ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬೆಳಗಿನ ಜಾವದ ಕನಸು

March 10, 2006 - 8:48pm — suchara

ಈ ಕವನಕ್ಕೆ ಸ್ವಲ್ಪ ಪೀಠಿಕೆ ಬೇಕು.
ನಾನು ಇದನ್ನು ಬರೆದದ್ದು ೨೦೦೦ ದ ಡಾಟ್ ಕಾಮ್ ಗುಳ್ಳೆ ಒಡೆದ ಸಮಯದಲ್ಲಿ.
ಜಾವವನ್ನು ನಂಬಿ ಅಮೇರಿಕಾಕ್ಕೆ ಹಾರಿದ್ದ ಅನೇಕರು ಕೆಲಸ ಕಳೆದುಕೊಂದು ಕಷ್ಟ ಪಡುತ್ತಿದ್ದ ಕಾಲವದು.
ಈಗ ಓದಿ.
ಕೆಳಗಡೆ, ಕೆಲವು ಪ್ರಯೋಗಗಳ ಅರ್ಥ ಕೊಟ್ಠಿದ್ದೇನೆ.

ಬೆಳಗಿನ ಜಾವದ ಕನಸು
==============

ಬೆಳಗಿನ ಜಾವದ ಕನಸು
ನನಸಾಗುವುದಂತೆ
ಆದರೆ,
ಜಾವ ಬೆಳಗುವ ಕನಸು ?

"ಬೆಳ್ಳಗಿರುವುದೆಲ್ಲ ಹಾಲಲ್ಲ"
"ಇ ಇರುವುದೆಲ್ಲ ಕಾಮ್ಯವಲ್ಲ"

ಚುಕ್ಕೆಯ ಕಾಮಕ್ಕೆ ಮರುಳಾಗಿ
ಹಾರಿದರು ಎಲ್ಲೆ ಮೀರಿ
"ಕಾಮಾತುರಾಣಾಂ ನ ಭಯಂ ನ ಲಜ್ಜಾ"
ಆದರೀಗ
"ಜಾವಾತುರಾಣಾಂ ನ ಧನಂ ನ ನಿದ್ರಾ ?"

ಜಾವದ ಜವಕ್ಕೀಗ ಜವನ ಜಾವವೇ ?
ಚುಕ್ಕೆಯ ಬಲೆಯಲ್ಲಿ ಸಿಕ್ಕಿಸಿ ಕೊಲ್ಲುವ ಹುನ್ನಾರವೇ ?
ಸಮುದ್ರದ ಅಲೆಗಳು ಅಷ್ಟೊಂದು ಹರಿತವೆ?
ಅಥವಾ ಜಾವಕ್ಕಿದಿನ್ನೂ ಜಾವಳದ ಕರ್ಮವೇ ?

ಕಾದು ನೋಡೋಣ,
ಜಾವಕ್ಕೂ ಹಕ್ಕಿದೆ ಜೀವಿಸುವುದಕ್ಕೆ
- ಸುಚರಾ
೧೪.೦೩.೨೦೦೧

ಜಾವ - ಕಾಲ; ಚುಕ್ಕೆಯ ಕಾಮ - ಡಾಟ್ ಕಾಮ್; ಜವ - ವೇಗ; ಜವ - ಯಮ; ಚುಕ್ಕೆಯ ಬಲೆ - ಡಾಟ್ ನೆಟ್; ಸಮುದ್ರ..ಹರಿತ - ಸಿ ಶಾರ್ಪ್; ಜಾವಳ - ಚೌಲ.

  • ಕಾವ್ಯ ಮತ್ತು ಕವನ
~.~
  • Login or register to post comments
  • 1208 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 10, 2006 - 9:29pm — Sunil Jayaprakash

ಪ್ರತಿಕ್ರಿಯೆ:ಬೆಳಗಿನ ಜಾವದ ಕನಸು

Sunil Jayaprakash's picture

ಸುಚರ wrote:

ಜಾವದ ಜವಕ್ಕೀಗ ಜವನ ಜಾವವೇ ?
ಚುಕ್ಕೆಯ ಬಲೆಯಲ್ಲಿ ಸಿಕ್ಕಿಸಿ ಕೊಲ್ಲುವ ಹುನ್ನಾರವೇ ?
ಸಮುದ್ರದ ಅಲೆಗಳು ಅಷ್ಟೊಂದು ಹರಿತವೆ?
ಅಥವಾ ಜಾವಕ್ಕಿದಿನ್ನೂ ಜಾವಳದ ಕರ್ಮವೇ ?
ಕಾದು ನೋಡೋಣ, ಜಾವಕ್ಕೂ ಹಕ್ಕಿದೆ ಜೀವಿಸುವುದಕ್ಕೆ

- ಸುಚರಾ

೧೪.೦೩.೨೦೦೧ ಜಾವ - ಕಾಲ; ಚುಕ್ಕೆಯ ಕಾಮ - ಡಾಟ್ ಕಾಮ್; ಜವ - ವೇಗ; ಜವ - ಯಮ; ಚುಕ್ಕೆಯ ಬಲೆ - ಡಾಟ್ ನೆಟ್; ಸಮುದ್ರ..ಹರಿತ - ಸಿ ಶಾರ್ಪ್; ಜಾವಳ - ಚೌಲ.

ವಾಹ್! ಅದ್ಭುತವಾಗಿದೆ. ಪದ ಜೋಡಣೆ ಮತ್ತು ಜಾವಾ ಹಾಗು ಹರಿತಗಳ ಪರಿಕಲ್ಪನೆ. ಈಗ ಐದು ವರ್ಷಗಳ ತರುವಾಯ ಏನನ್ನಿಸುತ್ತದೆ. ಆಗ ಜಾವಾಕ್ಕೆ ಐದೇ ವರ್ಷವಾಗಿತ್ತು. ಈತ್ತೀಚೆಗೆ ದಶಮಾನೋತ್ಸವ ಆಚರಿಸಿದೆ.

ಇಂದು ಚುಕ್ಕೆಯ ಕಾಮವೇ ಜಾವಾ ಎಂಬಂತಾಗಿದೆ....(We are the dot in .com - ಇದು ಸೂರ್ಯನ ಮೌಸ್ ಪ್ಯಾಡ್ ಗಳ ಮೇಲೆ ಕಂಡುಬರುತ್ತದೆ.......)

ಸಮುದ್ರದ ಹರಿತಗಳು ಮತ್ತು ಸೂರ್ಯನ(ಸನ್) ಜಾವ ಒಂದಕ್ಕೊಂದು ವಿರುದ್ಧವಾಗಿ ಒಂದು ಮತ್ತೊಂದನ್ನು ಹಿಂದಿಕ್ಕಲಾಗದೆ ಎರಡೂ ಕೂಡ ಜಗತ್ತಿನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿವೆಯಲ್ಲಾ.

ಐದು ವರ್ಷದ ಹಿಂದಿನ ತಂತ್ರಜ್ಞರ ಮನಃಸ್ಥಿತಿಯನ್ನು ಮನೋಜ್ಞವಾಗಿ ಚಿತ್ರಿಸಿದ್ದೀರಿ. ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 10:01am — suchara

ಉ : ಜಾವದ ಕನಸು

suchara's picture

ನಿಮ್ಮ ಮಾತನ್ನು ಸಂಪೂರ್ಣ ಒಪ್ಪುತ್ತೇನೆ.
ಜಾವ,ಸಿಶಾರ್ಪ್ ಎರಡೂ ಹಣದ ಹೊಳೆ ಹರಿಸುತ್ತಿವೆ. ಹಾಗಿಲ್ಲದಿದ್ದರೆ ನಾನಿಂದು ಹೀಗೆ ಕೀಲಿ ಕುಟ್ಟಲಾಗುತ್ತಿರಲಿಲ್ಲ.
ಆದರೆ ಆ ಹಣದ ಬಹು ಕಡಿಮೆ ಪಾಲು ಪಾಪ ಆ ಸೂರ್ಯನಿಗೆ ಸಲ್ಲುತ್ತಿದೆ.

ಧನ್ಯವಾದಗಳು

-ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 10, 2006 - 9:54pm — tvsrinivas41

ಜವರನ ಜವ್ವನೆ

tvsrinivas41's picture

ಸುಚರ ಅವರೇ ನಿಮ್ಮ ಕವನ (ಕವನ ಅನ್ನಲೋ ಚುಟುಕ ಅನಲೋ? ಚುರುಕು ಮೆಣಸಿನಕಾಯಿ ಇದ್ದ ಹಾಗೆ ಇದೆ), ಬಹಳ ಚೆನ್ನಾಗಿದೆ.

ತಲೆಗೆ ಹೊಳೆದದ್ದನ್ನು ಸುಮ್ಮನೆ ಗೀಚುತ್ತಿರುವೆ. ಹೇಗಿದೆಯೋ ಏನೋ?

ಜಾವದಿ ಜವ್ವನೆಯ ಜಲಸೆಗೆ ಜವರನು ಜಾರಿದ

ಜಾವದಿ - ಕಾಲ
ಜವ್ವನೆ - ಇಲ್ಲಿ ಸಾವಿತ್ರಿ ಅಂತ ಇಟ್ಟುಕೊಳ್ಳಬಹುದು
ಜಲಸೆಗೆ - ಕುಳಿತುಕೊಳ್ಳುವ ಸ್ಥಳ
ಜವರ - ಯಮ
ಜಾರಿದ - ಮೋಸ ಹೋದ

ಸಾವಿತ್ರಿಯ ಮೊಂಡುತನಕ್ಕೆ ಯಮ ಮೋಸ ಹೋದ. ಸತ್ಯವಾನನ ಆತ್ಮವನ್ನು ಕರೆದೊಯ್ಯಲು ವಿಫಲನಾದ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 9:54am — suchara

ಉ : ಜವರನ ಜವ್ವನೆ

suchara's picture

ಚೆನ್ನಾಗಿದೆ.

ಸಾವಿತ್ರಿ ಬಗ್ಗೆ ಎಲ್ಲೋ ಒದಿದ್ದ pun ನೆನಪಿಗೆ ಬಂದಿತು
- ಸತ್ಯವಾನನಿಗೆ ಸಾವ್ ಇತ್ರಿ

ಜಕಾರದ ಝೇಂಕಾರ ಮೊಳಗುತ್ತಿರೆ ಅಣ್ಣಾವ್ರ ಬಬ್ರುವಾಹನದ ಡೈಲಾಗ್ ತಲೆಗೆ ಬಂತು -
"ಅಯ್ಯೋ!... ಜಾರಿಣಿಯ ಮಗ !....Eye-wink

ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 7:15pm — srivathsajoshi

Re: ಉ : ಜವರನ ಜವ್ವನೆ

srivathsajoshi's picture

ಸುಚರ wrote:
ಸಾವಿತ್ರಿ ಬಗ್ಗೆ ಎಲ್ಲೋ ಒದಿದ್ದ pun ನೆನಪಿಗೆ ಬಂದಿತು
- ಸತ್ಯವಾನನಿಗೆ ಸಾವ್ ಇತ್ರಿ

ಬಹುಷಃ ಇಲ್ಲಿ?

Smiling

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 9:58pm — suchara

ಸಾವ್ ಇತ್ರಿ

suchara's picture

ನಾನು ಅದು ವೈ ಎನ್ ಕೆ ಅವರದಿರಬಹುದು ಎಂದು ಕೊಂಡೆ Eye-wink

ಇನ್ನೊಬ್ಬ ವೈ ಎನ್ ಕೆ - ನಮ್ಮ ಮಾರ್ಗದರ್ಶನ ಮಾಡುತ್ತಿರುವುದು ನಮ್ಮ ಭಾಗ್ಯ.

- ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 12:26am — srikanth

ನಿಮ್ಮ ಜಾವ ಕನಸಿನ ಬಗ್ಗೆ

srikanth's picture

ಪದ್ಯ ತುಂಬಾ ಚೆನ್ನಾಗಿದೆ.ಪದಗಳ ಸಾಂದರ್ಭಿಕ ದ್ವಂದ್ವವನ್ನು ಚೆನ್ನಾಗಿ ಬಳಸಿದ್ದೀರ.

ವಂದನೆಗಳೊಂದಿಗೆ
ಶ್ರೀಕಾಂತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 1:18am — srivathsajoshi

ಉ: ಜಾವದ ಕನಸು

srivathsajoshi's picture

'ಆಯ್ಯೊ ಮುಗಿಯಿತೇ ಮಧುಚಂದ್ರ...' ಎಂಬ ಶೀರ್ಶಿಕೆಯಲ್ಲಿ ಡಾ|ಮೈ.ಶ್ರೀ.ನಟರಾಜ್ ಒಂದು ಕವನವನ್ನು ಬರೆದಿದ್ದರು. ಅದರ ಉಲ್ಲೇಖ (http://thatskannada.oneindia.in/sahitya/kavana/honeymoon.html)

ಇಲ್ಲಿ ಪ್ರಸ್ತುತವೆನಿಸುತ್ತದೆ.

ಸುಚರ, ನಿಮ್ಮ ಕವನವೂ ಬಹಳ ಸೊಗಸಾಗಿದೆ.

ಇನ್ನು ನನ್ನ ನೆಚ್ಚಿನ 'ಪನ್' ಬಳಸುವುದಾದರೆ,

ಜಾ = go (ಹಿಂದಿಯಲ್ಲಿ)
ವಾ = come (ತಮಿಳು ಭಾಷೆಯಲ್ಲಿ)
ಜಾವಾ = ಹೋಗಿ ಬಾ (ಭಾರತದಿಂದ ಅಮೆರಿಕೆಗೆ ಹೋಗಿ ಬಾ?)

Smiling

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 11, 2006 - 9:46am — suchara

ಉ : ಜಾವದ ಕನಸು

suchara's picture

punಡಿತರಿಗೆ ನಮೋ ನಮೋ

ಮೈ. ಶ್ರೀ. ನಟರಾಜರ ಕವನದ ಮುಂದೆ ನನ್ನದು ಬಾಲ ಭಾಷೆ.
ಅವರ ಕವನ ಈಗ ಓದಿದೆ. ಬಹಳ ಚೆನ್ನಾಗಿ (ವೇಗ, ಪ್ರಾಸ) ಓದಿಸಿಕೊಂಡು ಹೋಗುತ್ತದೆ.

ಧನ್ಯವಾದಗಳು.

ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾನುವಾರದ ಬೆಳಗಿನ ಮೌನ
  • ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
  • "ಈ ಕನಸು"
  • ನಾಳೆ
  • ಝೆನ್ ಕತೆ ೧೬: ಕನಸಿನ ಚಿಟ್ಟೆ-ಚಿಟ್ಟೆಯ ಕನಸು
Syndicate content

ಲೇಖಕರು

suchara's picture

ಪರಿಚಯ

ನಾನು ನಾನೇ ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator