ಇಂದಿನ ಸುದ್ದಿ
ಮೆಟ್ರೋನಾ ಮೋನೋನಾ
ಪೆಟ್ರೋ ಅಂತೂ ಸುಗಮ
ಗೌಡರ ಅನುಭವ
ಕುಮಾರ ಸಂಭವ
ಆವುದಾಗುವುದು ನಿರ್ಗಮ
ಹಳಿಯನು ಬಿಟ್ಟು ಹೊರಟರೆ ರೈಲು
ಜನರೆನ್ನುವರು ಬೈಲು
ಲಾಲೂಜಿಯ ಹೊಸಾ ಬಜೆಟ್ಟು
ಕನ್ನಡಿಗರ ಕೈಗೆ ತಂಬಿಟ್ಟು
ಕೋಟಿ ನೂರಕೆ ಲಕ್ಷಿಸುವುದೆಂತು
ಹೌದು ಅದೆಲ್ಲಿಂದ ಬಂತು
ವಿಮಾನವಿಂದು ಕಾಮಗಾರಿಅಂತು
ಭರವಸೆಯಡಿಯಲಿ ನಿಂತು
ದಿನದಿಂದಿನಕೆ ಕರೆಯದರಗಳು
ಕೈಗೆಟಕುತಿರೆ ಮುಗಿಯದು ಮಾತಿನ್ನೆಂತು
ಕೋಳಿಜ್ವರದಲಿ ಸತ್ತವರೆಲ್ಲ
ಕೋಳೀಗಳೆಂಬುದು ಸತ್ಯ
ವ್ಯವಹಾರ ಕುಸಿದು ಹಣಹೆಣವಾಗಿರೆ
ಮೊಳೆಯುವುದೆಂತಾ ಹಸಿರು
ಕೆಳಗಿಳಿಸಿದನು ಕನ್ನಡಧ್ವಜ ಕಿಣೇಕರ್
ದ್ರೋಹಿಗಳ ಸದೆಬಡಿಯದಿದ್ದರೆ
ನಾವಾಗಬೇಕು ಎಲ್ಲರ ಕಣ್ಣಲಿ ಜೋಕರ್
ಇದೇ ನೋಡಿ ಪ್ರಚಲಿತ ಸುದ್ದಿ
ಇನ್ನು ನೀವು ಹೇಳಬೇಕು ನನಗೊಂದಿಷ್ಟು ಬುದ್ದಿ

- Login or register to post comments
- 589 hits
- Email this page




RSS:
ಪ್ರತಿಕ್ರಿಯೆಗಳು
Re: ಇಂದಿನ ಸುದ್ದಿ
ಹಳಿಯನು ಬಿಟ್ಟು ಹೊರಟರೆ ರೈಲು
ಜನರೆನ್ನುವರು ಬೈಲು
ಲಾಲೂಜಿಯ ಹೊಸಾ ಬಜೆಟ್ಟು
ಕನ್ನಡಿಗರ ಕೈಗೆ ತಂಬಿಟ್ಟು
ಚೆನ್ನಾಗಿ ಉಸುರಿದ್ದೀರ. ಈ ಕವನವನ್ನು ಪತ್ರಿಕೆಗಳಿಗೂ ಕಳುಹಿಸಿ. ಬಹಳ ಚೆನ್ನಾಗಿದೆ. ಆದರೆ ಲಾಲೂ ಕೈಗೆ ಕೊಟ್ಟಿರೋದು ತಂಬಿಟ್ಟಲ್ಲ ಅಲ್ವಾ?
ಚೊಂಬಿಟ್ಟು ಅಂತ ಬರೆದಿದ್ರೆ ಸೂಕ್ತವೇನೋ?
ಬೈಲು ಪದದ ಅರ್ಥ ಆಗ್ಲಿಲ್ಲ.
ಕೋಳಿಜ್ವರದಲಿ ಸತ್ತವರೆಲ್ಲ
ಕೋಳೀಗಳೆಂಬುದು ಸತ್ಯ
ಸತ್ಯವಾದ ಮಾತುಗಳು. ೧೦೦ ಕೋಟಿ ಜನರಲ್ಲಿ ೯೯.೯೯೯೯ ಮಂದಿ ಕೋಳಿ, ಕುರಿಗಳೇ! ಸೂತ್ರಧಾರಿಗಳ ಕಣ್ಣಲ್ಲಿ ಮಾನವರಂತೂ ಅಲ್ಲವೇ ಅಲ್ಲ.
ಇನ್ನು ನೀವು ಹೇಳಬೇಕು ನನಗೊಂದಿಷ್ಟು ಬುದ್ದಿ
ಈ ಕವನಕ್ಕೆ ನಿಮಗೆ ಬುದ್ಧಿ ಹೇಳ್ಬೇಕಾ? ಇದನ್ನು ಓದಿಯೂ ಓದದಂತಿರುವವರಿಗೆ ಬುದ್ಧಿ ಹೇಳ್ಬೇಕು.
ಕಾಲಕ್ಕೆ ತಕ್ಕುದಾದ ಮಾತನ್ನೇ ತಿಳಿಸಿರುವಿರಿ.
ಧನ್ಯವಾದಗಳು
ಧನ್ಯವಾದಗಳು.
)
ಹೌದು ನೀವು ಹೇಳೀದಂತೆ ಚೊಂಬಿಟ್ಟು ಹೆಚ್ಹು ಸೂಕ್ತವೆನಿಸುತ್ತದೆ.
ಇನ್ನು ಬೈಲು ಎಂಬುದು ಆಡುಭಾಷೆ,ಅದು ಬಯಲು ಎಂಬ ಪದ.ಬೋಳು,ಬರಿದಾದ ಸ್ಥಿತಿ.
ತಮಾಷೆಯಾಗಿ ಹೇಳ ಬೇಕೆಂದರೆ ,ಬಸ್ + ರೈಲು=ಬೈಲು,ಬಸ್ ಆಯ್ತು ಬೈಲು