್ಲದೇ ಕೈಲಾಸ ತೋರಿದವರು ಕಡಿಮೆ ಏನಿಇಲ್ಲ
ಮರೆಯಲಾರದ ಪಾಠ ಕಲಿಸಿದವರಿವರೇ ಅಲ್ಲ?
ಮುಳುಗುತಿರಲು ಆಶಯದ ಆಸರೆಯ ತೋರಿದವರೊಬ್ಬರು
ತೆವಳುತ್ತಿದ್ದವಗೆ ನಡೆಯಲು ಕಲಿಸಿದವರಿನ್ನೊಬ್ಬರು
ಮೆಟ್ಟಿಲ ಮೇಲೆ ಕುಳ್ಳಿರಿಸಿ ಮೇಲೆ ಹತ್ತಿಸಿದವರೊಬ್ಬರು
ಉತ್ತುಂಗಕ್ಕೇರಿಸಿ ಕೆಳಗೆ ತಳ್ಳಿದವರು ಮಗದೊಬ್ಬರು
ಹಿಂದಿನಿಂದ ಚೂರಿ ಇರಿದವರೇ ನಮ್ಮ ಮಕ್ಕಳು
ನೋಡಲು ಮಾತ್ರ ಮುಖವಾಡ ಧರಿಸಿದ ಆಕಳು
ಸಣ್ಣ ಇರಿತಕೆ ಒಮ್ಮೆಗೇ ಹೋಗದು ಪ್ರಾಣ
ದಿನ ದಿನಕೆ ದೇಹವಾಗುವುದು ಸಣ್ಣ ಸಣ್ಣ
ತುಳಿದ ಹಾದಿ ನೋಡಿದವರು ನೀವೆಲ್ಲ
ನಿಮಗೆ ಅದರ ಅರಿವಾಗಿರಲಿಕ್ಕಿಲ್ಲ
ಅನುಭವಿಸಿದವಗೆ ತಿಳಿವುದು ದು:ಖ ದುಮ್ಮಾನ
ಇತರರು ಕೇಳುವುದು ಕಣ್ಣೀರಿನ ಹುಸಿಗಾನ

- Login or register to post comments
- 638 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಬಂದೆವು
ಬರುವಾಗ ಯಾರೊಡನೆ ಬಂದೆವು? ಕಾಲ ಚಕ್ರದಲ್ಲಿ ನಮ್ಮದಾಗಿಸಿಕೊಂಡ ಅನುಭವ,ಕಲಿತ ಪಾಠ,ನಮ್ಮ ಬದುಕಿಗೆ ಅಂಟಿಕೊಂಡಿರುವ ಪ್ರತಿಯೊಂದೂ ನಮ್ಮದೇ. ಸಾವಿನಲ್ಲಿಯೂ ಒಂಟಿ ಅನ್ನುತ್ತೇವಲ್ಲ ಅದನ್ನು ನಾನು ಒಪ್ಪುವುದಿಲ್ಲ,ನಮ್ಮ ಅನುಭವಗಳು ನಮ್ಮೊಂದಿಗಿರುತ್ತವೆ.
ಬದುಕಿನ ಪ್ರತಿ ಕ್ಷಣದಲ್ಲೂ ಒಬ್ಬೊಬ್ಬರು ಒಂದೊಂದನ್ನು ನಿಮಗೆ ಅರಿವಂತೆ ಮಾಡಿದ್ದಾರಲ್ಲಾ ಹಾಗಾಗಿ ಎಲ್ಲರೂ ನಿಮ್ಮವರೆ.
Re: ಬಂದೆವು
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಸಾವಿನ ನಂತರ ಆತ್ಮವಿಲ್ಲದ ದೇಹ / ಶರೀರ, ನಿರ್ಜೀವ ವಸ್ತುಗಳು, ಅನುಭವಗಳು, ಗೋಚರಿಸದ ಎಲ್ಲವುಗಳೂ ಒಂದೇ.
ಬದುಕಿನ ಪ್ರತಿ ಕ್ಷಣದಲ್ಲೂ ಒಬ್ಬೊಬ್ಬರು ಒಂದೊಂದನ್ನು ನಿಮಗೆ ಅರಿವಂತೆ ಮಾಡಿದ್ದಾರಲ್ಲಾ ಹಾಗಾಗಿ ಎಲ್ಲರೂ ನಿಮ್ಮವರೆ.
ನಿಮ್ಮ ಚಿಂತನೆಯ ದಿಕ್ಕಿನ ನನ್ನ ನೂರೆಂಟು ನಮನಗಳು.
ನನಗೆ, ಇಂದೊಂದು ಹೊಸ ವಿಷಯ ಕಲಿತ ಸಂತೋಷ.
ಒಂಟಿ ಜೀವನ ..
ಡಿವಿಜಿಯವರು ಹೇಳಿದಂತೆ:
ನಂಟುತಂಟೆಗಳ ಗಂಟೀಬ್ರಹ್ಮಭಂಡಾರ
ಅಂಟಿಲ್ಲವೆನಗಿದೊರೊಳೆನ್ನದಿರೆಂದೆಂದು
ಒಂಟಿ ನೀ ಒಳಜಗಕೆ, ಭಂಟ ಹೊರಜಗಕಾಗಿ
ಒಂಟಿಸಿಕೊ ಜೀವನವ - ಮಂಕುತಿಮ್ಮ
ಹೀಗೆ ಜೀವನವನ್ನೇ ಒಂಟಿಸಿಕೊಂಡ ಮೇಲೆ ನಮ್ಮದಾವುದು ಮತ್ತು ಪರರದಾವುದು? ಅಥವಾ ನಮ್ಮ (ನಮ್ಮ ಅನುಭವ, ನಮ್ಮ ಸಂಭಂದ .. ಇತ್ಯಾದಿ) ಹೊರತಾಗಿ ಇರುವುದಾದರೂ ಏನು?