ನಮ್ಮ ಕಛೇರಿಯಲ್ಲಿ ಹೀಗೊಂದು ಮಹಿಳಾ ದಿನಾಚರಣೆ
ನೆನ್ನೆಯ ದಿವಸ, ಮಹಿಳಾ ದಿನಾಚರಣೆ ಇದ್ದ ಕಾರಣ, ನಮ್ಮ ಕಛೇರಿಯಲ್ಲಿದ್ದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಅದ್ಯಾವುದೋ ' ಬೀಳ್ ಗಿರಿ ' (ಹೆಸರು ಬದಲಾಯಿಸಲಾಗಿದೆ) ಕಂಪನಿಯ ಚಾಕೋಲೇಟ್ ಪೆೊಟ್ಟಣ (ಕಾರ್ಪೋರೇಟ್ ಪ್ಯಾಕ್) ಕೊಟ್ಟರು ನಮ್ಮ ಆಡಳಿತ ಮಂಡಳಿ. ಇದನ್ನು ನೋಡಿ ಇದನ್ನು ಲಿಂಗ ಪಕ್ಷಪಾತಿತನ ಎನ್ನಬೇಕೋ ತಿಳಿಯುತ್ತಿಲ್ಲ. ಸರಿ ಇವರು ನಮ್ಮೊಡನೆ ಅಂದರೆ ಪುರುಷ ಸಹೋದ್ಯೋಗಿಗಳೊಡನೆ ಹಂಚಿಕೊಂಡು ತಿನ್ನುತ್ತಾರೆನೋ ಅಂದುಕೊಂಡ್ರೆೆೆೆ.......ತರಲೆ ಮಾಡೋದಾ......ಇರ್ಲಿ ಪಾಪ ಸುಮ್ಸುಮ್ನೆ ಸುಳ್ಳು ಯಾಕೆ ಹೇಳ್ಬೆೆೆೇಕು....ನಮ್ಮನ್ನೆಲ್ಲ ಸ್ವಲ್ಪ ಆಟ ಆಡಿಸಿ ನಂತರ ಸ್ವಲ್ಪ ಕೊಟ್ಟರು ಎನ್ನಿ. ಆದರೆ ಏನು ಮಾಡುವುದು. ಎಲ್ಲಾ ನಮ್ಮ ದುರಾದೃಷ್ಟ.
ಎಲ್ಲರೂ ಕಾರ್ ಆಕಾರದಲ್ಲಿದ್ದ ಒಂದು (ಹೌದು ಒಂದೆೇ ಒಂದು) ಚಾಕೋಲೇಟ್ ತಿಂದ್ವಿ. ಆದರೆ ಇನ್ನೂ ಸಿಕ್ಕಾಪಟ್ಟೆ ಚಾಕೋಲೇಟ್ ಗಳಿದ್ದವು. ಎಲ್ಲರೂ ಇನ್ನೊಂದು ಚಾಕೋಲೇಟ್ ರುಚಿ ನೋಡುವ ಎಂದು ಮಾತನಾಡಿಕೊಂಡು ಇನ್ನೊಂದು ಚಾಕೋಲೇಟ್ ತೊಗೊಂಡ್ವಿ(ಮಹಿಳಾ ಉದ್ಯೋಗಿಗಳು ಆಗಲೇ ಹತ್ತಾರು ಚಾಕೋಲೇಟ್ ಸೇವಿಸಿದ್ದರು). ಸರಿ ಒಬ್ಬೊಬ್ಬರಾಗೆ ಮತ್ತೊಂದು ಚಾಕೋಲೇಟ್ ಬಾಯಿಯಲ್ಲಿ ಹಾಕಿೆಕೊಂಡ್ವಿ. ಅಷ್ಟರಲ್ಲಿ ಮಗದೊಬ್ಬ ಚಾಕೋಲೇಟಿನ ಸಿಪ್ಪೆ ತೆಗೆದ ಇನ್ನೇನು ಆ ದಪ್ಪ ಚಾಕೋಲೇಟು ಅವನ ಬಾಯಿ ಸೆೇರಬೇಕು, ಅಷ್ಟರಲ್ಲಿ ಏನೋ ಮಿಸುಕಾಡಿದಂತೆ ತೋರಿತು. ನೋಡಿದರೆ ಜೀವಂತ ಹುಳ. ಎಲ್ಲರ ಬಾಯಿಯೂ ಅಲ್ಲಿಯತನಕ ನೀರಿನಿಂದ ಕೂಡಿ ಬಾಯಿ ಚಪ್ಪರಿಸುತ್ತಿದ್ದರೆ, ಈಗ ಒಮ್ಮಿಂದೊಮ್ಮೆಗೆ ಎಲ್ಲರಿಗೂ ಹೊಟ್ಟೆ ತೊಳೆಸಿದಂತಾಯಿತು.
ಈ ಘಟನೆಯ ನಂತರ ಎಲ್ಲರಿಗೂ ಬಹಳ ಸಿಟ್ಟು ಬಂದು ಒಬ್ಬಬ್ಬರು ಒಂದೊಂದು ದೂರು ಕೊಡೊೇಣ ಅಂತಿದ್ದಾರೆ..
೧. ಸಸ್ಯಹಾರಿಗಳಾದ ನಮಗೆ ಈ ಮಹಿಳಾ ಉದ್ಯೋಗಿಗಳು ಬೇಕೆಂದೇ ಹುಳಗಳನ್ನು ತಿನ್ನಿಸಿದ್ದಾರೆ. ನಮ್ಮ ಚಾರಿತ್ರ್ಯ ವಧೆ ಮಾಡಿದ್ದಾರೆ ಎಂದು ಮಾನವ ಹಕ್ಕು ಆಯೋಗಕ್ಕೆ ದೂರು ಕೋಡಬೇಕು.
೨. ನಮಗೆ ಈಗಾಗಲೇ ಹತ್ತಾರು ಚಾಕೋಲೇಟ್ ತಿನ್ನಿಸಿ ಈಗ ಇದರಲ್ಲಿ ಹುಳ ಇಟ್ಟು ನಮಗೆ ಇರುಸು ಮುರುಸು ಉಂಟು ಮಾಡುತ್ತಿದ್ದಾರೆ. ಇದು ಶುದ್ಧ ಉದ್ಧಟತನ. ಉದ್ಯಮದ ಹರಾಸ್ಮೆಂಟ್ ನಿಯಮದ (ಇರುಸುಮುರುಸು ಉಂಟುಮಾಡುವಿಕೆ) ಅಡಿಯಲ್ಲಿ ದೂರು ದಾಖಲಿಸಬೇಕು.
೩. ಭಾರತೀಯರಾದ ನಮ್ಮನ್ನು ಚೀನಿಯರನ್ನಾಗಿ ಮಾಡಲು ಹೊರಟಿದೆ ಯಾವುದೋ ಒಂದು ವಿದೇಶಿ ಶಕ್ತಿ ಎಂದು ಕೆಲವರು ಹೇಳುತ್ತಿದ್ದಾರೆ. ಇದರಲ್ಲಿ ಕೆಲವು ಪಕ್ಷಗಳ ಮಹಿಳಾ ಮುಖಂಡರನ್ನೂ ಎಳೆದು ತರಲಾಗುತ್ತಿದೆ.
೪. ಆ ಚಾಕೋಲೆೇಟುಗಳ ಕ್ವಾಲಿಟಿ ಅಸ್ಯೂರೆನ್ಸ್ ಆಗಿರಲಿಲ್ಲ. ಅಂತಹ ಚಾಕೋಲೇಟನ್ನು ನಮಗೆ( ಅದೂ ಯಾರಿಗೆ ಈ ಭವ್ಯ ಭಾರತ ದೇಶದ ಮಹಿಳೆಯರಿಗೆ) ತಿನ್ನಿಸಿದ್ದು ಅಕ್ಷಮ್ಯ ಅಪರಾಧ. ಈ ಕುಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು. ಅದರಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯೇ ಇದ್ದರೂ ಕೂಡ ಅಂಥವರನ್ನು ಬಿಡಬಾರದು.
೫. ಇದು ಪುರುಷಪ್ರದಾನ ರಾಷ್ಚ್ರ ಎಂಬುದು ಮತ್ತೆೊಮ್ಮೆ ಸಾಬೀತಾಗಿದೆ. ಇಲ್ಲಿ ಮಹಿಳೆಯರಿೆಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ (ಬಹುಶಃ ಅವರ ಪ್ರಕಾರ ಶಾಲಾ ಹುಡುಗಿಯರು ಇರಬೇಕು)- ಯಾವ ರೀತಿಯ ಸ್ವಾತಂತ್ರ್ಯವೂ ಇಲ್ಲ.
ಪುರುಷರಿಗೆ ಧಿಕ್ಕಾರ,
ಮಹಿಳೆಯರಿಗೆ ಧಿಕ್ಕಾರ..
ಮಹಿಳೆಯರಿಗೆ ಧಿಕ್ಕಾರ,
ಪುರುಷರಿಗೆ ಧಿಕ್ಕಾರ, 
ಹೀಗೆ ಪುರುಷರಿಗೆ ಧಿಕ್ಕಾರ ಒಂದು ಕಡೆಯಾದರೆ, ಮಹಿಳೆಯರಿಗೆ ಧಿಕ್ಕಾರ ಮತ್ತೆೊೆಂದು ಕಡೆ. ತಲೆ ಕೆೆಟ್ಟು ಹೋಗ್ತಾ ಇದೆ. ಸಧ್ಯ ನಾನು ಇಲ್ಲಿ ಹಾಕಿರುವುದನ್ನು ಅವರಿಗೆ ಹೇಳಬೇಡಿ ಮತ್ತೆ.
ಇದರಲ್ಲಿ ನನ್ನ ಕೈವಾಡವಿದೆ ಅಂತ ದೂರು ನೀಡಿಯಾರು. ಅಂದಹಾಗೆ ಮರೆತ್ತಿದ್ದೆ. ಈ ಚಾಕೋಲೇಟಿನ ಮೇಲ್ವಿಚಾರಣೆ ಹೆೊತ್ತಿದ್ದವರು ಮಹಿಳೆ.

- Login or register to post comments
- 678 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಇನ್ನೂ ಚಾಕಲೇಟ್ ಇದ್ಯಾ?
ಅಂತೂ ನಿಮ್ಮ ಕಂಪನಿಯಲ್ಲಿ ಕ್ರಾಂತಿ ಶುರು ಮಾಡಿದ್ದೀರ. ಒಳ್ಳೆಯದಾಗಲಿ. ನಿಮ್ಮ ಕಂಪನಿಯ ಗಂಡಸರೆಲ್ಲರಿಗೂ (ಕನ್ನಡಿಗರಿಗೆ ಮಾತ್ರ) ನನ್ನ ಸಹಾನುಭೂತಿ ಇದೆ.
ಅಂದ ಹಾಗೆ ಇನ್ನೂ ಚಾಕಲೇಟ್ ಉಳಿದಿದ್ಯಾ? (ಹುಳ ಇಲ್ಲದೇ ಇರೋದು). ಇದ್ರೆ ಎಷ್ಟಿದೆ ಅಂತ ನನಗೆ ಮಾತ್ರ ತಿಳಿಸಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಚಾಕಲೇಟುಗಳ ಕಥೆ
ಫಾರೆಸ್ಟ್ ಗಂಪ್ ಮೂವಿ ನೋಡಿದ್ದೀರಾ?
ಅದರಲ್ಲೊಂದು ಮಾತು ಬರತ್ತೆ:
"My momma always said... life is like a box of chocolates, you never know what you're gonna get"
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಚಾಕಲೇಟುಗಳ ಕಥೆ
pun ಚೆನ್ನಾಗಿದೆ. Ogden Nash ಬಗ್ಗೆ ಶ್ರೀರಾಮ್ ಬರೆದಿರುವ ಲೇಖನದಲ್ಲಿ http://joy-of-books.blogspot.com/2006/01/ogden-nash-pun-dit_28.html ಸಾಕಷ್ಟು punಗಳನ್ನು ಕಾಣಬಹುದು
ಆಹಾ
ಆಹಾ ಚೆನ್ನಾಗಿದ್ದೀರಾ! ನೀವು(ಪುರುಷರು) ಬೇಡವೆಂದರೂ ನಿಮ್ಮ ಮೂಗು ಹಿಡಿದು ತಿನ್ನಿಸ್ಸಿದ್ದರಾ?
ಬೇಕು ಅಂತ ಬಯಸಿ ತಾವೇ ತಿಂದು ಈಗ ಮಹಿಳೆಯರು ಹುಳಾ ತಿನ್ನಿಸಿದ್ರು ಅಂತಿರಾ? ಈ ಪುರುಷರೇ ಹೀಗೆ ಕೊನೆಗೆ ಎಲ್ಲವನ್ನೂ ಮಹಿಳೆಯರ ತಲೆಮೇಲೆ ಹಾಕುತ್ತಾರೆ.ನೀವು ನಮ್ಮ ವಿಷಯದಲ್ಲಿ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗಳು ಕಣ್ರೀ.
)))))
ಎಲ್ಲರ ಬಾಯಲ್ಲೂ ಅದರದ್ದೇ ಮಾತು
ಈ ಚಾಕೋಲೇಟ್ ಪುರಾಣದ ನಂತರ, ಎಲ್ಲ ಪುರುಷರ ಬಾಯಲ್ಲಿ ಗುನುಗಡುತ್ತಿರುವ ಹಾಡಿನ ಒಂದು ಸಾಲು...
ಡಾ|| ರಾಜ್ ಹಾಗು ಜಯಂತಿ ನಟಿಸಿದ ಚಿತ್ರದ ಒಂದು ಹಾಡು.
ಥಳುಕು ಮೆೋರೆ ಹೆಣ್ಣಿಗೆ ಹೆದರಬೇಡಿ ಸೆೋತು.....
ಥಳುಕು ಮೆೋರೆ ಹೆಣ್ಣಿಗೆ ಹೆದರಬೇಡಿ ಸೆೋತು.....
ಥಳುಕು ಮೆೋರೆ ಹೆಣ್ಣಿಗೆೇ..........ಆಆಆಆಆ......ಥಳುಕು ಮೆೋರೆ ಹೆಣ್ಣಿಗೆೇ......ಎಎಎಎ
ಥಳುಕು ಮೆೋರೆ ಹೆಣ್ಣಿಗೆೇ......ಎಎಎಎ ಹೆದರಬೇಡಿ ಸೆೋತು.....
ಥಳುಕು ಮೆೋರೆ ಹೆಣ್ಣಿಗೆ ಹೆದರಬೇಡಿ ಸೆೋತು.....
ಥಅಅಅಅಅ ಳುಉಉಉಉ ಕುಉಉಉಉ ಮೋಓಓಓಓ ರೆೆಎಎಎಎ,
ಥಳುಕು ಮೋರೆ,
ಹಾ! ಥಳುಕು ಮೆೋರೆ ಹೆಣ್ಣಿಗೆ ಹೆದರಬೇಡಿ ಸೆೋತು.....
ಮನವಿ :- ಈ ಹಾಡಿನ ಕೊನೆಗೆ ಜಯಂತಿ ಹಾಡುವ ಸಾಲನ್ನು ಮಹಿಳಾ ಉದ್ಯೋಗಿಗಳಿಗೆ ತಿಳಿಸಬೇಡಿ ಮತ್ತೆ....
_________________________________________________________________________________________________
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.