ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಳೆ ಹನಿ

ಮಳೆ ಹನಿ

ತುಸು ಮಣ್ಣ ಬಿಸಿ ನೆಲಕೆ
ಬರಡಾದ ಬಡ ಮನಕೆ
ಕುದಿಯುತಿಹ ಇಳೆ ತಳಕೆ
ಪ್ರೀತಿ ಹೊನಲಿನ ದಡಕೆ
ಸಾಯುತಿಹ ಮರಿ ಮೊಳಕೆ
ಬಿಸಿಲ ಬೇಗೆಯ ಝಳಕೆ
ಎಲ್ಲರಲೂ ಬತ್ತಿಹುದು
ಮಳೆ ಹನಿಯ ಬಯಕೆ.

ಬಿಸಿಲ ರಶ್ಮಿಯ ಬಿಸಿಗೆ
ಹಸಿರು ಚಿಗುರಿದ ಎಲೆಗೆ
ಅಡಗಲಾಗದು ಹೊರಗೆ
ತವಿಸಲಾಗದು ಬೇಗೆ
ಕುಸಿದ ಕನಸಿನ ಕೆಳಗೆ
ದೂರ ಮನಗಳ ಬೆಸುಗೆ
ಕೊನೆಯುಸಿರು ಕಾಯುವುದೆ
ತಣ್ಣನೆಯ ಮಳೆಗೆ.

ಜೀವವನೆ ಮರೆತಿತ್ತು
ಚಿಪ್ಪಿನೊಳಗಣ ಮುತ್ತು
ಕನಸು ಕಣ್ಣೊಳಗಿತ್ತು
ಮನಸುಗಳು ಸೋತಿತ್ತು
ಬತ್ತಿ ಬರಡಾಗಿತ್ತು
ಹಸಿರು ಕುಂದುತಲಿತ್ತು
ದೂರದಲೆ ಉಳಿದಿತ್ತು
ಹನಿ ಮಳೆಯ ಮುತ್ತು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Chamaraj's picture

ಸಕತ್ತಾಗಿದೆ ಕವನ. ಏನೋ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ಸಿಕ್ಕಿತು. ಚೆನ್ನಾಗಿ ಬರೆದಿದ್ದೀರಿ.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ