ಅಯವ್ಯಯ ತಾಣ
ಜಣಜಂಝಣಾ ಕಾಂಚಾಣಾ
ಅಯವ್ಯಯ ಪಟ್ಟಿಲಿ ಕಣಕಣಾ
ಚಿದಂಬರಣ್ಣನ ರಹಸ್ಯ ತಾಣ
ಹೇಳಿದಂತೆ ಅಳೆವೆನು ಹಿಡಿದು ಮಣ
ವಯಕ್ತಿಕ ಕಂದಾಯವಂತೂ
ನೋಡಲಿಲ್ಲ ಮಿತಿಯಿಂದ ಒಳಗೆ
ಕಾರ್ಡಿನಲ್ಲಿ ಅವಿತು ಕುಳಿತ ಮನಿಗೆ
ಕೊಡಬೇಕಾಗಿದೆ ದೊಡ್ಡ ತೆರಿಗೆ
ಪಡೆಯ ಹೊರತಿದ್ದಾರೆ ಐಟಿಯ
ಚಿಕ್ಕಪಾಲು ಆದಾಯ
ಇಟ್ಟಿದ್ದಾರೇನೋ ಬಡವರ ಕಡೆಗೆ
ಸಹಾಯ ಹಸ್ತದ ಕೈಯ್ಯಾ
ಸಣ್ಣ ಕಾರುಗಳು ಮಾಡಲಿ ಕಾರುಬಾರು
ತಂಪನೀಯುವ ಕೆಲಸವೂ ಇದೆ ಚೂರುಪಾರು
ಕೊಟ್ಟಿದ್ದಾರೆ ಮಹಿಳೆಯರಿಗೆ ಆಧ್ಯತೆ
ವೃದ್ಧರಿಗೆ,ಶಿಕ್ಷಣಕ್ಕೆ ಹೆಚ್ಹಿನ ಯೋಗ್ಯತೆ
ಸಿಗರೇಟನ ದರ ಏರಿಕೆ
ಅದಕ್ಕಾಗಬಹುದೇನೋ ಕಡಿಮೆ ಹೂಡಿಕೆ
ಕಣ್ಣಿನ ಬೆಲೆ ಹೇಳಬಹುದು ಕನ್ನಡಕ
ಬಂಡವಾಳಕ್ಕೆ ಉತ್ತೇಜನ ಕೊನೆತನಕ
ಕ್ರೀಡೆಗಳೇಕೋ ಉಳಿದಿವೆ ಹೊರಗೆ
ವ್ಯಚ್ಹತಗ್ಗಿಸುವ ಕ್ರಮವಿಲ್ಲ ಜಾರಿಗೆ
ವೋಟು ಬ್ಯಾಂಕ್ ಗಳ ಭದ್ರತೆಯ
ಕಸರತ್ತಿದೆ ಒಳಗೆ
ಜಣಜಂಝಣಾ ಕಾಂಚಾಣಾ
ಅರಿಯಿರಿ ಎಷ್ಟಿದೆ ಆದಯದ ರುಣ
ಪೋಲಾಗದಿರಲಿ ಖರ್ಚಿನ ಹಣ
ನಾನಿಲ್ಲಿ ಸೇರಿದ್ದೇನೆ ತಟಸ್ಥ ಬಣ

- Login or register to post comments
- 345 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಅಯವ್ಯಯ - ಆಯವ್ಯಯ
ನಿಮ್ಮ ಕವನದ ವಿಷಯದ ಬಗ್ಗೆ ನನ್ನ ಆನಿಸಿಕೆಗಳೇನು ಇಲ್ಲ.
ಆದರೆ ಈ ಕೆಳಗಿನ ಗೊಂದಲಗಳನ್ನು ಬಡಿಸಿ.
೧) ಜಣಜಂಝಣಾ ಕಾಂಚಾಣಾ(ಣಾ ಯಾಕೆ)
ಅಯವ್ಯಯ (ಆಯವ್ಯಯ -ಅಲ್ಲವೆ) ಪಟ್ಟಿಲಿ (ಅಂದರೆ?)ಕಣಕಣಾ
ಚಿದಂಬರಣ್ಣನ ರಹಸ್ಯ ತಾಣ
ಹೇಳಿದಂತೆ ಅಳೆವೆನು(ಅಳೆಯುವೆ?) ಹಿಡಿದು ಮಣ(?) /strong>
ವಯಕ್ತಿಕ(ವೈಯಕ್ತಿಕ ?) ಕಂದಾಯ(ತೆರಿಗೆ ? ಕಂದಾಯಕ್ಕು ತೆರಿಗೆಗು ವ್ಯತ್ಯಸವಿದೆ ತಾನೆ?)ವಂತೂ
ನೋಡಲಿಲ್ಲ ಮಿತಿಯಿಂದ ಒಳಗೆ(ಅರ್‍ಥವಾಗಲ್ಲ)
ಕಾರ್ಡಿನಲ್ಲಿ ಅವಿತು ಕುಳಿತ ಮನಿಗೆ(ದುಡ್ಡಿಗೆ?)
ಕೊಡಬೇಕಾಗಿದೆ ದೊಡ್ಡ ತೆರಿಗೆ
ಪಡೆಯ ಹೊರತಿದ್ದಾರೆ(ಹೊರಟಿದ್ದಾರೆ ?) ಐಟಿಯ
ಚಿಕ್ಕಪಾಲು ಆದಾಯ
ಇಟ್ಟಿದ್ದಾರೇನೋ ಬಡವರ ಕಡೆಗೆ
ಸಹಾಯ ಹಸ್ತದ ಕೈಯ್ಯಾ
ಸಣ್ಣ ಕಾರುಗಳು ಮಾಡಲಿ ಕಾರುಬಾರು
ತಂಪನೀಯುವ(?) ಕೆಲಸವೂ ಇದೆ ಚೂರುಪಾರು
ಕೊಟ್ಟಿದ್ದಾರೆ ಮಹಿಳೆಯರಿಗೆ ಆಧ್ಯತೆ (ಆದ್ಯತೆ ಆದ್ಯ ದಲ್ಲಿ ಧ ಇದೆಯೆ?)
ವೃದ್ಧರಿಗೆ,ಶಿಕ್ಷಣಕ್ಕೆ ಹೆಚ್ಹಿನ ಯೋಗ್ಯತೆ
ಸಿಗರೇಟನ(ಸಿಗರೇಟಿನ? ಹೊಗೆಬತ್ತಿ, ಬೀಡಿ ಮುಂತಾದವು) ದರ ಏರಿಕೆ
ಅದಕ್ಕಾಗಬಹುದೇನೋ ಕಡಿಮೆ ಹೂಡಿಕೆ
ಕಣ್ಣಿನ ಬೆಲೆ ಹೇಳಬಹುದು ಕನ್ನಡಕ
ಬಂಡವಾಳಕ್ಕೆ ಉತ್ತೇಜನ ಕೊನೆತನಕ
ಕ್ರೀಡೆಗಳೇಕೋ ಉಳಿದಿವೆ ಹೊರಗೆ
ವ್ಯಚ್ಹ(ವೆಚ್ಚ ?)ತಗ್ಗಿಸುವ ಕ್ರಮವಿಲ್ಲ ಜಾರಿಗೆ
ವೋಟು ಬ್ಯಾಂಕ್ ಗಳ ಭದ್ರತೆಯ
ಕಸರತ್ತಿದೆ ಒಳಗೆ
ರುಣ ( ಋಣ ? )
ಅಂತರ್‍ಜಾಲದಲ್ಲಿ ಕನ್ನಡ ನಿಘಂಟು ದೊರೆಯುವ ಹಲವು ಜಾಗಗಳಲ್ಲಿ
http://www.kannadakasturi.com ಒಂದು.
ತಿದ್ದುಪಡಿ
ಧನ್ಯವಾದಗಳು, ಕನ್ನದ ಶಬ್ದಬಂಡಾರ ಚನ್ನಾಗಿದೆ. ಅವಸರದಲ್ಲಿ ಬರೆದಿರುವದನ್ನು ಮತ್ತೊಮ್ಮೆ
ಓದದೆ ಹಾಕಿ ತುಂಬಾ ಟೈಪೊ ತಪ್ಪುಗಳನ್ನೂ (ಹೊರಟಿದ್ದಾರೆ,ಸಿಗರೇಟಿನ,ಋಣ) ಮಾಡಿದ್ದೇನೆ.
ಆಯವ್ಯಯ,ವೈಯಕ್ತಿಕ,ವೆಚ್ಚ,ಆದ್ಯತೆ, ಎಂಬ ಶಬ್ದಗಳು ಸರಿಯಾದವು.ಇದರ ಮೇಲೆ ನಮ್ಮ ಆಡು ಭಾಷೆಯ ಛಾಯೆ ಬಿದ್ದಿರುವುದರಿಂದ ಣ ಇದು ಣಾ, ಪಟ್ಟಿಯಲಿ ಪಟ್ಟಿಲಿ ಎಂದೂ ,ಅಳೆಯುವ ಇದು ಅಳೆವ,ಎಂದಾಗಿದೆ.
ಮಣ ಅಂದರೆ ತೂಕದ ಒಂದು ಪ್ರಮಾಣ.ನನ್ನ ಅನಿಸಿಕೆಯಂತೆ ಕಂದಾಯಕ್ಕೂ ತೆರಿಗೆಗೂ ಅಷ್ಟೇನು ವ್ಯತ್ಯಾಸವಿಲ್ಲ,ಎರಡನ್ನೂ ಸರಕಾರಕ್ಕೆ ಕೊಡಬೇಕಾದ ಹಾಣ ಎಂಬ ಅರ್ಥದಲ್ಲಿ ಉಪಯೋಗಿಸುತ್ತಾರೆ.
ನೋಡಲಿಲ್ಲ ಮಿತಿಯಿಂದ ಒಳಗೆ ಅಂದರೆ ಏನೂ ಇಳಿಕೆ,ಕಡಿಮೆ, ಇಲ್ಲವೆಂದು ಅರ್ಥ.
ನಿಮ್ಮ ಗೊಂದಲಗಳನ್ನು ಇಷ್ಟರಮಟ್ಟಿಗೆ ಬಗೆಹರಿಸಿದ್ದೇನೆ.ತಪ್ಪುಗಳನು ತಿಳಿಹೇಳಿರುವದಕ್ಕೆ ಧನ್ಯವಾದಗಳು.