ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಆಪಲ್ ಮ್ಯಾಕ್ ನಲ್ಲಿ ಕನ್ನಡ

ಮ್ಯಾಕ್ ನ ಸಫಾರಿ ಬ್ರೌಸರ್ನಲ್ಲಿ ಕನ್ನಡ ಬರ್ಲಿಕ್ಕೆ ಎನ್ ಮಾಡ್ಬೇಕು?

ಭಾನುವಾರ ಪರೀಕ್ಷೆ ಬರೆದು ಬಂದು ಇನ್ನೇನು ಮಾಡೋಣ ಅಂತ ಯೋಚಿಸುವುದರೊಳಗೆ, ಮ್ಯಾಕ್ ನಲ್ಲಿ ಕನ್ನಡ ಬರ್ತಿಲ್ಲ ಏನ್ ಮಾಡ್ಬೇಕು ಅಂತ ಗೆಳೆಯ ಕೇಳಿದ ಪ್ರಶ್ನೆಗೆ "ಫಾಂಟ್" ಹೆಲ್ಪ್ ಇದೆ ನೋಡು ಅಂದದ್ದೇ ತಪ್ಪಾಯಿತು. ಯಾಕಂದ್ರೆ, ಗೂಗಲ್ ನಲ್ಲಿ ಸಿಕ್ಕ ಕೆಲ ಲಿಂಕ್ ಗಳು ಕೆಲಸ ಮಾಡ್ತಿರಲಿಲ್ಲ. ಸಂಪದದ ವಿಕಿಯಲ್ಲಿ ಒಂದು ಸಣ್ಣ ತೊಂದರೆ (ಅದನ್ನೀಗ ಸರಿ ಪಡಿಸಿದ್ದೇನೆ). ಲಿನಕ್ಸ್ ನಲ್ಲಿ ಫಾಂಟ್ ಇನ್ಸ್ಟಾಲ್ ಮಾಡ್ಬೇಕಾದಾರ ಉಪಯೋಗಿಸೋ ತಂತ್ರಗಳನ್ನೇಲ್ಲಾ ಟ್ರೈ ಮಾಡು ಅಂದ್ರೆ ಅದೂ ಕೈ ಕೊಟ್ಟಿತು. ಯಾವ ಫಾಂಟ್ ಹಾಕಿದ್ರೂ ಕೆಲಸ ಮಾಡ್ತಿಲ್ಲ.  ಆದ್ರೆ ಅಲ್ಲೇ ಇದ್ದ ನಿಕೊಲಸ್ ಶಾನ್ಕ್ಸ್ ರ ವೆಬ್ ಪೇಜ್ ಎಲ್ಲ ತೊಂದರೆಗಳನ್ನ ನಿವಾರಿಸಿತು.

"Unicode Kannada Font & Keyboard Layout for Macintosh"

ಮೇಲಿನ ತಲೆಬರಹದ, ನಿಕೋಲಸ್ ರ ಲೇಖನದಲ್ಲಿ ಕೊಟ್ಟಿರುವ ಕೊಂಡಿಯಿಂದ ಮ್ಯಾಕ್ ಗೆಂದೇ ಸಿದ್ದ ಪಡಿಸಿರೋ ಫಾಂಟ್ ಡೌನ್ಲೋಡ್ ಮಾಡಿಕೊಂಡು, ಬ್ರೌಸರ್ ಫಾಂಟ್ ಪ್ರಿಪರೆನ್ಸ್ ಬದಲಿಸಿದ್ದೇ ತಡ "ಯುರೇಕಾ" ಕ್ಷಣ ನಮ್ಮ ಮುಂದೆ. ಹರಿ, ಇದರ ಹಿಂದಿನ ಕತೆಗಳನ್ನಹೇಳ್ತಿದ್ದಾಗ ಸುಮ್ಮನೆ ಕುಳಿತು ಕೇಳ್ತಿದ್ದ ದಿನಗಳು ನೆನಪಿಗೆ ಬಂದ್ವು.  ನಿಕೊಲಸ್ ಶಾನ್ಕ್ಸ್ ರವರೆ, ಕನ್ನಡಕ್ಕೆ ಫಾಂಟ್ ಸಿದ್ದ ಪಡಿಸಿರೋ ನಿಮಗೆ ಅನಂತಾನಂತ ಧನ್ಯವಾದಗಳು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ರಾಮಕುಮಾರ್'s picture

ಹೌದು, ಇದರ ಸಹಾಯದಿಂದಲೆ ಕಳೆದ ಎರಡು ವರ್ಷಗಳಿಂದ ಮ್ಯಾಕ್ ನಲ್ಲಿ ಕನ್ನಡ ಸೈಟುಗಳನ್ನ ಓದಲು ಸಾಧ್ಯವಾಗಿದೆ...
ಇದರ ಬಗ್ಗೆ ಆಗ ಬರೆದಿದ್ದೆ.
http://sampada.net/f...
ಮತ್ತೊಮ್ಮೆ ಅವರಿಗೆ ಧನ್ಯವಾದಗಳು!

hpn's picture

>> ನಿಕೊಲಸ್ ಶಾನ್ಕ್ಸ್ ರವರೆ, ಕನ್ನಡಕ್ಕೆ ಫಾಂಟ್ ಸಿದ್ದ ಪಡಿಸಿರೋ ನಿಮಗೆ ಅನಂತಾನಂತ ಧನ್ಯವಾದಗಳು.

ಲೇ, ನೀನು ದಿನಾ ವಿಜಯಕರ್ನಾಟಕ ಓದೋದು ಕಡಿಮೆ ಮಾಡು, ಹೇಳ್ತೀನಿ! ನಿನ್ನೆ ಅದರಲ್ಲಿ "ಮುಖ್ಯಮಂತ್ರಿ ಅವರೇ, ಟಾಟಾ ನ್ಯಾನೋ ಅವಕಾಶ ಕಳಕೊಳ್ಬೇಡಿ" ಅಂತ ಮುಖಪುಟದಲ್ಲಿ ನೋಡಿದ್ದು ಇನ್ನೂ ಕಾಡುತ್ತಿದೆ.

btw, ನಿಕೋಲಾಸ್ ವಿಕಿಪೀಡಿಯದಲ್ಲಿ ನನ್ನೊಂದಿಗೆ ಬರೆಯುತ್ತಿದ್ದವ. ಕನ್ನಡ ವಿಕಿಪೀಡಿಯದಲ್ಲಿರುವ ಸಪೋರ್ಟ್ ಪೇಜ್ ಬಹಳ ಎಡಿಟ್ ಮಾಡ್ತಿದ್ವು ಚರ್ಚೆ ಮಾಡುತ್ತ. ಆಗ ಕನ್ನಡದ ಅಕ್ಷರಗಳನ್ನು ನಾನು ಅವನಿಗೆ ಪರಿಚಯಿಸೋದು - ಅವ ಒಂದೊಂದೇ OTFನ ರೂಲನ್ನ AAT ರೂಲ್ಸಿಗೆ ಕನ್ವರ್ಟ್ ಮಾಡೋದು - ಹೀಗೆ!
ಸುಮಾರು ಮೂರ್ನಾಲ್ಕು ದಿನ ವ್ಯಯ ಮಾಡಿದ್ದೀವಿ ಕಣಯ್ಯ ಕೇದಗೆಯನ್ನು ಮ್ಯಾಕ್ ಗೆ ತರೋದಕ್ಕೆ. ಆದರೆ ನೀನು ವಿ.ಕ ಸ್ಟೈಲಿನಲ್ಲಿ 'ನಿಕೊಲಸ್ ಶಾನ್ಕ್ಸ್ ರವರೆ,.... ಅನಂತಾನಂತ ಧನ್ಯವಾದಗಳು' ಅಂದರೆ ಅವನಿಗೂ ಮುಜುಗರವಾದೀತು. ಮತ್ತಷ್ಟು ಜನ ಅದನ್ನು ಉತ್ತಮಪಡಿಸುವಲ್ಲಿ ಮತ್ತಷ್ಟು ಭಾಗವಹಿಸಿದರೆ ನಿಜವಾದ "ಧನ್ಯವಾದ" ಹೇಳಿದಂತೆ.

- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

omshivaprakash's picture

ಹೋ! ನೀನೇಳಿದ್ದು ಈಗ ಅರ್ಥ ಆಯ್ತು. ;) ನಾನು ವಿ.ಕ ಓದಲ್ಲ. ಪೇಪರ್ ಮುಟ್ಲಿಕ್ಕೆ ಟೈಮ್ ಸಿಗೋದು ವಾರದ ಕೊನೆಯಲ್ಲಿ ಮಾತ್ರ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ASHOKKUMAR's picture

ಪೇಪರ್ ಮುಟ್ಟದೆ ಓದಲು ಬರುತ್ತಲ್ಲ... ಅಂತರ್ಜಾಲದಲ್ಲಿ :)
*ಅಶೋಕ್

omshivaprakash's picture

:) ಹೌದು ಸಾರ್!

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ