ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕಾಣೆಯಾಗಿದೆ!

February 28, 2006 - 9:26pm — tvsrinivas41

ಸ್ನೇಹಿತ ದೇಶಪಾಂಡೆ ಮರಾಠಿಯಲ್ಲಿ ಬರೆದ
ಕವನವೇ ಸ್ಫೂರ್ತಿ

ದುಡಿದರೂ ಬೆವರು ಸುರಿಯಲು ಬಿಡದ ಹವಾ ನಿಯಂತ್ರಕ
ಚಿಂತನೆಯ ಬರೆಯಲು ಸಹಾಯಕಿ, ಪಾಲಿಸಲು ಆಜ್ಞಾಧಾರಕ
ಒಂದರ ಮೇಲೊಂದು ಮೀಟಿಂಗು ಈಟಿಂಗು
ಬೈಗಿನಿಂದ ಸಂಜೆವರೆಗೆ ಸಡಗರವೋ ಸಡಗರ
ಕಾಣೆಯಾಗಿದೆ ಅಂದಿನ ಲಂಗೋಟಿಯ ಹಂದರ

ತಿಂಗಳ ಕೊನೆಗೆ ಕೈತುಂಬುವ ಹಣ, ಹೆಚ್ಚಿನ ಉಳಿತಾಯ
ವಾರದ ವಾರಕ್ಕೂ ಜಗ ಜಗಿಸುವ ಷಾಪ್ಪಿಂಗು
ಕುಟುಂಬ ಮಿತ್ರರೊಂದಿಗೆ ಮೋಜು ವಿಲಾಸ
ನೀರಿನಂತೆ ಹರಿವ ಕಾಸೇ ನನ್ನರಸ
ಕಾಣೆಯಾಗಿದೆ ಅಮ್ಮನ ಸೀರೆಯ ಮಮತೆ

ಮೋಜು ಮಾಡಲು ಹಾಡುಗಳ ಡಿಸ್ಕು, ಐಪಾಡು
ಮರೆಯಾಗಿದೆ ಆಟ ಕಲಿಸಿದ ಹಿತ್ತಲ ಕಾಡು
ಸೈಕಲ್ಲಿನ ಮರೆ ಮಾಚಲು ಬಂದ ವೇಗದ ಕಾರು
ಮನದೊತ್ತಡವ ಮಾಯಾವಾಗಿಸುವ ನೊರೆಯ ಬುರುಬುರು
ಸುತ್ತ ಮುತ್ತಲೂ ಕಾಣುವುದು ಕಾಂಕ್ರೀಟಿನ ಕಾಡು
ಮರೆತು ಹೋಗಿರುವ ಮಾಡಿನ ಗುಬ್ಬಚ್ಚಿ ಗೂಡು

ಮನೆಯ ರೊಟ್ಟಿಯ ಮಾಯವಾಗಿಸಿಹ ಹೊಟೆಲ್ ತಿನಿಸು
ಮತ್ತೆ ಕಾಣುವೆನೇ ಆ ತಿರುಕನ ಕನಸು
ಮಾವಿನ ತೋಪನು ಮರೆಯಾಗಿಸಿಹ ಪಿಕ್ನಿಕ್ ರಿಸಾರ್ಟು
ಸಣ್ಣ ಪುಟ್ಟ ಕಲಹಕೆ ಹತ್ತುವರು ಕೋರ್ಟು
ಕಾಗುಣಿತವ ಮರೆಯಾಗಿಸಿದ ಪರದೇಶೀ ಮಾತು
ಕಾಣೆಯಾಗಿದೆ ರುಚಿ ರುಚಿಯಾದ ಕೈ ತುತ್ತು

ಕಾಣೆಯಾಗಿರುವುದ ಹುಡುಕಲು ಬರುವಿರಾ
ನನ್ನೊಂದಿಗೆ ನೀವೂ ಕೈ ಜೋಡಿಸುವಿರಾ?

  • ಕಾವ್ಯ ಮತ್ತು ಕವನ
~.~
  • Login or register to post comments
  • 354 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 1, 2006 - 6:56am — sinchanabhat

ಖಂಡಿತ!

sinchanabhat's picture

ಖಂಡಿತ ಕೈ ಜೋಡಿಸೋಣ.ನನ್ನದೊಂದು ಅನಿಸಿಕೆ ಹಳೆಯದಾವುದೂ ಮರೆಯಾಗಿಲ್ಲ,ಬೆಳವಣಿಗೆ ಎಂಬ ಬದಲಾವಣೆ ಯಲ್ಲಿ ನಾವು ಮರೆಯಾಗಿದ್ದೇವೆ.ಒಮ್ಮೆ ಪ್ರಶಾಂತವಾಗಿ ಪ್ರಕೃತಿಯ ಮಡಿಲಲ್ಲಿ ತಲೆಯಿಟ್ಟು ನೋಡಿ ಮನಸ್ಸು ಮುಗ್ಧವಾಗಿ ಎಲ್ಲವನ್ನೂ ನೋಡುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮ್ಮ ಬೆಕ್ಕು ಕಾಣೆಯಾಗಿದೆ !!
  • ಕಾಡು
  • ಮ೦ಗಳೂರ ಕಡಲ ತೀರ ಹಬ್ಬ..!!!
  • ಮ೦ಗಳೂರು ಕಡಲ ತೀರದ ಹಬ್ಬ..!!
  • ಅಡಿಗೆಯವರ ಪುರಾಣ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 55 ಅತಿಥಿಗಳು ಆನ್ಲೈನ್ ಇರುವರು.


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator