ಆಯ್ದ ಸಂಸ್ಕೃತ ಸುಭಾಷಿತಗಳು (೨೮-೩೦)
೨೮.
ಯಾರ ಮುಖವು ಪ್ರಸನ್ನವಾಗಿದ್ದು , ಯಾರ ಮಾತುಗಳು ಅಮೃತಸಮಾನವೋ , ಪರೋಪಕಾರವೇ ಯಾರ ಕೆಲಸವು ಆಗಿರುವದು ಅವರನ್ನು ಯಾರು ತಾನೇ ಗೌರವಿಸುವದಿಲ್ಲ ?
ಮೂಲ :-
ವದನಂ ಪ್ರಸಾದಸದನಂ
ಹೃದಯಂ ಸುಧಾಮುಚೋ ವಾಚ:
ಕರಣಂ ಪರೋಪಕರಣಂ
ಯೇಷಾಂ ಕೇಷಾಂ ನ ತೇ ವಂದ್ಯಾ: ?
೨೯.
ಒಳ್ಳೆಯ ಜನರ ಸಹವಾಸದ ಬಯಕೆ , ಪರರ ಸದ್ಗುಣವನ್ನು ಪ್ರೀತಿಸುವದು , ಗುರುವಿನಲ್ಲಿ ನಮ್ರತೆ , ಕಲಿಕೆಯ ಚಟ , ಸ್ವಪತ್ನಿಯಲ್ಲಿ ಪ್ರೀತಿ , ಜನರ ನಿಂದೆಯ ಭಯ , ಶೂಲಪಾಣಿಯಾದ ಶಿವನಲ್ಲಿ ಭಕ್ತಿ , ಮನಸ್ಸಿನ ನಿಗ್ರಹದಲ್ಲಿ ಶಕ್ತಿ , ದುಷ್ಟರ ಸಹವಾಸದಿಂದ ದೂರ ಇರುವಿಕೆ , ಈ ಗುಣಗಳುಳ್ಳ ಜನರಿಗೆ ನಮ್ಮ ನಮಸ್ಕಾರ!
ಮೂಲ :-
ವಾಂಛಾ ಸಜ್ಜನಸಂಗಮೇ
ಪರಗುಣೇ ಪ್ರೀತಿ:
ಗುರೌ ನಮ್ರತಾ
ವಿದ್ಯಯಾಂ ವ್ಯಸನಂ
ಸ್ವಯೋಷಿತಿ: ರತಿ:
ಲೋಕಾಪವಾದಾತ್ ಭಯ:
ಭಕ್ತಿ: ಶೂಲಿನಿ
ಶಕ್ತಿ: ಆತ್ಮದಮನೇ
ಸಂಸರ್ಗಮುಕ್ತಿ: ಖಲೇ
ಏಶು ಏತೇ ವಸಂತಿ ನಿರ್ಮಲಗುಣಾ:
ತೇಭ್ಯೋ ನರೇಭ್ಯೋ ನಮ:
೩೦.
ಇತರರಿಗಾಗಿ ಸ್ವಾರ್ಥವನ್ನು ತ್ಯಜಿಸುವವರು ಸತ್ಪುರುಷರು.
ತಮಗೆ ಹಾನಿಯಾಗದ ಹಾಗೆ ಪರೋಪಕಾರ ಮಾಡುವವರು ಸಾಮಾನ್ಯ ಜನರು.
ಸ್ವಾರ್ಥ ಸಾಧನೆಗಾಗಿ ಪರರಿಗೆ ಹಾನಿ ಮಾಡುವವರು ರಾಕ್ಷಸರು.
ಇನ್ನು ನಿರರ್ಥಕವಾಗಿ ಪರರ ಹಿತಕ್ಕೆ ಧಕ್ಕೆ ಮಾಡುವವರಿಗೆ ಏನನ್ನಬೇಕೋ ತಿಳಿಯದು.
ಮೂಲ :-
ಏತೇ ಸತ್ಪುರುಷಾ: ಪರಾರ್ಥಘಟಕಾ: ಸ್ವಾರ್ಥಾನ್ ಪರಿತ್ಯಜ್ಯಯೇ
ಸಾಮಾನ್ಯಾಸ್ತು ಪರಾರ್ಥಮುದ್ಯಮಭೃತ: ಸ್ವಾರ್ಥಾವಿರೋಧೇನ ಯೇ
ತೇಮಿ ಮಾನವರಾಕ್ಷಸಾ: ಪರಹಿತಂ ಸ್ವಾರ್ಥಾಯ ನಿಘ್ನಂತಿ ಯೇ
ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇನ ಜಾನೀಮಹೆ .

- Login or register to post comments
- 536 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಈ ಸುಭಾಷಿತಗಳನ್ನು ಯಾವ ಪುಸ್ತಕದಿಂದ
ಈ ಸುಭಾಷಿತಗಳನ್ನು ಯಾವ ಪುಸ್ತಕದಿಂದ ಉದ್ಧರಿಸಿ ಬರೆಯುತ್ತಿರುವಿರೆಂದು ದಯವಿಟ್ಟು ತಿಳಿಸಿ.
ಸಂಸ್ಕೃತದ ಒಬ್ಬ ಪ್ರಸಿದ್ಧ ಸುಭಾಷಿತಕಾರನ ಹೆಸರು ಮರೆತು ಹೋಯಿತು ದಯಾಮಾಡಿ ಕೆಲವು ಸುಭಾಷಿತಕಾರರನ್ನು ಹೆಸರಿಸಿ. ಆತನು ಒಂದು ಸುಭಾಷಿತದ ಗ್ರಂಥವನ್ನು ರಚಿಸಿದ್ದಾನೆ.
ಧನ್ಯವಾದ.
ಉ: ಸುಭಾಷಿತ ಪುಸ್ತಕ
'ಸುಭಾಷಿತ ರತ್ನ ಭಾಂಡಾಗಾರ' ಎಂಬ ಪುಸ್ತಕ ಅತ್ಯುತ್ಕೃಷ್ಟವಾದುದು. ನನ್ನ ಬಳಿ ಇದೆ, ಅಮೆರಿಕೆಗೆ ಬರುವಾಗಲೂ ತಕೊಂಡು ಬಂದಿದ್ದೇನೆ.
ಬೆಂಗಳೂರಿನಲ್ಲಿ ಚಾಮರಾಜಪೇಟೆಯಲ್ಲಿ 'ವೇದಾಂತ ಬುಕ್ ಡಿಪೊ' (ಉಮಾ ಟಾಕೀಸ್ ಹತ್ತಿರ) ದಲ್ಲಿ ಸಿಗುತ್ತದೆ. ನಾನು ಅಲ್ಲೇ ಖರೀದಿಸಿದ್ದು.
ನೀವು ನೆನಪಿಸಿಕೊಳ್ಳಲು ಯತ್ನಿಸುತ್ತಿರುವ ಸುಭಾಷಿತಕವಿ 'ಭರ್ತೃಹರಿ' ಇರಬಹುದೆಂದುಕೊಂಡಿದ್ದೇನೆ.
- ಶ್ರೀವತ್ಸ ಜೋಶಿ
ಭರ್ತೃಹರಿ
ಹೌದು. ಧನ್ಯವಾದ
ವಂದನೀಯರು
ಸುಭಾಷಿತ # 29ರಲ್ಲಿ ಸೂಚಿಸಿರುವಂತಹ ಜನರು ಈಗ ಸಿಗ್ತಾರಾ? ಇಂಥಹವರು ನಿಜಕ್ಕೂ ವಂದನೀಯರು. ಶ್ರೀಕಾಂತ ಅವರೇ ಸುಭಾಷಿತಗಳನ್ನು ಚೆನ್ನಾಗಿ ನಿರೂಪಿಸ್ತಿದ್ದೀರ. ಹಾಗೆಯೇ ಮಹೇಶ್ ಅವರು ಪದಗಳನ್ನು ಒರೆಗೆ ಒಡ್ಡಿ ಹೊಳಪು ಕೊಡ್ತಿದ್ದಾರೆ.
ಇಬ್ಬರ ಕೆಲಸಗಳಿಗೂ ವಂದನೆಗಳು
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net