ನಾವುಗಳೇ ಹೀಗೆ!
ಕೆಲಸ ಕಾರ್ಯಗಳನು ನಾಳೆಗೆ
ಮುಂದೂಡಿ ಕುಳಿತು
ಇಂದಿನಾ ದಿನವನ್ನು ಮುಗಿಸುವ
ನಾವುಗಳೇ ಹೀಗೆ
ದಿನವನ್ನು ಕಳೆಯುತ್ತೇವೆ
ಬೆಲೆ ನೀಡುವುದಿಲ್ಲ.
ತಿರುಳಿಲ್ಲದ ಘಟನೆಗಳನು
ಬಹು ಸೃಷ್ಟಿಮಾಡಿ
ಹುರುಳಿಲ್ಲದೆಯೆ ನೆನೆದು
ದುಃಖಿಸುವ ನಾವುಗಳೇ ಹೀಗೆ
ಹಿಂದಿನದ ತಿರುಚುತ್ತೇವೆ
ಹೊಸದ ಸೃಷ್ಟಿಸುವುದಿಲ್ಲ
ಮುಂದಿನಾಬದುಕಿಗೆ
ಕನಸಗೋಪುರವನ್ನು
ಮನಸಲ್ಲೇ ಕಟ್ಟುತ್ತಾ
ನಿದ್ರಿಸುವ ನಾವುಗಳೇ ಹೀಗೆ
ಭ್ರಮೆಯ ಲೋಕದಲಿ ಸಾಗುತ್ತೇವೆ
ಗುರಿ ತಲುಪುವುದೇ ಇಲ್ಲ.

- Login or register to post comments
- 433 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ನೀವಿದಕ್ಕೆ ಅಪವಾದವಾ?
ಈ ಮಾತುಗಳಿಗೆ ನೀವು ಅಪವಾದ ಅನ್ಸತ್ತೆ. ಅಲ್ವಾ?
ಚಿಂತನೆಯ ಧಾಟಿ ಮತ್ತು ನಿರೂಪಣೆ ಚೆನ್ನಾಗಿದೆ.
ಎರಡು ದಿನಗಳು ಏನನ್ನೂ ಪೋಸ್ಟಿಸದೇ ಕೆಲಸ ಮುಗಿಸಿದ್ರಿ ಅನ್ಸತ್ತೆ. ನಿಮ್ಮ ಪ್ರಕಾರ ನಾಳೆ ಮಾಡುವುದ ಈಗಲೇ ಮಾಡು ಸರಿ ಅನ್ಸತ್ತೆ ಅಲ್ವಾ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಟಿ: ನಾವುಗಳೇ ಹೀಗೆ!
ಈ ಕವನದಲ್ಲಿ ವ್ಯಕ್ತವಾಗಿರುವ ಭಾವಗಳು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ. ಆದರೆ ಲೋಕದ ವ್ಯವಹಾರಗಳೆ ಹಾಗೆ.
ಕವನವು ಬಹಳ ನೇರವಾಗಿ, ಹರಿತವಾಗಿ, ಚೆನ್ನಾಗಿಯು ಇದೆ.
ಓದುಗರ ಅನುಕೂಲಕ್ಕಾಗಿ ದಯವಿಟ್ಟು ಈ ವಿಷಯದ ಬಗ್ಗೆ ಗಮನ ಹರಿಸೋಣ
೧)"ಇಂದಿನಾ", "ಮುಂದಿನಾ" ಇವುಗಳ ಬದುಲು "ಇಂದಿನ", "ಮುಂದಿನ" ಎಂದು ಹೆಚ್ಚು ಪ್ರಯೋಗದಲ್ಲಿರುವ ರೂಪಗಳನ್ನು ಬಳಸೋಣ.
ಈ ಗೊಂದಲವನ್ನು ಆಸಕ್ತರು ದಯಮಾಡಿ ಪರಿಹರಿಸಿ.
ನಾವು ಎನ್ನುವುದೆ ಬಹುವಚನ, ಹೀಗಿರುವಾಗ ನಾವುಗಳು ಎಂದು ಏಕೆ ಹಲವು ಮಂದಿ ಬಳಸುವರು? ಇದೆ ರೀತಿ ತಾವುಗಳು, ಅವುಗಳು, ನಮ್ಮಗಳ...ಇತ್ಯಾದಿ....
ಧನ್ಯವಾದ.....
ನೀವು ಸರಿ
ನೀವು ಹೇಳುತ್ತಿರುವುದು ಸರಿ ಇದೆ. ವ್ಯಾಕರಣದಲ್ಲಿ ನಿಮಗೆ ಸರಿಸಾಟಿಯಾಗಿ ನಿಲ್ಲಬಲ್ಲವರು ಯಾರು ಅಂದ್ರೆ - ನಮ್ಮ ಸುನೀಲ ಅವರೇ.
ಒಂದು ಗಮನಿಸಿದ್ದೀರಾ? ಸಾಮಾನ್ಯವಾಗಿ ಕವಿಗಳು (ಕಪಿ ಅಂದರೂ ಅನ್ನಬಹುದು) ವ್ಯಾಕರಣದಲ್ಲೀ ವೀಕು. ತಲೆಗೆ ಬಂದದ್ದನ್ನು ತಡೆಯಲಾಗದೇ ವ್ಯಕ್ತಪಡಿಸಿಬಿಡ್ತಾರೆ. ಈ ರೀತಿ ಎಡವಿದ್ದನ್ನು ನಡಿಗೆಯ ಪರಿ ಗೊತ್ತಿರುವ ವೈಯಾಕರಣಿ ಮಾತ್ರವೇ ತಿಳಿಯುವುದು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಟಿ: ನೀವು ಸರಿ
ಒಂದು ಗಮನಿಸಿದ್ದೀರಾ? ಸಾಮಾನ್ಯವಾಗಿ ಕವಿಗಳು (ಕಪಿ ಅಂದರೂ ಅನ್ನಬಹುದು) ವ್ಯಾಕರಣದಲ್ಲೀ ವೀಕು. ತಲೆಗೆ ಬಂದದ್ದನ್ನು ತಡೆಯಲಾಗದೇ ವ್ಯಕ್ತಪಡಿಸಿಬಿಡ್ತಾರೆ. ಈ ರೀತಿ ಎಡವಿದ್ದನ್ನು ನಡಿಗೆಯ ಪರಿ ಗೊತ್ತಿರುವ ವೈಯಾಕರಣಿ ಮಾತ್ರವೇ ತಿಳಿಯುವುದು.
http://asraya.net
ಯಾರಿವರು. ಅವರನ್ನು ನಮ್ಮ ಸಂಪದಕ್ಕೆ ಸದಸ್ಯರಾಗಲು ಮನವೊಲಿಸಿ ಅವರನ್ನು ನಮ್ಮ ಮಹೇಶರವರೊಡನೆ ಚರ್ಚೆ ಏರ್ಪಡಿಸೋಣ. ಅಂದಹಾಗೆ ನನ್ನ ಹೆಸರು ಕೂಡ ಸುನಿಲ ಆಗಿರುವುದರಿಂದ, ಸ್ಪಷ್ಚತೆಗಾಗಿ ಹೇಳಿಬಿಡುತ್ತೇನೆ. ನಾನು ವ್ಯಾಕರಣ ಪಂಡಿತ ಖಂಡಿತ ಅಲ್ಲ. ನಿಮಗೆ ಗೊತ್ತಿರುವ ಹಾಗೆ ನನಗೂ ಕೂಡ ಲೋಪ, ಆಗಮ, ಆದೇಶ ಗಳಷ್ಚೇ ಗೊತ್ತಿರೋದು. ಬಹುಶಃ ಓಎಲ್ಎನ್ ರವರು ಸಹಾಯಕ್ಕೆ ಬಂದು ಸಮಸ್ಯೆಗಳನ್ನು ಬಿಡಿಸಬಹುದು.
ಉ: ಟಿ: ನೀವು ಸರಿ
ನನ್ನ ಹೆಸರು ಇಲ್ಲಿ ಉಲ್ಲೇಖವಾಗಿರುವುದರಿಂದ...ಒಂದು ಮಾತು.
ಈಗಿರುವ ಅಗಾಧ ಕನ್ನಡ ಮತ್ತು ಸಂಸ್ಕೃತಗಳ ಸಾಹಿತ್ಯವೆಂಬ ದಟ್ಟಡವಿಯ ಒಳಹೊಕ್ಕಿ ನೋಡಲು ವ್ಯಾಕರಣವೆ ದಾರಿದೀಪ, ಮಾರ್ಗಸೂಚಿ. ಚರ್ಚೆ ಮತ್ತು ತರ್ಕಗಳಿಂದಲೆ ಎಲ್ಲ ಗೊಂದಲಗಳು ಪರಿಹಾರವಾಗುವುವು.
ಇರಲಿ... ಆ ಮಹಾಶಯರಿಂದ ನಾವು ಹೊಸ ಸಂಗತಿಗಳನ್ನು ಕಲಿಯೋಣ.
ಟಿ:ನಂಬಿಕೆಗಳು
ತಿರುಳಿಲ್ಲದ ಘಟನೆಗಳನು
ಬಹು ಸೃಷ್ಟಿಮಾಡಿ
ಹುರುಳಿಲ್ಲದೆಯೆ ನೆನೆದು
ದುಃಖಿಸುವ ನಾವುಗಳೇ ಹೀಗೆ
ಹಿಂದಿನದ ತಿರುಚುತ್ತೇವೆ
ಹೊಸದ ಸೃಷ್ಟಿಸುವುದಿಲ್ಲ
ಸುಮಾರು ವಾರಗಳ ಹಿಂದೆ ಚೆನ್ನೈ ವಿಮಾನ ನಿಲ್ದಾಣದಲ್ಲಿ, ಎರಡು ಘಂಟೆ ಕಾಯಬೇಕಾಗಿ ಬಂದು, ಮಾಡಲು ಏನೂ ತೋಚದೆ ಕುಳಿತಿದ್ದಾಗ, ಜೊತೆಗೆ ತೆಗೆದುಕೊಂಡು ಹೋಗಿದ್ದ ಮಂಕುತಿಮ್ಮನ ಕಗ್ಗ ಓದುತ್ತಾ ಕುಳಿತೆ. ಆಗ ಓದಿದ ಒಂದು ಕಗ್ಗ ಇಲ್ಲಿ ಪ್ರಸ್ತತವೆನಿಸುತ್ತಿದೆ.
ಕರಾರುವಕ್ಕಾದ ಪದ್ಯ ನೆನಪಿಲ್ಲ. ಅರ್ಥವಷ್ಟೇ ನೆನಪಿನಲ್ಲಿದೆ.
ನಮಗೆ ಈ ಕಾಲದಲ್ಲಿ ಅಸಹನೆ, ದುಃಖ ಮುಂತಾದಲು ಯಾಕೆ ಜಾಸ್ತಿಯಾಗಿದೆಯೆಂದರೆ...ನಮ್ಮಲ್ಲಿ ನಂಬಿಕೆಗಳಿಲ್ಲ. ಹಿಂದಿನ ನಂಬಿಕೆಗಳಲ್ಲಿ ನಮಗೆ ವಿಶ್ವಾಸವಿಲ್ಲ. ಹಿಂದಿನವು ಹೋದರೆ ಹೋಗಲಿ ಹೊಸತಾದ ನಂಬಿಕೆಗಳೇನಾದರು ಇವೆಯೇ ಎಂದು ಪರೀಕ್ಷಿಸಿದರೆ ಅದೂ ಇಲ್ಲ. ಹೀಗಾಗಿ ನಂಬಿಕೆಗಳಿಲ್ಲಿದೆ ಬದುಕುತ್ತಿರುವ ನಮ್ಮಲ್ಲಿ ದುಗುಡ ದುಮ್ಮಾನಗಳು ಹೆಚ್ಚಾಗಿವೆ.
ಇಲ್ಲಿ ನೀವು ಹೇಳಿದ ಹಿಂದಿನದ ತಿರುಚುತ್ತೇವೆ - ಬಹಳ ಸಮಯೋಚಿತವಾಗಿದೆ. ಈಗ ನಮಗೆ ಸತ್ಯವೇನೆಂಬುದೇ ತಿಳಿಯುವುದಿಲ್ಲ. ಇತಿಹಾಸವನ್ನು ಎಷ್ಟು ತಿರುಚಿ ಹಾಳು ಮಾಡಬಹುದೋ ಅಷ್ಟು ಹಾಳು ಮಾಡಿದ್ದೇವೆ. ನಮ್ಮ ಇತಿಹಾಸದ ಸಂಶೋಧನೆಗಳ ಬಗ್ಗೆಯೇ ನಮಗೆ ಹೆಮ್ಮೆಯಿಲ್ಲ. ಅದು ಪುಲಿಕೇಶಿ ಇರಬಹುದು ಅಥವಾ ಚಿದಾನಂದಮೂರ್ತಿಯವರು ಬೆಳಕು ಚೆಲ್ಲಿದ ಸಂಶೋಧನೆಗಳಿರಬಹುದು. ನಮ್ಮವರ ಬಗ್ಗೆ ಹೆಮ್ಮೆ ಪಡದೆ ಬೇರೆಯವರನ್ನು ಹೊಗಳುವುದರಲ್ಲೇ ಕಾಲ ಕಳೆಯುತ್ತೇವೆ.
ಇದನ್ನು ನಿಲ್ಲಿಸಿ ನಮ್ಮವರ ಬಗ್ಗೆ ಹೆಮ್ಮಪಡೋಣ. ನಾವೂ ಕೂಡ ಏನಾದರು ಸಾಧಿಸೋಣ.
ನೋಡಿ ಸಂಪದವೇ ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ.