Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಝೆನ್ ಕತೆಗಳು - ಓ ಎಲ್ ಎನ್ ಸ್ವಾಮಿ

ಝೆನ್: ಕಿರು ಪರಿಚಯ

August 5, 2005 - 4:56pm — olnswamy

ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು.
ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ ತರುವಾಯ ಈ ಪಂಥವು ಜಪಾನನ್ನು ಪ್ರವೇಶಿಸಿತು. ಹನ್ನೆರಡನೆಯ ಶತಮಾನದ ಜಪಾನಿನನಲ್ಲಿ ಸಮೃದ್ಧವಾಗಿ ಬೆಳೆಯಿತು.
ಸಮಾಧಾನ ಚಿತ್ತ, ನಿರ್ಭಯತೆ, ಸಹಜಸ್ಫೂರ್ತತೆಯ ಗುಣ ಇವೆಲ್ಲ ಪ್ರಬುದ್ಧ ಮನಸ್ಸಿನ ಲಕ್ಷಣಗಳು. ಇವು ಧ್ಯಾನದ ಉಪ ಲಾಭಗಳಾಗಿ ದೊರೆಯುವುದೆಂದು ಕಂಡುಕೊಂಡ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆಯಿತು.
ಪ್ರತಿಯೊಬ್ಬರಲ್ಲೂ ಬೋಧಿಯು ಸತ್ವವಾಗಿ ಇದ್ದೇ ಇರುತ್ತದೆ. ಮೌಢ್ಯದ ಕಾರಣದಿಂದ ಈ ಸತ್ವವು ಸುಪ್ತವಾಗಿಯೇ ಉಳಿದುಬಿಡುತ್ತದೆ. ಸೂತ್ರಗಳ ಪಠಣ, ಪುಣ್ಯಕಾರ್ಯಗಳನ್ನು ಮಾಡಬೇಕೆಂಬ ಹಟ, ಪೂಜೆ, ಆರಾಧನೆ, ಧಾರ್ಮಿಕ ಆಚರಣೆ ಇಂಥವನ್ನೆಲ್ಲ ಮಾಡುವ ಮೂಲಕ ಯಾರೂ ತಮ್ಮಲ್ಲಿರುವ ಈ ಬೋಧಿ-ಸತ್ವವನ್ನು ಅರಳಿಸಿಕೊಳ್ಳುವುದು ಸಾಧ್ಯವಿಲ್ಲ. ದಿನ ನಿತ್ಯದ ವ್ಯವಹಾರದ ತಾರ್ಕಿಕ ಸೀಮೆಗಳನ್ನು ಉಲ್ಲಂಘಿಸಿ ಝೆನ್ ಎಂಬ ಬೋಧಿ-ಸತ್ವ ತಟ್ಟನೆ ಮೈದೋರಿಬಿಡುತ್ತದೆ. ಹಾಗಾಗುವುದೇ ಸಾಕ್ಷಾತ್ಕಾರ.
ಇಂಥ ಸಾಕ್ಷಾತ್ಕಾರವನ್ನು, “ಕಂಡವರಿಗಲ್ಲ, ಕಂಡವರಿಗಷ್ಟೆ ಕಾಣುವ” ಸಹಜ ಅಚ್ಚರಿಯನ್ನು, ಚೀನೀ ಭಾಷೆಯಲ್ಲಿ ವೂ ಎಂದು, ಜಪಾನೀ ಭಾಷೆಯಲ್ಲಿ ಸತೋರಿ ಎಂದು ಕರೆಯುತ್ತಾರೆ. ಅಭ್ಯಾಸದ ಮೂಲಕವೂ ಸಾಕ್ಷಾತ್ಕಾರವನ್ನು ಪಡೆಯಬಹುದೆಂಬುದು ಝೆನ್‌ನ ವಿಶ್ವಾಸ. ಹಾಗಾಗುವುದಕ್ಕೆ ತಕ್ಕ ಗುರುವಿನ ಮಾರ್ಗದರ್ಶನ ದೊರೆಯಬೇಕು.
ಸಾಕ್ಷಾತ್ಕಾರಕ್ಕೆ, ಸಾಕ್ಷಾತ್ಕಾರ ಕ್ಷಣದ ಸತೋರಿಯನ್ನು ಅನುಭವಕ್ಕೆ ತಂದುಕೊಳ್ಳುವುದಕ್ಕೆ ದಾರಿಗಳು ಇವೆಯೆ? ಇವೆ ಎಂದು ಝೆನ್ ನಂಬುತ್ತದೆ. ಇಂಥದೇ ದಾರಿ ಸರಿಯಾದ ದಾರಿ ಎಂಬ ಹಟದಲ್ಲಿ ಝೆನ್ ನಲ್ಲಿ ಕೂಡ ಅನೇಕ ಪಂಥಗಳು ಹುಟ್ಟಿಕೊಂಡವು.
ಇವುಗಳಲ್ಲಿ ರಿನ್‌ಝಾಯ್ (ಚೀನೀ ಭಾಷೆಯಲ್ಲಿ ಲಿನ್-ಚೀ), ಸೊಟೋ (ಚೀನೀ ಭಾಷೆಯಲ್ಲಿ ತ್ಸ ಒ-ತುಂಗ್) ಒಬಕು (ಚೀನೀ ಭಾಷೆಯಲ್ಲಿ ಹುವಾಂಗ್-ಪೊ) ಎಂದು ಕರೆಯಲಾಗುವ ಪಂಥಗಳು ಮುಖ್ಯವಾದ ಪಂಥಗಳು.
ರಿನ್‌ಝಾಯ್ ಪಂಥವು ಎನ್‌ಸಾಯಿ ಎಂಬ ಗುರುವಿನ ಮೂಲಕ ಜಪಾನಿನಲ್ಲಿ ೧೧೯೧ರಲ್ಲಿ ಪ್ರಚಾರಕ್ಕೆ ಬಂದಿತು. ಕೋನ್‌ಗಳು ಮನಸ್ಸಿಗೆ ಉಂಟುಮಾಡುವ ಆಘಾತ, ಕೋನ್‌ನಲ್ಲಿರುವ ವಿರೋಧಾಭಾಸಗಳನ್ನು ಕುರಿತ ಧ್ಯಾನ, ಇವುಗಳ ಮೂಲಕ ಸಾಕ್ಷಾತ್ಕಾರದ ದಾರಿ ಸುಗಮವಾಗುತ್ತದೆ ಎಂಬುದು ಈ ಪಂಥದ ನಂಬಿಕೆ. ಕೋನ್ ಎಂದರೆ ಒಂದು ಬಗೆಯ ಒಗಟು ಕಥೆ. ಕನ್ನಡದ ಬೆಡಗಿನ ವಚನಗಳು, ಕನಕ ದಾಸರ ಮುಂಡಿಗೆಗಳು ಇತ್ಯಾದಿಗಳಂತೆ ಕೋನ್ ಕೂಡ ವಿರೋಧಾಭಾಸವನ್ನು ಒಳಗೊಂಡ ಕಿರು ಕಥೆಗಳು. ಈ ವಿರೋಧಾಭಾಸವನ್ನು ಕುರಿತು ಧ್ಯಾನಿಸುವುದು ಕೂಡ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ.
ತಾವೊ, ದಾವ್ ದೆ ಚಾಂಗ್ ಎಂದೆಲ್ಲ ಕನ್ನಡದಲ್ಲಿ ಬರೆಯಲಾಗುವ ತ್ಸಾ ಒ-ತುಂಗ್ ಜಪಾನಿನನ್ಲಿ ಸೊಟೊ ಎಂಬ ಹೆಸರನ್ನು ಪಡೆಯಿತು. ಚೀನಾದಿಂದ ೧೨೨೭ರಲ್ಲಿ ಜಪಾನಿಗೆ ಹಿಂದಿರುಗಿದ ದಾಗೆನ್ ಎಂಬಾತ ಇದನ್ನು ಬೆಳೆಸಿದ. ಈ ಪಂಥದವರು ಝಾಝೆನ್ ಎಂದು ಕರೆಯಲಾಗುವ ಧ್ಯಾನ ಪದ್ಧತಿಗೆ ಪ್ರಾಮುಖ್ಯ ನೀಡುತ್ತಾರೆ.
ಜಪಾನಿನಲ್ಲಿ ಇನ್‌ಜೆನ್ ಎಮದು ಪ್ರಸಿದ್ಧನಾಗಿರುವ ಚೀನೀ ಸಂತ ಇನ್-ವುವಾನ್ ೧೬೫೪ರಲ್ಲಿ ಒಬುಕು ಎಂಬ ಝೆನ್ ಪಂಥವನ್ನು ಸ್ಥಾಪಿಸಿದ. ಇದನ್ನು ಚೀನೀ ಭಾಷೆಯಲ್ಲಿ ಹುವಾಂಗ್-ಪೊ ಎನ್ನುತ್ತಾರೆ. ಇದು ರಿನ್‌ಝಾಯ್ ಪಂಥದಂತೆ ಕೋನ್‌ಗಳನ್ನೂ ಅಮಿತಾಭ ಬುದ್ಧನನ್ನು (ಅಮಿತ-ಅಪರಿಮಿತ, ಆಭ-ಬೆಳಕು) ಕುರಿತ ಪ್ರಾರ್ಥನೆಯನ್ನೂ ಅಳವಡಿಸಿಕೊಂಡಿದೆ.
ಹದಿನಾರನೆಯ ಶತಮಾನದ ಜಪಾನಿನಲ್ಲಿ ರಾಜಕೀಯ ತಳಮಳ ತುಂಬಿತ್ತು. ಆ ಅವಧಿಯಲ್ಲಿ ಝೆನ್ ಗುರುಗಳು ತಮ್ಮ ಕೌಶಲವನ್ನು ಬಳಸಿಕೊಂಡು ರಾಯಭಾರಿಗಳಾಗಿ, ಅಧಿಕಾರಿಗಳಾಗಿ, ಸಂಸ್ಕೃತಿಯ ಸಂರಕ್ಷಕರಾಗಿ ಕೆಲಸ ಮಾಡಿದರು. ಕಲೆ, ಸಾಹಿತ್ಯ, ಚಹಾಪಾನದ ಸಂಸ್ಕೃತಿ, ನೋ ರಂಗಭೂಮಿ ಇವೆಲ್ಲ ಬೆಳೆದು ಸಮೃದ್ಧಗೊಂಡದ್ದಕ್ಕೆ ಝೆನ್ ಗುರುಗಳೆ ಮುಖ್ಯ ಕಾರಣ. ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ, ತೊಕಗುವಾ ವಂಶದ ಆಳ್ವಿಕೆಯಲ್ಲಿ ನವ ಕನ್‌ಫೂಶಿಯನ್ ವಾದವು ಜಪಾನಿನ ಜನರ ಬದುಕಿನ ಮೇಲೆ ದೊಡ್ದ ಪರಿಣಾಮವನ್ನು ಬೀರಿತು. ಈ ತತ್ವ ಮತ್ತು ಸಿದ್ಧಾಂತಗಳು ಜಪಾನಿನಲ್ಲಿ ಪ್ರಚುರಗೊಳ್ಳುವುದಕ್ಕೂ ಝೆನ್ ಗುರುಗಳೇ ಕಾರಣ.
ಆಧುನಿಕ ಜಪಾನಿನಲ್ಲಿ ಸುಮಾರು ಒಂದು ಕೋತಿ ಝೆನ್ ಪಂಥೀಯರಿದ್ದಾರೆ. ಇಪ್ಪತ್ತನೆಯ ಶತಮಾನದಲ್ಲಿ ಝೆನ್‌ನ ವಿವಿಧ ಅಂಶಗಳ ಬಗ್ಗೆ ಪಾಶ್ಚಾತ್ಯ ಜಗತ್ತಿನಲ್ಲೂ ಆಸಕ್ತಿ ಹೆಚ್ಚಿತು. ಉತ್ತರ ಅಮೆರಿಕ ಮತ್ತು ಯೂರೋಪುಗಳಲ್ಲಿ ಝನ್ ಅಭ್ಯಾಸದಲ್ಲಿ ತೊಡಗಿರುವ ಅನೇಕ ಸಣ್ಣ ದೊಡ್ಡ ಗುಂಪುಗಳು ಇವೆ.
ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ಶ್ರೀ ಕೆ.ವಿ. ಸುಬ್ಬಣ್ಣ ಅವರ ಝೆನ್ ಕಥೆಗಳು ಒಳಗೊಂಡಂತೆ ಅನೇಕರ ಮುಖಾಂತರ ಝೆನ್ ಕತೆಗಳು ಕನ್ನಡಕ್ಕೆ ಬಂದಿವೆ. ಶ್ರೀ ಯು. ಆರ್. ಅನಂತಮೂರ್ತಿಯವರು ದಾವ್ ದ ಜಿಂಗ್ ಎಂಬ ಹೆಸರಿನಲ್ಲಿ ತಾವೊ ತತ್ವಗಳನ್ನು ಪರಿಚಯಿಸಿದ್ದಾರೆ.
ಇಲ್ಲಿ ಇದುವರೆಗೂ ಪರಿಚಯಗೊಂಡಿರದ ಕಥೆಗಳಿಗೆ ಪ್ರಾಮುಖ್ಯ ನೀಡಿ ಸುಮಾರು ನೂರು ಕತೆಗಳನ್ನು ನೀಡುವ ಉದ್ದೇಶವಿದೆ. ತಬ್ಬಿಬ್ಬುಮಾಡುವ, ಕೆಣಕುವ, ಕಚಗುಳಿ ಇಡುವ ಈ ಕತೆಗಳನ್ನು ಮೆಲುಕು ಹಾಕಿದರೆ ಹೊಸ ಬೆಳಕು ಹೊಳೆದಂತೆ ಆಗುತ್ತದೆ.

‹ ಝೆನ್ ಕತೆಗಳು - ಓ ಎಲ್ ಎನ್ ಸ್ವಾಮಿಮೇಲಿನ ಪುಟಕ್ಕೆಝೆನ್ ಕತೆ ೧೩: ಮೌನ ದೇವಾಲಯ ›
  • ಕಥಾ ಮಾಲಿಕೆ
  • ಝೆನ್ ಕಥೆಗಳು (ಕಥಾ ಮಾಲಿಕೆ)
Ornamental seperator
  • Printer-friendly version
  • Login or register to post comments
  • 1177 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ್ ಕತೆ ೧೪ ಪ್ರತಿ ಕ್ಷಣ ಝೆನ್
  • ಝೆನ್: ೩: ಒಂದು ಹನಿ
  • ಝೆನ್ - ನಿಮಗೆಷ್ಟು ಗೊತ್ತು೟
  • ಝೆನ್ ಕಥೆ: ೨೮ ಮೌನ
  • ಝೆನ್ ೧: ನಗುವ ಬುದ್ಧ
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 9 ಅತಿಥಿಗಳು ಆನ್ಲೈನ್ ಇರುವರು.

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator