Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಪುರದ ಪಾಪಿಗಳು

March 3, 2006 - 12:01pm — ಮಹೇಶ ಭೋಗಾದಿ

ಹಳ್ಳಿಗೆರೆಯ ರನ್ನದಾವರೆ

ಹಳ್ಳಿಹೊಲದ ಬೆಳ್ಳಿಗೊಕ್ಕರೆ

ಹಳ್ಳಿಹಟ್ಟಿಯ ಒಳ್ಳೆಹಿಟ್ಟು

ಮಳ್ಳಿ ಬುದ್ಧಿಯ ಪುರದ ಪಾಪಿಗಳಿಗೆಲ್ಲೊ (ಪುಟ್ಟಕಿಟ್ಟಲ್)

ಹಳ್ಳಿಗೆರೆ: ಹಳ್ಳಿಯ ಕೆರೆ

ರನ್ನದಾವರೆ: ರತ್ನದಂಥ ತಾವರೆ

ಬೆಳ್ಳಿಗೊಕ್ಕರೆ: ಬೆಳ್ಳಿಯಂತೆ ಬಳಿಯ ಬೆಳ್ಳಕ್ಕಿ(ಬೆಳ್ಳಿ ಕೊಕ್ಕರೆ)

ಹಟ್ಟಿ: ಮನೆ

ಮಳ್ಳಿ ಬುದ್ಧಿ: ಮೋಸದ ಬುದ್ಧಿ

ಪುರ: ನಗರ, ಪಟ್ಟಣ.

ಮನವಿ: ಆನಿಸಿಕೆ ಹಾಗು ದೋಷಗಳನ್ನು ತಿಳಿಸಿ.

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 1494 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2006 - 8:20pm — tvsrinivas41

ಒಳ್ಳೆ ಹಿಟ್ಟು

tvsrinivas41's picture

ಚುಟುಕ ಚೆನ್ನಾಗಿದೆ.

ಒಳ್ಳೆ ಹಿಟ್ಟು ಅಂದ್ರೆ ಏನು? ಹದವಾದ ಬಿಸಿಯಾದ ಕಲಬೆರಕೆಯಿರದ ರಾಗಿ ಮುದ್ದೆ ಅಂತಲಾ? ಹಳ್ಳಿಯ ಕಡೆ ರಾಗಿ ಮುದ್ದೆಗೆ ಹಿಟ್ಟು ಅಂತ ಹೇಳ್ತಾರೆ.

ಪುಟ್ಟ ಕಿಟ್ಟಲ್ ಯಾರಿದು? ಕಿಟ್ಟಲ್ಲೇ ಯಾಕಾಗ್ಬೇಕು, ಪುಟ್ಟ ರನ್ನ, ಪುಟ್ಟ ಪಂಪ, ಪುಟ್ಟ ಕೈಲಾಸಂ ಅಂತ ಇಟ್ಕೊಳ್ಳಿ, ಚೆನ್ನಾಗಿರತ್ತೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
March 3, 2006 - 8:31pm — ismail

ಕೋಪ ಏಕೆ

ismail's picture

ಯಾಕ್ಸಾರ್ ಕಿಟ್ಟೆಲ್ ಮೇಲೆ ಕೋಪ?

  • Login or register to post comments
  • link
  • Email this ಪ್ರತಿಕ್ರಿಯೆ
March 3, 2006 - 8:52pm — tvsrinivas41

ಕೋಪವಿಲ್ಲ

tvsrinivas41's picture

ಇಲ್ಲ ಸಾರ್ ಕೋಪವಿಲ್ಲ. ಆತ ಮಹಾನುಭಾವರು. ತಂಪು ಹೊತ್ತಿನಲ್ಲಿ ನೆನೆಯುವಂತಹರು. ನಮ್ಮ ಪೂರ್ವಿಕರನ್ನೂ ನೆನಪಿಸಿಕೊಳ್ಳಬಹುದಲ್ವಾ ಅಂತ ಅಷ್ಟೇ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
March 6, 2006 - 10:33am — ಮಹೇಶ ಭೋಗಾದಿ

ಒಳ್ಳೆ ಹಿಟ್ಟು

ಮಹೇಶ ಭೋಗಾದಿ's picture

"ಹಿಟ್ಟು" ಪದವನ್ನು ಊಟ/ಆಹಾರ ಪದಗಳ ಸಮನಾಗಿ ಬಳಸುವುದುಂಟು.

ಉದಾ: "ಹೊಟ್ಟೆಗೆ ಹಿಟ್ಟಿಲ್ಲವೆಂದರು ಜುಟ್ಟಿಗೆ ಮಲ್ಲಿಗೆ ಹೂವು".

ಇಲ್ಲಿ ನಾನು ಆಹಾರವೆಂದು ಅಂದುಕೊಂಡೆನು.

ಅಂಕಿತ, ನಿಮಗೆ ಯಾವುದಿಷ್ಟವೊ ಅದನ್ನು ಸೇರಿಸಿ ಓದಿಕೊಳ್ಳಿ.

  • Login or register to post comments
  • link
  • Email this ಪ್ರತಿಕ್ರಿಯೆ
March 5, 2006 - 6:27am — sinchanabhat

ಒಪ್ಪವಾಗಿದೆ

sinchanabhat's picture

ಹಳ್ಳಿಗೆಳತಿಯ ಹಸಿರು ಕೈಬಳೆ
ಹಳ್ಳಿಹೈದನು ಹೊದ್ದ ಕಂಬಳಿ
ಪೊಳ್ಳುಮಾತಿನ ಪುರದಗೂಡಲಿ
ಜಳ್ಳುತೆನೆಯಂತೆ.
ಪಾಪಿ ಕಾಲಿಟ್ಟೆಡೆ ಮೊಣಕಾಲ ನೀರಂತೆ.ಮಳ್ಳಿ ಬುದ್ದಿಯ ಪಾಪಿಗಳಲ್ಲೂ ಇಲ್ಲು.
'ಪುರದ ಪಾಪಿಗಳು' ಒಪ್ಪವಾಗಿದೆ ಚುಟುಕ.ಮುಂದುವರೆಸಿ ಪುಟ್ಟಕಿಟ್ಟಲ್ Smiling

  • Login or register to post comments
  • link
  • Email this ಪ್ರತಿಕ್ರಿಯೆ
March 6, 2006 - 10:28am — ಮಹೇಶ ಭೋಗಾದಿ

ಪುರದಗೂಡಲಿ

ಮಹೇಶ ಭೋಗಾದಿ's picture

ಭಟ್ಟರೆ,

ಈ ಕೆಳಗಿನ ಪದಗಳು ನನಗೆ ಅರ್ಥವಾಗಲಿಲ್ಲ.

ಪುರದಗೂಡಲಿ  = ಪುರದ + ಗೂಡಿನಲ್ಲಿ?

ಜಳ್ಳು (?)/ ಜೊಳ್ಳು( ನನಗೆ ತಿಳಿದಂತೆ ).

ಪಾಪಿಗಳಲ್ಲೂ ಇಲ್ಲು (?)

ಇತ್ತ ಮಂದಮತಿ ನಾನಾದೆ

  • Login or register to post comments
  • link
  • Email this ಪ್ರತಿಕ್ರಿಯೆ
March 7, 2006 - 7:26am — sinchanabhat

ನನಗೆ

sinchanabhat's picture

ನನಗೆ ತಿಳಿದಂತೆ ನೀವೊಂದು(ನೀವು+ಒಂದು) ಅಂದಮತಿ(ಸುಂದರವಾದ ಬುದ್ಧಿ ಇರುವವರು).
ನಿಮಗೆ ನನ್ನ ಮಾತುಗಳಲ್ಲಿ(ಲ್ಲೇ) ಅರ್ಥವಾಗುವ ಶಬ್ದಗಳೇಕೋ ಕಡಿಮೆ.ಅಂದರೆ ನನ್ನ ಶಬ್ದಬಂಡಾರ ಮತ್ತು ಅದರ ಕುರಿತು ತಿಳುವಳಿಕೆ ತುಂಬಾ ಕಡಿಮೆ ಇರಬಹುದು.ನನ್ನ ಮಾತುಗಳು ನಿಮಗೆ ಬರಿ ಜಳ್ಳು(ತಿರುಳಿಲ್ಲದದು ಎಂಬ ಅರ್ಥದಲ್ಲಿ ಜಳ್ಳು ಎಂಬ ಪದ ಸರಿಯಾದದ್ದು)ಎನಿಸುತ್ತದೆಯೇನು?
(ಅಲ್ಲಿ ಇಲ್ಲಿ )ಎಲ್ಲೆಡೆ ಎಲ್ಲಾ ತರದ ಜನರೂ ಇರುತ್ತಾರೆ.

ನಿಮಗೆ ಅರ್ಥೈಸುವುದು(ಅರ್ಥವಾಗುವಂತೆ ಹೇಳುವುದು) ಕಷ್ಟಸಾದ್ಯ(ಸಾದ್ಯವಾದರೂ ಕಷ್ಟ ಅನ್ನುವ ಅರ್ಥದಲ್ಲಿ).ನೀವು ಶಬ್ದಗಳನ್ನು ಅರ್ಥೈಸಿಕೊಳ್ಳಲು 'ಕನ್ನಡ ಕಸ್ತೂರಿ'ನೋಡುವುದು ಒಳಿತು(ಒಳ್ಳೆಯದು).

ಸಿಂಚನಾ

  • Login or register to post comments
  • link
  • Email this ಪ್ರತಿಕ್ರಿಯೆ
March 7, 2006 - 11:47am — ಮಹೇಶ ಭೋಗಾದಿ

ಅಯ್ಯೊ

ಮಹೇಶ ಭೋಗಾದಿ's picture

ಅಯ್ಯೊ ಸಿಂಚನಾ ಭಟ್ಟರೆ,

ನನ್ನಿಂದ ನೀವು ಇರುಸು ಮುರುಸು ಆಗಿದ್ದೀರಿ ಎಂದು ನಾನು ಅಂದುಕೊಂಡು ನೊಂದಕೊಂಡಿದ್ದೇನೆ.

ನನ್ನ ಈ ಕೃತ್ಯಕ್ಕೆ ಕ್ಷಮೆಯಿರಲಿ.

ಆದರೆ ನಾನು ನಿಮ್ಮ ಮನಸ್ಸು ನೋಯಿಸುವುದಕ್ಕಾಗಿ ಅಥವಾ ಅಹಂಕಾರ-ಗರ್ವದಿಂದಾಗಿ ಹಾಗೆ ಕೇಳಲಿಲ್ಲವೆಂದು ತಾವು ದಯಮಾಡಿ ನಂಬಿ.

ನನ್ನ ಉದ್ದೇಶ ನಾನು, ನೀವು, ನಾವಿಲ್ಲರು ಸರಿಯಾದ ಕನ್ನಡ ಜ್ಙಾನ ಪಡೆದು, ಬೆಳೆಸಿ, ಉಳಿಸಬೇಕೆಂದು.

 

ಇರಲಿ.... ತಮ್ಮ ಸಲಹೆಯಂತೆ ನಾನು ಕನ್ನಡಕಸ್ತೂರಿ.ಕಾಮ್ ನೋಡಿದೆ. ಅದರ ಪಲಿತಾಂಶ

೧)ಜಳ್ಳು = ತಿರುಳಿಲ್ಲದ ಕಾಳು, ಪೊಳ್ಳಾದ ಕಾಳು - Hollow grain

೨)ಜೊಳ್ಳು ಮಾತು - Froth;

ನಾನು ಹೇಳಬಯಸಿದ್ದು "ಜಳ್ಳು ಮಾತು" ಎನ್ನುವುದಕ್ಕಿಂತ "ಜೊಳ್ಳು ಮಾತು"ಎಂದು ಹೆಚ್ಚು ಬಳಕೆಯೆಂದು ಅಷ್ಟೆ.

ಆದರೆ ಇಲ್ಲಿ ನನ್ನ ತಪ್ಪು ತಿಳಿಯಿತು ನೀವು "ಜಳ್ಳುತೆನೆ" ಎಂದು ಸರಿಯಾಗಿ ಬರೆದಿರುವಿರಿ.

ಮತ್ತೆ...ಇನ್ನೊಂದು

ಕನ್ನಡಪ್ರಭದ ಸರಿಗನ್ನಡದಲ್ಲಿ ಓದಿದ ನೆನಪು....

ತಿಳುವಳಿಕೆ (ಅಲ್ಲ)- ತಿಳಿವಳಿಕೆ (ತಿಳಿ ಧಾತು)

 

ಈ ಸಮಯ ಒಂದು ಸುಭಾಷಿತ ನೆನಪಾಯಿತು.

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ|

ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||

 

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಿಯಹಿತವಚನ
  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಗಂಡು-ಗಾದೆ
Syndicate content

ಲೇಖಕರು

ಮಹೇಶ ಭೋಗಾದಿ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ
  • ಹೆಣ್ಣು ಜೀವವಿಮುಖಿ, ಜೀವವಿರೋಧಿಯಾಗುವ ಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.

ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator