ಬೈರಾಗಿ
ಬಲು ಕಠಿಣವಿದೆ ಹಾದಿ, ಒಲ್ಲೆನೆನ್ನುವಂತಿಲ್ಲ
ಅನಿಶ್ಚಿತತೆಯ ಭಯವು, ಬೆನ್ನಟ್ಟಿ
ಓಡಿ, ಓಡಿ, ಸೊರಗಿದೆ ನಡೆಯುವ ಉತ್ಸಾಹವು
ನಿಲ್ಲುವಂತಿಲ್ಲ, ಗುರಿ ತಲುಪಲೇ ಬೇಕು
ನಡೆ ಬೈರಾಗಿ, ನಡೆ ಮುಂದೆ
ಬಳಲಿ, ಬೆಂಡಾಗಿ, ಆಸೆ ಕಮರಿರುವಾಗ
ಒಳದನಿಯ ಹಾಡೊಂದು, ಉಸಿರೊಡನೆ ಹೊರಬಂದು
ಕೊನರಿದೆ ಮತ್ತೆ ನಡೆವ ಉತ್ಸಾಹವು, ಹೇಳುತಿದೆ
ನಡೆ ಬೈರಾಗಿ, ನಡೆ ಮುಂದೆ
ಗುರಿ ಸಿಕ್ಕುವ ಚಿಂತೆಬೇಡ, ತಲುಪುವ ನಂಬಿಕೆಯೊಡನೆ
ಹಾಡಿನ ಗುಂಗಿನಲಿ ಹೆಜ್ಜೆ ಹಾಕುತ
ಹತ್ತಿರವಾದೆನೆಂಬ ಸಂತೋಷದಲಿ, ನಗುತ
ನಡೆ ಬೈರಾಗಿ, ನಡೆ ಮುಂದೆ

- Login or register to post comments
- 513 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಅಯ್ಯೋ..!!
ಆಗಿನಿಂದ ಕರೆಯುತ್ತಿದ್ದೇನೆ ಹಿಂದಿರುಗಿ ನೋಡುತ್ತಲೇ ಇಲ್ಲ ಬೈರಾಗಿ.ನಗುತಾ ನಡೆಯುತ್ತಿದ್ದಾನೆ,ಹೌದು ಹಾಡಿನಗುಂಗಲೇ ಇರಬೇಕು.ಮತ್ತೇನು ಹೇಳುವುದಿಲ್ಲ ನನಗೆ,ಅನಿಶ್ಚಿತತೆಗೆ ಬಯಪಡಬೇಡ,ಅದೇ ಜೀವನದ ಚೆಲುವು,ಅನ್ನಬೇಕಿತ್ತು.ದಾರಿಯಲ್ಲಿ ನಿಮಗಾರಿಗಾದರೂ ಸಿಕ್ಕರೆ ಹೇಳಿಬಿಡಿ.