ಗಳಸ್ಯ ಕಂಠಸ್ಯ
ಪಕ್ಕದ ಫ್ಲಾಟಿನಲ್ಲಿರುವುದು ಸುನಂದಮ್ಮ
ಮುಂಜಾನೆ ಹತ್ತಕ್ಕೆ ಅವರ ಮನೆ ಬಾಗಿಲು ತೆರೆವುದಮ್ಮ
ಬಾಗಿಲ ಬಳಿ ಅವರು ಬಂದರೆ ಹೆಂಗಸರಿಗೆ ಆನಂದವಮ್ಮ
ಇವರೊಂದಿಗೆ ಹರಟಿಸಲು ಅವರಿಗೂ ಮಹದಾನಂದವಮ್ಮ
ಮಾತು ಮಾತು ಮಾತು ಮಾತಿನಲ್ಲೇ ಇವರುಗಳ ಪ್ರಪಂಚ
ಇವರೆಲ್ಲರ ಮಾತಿನಲ್ಲಿ ಮನೆಯವರಾಗುವರು ಹುಚ್ಚ
ಮಕ್ಕಳ ಹೋಂವರ್ಕ್‍ಗೆ ಬೀಳುವುದು ಕತ್ತರಿ
ಇವರ ಮಾತುಗಳಲಿ ಇರುವುದು ಒಂದು ವೈಖರಿ
ಮಾತು ಶುರು ಆಗುವುದು ಅಡುಗೆ ಮನೆಯಿಂದ
ಮುಂದೆ ಹಾಯ್ದು ಹೋಗುವರು ಮಕ್ಕಳ ಓದಿನಿಂದ
ಮಥಿಸುವರು ರಾಜಕಾರಣಿಗಳ ಕೃತ್ಯಗಳ
ಒಮ್ಮೊಮ್ಮೆ ಭಿನ್ನಾಭಿಪ್ರಾಯ ಮೂಡಿ ಆಡುವರು ಜಗಳ
ಯಾವನೋ ಹುಡುಗ ಕೆಣಕಿದ ಇನ್ಯಾವದೋ ಹುಡುಗಿಯ
ತತ್‍ಕ್ಷಣ ಆಗುವರಿಬ್ಬರು ಇವರ ಮಾತಿಗೆ ವಿಷಯ
ಯಾರದೋ ಗಂಡ ಇಣುಕಿ ನೋಡಿದ ಇನ್ನೊಬ್ಬರ ಮನೆ ಕಿಟಕಿಯ
ಚರ್ಚಿಸಲದೂ ಬರುವುದು ಮೊದಲು ಇವರ ಬಳಿಯೇ
ಇವರಲೂ ನಾ ಕಂಡಿದ್ದೆ ಒಳ್ಳೆಯ ಗುಣ
ಹಬ್ಬ ಹರಿದಿನಗಳಲಿ ಓಡಾಡುವುದು ತಟ್ಟೆಗಳು ಝಣ ಝಣ
ಒಬ್ಬರ ಮನೆಯಲಾಗಲು ಅವಘಡ
ಇನ್ನೊಬ್ಬರ ಮನೆಯಲಾಗುವುದು ಶೋಕಾಚರಣೆ

- Login or register to post comments
- 416 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಎಲ್ಲೆಡೆ
ಎಲ್ಲೆಡೆ ಕಂಡು ಬರುವ ಅವರ ಮಾತುಗಳು ಅದೆಲ್ಲಿಂದ ಎಲ್ಲಿಗೋ ಹೋಗುವದಲ್ಲ,ತಿರುಗಿ ಇಲ್ಲಿಗೇ ಬರುವುದು.ನಾನು ಅದೆಲ್ಲೋ ಓದಿದ್ದೆ,ಹೆಂಗಸರಿಗೆ ಮಾನಸಿಕ ಕಾಯಿಲೆಗಳು ಕಡಿಮೆ ಇರಲು ಇಂತಹ ಮಾತುಗಳೂ ಕಾರಣ ಎಂಬುದನ್ನು.ಅದು ಎಷ್ಟರಮಟ್ಟಿಗೆ ನಿಜವೋ ನನಗೆ ತಿಳಿಯದು.ಆದರೆ ಇನ್ನಾರದೋ ಕಷ್ಟಕ್ಕೆ ಮರಗುವ, ಅವರ ಮಾತುಗಳನ್ನೂ ಮೀರುವ ಮನಸ್ಸು ಅವರಿಗಿದ್ದರೆ ಸಾಕು.ಕೆಟ್ಟದು ಮತ್ತು ಒಳ್ಳೆಯದೆಂಬುದನ್ನು ಹೀಗೇ ಎಂದು ವ್ಯಾಖ್ಯಾನಿಸುವುದು ತುಂಬಾ ಕಷ್ಟ ಅಲ್ಲವೆ?
ಹೌದು
ನೀವು ಹೇಳುವುದು ಸರಿ. ಮಾತನಾಡುವುದರಿಂದ ಮನದ ಚಿಂತನೆಗಳು ಹೊರ ಬಂದು ಮನಸ್ಸಿನ ಭಾರ ಸ್ವಲ್ಪ ಮಟ್ಟಿಗೆ ಶಮನವಾಗುವುದು. ಅದಕ್ಕೇ ಅಲ್ವೇ ಹೆಚ್ಚಿನ ದು:ಖವಾದಾಗ ಇನ್ನೊಬ್ಬರೊಂದಿಗೆ ಹೇಳಿಕೊಂಡರೆ ಮನಸ್ಸಿಗೆ ಸಮಾಧಾನವಾಗುವುದು. ಅದೂ ಅಲ್ಲದೇ ಹೀಗೆ ಇತರರೊಂದಿಗೆ ಮಾತನಾಡುವಾಗ ಉತ್ತರ ಸಿಗದ ಎಷ್ಟೋ ಪ್ರಶ್ನೆಗಳಿಗೆ ಉತ್ತರವೂ ಸಿಗುವುದು.
ನೀವು ಹೇಳಿದಂತೆ ಕೆಟ್ಟದ್ದು ಒಳ್ಳೆಯದು ವ್ಯಾಖ್ಯಾನಿಸುವುದು ಕಷ್ಟ. ಒಬ್ಬರಿಗೆ ಒಳ್ಳೆಯದಾದ್ದದ್ದು ಇನ್ನೊಬ್ಬರಿಗೆ ಕೆಟ್ಟದ್ದಿರಬಹುದು.
ನಾನು ಸುಮ್ಮನೆ ನನ್ನ ಪತ್ನಿಯನ್ನು ಕೆಣಕಲು ಬರೆದದ್ದಷ್ಟೇ. ಆಗಾಗ ಮನೆಯವರ ಕಡೆಯೂ ಗಮನ ಹರಿಸಬೇಕಲ್ವೇ? ಊರೋರ ಉಸಾಬರಿ ಬಗ್ಗೆನೇ ಬರೀತೀರ ನಮ್ಮಗಳ ಬಗ್ಗೆ ನಿಮಗೆ ಯೋಚನೆಯೇ ಇಲ್ಲ ಅಂತ ಅನ್ನಬಾರದೆಂಬ ದೂರಾಲೋಚನೆ (ದುರಾಲೋಚನೆ ಅಂದರೂ ತಪ್ಪಲ್ಲ) (ಹಾ ಹಾ ಹಾ!)
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net