ರಾತ್ರಿಯ ಬಸ್ಸು
ರಾತ್ರಿಯ ಬಸ್ಸು,
ಹತ್ತುವಾಗಲೂ ಹತ್ತು
ಇಳಿಯುವಾಗಲೂ ಹತ್ತು
ನೆನಪಿಗೆ ಉಳಿದಿದ್ದು ನೋವಿನ ಕತ್ತು !
- ಸುಚರ
============================================
ಜಾಗ ತುಂಬಿಸಲು - ಮತ್ತೆ ಅದೇ ಹನಿಗವನ
ರಾತ್ರಿಯ ಬಸ್ಸು,
ಹತ್ತುವಾಗಲೂ ಹತ್ತು
ಇಳಿಯುವಾಗಲೂ ಹತ್ತು
ನೆನಪಿಗೆ ಉಳಿದಿದ್ದು ನೋವಿನ ಕತ್ತು !
- ಸುಚರ
============================================
ಜಾಗ ತುಂಬಿಸಲು - ಮತ್ತೆ ಅದೇ ಹನಿಗವನ
ರಾತ್ರಿಯ ಬಸ್ಸು,
ಹತ್ತುವಾಗಲೂ ಹತ್ತು
ಇಳಿಯುವಾಗಲೂ ಹತ್ತು
ನೆನಪಿಗೆ ಉಳಿದಿದ್ದು ನೋವಿನ ಕತ್ತು !
- ಸುಚರ

- Login or register to post comments
- 805 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ರಾತ್ರಿಯ ಬಸ್ಸು
ಈ 'ರಾತ್ರಿಯ ಬಸ್ಸು' ಒಂದೇ ರಾತ್ರಿಯಲ್ಲಿ ೩ ಟ್ರಿಪ್ ಮಾಡುವ ಸಿಟಿಬಸ್ ಆಗಿರಬಹುದೇ ಅನ್ನಿಸಿತು, ಕವನದ ಮೂರು ಹನಿಗಳು ಉದುರಿರುವುದರಿಂದ!
'ಇಳಿಯುವಾಗಲೂ ಹತ್ತು' ಎಂಬ ಸಾಲಿನಲ್ಲಿ ಹತ್ತು ಎಂದರೆ ಮಾರನೆದಿನ ಬೆಳಗಿನ ಹತ್ತು ಗಂಟೆ... ಅಂತ ಅರ್ಥೈಸಿದರೆ ಅದು ದೂರದೂರಿಗೆ ಹೋಗುವ ಬಸ್ಸೇ ಇರಬೇಕೆನಿಸುತ್ತದೆ.
ಒಂದುವೇಳೆ 'ಇಳಿಯುವಾಗಲೂ ಹತ್ತು' ಎನ್ನುವ ಸಾಲನ್ನು ಧಾರವಾಡ ಶೈಲಿಯ 'ಇಳಿಯಾಕ್ ಹತ್ಯಾನ...' ಎಂದುಕೊಂಡರೆ ಮತ್ತೆ ಸಿಟಿಬಸ್ಸೇ ಇರಬಹುದೇನೊ ಅನಿಸಿದರೂ ತಪ್ಪಿಲ್ಲ!
ಬಸ್ಸು ಯಾವುದೇ ಇರಲಿ, ಕತ್ತು ನೋವಾಗದಂತೆ ಒಂದು ಪಿಲ್ಲೊ (ಎಲ್ಲೊ ಯೆಲ್ಲೊ ಕಲರ್‌ದು ಸಿಕ್ಕಿದರೆ ಒಳ್ಳೆದು) ಇಟ್ಟುಕೊಂಡರಾಯಿತು.
ಅಷ್ಟಾಗಿಯೂ ನೋವು ಕಡಿಮೆಯಾಗದಿದ್ದರೆ, 'ಅಯೋಡೆಕ್ಸ್ ಹಚ್ಹಿರಿ; ಮತ್ತೆ ಓಡಾಡಿರಿ!' (ಐ ಮೀನ್, ಮತ್ತೆ ಬಸ್ಸು ಹತ್ತಿ!)
- ಶ್ರೀವತ್ಸ ಜೋಶಿ
ಹತ್ತರ - ತತ್ತರ - ಇದೇ ನನ್ನ ಉತ್ತರ !
ಹತ್ತು, ಹತ್ತು ಎಂದದ್ದು - ಶ್ರೀವತ್ಸರ ಊಹೆಯಂತೆ - ಸಮಯದಬಗ್ಗೆ !
ಒಮ್ಮೆ ಕೆ.ಎಸ್.ಆರ್.ಟಿ.ಸಿ ಕೆಂಪು ಬಸ್ಸಿನಲ್ಲಿ ಬೆಂಗಳೂರಿನಿಂದ ಕುಮಟಾಗೆ ಪ್ರಯಾಣ ಮಾಡಿದಾಗ ಆದ ಅನುಭವವದು. ೧೦ ಗಂಟೆಗೆ ಹೊರಟು ೧೦ ಗಂಟೆಗೆ ಸೇರಿದ್ದೆ.
ಮೂರು ಬಾರಿ ಹಾಕಿದ್ದು, ಸಂಪದ ೨೫ ಪದಗಳಬಗ್ಗೆ ಒತ್ತಾಯ ಮಾಡಿದ್ದರಿಂದ .
ಸುನಿಲರ ಪ್ರಶ್ನೆಗಳು ಸುಂದರವಾಗಿವೆ.
ಎಲ್ಲರಿಗೂ ಉತ್ತರಿಸಿದ್ದೇನೆಂದು ನಂಬಿದ್ದೇನೆ.
ಧನ್ಯವಾದ
- ಸುಚರ
ಅನಿಸಿಕೆ
ತಡಿರಿ ನನ್ನ ಅನಿಸಿಕೆಗೂ ಮೊದಲು ಸ್ವಲ್ಪ ಜಾಗ ತುಂಬಿಸ್ಕೊಳ್ತೀನಿ.
ರಾತ್ರಿಯ ಬಸ್ಸು,
ಹತ್ತುವಾಗಲೂ ಹತ್ತು
ಇಳಿಯುವಾಗಲೂ ಹತ್ತು
ನೆನಪಿಗೆ ಉಳಿದಿದ್ದು ನೋವಿನ ಕತ್ತು !
-ಸುಚರ
ಯಾವೂರ್ಗ್ ಹೋಗೊ ಬಸ್ ಅದು?
ಅಯ್ಯೋ ನಾನು ನಿಮ್ತರಾ ಜಾಗ ತಗೊಂಡಿರ್ಲಿಲ್ಲಾ,ಜಾಗಾ ಅತಿಕ್ರಮಣ ಮಾಡ್ಬಿಟ್ಟೆ ಅನ್ಸತ್ತೆ!!!
))
ಬರಿ ಹತ್ ಮಂದಿ ಇರೋಹಾಂಗಿದೆ!
ಅತವಾ ಹತ್ತಕ್ ಹತ್ತಿ ಹತ್ತರ ತನಕ ಮಲ್ಗೋ ಹೊತ್ತು ಅನ್ಕೊಂಡು ಕಣ್ ತೆರ್ದಿರ್ಲಿಕ್ಕಿಲ್ಲಾ.
ಹಾಗಾಗಿ ಆ ನಿಮ್ ಕತ್ತಿಗೆ ಕುತ್ತ ಬಂದು ನೆನಪಲ್ ಉಳಿತು.ಏನೇ ಆಗ್ಲಿ ಮೂರು ಮೂರುಬಾರಿ ಸುತ್ತಿದ್ರಲ್ರಿ,ನಿಮ್ಮ ಕತ್ತಿನ ನೋವು ಅಷ್ಟೊಂದು ಮದುರವಾಗಿರತ್ತೆ ಅಂದಾಯ್ತು.
ಹತ್ತು ಹತ್ತು ಏನಿದರ ಕರಾಮತ್ತು
ಅದೆಲ್ಲ ಸರಿ ಈ ಹತ್ತರ ಕರಾಮತ್ತು ಏನು ಎಂದು ಓದುಗರಿಗೆ ತಿಳಿಸೀಪ್ಪ..
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,
ಹತ್ತುವಾಗಲೂ ಹತ್ತು - ಈ ಹತ್ತು ಯಾವ ಹತ್ತು,
೧. ಹತ್ತು ಜನರಿದ್ದರೆ,
೨. ಪ್ರಯಾಣ ದರ ಹತ್ತು ರೂಪಾಯಿಯೆೆ,
೩. ನೀವು ಮೆಟ್ಟಿಲುಗಳನ್ನು ಹತ್ತಬೇಕಾಯಿತೇ.
೪. ಯಾವುದೂ ಅಲ್ಲ. (ವಿವರ ತಿಳಿಸುವುದು).
ಇರಲಿ,
ಮತ್ತೆ ಇಳಿಯುವಾಗಿನ ಹತ್ತನ್ನು ಗಮನಿಸೋಣ,
ಇಳಿಯುವಾಗ,
೧. ಏನಾದರು ಜಾಲ್ಮಾನೆಯಾಗಿ ಹತ್ತು ರೂಪಾಯಿ ತೆತ್ತಬೇಕಾಯಿತೇ.
೨. ಇಳಿಯುವಾಗ ಬೇರೆಯವರು ಹತ್ತುತ್ತಿದ್ದರೆ.
೩. ನೀವು ಇಳಿದ ನಂತರ ಬಸ್ಸಿನಲ್ಲಿ ಹತ್ತು ಜನರಿದ್ದರೆ.
೪. ಯಾವುದೂ ಅಲ್ಲ. (ವಿವರ ತಿಳಿಸುವುದು).