ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪ್ರಧಾನಿಯ ದಿಟ್ಟಹೆಜ್ಜೆ

March 4, 2006 - 12:56pm — sinchanabhat

ಎಲ್ಲೆಡೆ ತಲೆ ಎತ್ತಿದ ವಿರೋಧದ ಕೂಗಿನೊಳಗೇ ಬುಷ್ ಮೂರು ದಿನದ ಭಾರತ ಪ್ರವಾಸವನ್ನು ವಿಭಿನ್ನರೀತಿಯಲ್ಲಿ ಮಾಡಿ ಉತ್ತಮ ಫಲಿತಾಂಶದೊಂದಿಗೆ ತೆರಳಿದ್ದಾರೆ.ಈ ಒಪ್ಪಂದ ಉಭಯರಾಷ್ಟ್ರಗಳಿಗೆ ಸಹಕಾರಿಯಾಗಿ ತಲೆಯೆತ್ತಿದೆ.

ಜನಸಮುದಾಯದಿಂದಹಿಡಿದು ಸಾಹಿತಿ ಮತ್ತು ರಾಜಕಾರಣಿಗಳ ವರೆಗಿನವರ ವಿರೋದದ ಕೂಗುಗಳ ನಡುವೆಯೂ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಬೆಳವಣಿಗೆಗೆ ಎಲ್ಲವನ್ನೂ ಮೀರಿದ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ.ನಾಗರಿಕ ಹಾಗು ಮಿಲಟರಿ ಪರಮಾಣು ಸೌಲಭ್ಯಗಳನ್ನು ಬೇರ್ಪಡಿಸುವ ವಿಷಯದಲ್ಲಿ ಮೂಡಿದ್ದ ಅಸಮಾಧಾನವನ್ನು, 8ಮಿಲಟರಿ ಪರಮಾಣು ಬಳಕೆಯದಿದ್ದು ಅದನ್ನು ಬೇರ್ಪಡಿಸುವ ನಿರ್ಧಾರದ ಪೂರ್ತಿ ಹಕ್ಕು ನಮಗಿದೆ ಎಂಬುದು ಕಡಿಮೆಗೊಳಿಸಿದೆ.ಅಣು ರಿಯಾಕ್ಟರ್ ಗಳಿಗೆ ಬೇಕಾಗುವ ಇಂಧನ ಕೊರತೆಯನ್ನು ಎದುರಿಸುತ್ತಿದ್ದ ನಾವು ಈ'ನಾಗರಿಕ ಅಣು ಸಹಕಾರ ಒಪ್ಪಂದ'ದಿಂದ ಇಂಧನ ಪೂರೈಕೆಯ ಬರವಸೆಯನ್ನು ಪಡೆದುಕೊಂಡಿದ್ದೇವೆ. ಜೊತೆಗೆ ಫಾಸ್ಟ್ ಬ್ರಿಡರ್ ರಿಯಾಕ್ಟರ್ ತಪಾಸಣೆ ಇಲ್ಲವೆಂಬುದು ಮತ್ತೊಂದು ಪ್ರಮುಖ ವಿಷಯ.

ಈ ಒಪ್ಪಂದದಿಂದ ಭಾರತದ ಪರಮಾಣು ಕಾರ್ಯಕ್ರಮಗಳಿಗೆ ಉಪಯೋಗವಾಗಿದೆ. ಆದರೆ ಅಮೆರಿಕಾ ಇಂದನ ಪೂರೈಕೆಯನ್ನು ಸತತವಾಗಿ ನೀಡದೇ ಯಾವುದೇ ಕಿಮಿಕ್ ಮಾಡುವ ಸಾಧ್ಯತೆಯೂ ಇದೆ.ಅಮೆರಿಕಾ ಈ ಒಪ್ಪಂದವನ್ನು ಪಾಲಿಸಬಹುದೆಂಬ ಪೂರ್ಣವಿಶ್ವಾಸ ಹುಟ್ಟಿಲ್ಲ.

ಬುಷ್ ಬೇಟಿಯನ್ನು ವಿರೋದಿಸಿದ ಜನರು,ಅಮೇರಿಕಾದಿಂದ ನಮಗೇನು ಅನ್ಯಾಯ ವಾಗಿದೆ ಎಂಬುದನ್ನು ಹೇಳಲಿಲ್ಲ.ಇನ್ನು ನಾವು ನಮ್ಮದು ಎಂಬುದನ್ನು ದೇಶಗಳಿಗೆ ಸೀಮಿತಗೊಳಿಸದೆ ಹಲವೆಡೆತಲೆಯೆತ್ತಿದ ಅಮೆರಿಕಾದ ಕ್ರೌರತ್ವವನ್ನು ನೆನೆದು ಎಲ್ಲರಪರವಾಗಿ ವಿರೋಧಿಸುತ್ತಿದ್ದಾರೆ ಅನ್ನುವಂತೆಯೂ ಇಲ್ಲ.ಏಕೆಂದರೆ ಅವರ ಹೇಳಿಕೆಗಳು ಹೋರಾಟ ಎಲ್ಲವೂ ಇಸ್ಲಾಮಿಕ್ ಪರವಾಗಿ ನಿಂತಂತಿದೆ ಅಷ್ಟೇ.

ನಾವು ಭಾರತಕ್ಕೆ ಪ್ರತ್ಯಕ್ಷವಾಗಿ ಮೋಸವೆಸಗಿದ ಪಾಕಿಸ್ತಾನ,ಚೀನಾಗಳಿಂದ ಆಗಮಿಸುವ ಪ್ರಧಾನಿಗಳ ಬೇಟಿಗೆ ವಿರೋಧ ವ್ಯಕ್ತ ಪಡಿಸುವುದಿಲ್ಲ.ನಮ್ಮನ್ನು ನಾವು ಮತ್ತಷ್ಟು ಪ್ರಭಲಗೊಳಿಸಲು ನೋಡಬೇಕೆ ಹೊರತು ,ಪಕ್ಕಾ ಶತ್ರುಗಳ ಮಿತ್ರರಾಗಿ ಶಾಂತಿ ನೆಲೆಸುವಂತೆ ಮಾಡುತ್ತೇವೆ ಎಂಬಅಸಂಬದ್ಧಯೋಚನೆ ನಮಗಿದ್ದರೆ ಅದರಿಂದ ಅಪಾಯವೇ ಹೆಚ್ಚು.ನಮ್ಮೊಳಗೆ ನಾವು ಗೆದ್ದಲು ಗೂಡು ಕಟ್ಟಲು ಅವಕಾಶ ಮಾಡಿಕೊಡದೆ,ನಮ್ಮರಕ್ಷಣೆಯ ಹೊಣೆ ಪೂರ್ತಿಯಾಗಿ ನಮ್ಮದುಎಂಬುದನ್ನು ತಿಳಿದು ಎಲ್ಲಿಯೂ ಪೊಳ್ಳಾಗದಂತೆ ನೋಡಿಕೊಂಡು ಬದಲಾವಣೆಗೆ ತೆರೆದುಕೊಳ್ಳೋಣಾ.ಬೆಳವಣಿಗೆಯತ್ತ ಹೆಜ್ಜೆಹಾಕೋಣಾ. ಉನ್ನತ ಭವಿಷ್ಯಹೊಂದಿರುವ ಪ್ರಧಾನಿಯವರ ದಿಟ್ಟ ನಿರ್ಧಾರಕ್ಕೆ ತಲೆಬಾಗೋಣ.

  • ಪ್ರಚಲಿತ
~.~
  • Login or register to post comments
  • 700 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 5, 2006 - 1:31am — hpn

ತಲೆ ಯಾಕೆ ಬಾಗಬೇಕು?

hpn's picture

ಹಾಗೆಲ್ಲ ನಿಜವಾದ ಸಂಗತಿ ಏನೆಂಬುದನ್ನ ಅರಿಯದೆ ತಲೆಬಾಗೋಕೆ ಆಗಲ್ಲ ಸಿಂಚನಾರವರೆ. ನಮ್ಮ ಮೀಡಿಯದವರು "ಇದು ದಿಟ್ಟ ನಿರ್ಧಾರ", "ದೇಶಕ್ಕೆ ಒಳ್ಳೆಯದಾಗತ್ತೆ" ಅಂತ ದಿನ ರಾತ್ರಿ ಪ್ರಸಾರ ಮಾಡುತ್ತಿರೋದರಿಂದ ನಮಗೂ ಹಾಗನ್ನಿಸಬಹುದು. ಆದರೆ ಸತ್ಯಾಂಶ ಬೇರೆ ಇರುವ ಸಾಧ್ಯತೆಗಳೂ ಇವೆಯೆಂಬುದನ್ನ ಮರೆಯಬಾರದು.

ಮೊನ್ನೆಮೊನ್ನೆಯವರೆಗೂ ಡೆಕ್ಕನ್ ಹೆರಾಲ್ಡ್ ಕೂಡ ಕರ್ನಾಟಕದ ಇತ್ತೀಚೆಗಿನ ರಾಜಕೀಯ ಎಪಿಸೋಡನ್ನ "ಬಂಡಾಯ" ಅಂತಲೇ ಕರೀತಿತ್ತಪ್ಪ. ಯಾವುದೂ ಬೇಡ, ಮೊನ್ನೆ ಟೆಸ್ಟ್ ಮ್ಯಾಚ್ ಶುರುವಾಗೋದಕ್ಕೆ ಮುಂಚೆ 'ಇಂಗ್ಲೆಂಡ್ ಕ್ಲಿಯರ್ ಆಗಿ ಅಂಡರ್ ಡಾಗ್ಸ್', 'ಇಂಗ್ಲೆಂಡ್ ಮ್ಯಾಚು ಉಳಿಸಿಕೊಳ್ಳೋ ಪ್ರಯತ್ನ ಮಾಡಬೇಕು' ಅಂತ ಇದೇ ಮೀಡಿಯದವರು ಹೊಯ್ಕೊತಾ ಇದ್ರು. ಈಗ ನೋಡಿ! ಮ್ಯಾಚು ಉಳಿಸಿಕೊಳ್ಳೋಕೆ ಪರದಾಡುತ್ತಿರೋರು ಭಾರತದೋರು.

ಮತ್ತೆ ಬುಷ್ ಬಗ್ಗೆ ಪ್ರೊಟೆಸ್ಟ್ ಮಾಡ್ತಿರೋರು ಅಮೇರಿಕ ದ್ವೇಷಿಗಳಲ್ಲ. ಬುಷ್ ಮಾಡಿರೋ ಘನಕಾರ್ಯವನ್ನ ಇಷ್ಟಪಡದೇ ಇರೋರು. ವೃಥಾ ನೆವ ಮಾಡ್ಕೊಂಡು ಇರಾಕ್ ಮೇಲೆ ದಾಳಿ ಮಾಡಿ ಸಾವಿರಾರು ಜನ ಸಾಯೋ ಹಾಗೆ ಮಾಡ್ದ ಅಂತ ಅಮೇರಿಕದಲ್ಲಿರೋರಿಗೇ ಅವನ ಕಂಡರಾಗಲ್ಲ. ಇರಾಕ್ ಮೇಲೆ ಮೊದಲ ದಾಳಿ ನಡೆದಾಗಲೂ ಮೀಡಿಯ ಮಾತು ಕೇಳಿ ಎಷ್ಟೋ ಜನ ಮಾರುಹೋದದ್ದೂ ಉಂಟು.

ಸಿ ಎನ್ ಎನ್, ಬಿ ಬಿ ಸಿ ಹಾಗೂ ಭಾರತದ್ ಮೀಡಿಯಾಗಳೂ ಅಷ್ಟೆ, ತಮ್ಮ povಗಳನ್ನೇ (ಹಾಗೆ ಯಾವಾಗ್ಲೂ ಮಾಡದಿದ್ರೂ) ಹಾಗೂ ಹೀಗೂ ತಳ್ತಿರ್ತಾರೆ. ಅವಕ್ಕೆ ಮರುಳಾಗ್ಬೇಡಿ Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 5, 2006 - 4:23am — bhatpp

ಉ: ತಲೆ ಯಾಕೆ ಬಾಗಬೇಕು?

bhatpp's picture

ಹೌದು, ನಾಡಿಗರೆ ನೀವು ಹೇಳುವುದು ಸರಿ. ಇಲ್ಲಿ ತಲೆ ಬಾಗಿಸುವ ಅಗತ್ಯವಿಲ್ಲ.

ನನಗೆ ಈ ಸಂಪೂರ್ಣ ಬುಷ್ ಪ್ರಕರಣದಲ್ಲಿ ನೋವು ನೀಡಿದ ಸಂಗತಿಯೆಂದರೆ, ಅವನು ಬಂದದ್ದನ್ನು ವೀರೊಧಿಸುವುದಕ್ಕಾಗಿ ನಾಲ್ಕು ಜನ ಪ್ರಾಣ ತೆತ್ತಿದ್ದು! ಬುಷ್-ನ ಆಗಮನ/ನಿರ್ಗಮನ ಹಾಗಿದ್ದರೆ ಜನರ ಪ್ರಾಣಕ್ಕೆ ತುಲನೆಯೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 10:44am — muralihr

ಒ೦ದು ದೇಶಕ್ಕೆ ಅನ್ಯಾಯ ಮತ್ತೊ೦ದು

muralihr's picture

ಇಲ್ಲಿ ಭಾರತದ economic policy ಯಾಗಲಿ foreign policy ಯಾಗಲಿ,
ಮೂಲತ: ಅಮೇರಿಕಾದವರೆ ತೀರ್ಮಾನ ಮಾಡುವುದು. World Bank ಮತ್ತೆ ಇತರ ಸ೦ಘಟನೆಗಳು
ಮಾಡುವ ಕೆಲಸಗಳು ನೀವು ನೋಡಿದರೆ.. ನಿಮಗೆ ಸತ್ಯಾ೦ಶ ತಿಳಿಯತ್ತೆ.
ನನ್ನ ಮಿತ್ರ ಕಾಶಿ ಈ ಕೆಲವು ಚಿತ್ರಗಳನ್ನು ತೆಗೆದಿದ್ದಾನೆ....ತಾವು ದಯವಿಟ್ಟು ಈ ಚಿತ್ರಗಳನ್ನು ನೋಡಬೇಕು...
http://www.robert-fisk.com/
http://www.visualsearch.org/films-available.htm
http://www.visualsearch.org/music-video-team.htm

೨>
ಅಣು ಶಾಸ್ತ್ರ ವೆ೦ದರೆ ರಹಸ್ಯ .. ಅಲ್ಲಿ decision ಮಾಡುವಾಗ ದೊಡ್ಡ ದೊಡ್ಡ
Scientistಗಳೆ...ಎನಾದರೂ ತಿಳಿಯೋಲ್ಲಾ...
http://www.visualsearch.org/films-available/Living-in-Fear.htm

ನಾನು ಹಿ೦ದೆ ಕಲಸ ಮಾಡುತ್ತಿದ್ದಾ ಕ೦ಪನಿ ಯವರೆ .. ಈ Nuclear Plant ಎಲ್ಲಾ ತಯಾರ್ ಮಾಡೋದು...
ಅವರಿಗೆ ಸದ್ಯಕ್ಕೆ Power Division Loss ನಲ್ಲಿ ಓಡುತ್ತಿದೆ,
ಅದಕ್ಕೆ power crisis is imminenet ..
ಎ೦ದು Dam / Nuclear Plant ..

http://www.freep.com/apps/pbcs.dll/article?AID=/20060303/NEWS07/60303031...

"Thursday's deal would make India eligible to buy U.S. nuclear technology and fuel from U.S. companies such as General Electric Co., the world's biggest maker of power-generation equipment. It also marks India's arrival on the world stage and acts as a counterweight to China's growing power, proponents say."

Actually GE Power division is performing badly , so they needed this deal .
http://www.corpwatch.org/article.php?list=type&type=16
http://www.thirdworldtraveler.com/Military_Industrial_Complex/Making_Mon...

ಹೀಗೆ ನಮ್ಮನ್ನು ನಿಮ್ಮನ್ನು ಬ೦ಧನದಲ್ಲಿ ಇಟ್ಟು .. ಕೊನೆಗೆ ಮತ್ತೊ೦ದು ದೇಶದ ಮೇಲೆ ಯುದ್ಢವನ್ನು
ಮಾಡಿ ಎಲ್ಲರನ್ನು ಧ್ವ೦ಸ ಮಾಡುವ ಕ್ರಿಯೆ ನಡೆಯುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 8, 2006 - 8:39am — sinchanabhat

ಸಂತಸ

sinchanabhat's picture

ಧನ್ಯವಾದಗಳು.
ನಿಮ್ಮ ಸಲಹೆಗಳು ನನ್ನ ಯೋಚನೆಯ ಮಿತಿಯಿಂದ ಹೊರ ಹೋಗಿ ನನ್ನ ದೃಷ್ಟಿಯನ್ನು ವಿಶಾಲಗೊಳಿಸಿ ಚಿಂತನೆಗೈಯ್ಯಲು ತುಂಬಾ ಸಹಾಯಕವಾಗಿದೆ. ಆದರೆ ಒಂದು ಬೇಸರದ ವಿಷಯವೆಂದರೆ ಇಲ್ಲಿ ನೀವು ನನಗೆ ತಿಳಿಸಿದ ಎಲ್ಲಾತಾಣಗಳನ್ನೂ ನೋಡಲು ಪ್ರಯತ್ನಿಸಿದೆ ಆದರೆ ಇಂದು ಒಂದು ತಾಣವೂ ನನಗೆ ತೆರೆದುಕೊಳ್ಳಲಿಲ್ಲ.ಇರಲಿ ಇನ್ನೊಮ್ಮೆ ಪ್ರಯತ್ನಿಸುತ್ತೇನೆ.

ಇನ್ನು ಈ ಲೇಖನಕ್ಕೆ ಅನಿಸಿಕೆ ವ್ಯಕ್ತಪಡಿಸಿದವರೆಲ್ಲಾ ನನ್ನ ಯೋಚನಾ ಲಹರಿಯನ್ನು ಸುಧಾರಿಸಿಕೊಳ್ಳುವಂತೆ ಮಾಡಿದ್ದಾರೆ.ನನ್ನಲ್ಲಿ ಮೋಡಿದ್ದ ಪ್ರಶ್ನೆ'ಏಕೆ ತಲೆ ಬಾಗಬಾರದು?' ಎಂಬುದಕ್ಕೆ ತಕ್ಕ ಮಟ್ಟಿಗಿನ ಉತ್ತರ ನಿಮ್ಮೆಲ್ಲರ ಅನಿಸಿಕೆಯಿಂದ ದೊರೆತಿದೆ. ಆದರೂ ಇಂಧನ ಕೊರತೆಯಿಂದ ಹಲವೆಡೆ ಕಾಮಗಾರಿ ಸ್ತಗಿತ ಗೊಂಡಿತ್ತು,ಈ ಸಮಸ್ಯೆಯ ನಿವಾರಣೆಗೆ ಯಾವ ಯಾವ ದಾರಿಗಳಿದ್ದವು ಎಂಬ ಪ್ರಶ್ನೆಯೊಂದು ಉಳಿದು ಹೋಗಿದೆ.
ಅದನ್ನೂ ಯಾರಾದರು ನನಗೆ ತಿಳಿಸುವಂತಾಗಿದ್ದರೆ ಮತ್ತೂ ಸಂತಸ ಪಡುತ್ತಿದ್ದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅವಕಾಶವಾದಿ ಅಮೆರಿಕಾ
  • ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?
  • ನಮ್ಮ ನಿಜವಾದ ಶತೃ ಯಾರು?
  • ಪರಮಾಣು ಒಪ್ಪಂದ
  • ಯಾವುದು ರಕ್ಷಣೆ ???
Syndicate content

ಲೇಖಕರು

sinchanabhat's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator