20
June
2013

ನಿರ್ಧಾರ

November 3, 2008 - 2:19pm
ramaswamy

ಅಂಗೈಗೆ ಅಂಗೈಯ ಮಸೆದು

ಹುಟ್ಟಿದ ಶಾಖವ ಕಣ್ಣಿಗೊತ್ತಿಕೊಳ್ಳುವ ಅಪ್ಪ

ಬೆರಳಿಗೆ ಬೆರಳ ಹೊಸೆದು

ಉರಿಯುವ ಸೂರ್ಯನನೂ ದಿಟ್ಟಿಸುತ್ತಾನೆ.......

 

ಹೀಗೆ ಇರದ ಶಾಖವ ಹುಟ್ಟಿಸಿ

ಹಾಗೇ ಉರಿವ ಸೂರ್ಯನುರಿಯನೂ ತಗ್ಗಿಸಿ

ಬ್ರಹ್ಮಾಂಡದ ಸಂತಸವನ್ನೆಲ್ಲ

ತನ್ನೊಳಕ್ಕೆ ಎಳೆದುಕೊಂಡು ಸುಖಿಸುತ್ತಾನೆ......

 

ಕಣ್ಣು, ಕಿವಿ, ಮೂಗು, ತುಟಿ, ನಾಭಿ

ಇತ್ಯಾದಿ ಸೂಕ್ಷ್ಮಗಳನ್ನೆಲ್ಲ ಮುಟ್ಟಿಕೊಳ್ಳುತ್ತಲೇ

ಪ್ರತಿ ಆಚಮನಕ್ಕೂ ಮತ್ತೆ ಮತ್ತೆ

ತನ್ನೊಳಗನ್ನೂ ಮೀಯಿಸುತ್ತಲೇ ಇದ್ದಾನೆ....

 

ನಾನು ಏನೆಲ್ಲ ಭೌತಿಕದ ಸವಲತ್ತುಗಳಿದ್ದರೂ

ನನ್ನೊಳಕ್ಕಿಳಿಯದ ನನ್ನದೇ ಪಾತ್ರವನ್ನು ದ್ವೇಷಿಸುತ್ತಿದ್ದೇನೆ......

 

ಅದಕ್ಕೇ ನನ್ನ ಮಗ ಅವನಜ್ಜನ ಜೊತೆಗಿರುವಷ್ಟೂ ಹೊತ್ತು

ಅವನನ್ನು ಈ ಇಹದ ಲೌಕಿಕ್ಕೆಳೆಯದಿರಲು ನಿರ್ಧರಿಸಿದ್ದೇನೆ!

 *  *   *   *   *   *   *

 

 

 

ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Jayalaxmi.Patil on
ಚಂದದ ಕವನ ಸರ್. ಜಯಲಕ್ಷ್ಮೀ.ಪಾಟೀಲ್.

Submitted by hariharapurasridhar on
ಬ್ರಹ್ಮಾಂಡದ ಸಂತಸವನ್ನೆಲ್ಲ ತನ್ನೊಳಕ್ಕೆ ಎಳೆದುಕೊಂಡು ಸುಖಿಸುತ್ತಾನೆ...... ಎಂತಾ ಸತ್ಯವನ್ನು ಹೇಳಿಬಿಟ್ಟಿರಿ! ನಮ್ಮ ಋಷಿ ಮುನಿಗಳು ಇಂದಿನ ವಿಜ್ಞಾನಿ ಗಳಿಗಿಂತಾ ಏನು ಕಮ್ಮಿ ಇರಲಿಲ್ಲ. ಆನಂದ ವಾಗಿರಲು ಏನೇನು ಬೇಕೋ ಅದನ್ನೆಲ್ಲಾ ನಮಗೆ ಕೊಟ್ಟಿದ್ದಾರೆ. ನಿಮ್ಮ ತಂದೆಯಂತವರು ಅದರ ಆನಂದ ಪಡುತ್ತಿದ್ದಾರೆ. ವಿಚಾರವಾದಿಗಳೆನಿಸಿ ಕೊಂಡವರು ಅದರಲ್ಲೇನಿದೆ! ಅಂತಾ ಕಾಲ ಕಳೀತಾ ದಿನಕ್ಕೆ ಹತ್ತು ಮಾತ್ರೆ ನುಂಗಿ ಜೀವನ ಮಾಡ್ತಾ ಇದ್ದಾರೆ! ಯಾರು ಸುಖಿಗಳು? ನಿಮ್ಮ ಮಗನಿಗೆ ಡಿಸ್ಟರ್ಬ್ ಮಾಡ ಬೇಡಿ, ಸಾಧ್ಯವಾದಷ್ಟು ಸಮಯ ಅವರ ಅಜ್ಜನ ಜೊತೆ ಕಾಲ ಕಳೆಯಲಿ.