ಪ್ರತಿನಿತ್ಯ ಆಗೊಮ್ಮೆ ಈಗೊಮ್ಮೆ, ಅದ್ಯಾವುದೋ ಬಾಂಬ್ ಬ್ಲಾಸ್ಟ್ ಆದಾಗ, ಮತ್ತೇನೋ ಆದಾಗ, "ಛೆ, ಈ ಜಗತ್ತು ಬದಲಾಗಬೇಕು, ನಾವುಗಳು ಇದನ್ನು ಬದಲಾಯಿಸಬೇಕು" ಅನ್ನಿಸಿದ್ದಿದೆಯೋ?
ಅಂತರ್ಜಾಲ ಜಗತ್ತನ್ನು ಸಂಪೂರ್ಣ ಬದಲಾಯಿಸಿಬಿಟ್ಟಿರುವ ಗೂಗಲ್ ಕಂಪೆನಿ ಈಗ ಹೀಗೆ ಅನ್ನಿಸುವವರಿಗೆ ಮಣೆ ಹಾಕಲಿದೆಯಂತೆ.
ಹಿನ್ನೆಲೆ:
ಗೂಗಲ್ ತನ್ನ ಹತ್ತನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದೆ. ಈ ಸಮಯದಲ್ಲಿ "Don't be evil" ಎಂದು ಹೊರಟ ಇದೇ ಕಂಪೆನಿ ಖಳನಾಯಕನಂತೆ ನಡೆದುಕೊಂಡು ಸ್ವತಃ evil ಆದ ಇತ್ತೀಚೆಗಿನ ಹಲವು ದೃಷ್ಟಾಂತಗಳ ನಡುವೆ ದುಡ್ಡು ಮಾಡಿತು, ಸಮಾಜ ಸೇವೆ ಮಾಡಿಲ್ಲ ಎಂಬ ಟೀಕೆ ಕೇಳಿಬಂದಿರುವುದು ಇವರ ಕಿವಿಗೂ ಬಿದ್ದಂತಿದೆ ಎಂಬುದು ಹಲವು ವರದಿಗಳ ಅಂಬೋಣ.
ಅದೇನೆ ಇರಲಿ, ಗೂಗಲ್ ಎಂದಿನಂತೆ ಹೆಚ್ಚಿನ ಕೆಲಸ ತಾನು ಮಾಡದೆ ಉಳಿದವರಿಗೆ ಮಾಡಲು ಬಿಟ್ಟು ಅದಕ್ಕೆ ಹಣಕಾಸಿನ ಸಹಾಯ ಮಾಡುವ ಜವಾಬ್ದಾರಿ ಹೊತ್ತಿಕೊಂಡಿದೆ. ಇದೇ ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್ (Project 10100).
ಇಡಿಯ ಜಗತ್ತನ್ನು ಬದಲಾಯಿಸಬಲ್ಲ ಐಡಿಯ ನಿಮ್ಮ ಬಳಿ ಇದ್ದರೆ ನೀವೂ ಇದರಲ್ಲಿ ಪಾಲ್ಗೊಳ್ಳಬಹುದು. ಒಟ್ಟಾರೆ ಹತ್ತು ಮಿಲಿಯನ್ ಡಾಲರುಗಳು ಕಣದಲ್ಲಿದೆಯಂತೆ!
ಯಾರ ಐಡಿಯ ಹೆಚ್ಚು ಜನರನ್ನು ತಲುಪುವುದೋ (ಹಾಗು ಅವರ ಜಗತ್ತನ್ನು ಉತ್ತಮಪಡಿಸುವುದೋ) ಅವರು ಗೆಲ್ಲಲಿ ಎನ್ನುತ್ತದೆ ಈ ಕುರಿತ ಗೂಗಲ್ ಪುಟ.
ಐಡಿಯ ಕಳುಹಿಸಲು ಕೊನೆಯ ದಿನಾಂಕ - ಅಕ್ಟೋಬರ್ ೨೦, ೨೦೦೮.

- Login or register to post comments
- 471 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ಅದನ್ನು ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.




RSS:
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಒಳ್ಳೆಯ ಮಾಹಿತಿ.
*ಅಶೋಕ್
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಅಪ್ಲೈ ಮಾಡ್ತೀರಾ? ನಾನು ಅಪ್ಲೈ ಮಾಡೋಣ ಅನ್ಕೋತಿದೀನಿ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
!dea !de
*ಅಶೋಕ್
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಹರಿ,
ಉಪಯುಕ್ತ ಮಾಹಿತಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಐಡಿಯಾ ಪಡೆದು, ಗೂಗಲ್ ಕೂಡ ಮತ್ತೆ ಹಣ ಮಾಡ ಹೊರಟಿದೆ ಅಲ್ವೇ?
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಇಲ್ಲ ಕಣೋ. ಕೆಲವರಿಗೆ ಐಡಿಯ ಇರತ್ತೆ, ದುಡ್ಡಿರೋದಿಲ್ಲ. ಗೂಗಲ್ ಇಂಥವರ ಕನಸುಗಳನ್ನು ಸಾಕಾರಗೊಳಿಸೋಕೆ ಸಹಾಯ ಮಾಡುತ್ತಿದೆ.
ಜಗತ್ತನ್ನು ಬದಲಾಯಿಸುತ್ತೇನೆ ಎಂಬ ಕನಸುಗಳಿದ್ದರೆ ಸಾಲದು, ಅದಕ್ಕೆ ಪೂರಕ ಹಣಕಾಸಿನ power ಕೂಡ ಬೇಕಲ್ವ?
ಮಧ್ಯಮವರ್ಗದಿಂದ ಬೆಳೆದುಬಂದವರಿಗೆ, ಮಧ್ಯಮವರ್ಗದವರಿಗೆ ಇದು ಬಹಳ ಸುಲಭ ಅರ್ಥವಾಗುವುದು. ಅಪ್ಪ ಅಮ್ಮ ಓದಿಸುವಷ್ಟರ ಮಟ್ಟಿಗೆ ನೋಡಿಕೊಳ್ಳುತ್ತಾರೆ - ಹಂಗೂ ಹಿಂಗೂ. ಓದಿ ಬಂದದ್ದರಿಂದಲೋ ಏನೋ ಇದನ್ನು ಹೀಗೆ ಮಾಡಬಹುದಿತ್ತು, ಇದನ್ನು ಉತ್ತಮಪಡಿಸಬಹುದಿತ್ತು ಎಂದೆಲ್ಲ ಮನಸ್ಸಿಗೆ ಆಗಾಗ ಬರುತ್ತಿರುತ್ತೆ... ಅದರೆ ಅದಕ್ಕೆ ಬೇಕಾದ ಹಣವಿರುವುದಿಲ್ಲ, ಪವರ್ ಇರುವುದಿಲ್ಲ.
ಈ ಪವರ್ ಕೊಡುವುದರಿಂದ ಗೂಗಲ್ಲಿಗೇನೂ ಉಪಯೋಗವಾಗಲಿಕ್ಕಿಲ್ಲ - ಈ ಕಡೆಯಿಂದ ಸ್ವಲ್ಪ ಸಾಮಾಜಿಕ ಬದ್ಧತೆಯಿರುವ ಕಾರ್ಯಗಳನ್ನು ಮಾಡಿದರು ಅನ್ನುವುದೊಂದನ್ನು ಬಿಟ್ಟರೆ. ಒಳ್ಳೆಯ initiative ಇದು. ನಾನು ಸ್ವಲ್ಪ ಹಾಗೇ ಇರಲಿ ಅಂತ ಬರಹ ಆ toneನಲ್ಲಿ ಬರೆದೆ ಅಷ್ಟೆ - ಗೂಗಲ್ ಮಾಡುತ್ತಿರುವ ಈ ಕೆಲಸ ಅದ್ಭುತವಾದ ಬದಲಾವಣೆ ತರಬಲ್ಲುದು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಹ್ಮ, ನಿಜ. ಗೂಗಲ್ ನ ಈ ಪ್ರಾಜೆಕ್ಟ್ ವಿಶ್ವದ ಎಲ್ಲ ಜನರ ಮುಂದೆ ಮನು ಕುಲಕ್ಕೆ ಏನ್ ಮಾಡ್ಬೇಕಿದೆ ಅನ್ನೋದರ ಒಂದು ಸಂಗ್ರಹವನ್ನಿಡಲಿ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ನ೦ಗೆ ಈ ಜಗತ್ತು ಯಾವರೀತಿ ಮಾರ್ಪಡಿಸ್ ಬೇಕು ಅನ್ನೋದು ಸ್ಪಷ್ಟವಾಗಿ ತಿಳಿದಿಲ್ಲಾ..
ಒಮ್ಮೆಮ್ಮೆ ರಾಜಕೀಯ ಅನ್ಸುತ್ತೆ .. ಮತ್ತೊಮ್ಮೆ ಪರಿಸರ ಅನ್ಸುತ್ತೆ..ಇನ್ನೊಮ್ಮೆ
ಆರ್ಥಿಕವಾಗಿ ಅನ್ಸತ್ತೆ .. ದಾರಿ ಕಾಣಿಸಿದರೆ ನೋಡೋಣ.
ಉ: ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್
ಒಂದೇ ದಾರಿ ಖಂಡಿತ ಇರಲಿಕ್ಕಿಲ್ಲ.
Hitch Hiker's guide to the Galaxyಯ ತಮಾಷೆ ಕಥೇಲಿ "ಎಲ್ಲದಕ್ಕೂ ಉತ್ತರ ೪೨" ಅನ್ನುತದಲ್ಲ ಸೂಪರ್ ಕಂಪ್ಯೂಟರು, ಆ ರೀತಿ ಇದ್ದಿದ್ದರೆ ಜಗತ್ತು ಬಹಳ uncomplicated ಆಗಿಬಿಡುತ್ತಿತ್ತು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa