Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಚನಚಿಂತನ: ೧೧ : ಮಲಗುವುದು ಅರ್ಧ ಮಂಚ!

August 7, 2005 - 7:39am — olnswamy

ಆನೆ ಕುದುರೆ ಭಂಡಾರವಿರ್ದಡೇನೋ
ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು
ಮಲಗುವುದರ್ಧ ಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ
ಒಡಲು ಭೂಮಿಯ ಸಂಗ
ಒಡವೆ ತಾನೇನಪ್ಪುದೋ
ಕೈವಿಡಿದ ಮಡದಿ ಪರರ ಸಂಗ
ಪ್ರಾಣ ವಾಯುವಿನ ಸಂಗ
ಸಾವಿಂಗೆ ಸಂಗಡವಾರೂ ಇಲ್ಲ
ಕಾಣಾ ನಿಃಕಳಂಕ ಮಲ್ಲಿಕಾರ್ಜುನಾ

[ಪಡಿ-ಒಂದು ಅಳತೆ; ಆವು-ಹಸು]
ಆನೆ ಕುದುರೆ ಸಂಪತ್ತು ಬೇಕಾದ್ದಕ್ಕಿಂತ ಸಾವಿರಪಟ್ಟು ಹೆಚ್ಚು ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ. ಉಣ್ಣುವುದು ಒಂದಳತೆ ಅನ್ನ, ಕುಡಿಯುವುದು ಒಂದು ಹಸು ಕರೆದ ಒಂದಿಷ್ಟು ಹಾಲು, ಮಲಗುವುದು ಅರ್ಧಮಂಚ. ನಾವು ಪಡಬಹುದಾದ ಸುಖಕ್ಕೆಲ್ಲ ಮಿತಿ ಇದೆ ಎಂಬುದನ್ನು ಮರೆತು ಸುಖಕ್ಕೆ ಮೂಲ ಎಂದು ನಾವು ತಿಳಿದ ವಸ್ತುಗಳನ್ನೆಲ್ಲ ಕೂಡಿಟ್ಟುಕೊಳ್ಳುವುದಕ್ಕೆ, ಅವು ಇಲ್ಲ ಎಂದು ತಹತಹಿಸುವುದಕ್ಕೆ ಅರ್ಥವಿದೆಯೇ?
ನಮ್ಮ ದೇಹ ಭೂಮಿಯ ಸಂಗಮಾಡುತ್ತದೆ, ನಾವು ಗಳಿಸಿದ ಒಡವೆಯ ಗತಿ ಏನು? ಒಡಲೆಂಬ ಒಡವೆಯೇ ಭೂಮಿಯ ಪಾಲಾದಮೇಲೆ ನಮ್ಮದೆಂದುಕೊಂಡಿದ್ದ ಒಡವೆ ಇನ್ನಾರದೋ ಪಾಲು. ಸಾವು ಮಾತ್ರ ನಮ್ಮದು, ಅದರಲ್ಲಿ ನಮ್ಮ ಜೊತೆ ಆಗುವವರು ಯಾರೂ ಇಲ್ಲ. ಸುಖಕ್ಕೆ ಇರುವ ಮಿತಿ ನಮಗೆ ಅರ್ಥವೇ ಅಗಿಲ್ಲವೇನೋ!

ಮೋಳಿಗೆ ಮಾರಯ್ಯ ಕಾಶ್ಮೀರದವನು, ಬಹುಶಃ ಒಬ್ಬ ಪುಟ್ಟ ರಾಜ. ತನ್ನ ಹೆಂಡತಿಯೊಡನೆ ಕಲ್ಯಾಣಕ್ಕೆ ಬಂದು, ಕಟ್ಟಿಗೆ ಮಾರುವ ಕೆಲಸ ಮಾಡುತ್ತ ಬದುಕಿದ ಒಬ್ಬ ಶರಣ. ಶ್ರೀಮಂತಿಕೆ ಮತ್ತು ಅಧಿಕಾರಗಳಿದ್ದೂ ಅವನ್ನೆಲ್ಲ ಬಿಟ್ಟು ಬದುಕಿದವನ ಈ ಮಾತು ವಸ್ತು ಮತ್ತು ಧನ ಮೋಹಗಳಿಗೆ ಬಲಿಯಾದ ನಮ್ಮ ಕಾಲದ ಮನಸ್ಸುಗಳಿಗೆ ಒಂದು ಎಚ್ಚರಿಕೆಯಂತಿದೆ. ನಾನಿಲ್ಲವಾದಮೇಲೆ ನನ್ನ ಮಡದಿ ಬೇರೆಯವರ ಸಂಗಕ್ಕೆ ಸಲ್ಲುವಳು. ನನ್ನ ಉಸಿರು ಗಾಳಿಯ ಸಂಗದಲ್ಲಿ ಕರಗಿಹೋಗುವುದು. ನನ್ನ ಸಾವಿನಲ್ಲಿ ನಾನು ಏಕಾಂಗಿ.
ಬಹುಶಃ ನಾವೆಲ್ಲ ಏಕಾಂಗಿಗಳೇ. ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಆಸ್ತಿ, ಒಡವೆ, ಹೆಣ್ಣು, ದುಡ್ಡು ಎಂದೆಲ್ಲ ಯಾವು ಯಾವುದೋ ಸಂಪಾದನೆಯಲ್ಲಿ ಈ ಅನಿವಾರ್ಯ ಒಂಟಿತನವನ್ನು ಮರೆಯಲು, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆಂದು ತೋರುತ್ತದೆ. ಒಳಗಿನ ಒಂಟಿತನವನ್ನು ಎದುರಿಸಿ ಒಪ್ಪಿಕೊಳ್ಳಲು ಕಲಿತರೆ ನಾವು ಸಂಪಾದಿಸುವ ಸಂಪತ್ತಿಗೂ ಅರ್ಥ ಬಂದೀತು. ಇನ್ನೂ ಬೇಕು ಅನ್ನುವುದಕ್ಕಿಂತ ಇಷ್ಟು ಸಾಕು ಅನ್ನಿಸುವುದು ಯಾವಾಗ?

  • ಚಿಂತನೆ
Ornamental seperator
  • Login or register to post comments
  • 595 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 8, 2005 - 7:32pm — tvsrinivas41

ಒಳ್ಳೆಯ ಮಾತುಗಳು

tvsrinivas41's picture

ಪಡಿ ಎಂದರೆ ಹಿಡಿ ಅಂತಲೂ ಆಗುತ್ತದೆ ಅಲ್ವಾ ಸಾರ್? ಶ್ರಾವಣ ಮಾಸದಲ್ಲಿ ಶನಿವಾರದಂದು ಮಕ್ಕಳು ದೇವರ ಮುಂದೆ ಬೇಡಿದಾಗ ತಂದೆ ತಾಯಿಗಳು ಒಂದು ಹಿಡಿ ಅಕ್ಕಿಯನ್ನು ಹಾಕುವರು. ಅದಕ್ಕೆ ಪಡಿ ಎತ್ತುವುದು ಎನ್ನುವರು.

ತುಂಬಾ ಒಳ್ಳೆಯ ಮಾತುಗಳು. ಇದನ್ನೆಲ್ಲಾ ನೋಡುತ್ತಿದ್ದರೆ ಎಲ್ಲ ಜ್ಞಾನಿಗಳೂ ಹೇಳುವ ಮಾತುಗಳು ಒಂದೇ ನಿಟ್ಟಿನಲ್ಲಿರುತ್ತವೆ. ನೀವು ಇದುವರೆಗೆ ಹೇಳಿರುವ ಮುಂದೆಯೂ ಹೇಳುವ ವಚನಗಳನ್ನೇಲ್ಲಾ ಉಳಿಸಿಟ್ಟುಕೊಳ್ಳಬೇಕು. ಹಿತವಾದ, ಸುಲಭವಾದ ಮಾತುಗಳಲ್ಲಿ ಜೀವನದ ಮರ್ಮವನ್ನು ತಿಳಿಸುತ್ತಿದ್ದೀರಿ.

ನಾವುಗಳು ಸುಮ್ಮನೆ ಸಂಪತ್ತು ಮಾಡಿಕೊಳ್ಳಲು ಹಾರಾಡುತ್ತೇವೆ. ಸಿಗದಾಗ ಗೋಳಾಡುತ್ತೇವೆ. ಜೀವನದ ಮರ್ಮವನ್ನರಿತರೆ ಎಷ್ಟು ಹಿತವಾಗಿರುತ್ತದೆ.

------
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನಸು
  • ಒಂದು ಕಹಿ ಅನುಭವ
  • ಏನಾಗಿದೆ ಉತ್ತರ ಭಾರತೀಯರಿಗೆ...
  • ರಾಜಕೀಯ
  • ನಮ್ಮ ಬಾಳು
Syndicate content

ಲೇಖಕರು

olnswamy's picture

ಪರಿಚಯ

ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator