ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

October 3, 2008 - 9:17am — savithasr

ನಾವು ಈ ಸಾಫ್ಟ್ವೇರ್ ಫೀಲ್ಡ್ನಲ್ಲಿದ್ಕೊಂಡು (ನೀವು ನಿಮ್ಮ ನಿಮ್ಮ ಫೀಲ್ಡ್ನಲ್ಲಿದ್ಕೊಂಡು)...
ಬರೀ ಇನ್ಕಂಟ್ಯಾಕ್ಸ್ ಕಟ್ಟೊದಲ್ದೆ...ನಮ್ಮದೇಶದ ಬೆಳವಣಿಗೆಗೆ ಪ್ರತ್ಯಕ್ಷ/ಪರೋಕ್ಷವಾಗಿ ಸಹಾಯವಾಗೊವಂತಹ ಯಾವ್ಯಾವ ಕೆಲಸ ಮಾಡಬಹುದು??

ಮತ್ತು

ನಮ್ಮದೇಶದ ಬೆಳವಣಿಗೆಗೆ ಪ್ರತ್ಯಕ್ಷ/ಪರೋಕ್ಷವಾಗಿ ಸಹಾಯವಾಗದಿರೊವಂತಹ ಯಾವ್ಯಾವ ಕೆಲಸ ಮಾಡೋದನ್ನ ನಿಲ್ಲಿಸಬಹುದು??

ಉದಾ:
ಡ್ರೈವಿಂಗ್ ಲೈಸೆನ್ಸ್ ತಗೊಳೋಕ್ಕೆ ಲಂಚ ಕೊಡೋದನ್ನ ನಿಲ್ಲಿಸಬೇಕು.

ಸಂಚಾರಿ ನಿಯಮಗಳನ್ನ ಸರಿಯಾಗಿ ಅನುಸರಿಸಬೇಕು.

ಪಾಲಿಥೀನ್ ಬಳಕೆಯನ್ನ ಆದಷ್ಟು ಕಡಿಮೆ ಮಾಡ್ಬೇಕು.

ನಮ್ಮ ಸಂಸ್ಕೃತಿನ ಉಳಿಸಿ ಬೆಳೆಸಬೇಕು.

ಅವಶ್ಯಕತೆಗೆ ಸರಿಯಾಗಿ ವಿದ್ಯುತ್ನ ಬಳಸಬೇಕು.

ಹುಟ್ಟಿದ ಹಬ್ಬದ ಗಿಫ್ಟ್ ಅಂತ ಒಂದು ಗಿಡ ಕೊಡಬಹುದು.(ಮೊನ್ನೆ ನಮ್ಮ ಗ್ರೂಪ್ನಲ್ಲಿ ಹುಟ್ಟಿದ ಹಬ್ಬದ ಕೇಕ್ ಬದಲಾಗಿ ಕಲ್ಲಂಗಡಿಹಣ್ಣು ಕತ್ತರಿಸಿದ್ರು ಬಹಳ ಡಿಫ್ರೆಂಟಾಗಿತ್ತು Smiling )

ಸಿಕ್ಕಾಪಟ್ಟೆ ಸಂಬಳದಲ್ಲಿ ಒಂದು ಚೂರಾದ್ರೂ ಒಳ್ಳೆ ಕೆಲಸಕ್ಕೆ ,ವಯಸ್ಸಾದೋವ್ರಿಗೆ, ಓದೋ ಬಡ ಮಕ್ಕಳಿಗೆ ಸಹಾಯ ಮಾಡಬಹುದು.

ಊಟ ಎಷ್ಟು ಬೇಕೋ ಅಷ್ಟನ್ನೇ ಹಾಕಿಕೊಂಡರೆ ಈಗ ಆಫೀಸ್ ಕೆಫಿಟೇರಿಯಾಲ್ಲಿ ಮಾಡ್ತಿರೋ ಫುಡ್ ವೇಷ್ಟೇಜನ್ನ ನಿಲ್ಲಿಸಬಹುದು.

ಡಬಲ್ ಸೈಡ್ ಪ್ರಿಂಟ್ ತಗೊಂಡು..ಪೇಪರ್ ಬಳಕೆ ಕಡಿಮೆ ಮಾಡಿದ್ರೆ..ಕೆಲವಾರು ಮರಗಳನ್ನದ್ರೂ ಉಳಿಸಿಕೊಬಹುದು.

ಯಾವಾಗಲೂ ಕಾರಿಗೆ ಅಂಟಿಕೊಳ್ಳದೆ ಆರಾಮಾಗಿ ಸಾರ್ವಜನಿಕ ಸಂಚಾರಿ ವಾಹನಗಳಲ್ಲೂ ಪ್ರಯಾಣಿಸಬಹುದು.
.
.
.
.
.
.
.
ಹೀಗೆ ನಮ್ನಮ್ಮಲ್ಲೇ ಒಂದು ಅವೇರ್ನೆಸ್ ಮೂಡಿಸಿಕೊಳ್ಳೋಕ್ಕೋಸ್ಕರ ನಾವು(ಅಂದ್ರೆ ನಮ್ಮ ಪ್ರಾಜೆಕ್ಟ್ ಟೀಮ್ನಲ್ಲಿರೋವ್ರು) ಆಫೀಸ್ನಲ್ಲಿ ಒಂದು ಚಿಕ್ಕ ಪ್ರೊಗ್ರಾಮ್ ಮಾಡ್ತಿದ್ದೀವಿ...ಅದಕ್ಕೆ ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಅನಿಸಿಕೆಗಳನ್ನ ತಿಳಿಸ್ತೀರಾ....ದಯವಿಟ್ಟು ಪ್ರತಿಯೊಬ್ಬರಿಂದ ಮಾಡಲ್ಲಿಕ್ಕೆ ಅಗೊವಂತಹವನ್ನೇ ತಿಳಿಸಿ.

ಸಿಕ್ಕಾಪಟ್ಟೆ ಧನ್ಯವಾದಗಳು
-ಸವಿತ

  • ಜ್ಞಾನವಾಹಿನಿ
~.~
  • Login or register to post comments
  • 511 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2008 - 9:26am — Sunil Jayaprakash

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

Sunil Jayaprakash's picture

ಕೇಕ ಬದಲು ಕಲ್ಲಂಗಡಿಗೆ ಕತ್ತರಿ, ಇನ್ನೊವೇಟೀವ್ ಅಯ್ಡಿಯಾ !!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 9:59am — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಜೊತೆಗೆ ಕಡ್ಲೆಪುರಿನು ಕೊಟ್ರು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 10:36am — createam

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

createam's picture

ಸೀರಿಯಸ್ಲಿ!!. ನನ್ನ ಹುಟ್ಟಿದ ಹಬ್ಬಕ್ಕೆ ಆಫೀಸ್‍ನಲ್ಲಿ ಕೇಕ್ ತರ್ತೀನಿ ಅಂದ್ರೆ ಇಲ್ಲ ಕಲ್ಲಂಗಡಿ ಹಣ್ಣೇ ತನ್ನಿ ಅಂತೀನಿ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 12:30pm — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಹಲಸಿನ ಹಣ್ಣು ಬೇಡವೇ?!! Smiling
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 9:35am — vinayak.mdesai

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

vinayak.mdesai's picture

ಕಲ್ಲಂಗಡಿ ಕತ್ತರಿಸೋ ತಂತ್ರ ಚನ್ನಾಗಿದೆ...

ವಿನಾಯಕ ಮುತಾಲಿಕ ದೇಸಾಯಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:24am — ASHOKKUMAR

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ASHOKKUMAR's picture

ನಿಮ್ಮ ಸಲಹೆಯ ನಾಲ್ಕು,ಐದು ಮತ್ತು ಆರನೆಯದ್ದು ನನ್ನ ಕೈಲಿ ಮಾಡಲಾಗುತ್ತಿಲ್ಲ. ಉಳಿದದ್ದು ನಿಮ್ಮ ಸಲಹೆಗಿಂತ ಹೆಚ್ಚೇ ಮಾಡ್ತಿದ್ದೇನೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:38am — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಧನ್ಯವಾದಗಳು ಅಶೋಕ್,
ನಿಮ್ಮ ಸಲಹೆಗಳನ್ನೂ ತಿಳಿಸುವಿರಾ...
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:42am — ASHOKKUMAR

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ASHOKKUMAR's picture

ಸಲಹೆಗಳನ್ನು ನೀಡಬಾರದು.
ಇದುವೆ ನನ್ನ ಸಲಹೆ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:50am — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಧನ್ಯವಾದಗಳು. ಉಪಯುಕ್ತ ಸಲಹೆಗಳನ್ನ ಹಂಚಿಕೊಳ್ಳೋದ್ರಲ್ಲಿ ತಪ್ಪೇನಿಲ್ಲ ಅಂತ ನನ್ನ ಅನಿಸಿಕೆ..
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 8:27pm — ASHOKKUMAR

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ASHOKKUMAR's picture

*ನೀರನ್ನು ಮಿತವಾಗಿ ಬಳಸಿ.
*ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಳ್ಳಿ.
*ವಸ್ತುಗಳನ್ನು ಮರುಬಳಕೆ ಮಾಡಿ(ಉದಾ: ಪೆನ್‌ನ ರಿಫೀಲ್ ಬದಲಿಸಿ ಬಳಸಿ)
*ಪ್ಲಾಸ್ಟಿಕ್‍, ರದ್ದಿ ಪುನರ್ಬಳಕೆಗೆ ನೀಡಿ.
*ಮಳೆ ನೀರನ್ನು ಇಂಗಿಸಿ.
*ಗಿಡ ನೆಡಿ.
*ಗಿಡ ಮರ ಕಡಿಯದಿರಿ.
*ಸ್ವಾಭಾವಿಕ ಬೆಳಕನ್ನು ಮನೆ ಕಚೇರಿಯಲ್ಲಿ ಒಳಗೆ ಬರುವಂತೆ ಮಾಡಿ, ಲೈಟ್ ಉರಿಸುವುದನ್ನು ಕಡಿಮೆ ಮಾಡಿ.
*ರಾಸಾಯಿನಿಕ ವಸ್ತುಗಳನ್ನು ಕಡಿಮೆ ಬಳಸಿ.
*ಫೋನ್,ಮೊಬೈಲಿನಲ್ಲಿ ದೀರ್ಘ್ಹ ಸಂಭಾಷಣೆ ಬೇಡ.
*ಶಾಪಿಂಗ್ ಹೋಗುವಾಗ ಚೀಲ ಹಿಡಿದುಕೊಂಡು ಹೋಗಿ.(ಬಿಗ್ ಬಜಾರಿನಂತಹ ಕಡೆ ಹೋಗದಿರಬೇಕಾಗಬಹುದು).
*ಅಗತ್ಯವಿರುವಷ್ಟೇ ಆಹಾರ ತಯಾರಿಸಿ.
*ಮೊಬೈಲ್,ಲ್ಯಾಪ್‍ಟಾಪ್, ಗಡಿಯಾರ ಇವೆಲ್ಲವನ್ನೂ ಜಾಗ್ರತೆಯಿಂದ ಬಳಸಿ, ಹೆಚ್ಚು ಕಾಲ ಬಳಸಿ.
*ಪುಸ್ತಕ,ಪತ್ರಿಕೆಗಳನ್ನು ಓದುವುದಿದ್ದರೆ ಮಾತ್ರ ಖರೀದಿಸಿ.
(ಇನ್ನೂ ಇದೆ Smiling )

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 12:20pm — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಅಶೋಕ್,
ನೀವು ಇಷ್ಟು ಒಳ್ಳೆಯ ಸಲಹೆಗಳನ್ನ ಹಂಚಿಕೊಂಡದ್ದು ತುಂಬಾ ಸಂತೋಷ...Smiling
>>(ಇನ್ನೂ ಇದೆ Smiling )
ಬರೀತೀರ ಪ್ಲೀಸ್....
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 1:15pm — ASHOKKUMAR

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ASHOKKUMAR's picture

*ತೆರಿಗೆ ಪಾವತಿಸಿ.
*ವಸ್ತುಗಳನ್ನು ಕೊಂಡಾಗ ಬಿಲ್ ಕೇಳಿ ಪಡೆಯಿರಿ.
*ಮಧ್ಯವರ್ತಿಗಳನ್ನು ಅವಲಂಬಿಸದಿರಿ.
*ವಾಹನಗಳನ್ನು ಬಳಸುವಾಗ ನಿಯಮ ಪಾಲಿಸಿ.
*ಕ್ಲಚ್ ಮತ್ತು ಬ್ರೇಕ್ ಬಳಕೆ ಕಡಿಮೆ ಮಾಡಿ.
*ಅಡುಗೆ ಅನಿಲವನ್ನು ವಾಹನಕ್ಕೆ ಬಳಸದಿರಿ.
*ವಾಹನವನ್ನು ಸರಿಯಾದ ಸ್ಥಿತಿಯಲ್ಲಿರುವಂತೆ ಆಗಾಗ ಪರೀಕ್ಷಿಸಿ.
*ತಂತ್ರಾಂಶಗಳ ಚೌರ್ಯ ಮಾಡದಿರಿ.
*ಮುಕ್ತ ತಂತ್ರಾಂಶ, ಓಎಸ್ ಬಳಸಿ.
*ಮೊಬೈ ಬಳಸುತ್ತಾ ವಾಹನ ಚಲಾಯಿಸಬೇಡಿ.
*ಕುಡಿದು ವಾಹನ ಚಲಾಯಿಸದಿರಿ.
*ಸೈಕಲ್ ಬಳಕೆ ಮಾಡಿ.
*ಸಿಡಿ,ಡಿವಿಡಿ ಬಳಕೆ ಕಡಿಮೆ ಮಾಡಿ.
*ಕಾನೂನು ಪಾಲಿಸಿ.
*ಕ್ಯೂ ಮುರಿಯದಿರಿ.
*ಧೂಮಪಾನ ಮಾಡಬೇಡಿ.
*ಮತದಾನ ತಪ್ಪಿಸದಿರಿ.
*ವದಂತಿ ಹಬ್ಬದಿರಿ.
*ನಕಲಿ ವಸ್ತುಗಳನ್ನು ಪ್ರೋತ್ಸಾಹಿಸದಿರಿ.
*ಸಂಪದದಲ್ಲಿ ನೋಂದಾಯಿಸಿ,ಭಾಗವಹಿಸಿ. Smiling

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 10:47am — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಅಶೋಕ್,
ಮತ್ತೊಮ್ಮೆ ಧನ್ಯವಾದಗಳು Smiling
>> ವಸ್ತುಗಳನ್ನು ಮರುಬಳಕೆ ಮಾಡಿ(ಉದಾ: ಪೆನ್‌ನ ರಿಫೀಲ್ ಬದಲಿಸಿ ಬಳಸಿ)
"ಯೂಸ್ ಅಂಡ್ ತ್ರೋ" ನಿಲುವಿರೋ ಈಗಿನ ಪರಿಸ್ಥಿತಿಯಲ್ಲಿ ಈ ಸಲಹೆ ತುಂಬಾ ಅವಶ್ಯಕ ಅನ್ನಿಸ್ತು.

ಆದ್ರೆ ಈ ಕೆಳಗಿನವುಗಳು ಏನಕ್ಕೆ ಅಂತ ಗೊತ್ತಾಗ್ಲಿಲ್ಲ...
>>*ಪುಸ್ತಕ,ಪತ್ರಿಕೆಗಳನ್ನು ಓದುವುದಿದ್ದರೆ ಮಾತ್ರ ಖರೀದಿಸಿ.
>>*ಕ್ಲಚ್ ಮತ್ತು ಬ್ರೇಕ್ ಬಳಕೆ ಕಡಿಮೆ ಮಾಡಿ. (ಇಂಧನದ ದೃಷ್ಟಿಯಿಂದನಾ??)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 12:57pm — ASHOKKUMAR

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ASHOKKUMAR's picture

ಹೌದು..ಇಂಧನ ಬಳಕೆ ಕಡಿಮೆ ಮಾಡುವುದರ ಜತೆ ಮಾಲಿನ್ಯ ಕಮ್ಮಿ ಮಾಡಲು ಕ್ಲಚ್,ಬ್ರೇಕ್ ಬಳಕೆ ಅಗತ್ಯವಾದಾಗ ಮಾತ್ರ ಮಾಡುವುದೊಳಿತು.
ಸೈಕಲ್ ಬಳಸಿದರೆ,ನಡೆದರೆ ಇನೂ ಒಳಿತು Smiling
ಪುಸ್ತಕ,ಪತ್ರಿಕೆ ಶೋಕಿಗಾಗಿ ಖರೀದಿಸಿದರೆ, ಮರಗಳ ನಾಶಕ್ಕೆ ಕಾರಣರದಂತೆ ಎನ್ನುವ ಆಲೋಚನೆಯಲ್ಲಿ ಬರೆದೆ.
ಎಲ್ಲ ಸರಿ,ಇದನ್ನು ಅನುಸರಿಸುವವರೆಷ್ಟು?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 4:20pm — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

"ಆಗದು ಎಂದು ಕೈ ಕಟ್ಟಿ ಕುಳಿತರೆ......"
ನಾವುಗಳಲ್ದೆ ಇನ್ನಾರು ಅನುಸರಿಸಬೇಕು ಅಶೋಕ್?
ಇನ್ನು ಮೇಲಾದ್ರು ಅನುಸರಿಸೋಣಾ ಅಂತಾನೆ....ಇದೇ ಕಾನ್ಸೆಪ್ಟ್ ಮೇಲೆ ನಮ್ಮ ಟೀಮ್ನವ್ರೆಲ್ಲಾ ಸೇರಿ ಒಂದು ಚಿಕ್ಕ ಸಾಕ್ಷ್ಯ ಚಿತ್ರ ಮಾಡಿದ್ದೀವಿ ಆಫೀಸ್ನಲ್ಲಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 4:47pm — ASHOKKUMAR

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

ASHOKKUMAR's picture

ಸಾಕ್ಷ್ಯಚಿತ್ರ ! ಅಬ್ಬಾ..
ಇಲ್ಲಿ ಸಂಪದದಲ್ಲಿ ಹಾಕಿಬಿಡಿ.ನಾವೂ ನೋಡ್ತೀವಿ.

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2008 - 8:36am — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಸಾಕ್ಷ್ಯಚಿತ್ರ...ಒಂದು ಅಮೆಚೂರ್ ಪ್ರಯತ್ನವಷ್ಟೇ Smiling
ಇನ್ನು ರಿಲೀಸ್ ಆಗಿಲ್ಲ ಅಶೋಕ್.
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:58am — srinivasps

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

srinivasps's picture

ಸವಿತಾ ಅವರೇ...

ಕಲ್ಲಂಗಡಿ ಕತ್ತರಿಸೋದು, ಕಡ್ಲೇಪುರಿ ಹಂಚೋದು ಬೊಂಬಾಟಾಗಿದೆ Smiling
ನಮ್ ಆಫೀಸ್ ನಲ್ಲಿ ಹಲಸಿನ ಹಣ್ಣು ಕತ್ತರಿಸಕ್ಕೆ ಹೇಳೋಣ ಅಂತ ಇದೀವಿ Eye-wink

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:12pm — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಹಲಸಿನ ಹಣ್ಣು!?!?! Puzzled
ಹುಟ್ಟು ಹಬ್ಬ ಆಚರಿಸಿಕೊಳ್ಳೋವ್ರು ಏನ್ ಪಾಪ ಮಾಡಿದ್ದಾರೊ ಏನೋ Laughing out loud...!!!
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:20pm — srinivasps

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

srinivasps's picture

ಹಹ್ಹ Smiling
ನೀವು ಕಲ್ಲಂಗಡಿ ಅಂದದ್ದಕ್ಕೆ, ಹಲಸಿನ ಹಣ್ಣು ನೆನಪಿಗೆ ಬಂತು Laughing out loud
ಬರ್ಥ್ ಡೇ ಬಂಪ್ಸ್ ಬದಲು ಹಲಸಿನ ಹಣ್ಣು ಕತ್ತರಿಸುವ ಶಿಕ್ಷೆ Laughing out loud

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:27pm — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಗಾದೆ ಇದೆಯಲ್ಲ...ಎಲ್ಲರಿಗೂ ಒಂದು ಕಾಲ ಬಂದೆ ಬರತ್ತೆ...!!

ನಿಮ್ಮ ಬರ್ಥ್ ಡೇನೂ ಬರತ್ತೆ ಮರೀಬೇಡಿ ಶ್ರೀ Laughing out loud

-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:47pm — srinivasps

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

srinivasps's picture

ನನ್ ಹುಟ್ಟಿದ ಹಬ್ಬದ ಸಮಯದಲ್ಲಿ ಹಲಸಿನ ಹಣ್ಣಿನ ಸೀಸನ್ ಇರಬೇಕಲ್ಲ ಹಣ್ಣು ಸಿಗೋದಕ್ಕೆ....ಕತ್ತರಿಸುವ ಮಾತು ಆಮೇಲೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:51pm — madhava_hs

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

madhava_hs's picture

ಬರ್ತ್ ಡೇ ಬಂಪ್ಸ್ !!

ಇದಕ್ಕೆ ಮಾತ್ರ ಒಪ್ಪಿಕೊಳ್ಳಬೇಡಿರಿ. ಕೆಲದಿನದ ಹಿಂದೆ ಚೆನ್ನೈನಲ್ಲಿ ಹೀಗೆ ಬರ್ತ್ ಡೇ ಬಂಪ್ಸ್ ತಿಂದವನೊಬ್ಬನಿಗೆ ಸೊಂಟದ ಕೆಳಗಿನ ಭಾಗ ಪಾದದವರೆಗೂ ಚಲನರಹಿತವಾಗಿ, ಬಹಳ ಸೀರಿಯಸ್ ಆಗಿ ಆಸ್ಪತ್ರೆಗೆ ಸೇರಿಸಬೇಕಾಯ್ತಂತೆ. ಬೆನ್ನುಮೂಳೆಗೆ ಇನ್ನೊಂದು ಮಿಲಿಮೀಟರ್ ನಷ್ಟು ಮೇಲೆ ಹೊಡೆತಬಿದ್ದಿದ್ದರೂ ಅವನ ಕಾಲುಗಳು ಚಲನರಹಿತವಾಗಿ ಶಾಶ್ವತವಾಗಿ ಹಾಸಿಗೆ ಹಿಡಿಯಬೇಕಾಗುತ್ತಿತ್ತು ಎಂದರಂತೆ. ಹುಟ್ಟುಹಬ್ಬದವನಿಗೆ ಮೆಟ್ಟಿನಲ್ಲಿ ಹೊಡೆಯುವುದು, ತಿನ್ನುವ ಕೇಕನ್ನು ಮಕಕ್ಕೆಲ್ಲಾ ಮೆತ್ತುವುದು, ಥೂ ಇದೆಂಥ ದರಿದ್ರ ಆಚರಣೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 1:36pm — makrumanju

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

makrumanju's picture

ಇದರಲ್ಲಿ ಎಲ್ಲವನ್ನು ಪಾಲಿಸಲು ಕಷ್ಟವಾಗುತ್ತೆ. ಸರ್ಕಾರಿ ಕಛೇರಿಗಳಲ್ಲಿ ಲಂಚವಿಲ್ಲದೇ ಸಣ್ಣ ಕೆಲಸವಾದರೂ ಆಗುತ್ತಾ ನೋಡಿ. ಎಲ್ಲಾ ಲಂಚಮಯವಾಗಿದೆ. ಬೇರೆ ವಿಧಿಯಿಲ್ಲದೇ ಲಂಚ ಕೊಡುತ್ತಾರೆ.

ಮಾ.ಕೃ.ಮಂಜು
http://makrumanju.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 5:13pm — girish.rajanal

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

girish.rajanal's picture

ಎಲ್ಲ ಆಗುತ್ತೆ ರೀ.. ಲಂಚ ಕೊಡೋದಿಲ್ಲ ಅನ್ನೋ ಮನಸ್ಸು ಇರಬೇಕು...
ಕೆಲಸ ಆಗದಿದ್ದ ಪಕ್ಷದಲ್ಲಿ ಹತ್ತಿರದ ಪ್ರಭಾವಿ ಆಸಾಮಿಗೆ ಫೋನ್ ಮಾದತೀನಿ ಅಂತ ಗದರಿಸಿ..
ಹಂಗೂ ಬಗ್ಗಲಿಲ್ಲ ಅಂದ್ರ ಡಿ.ಸಿ ಗೆ ದೂರು ಕೊಡತೀನಿ ಅನ್ರಿ..ಕೆಲಸ ಆಗುತ್ತ...

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2008 - 8:53am — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

ಲಂಚ ಕೊಡೋದು ಬಿಡೋದು ನಿಮ್ಮ ಕೈಯಲ್ಲಿದೆ..ವಿಧಿಯನ್ನ ಅವಲಂಬಿಸಿಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 6:17pm — kishoreyc

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

kishoreyc's picture

ನಾನು ಪಾಲೀಥೀನ್ ಬಳಕೆಯನ್ನು ೯೯% ನಿಲ್ಲಿಸಿದ್ದೇನೆ ಎ೦ದರೆ ತಪ್ಪಾಗಲಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 12:28pm — savithasr

ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ

savithasr's picture

೯೯% ಸೂಪರ್!!! Smiling
ಕಿಶೋರ್ ಹೇಗೆ ಸಾಧ್ಯವಾಯ್ತು??
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಮ್ಮ ಊರಿನಲ್ಲಿ ನಡೆಯುವ ವಿಶೇಷ ಘಟನೆಗಳು, ವಿಶೇಷ ವ್ಯಕ್ತಿಗಳು, ಇದ್ದರೆ ನಮಗೆ ತಿಳಿಸಿ 0-98454 89452
  • ಅಂತರ್ಜಾಲದಲ್ಲಿ ಆಫೀಸ್ !!!
  • ಪ್ರೀತಿಯ ಫಿಲಾಸಫಿ
  • ಇಂದು ವಿಶ್ವ ಪರಿಸರ ದಿನ - Do I care?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
Syndicate content

ಲೇಖಕರು

savithasr's picture

ಪೂರ್ಣ ಹೆಸರು
ಸವಿತ

ಪರಿಚಯ

ಕದವ ತೆರೆ ಬೆಳಕು ಬರಲಿ ಓ ಚಿತ್ತಾ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
  • ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
  • ಮಕ್ಕಳ ಹಾಡು
  • ಉಗ್ರವಾದ - ಇದೊಂದು ಹಳೇ ಉದ್ಯೋಗ
  • ಹೀಗೊ೦ದು ರಸಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • Aravind M.S
    ಉ: ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.
    December 3, 2008 - 2:02pm
  • Rakesh Shetty
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 2:00pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:58pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
  • benaka
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 1:52pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 426 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator