ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ನಾ ಕಂಡ ಹೋಲಿ

March 15, 2006 - 7:27am — tvsrinivas41

ಈ ಸಂದರ್ಭದಲ್ಲಿ ನನಗೆ ಶಾಂತಾರಾಮ್ ರವರ ಹಿಂದಿಯ ನವರಂಗ್ ಚಿತ್ರದ ಸಂಧ್ಯಾರವರ ನೃತ್ಯ ಜ್ಞಾಪಕ ಬರುತ್ತಿದೆ. ಆದರೆ ಅಂದಿನ ಹೋಲಿ ಎಲ್ಲಿ, ಇಂದಿನ ಹೋಲಿ ಎಲ್ಲಿ? ಸಾಮ್ಯತೆ ಇದೆಯೇ?

ಈಗೀಗ ಹೋಲಿ ಆಚರಣೆಯಲ್ಲಿ ಮಾದಕತೆ ತುಂಬಿದೆ
ಕುಡಿಯಲು ಭಾಂಗ್ (ಮತ್ತೇರಿಸುವ ಪೇಯ) ಬೇಕೇ ಬೇಕು.
ಪ್ರಾಪ್ತ ವಯಸ್ಕ ಗಂಡು ಹೆಣ್ಣುಗಳು ಬೀದಿ ಬೀದಿಯಲ್ಲಿ ರಂಗು ರಂಗಿನ ನೀರಿನಲ್ಲಿ ತೊಯ್ದು ತೊಪ್ಪೆಯಾಗಿ ಚೆಲ್ಲಾಟವಾಡಿ ನೋಡುಗರನ್ನೂ ಉತ್ತೇಜಿಸುವ ನೋಟ ಸಾಮಾನ್ಯ.

ಈ ವರ್ತನೆ ನಿಜವಾಗಲೂ ಈ ಹಬ್ಬದ ದ್ಯೋತಕವೇ?

ಹಬ್ಬ ಬರಲು ಕಾಲೋನಿ ಮಂದಿಯೆಲ್ಲ ಸಂತಸದಿ ನಲಿಯುತಿಹರು
ಹಿರಿಯ ಕಿರಿಯ ಗಂಡು ಹೆಣ್ಣು ಭೇದವಿಲ್ಲದೆ ಕುಣಿಯುತಿಹರು

ಬಣ್ಣಗಳ ಎರಚಿ ಓಕುಳಿಯಲಿ ನಲಿದಾಡಿ
ಕಾಮ ಮದ ಮೋಹ ಸ್ವಾರ್ಥಗಳ ಬದಿಗೊತ್ತಿ
ಬೇಕಿಲ್ಲದ ಪೈಶಾಚೀ ಕೃತ್ಯಗಳ ದಮನಿಸಿ
ಸಮನ್ವಯೀ ಜೀವನಕೆ ದಾರಿ ತೋರಿಪ ಹೋಲಿ

ಮದನನ ಸುಟ್ಟು ಬೂದಿ ಮಾಡಿದ ಮುಕ್ಕಣ್ಣ
ಪ್ರಹ್ಲಾದನ ಸುಡಲು ಹೋದ ಹೋಲಿಕಾಳ ಮದಿಸಿದ ದಿನ
ಪರಮ ಪುರುಷ ಕೃಷ್ಣ ಚೈತನ್ಯರು ಹುಟ್ಟಿದ ದಿನ
ವೃಂದಾವನದಿ ಶ್ರೀ ಕೃಷ್ಣ ನಲಿದ ದಿನ ಈ ಹೋಲಿ

ಆದರೇನು! ಇಂಥ ನಾಡಿನಲಿ ನೋಡುವದೇನು
ಬೀದಿ ಬೀದಿಗಳಲಿ ಪಡ್ಡೆ ಹುಡುಗ ಹುಡುಗಿಯರು
ರುಂಡ ಮುಂಡಗಳಿಗೆ ಬಣ್ಣದ ನೀರು ಸುರುವಿಕೊಂಡು
ಕಾಮ ಮೋಹಗಳ ಪ್ರದರ್ಶಿಸುವ ಈ ದಿನ ಹೋಲಿ

  • ಕಾವ್ಯ ಮತ್ತು ಕವನ
~.~
  • Login or register to post comments
  • 597 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 15, 2006 - 10:15am — ಮಹೇಶ ಭೋಗಾದಿ

ಕಾಮನ ಹುಣ್ಣಿಮೆ ಹಬ್ಬ

ಮಹೇಶ ಭೋಗಾದಿ's picture

ಎಲ್ಲರಿಗೆ ಕಾಮನ ಹುಣ್ಣಿಮೆ ಹಬ್ಬದ (ಹೋಳಿಯ) ಹೃತ್ಪೂರ್ವಕ ಅಭಿನಂದನೆಗಳು.

ನಮ್ಮ ಹಳ್ಳಿಗಳಲ್ಲಿ ಈ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವರು. ಈ ಆಚರಣೆಯನ್ನು ತೋರಿಸುವ ಡಾ|| ರಾಜಕುಮಾರರು ನಟಿಸುವ ಒಂದು ಚಲಚ್ಚತ್ರವಿದೆ. ನನಗೆ ಅದರ ಹೆಸರು ನೆನಪಿಗೆ ಬರುತ್ತಿಲ್ಲ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2006 - 10:26am — tvsrinivas41

ದೂರದ ಬೆಟ್ಟ

tvsrinivas41's picture

ಅಣ್ಣಾವ್ರು ಮತ್ತು ಭಾರತಿ ನಟಿಸಿರುವ ಆ ಚಿತ್ರದ ಹೆಸರು ದೂರದಬೆಟ್ಟ. ೭೦ ರ ದಶಕದ ಚಲನಚಿತ್ರ.

ಕಾಮಣ್ಣ ಮಕ್ಕಳು ಕಳ್ಳ ಸೂಳೆಮಕ್ಕಳು
ಏನನ್ನು ಕದ್ದರು ಸೌದೆ ಬೆರಣಿ ಕದ್ದರು
ಅಡಿಕೆ ಗೋಟು ಪೊರಕೆ ಏಟು
...

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2006 - 10:37am — Sunil Jayaprakash

ಕಾಳಮ್ಮ ಭದ್ರಕಾಳಮ್ಮ

Sunil Jayaprakash's picture

ಅದೇ ಹಾಡಿನಲ್ಲಿ ಅದೇನೋ ಕಾಳಮ್ಮ ಭದ್ರಕಾಳಮ್ಮ ಅಂತ ಸಾಲೂ ಬರುತ್ತಲ್ವೇ???? ಇದು ಸಿನಿಮಾ ಹಾಡಿನಲ್ಲಿ ಮಾತ್ರ. ಕಾಮನ ಹಬ್ಬದ ವೇಳೆ ಹಾಡುವ ಕಾಮಣ್ಣ ಮಕ್ಕಳು ಗೀತೆಯಲ್ಲಿ ಇಲ್ಲ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2006 - 11:32am — ಮಹೇಶ ಭೋಗಾದಿ

ಕಾಮಣ್ಣ ಮಕ್ಕಳು ಗೀತೆ

ಮಹೇಶ ಭೋಗಾದಿ's picture

ಈ ಹಾಡಿನ ಮೂಲ ಗ್ರಾಮ್ಯ ಸ್ವರೂಪವು ನಿಮ್ಮ ಬಳಿ ಇದ್ದರೆ ದಯವಿಟ್ಟು ಇಲ್ಲಿ ಬರೆಯಿರಿ. ಅಥವಾ ಆ ಹಾಡು ಬೇರೆ ಅಂತರ್ಜಾಲ ತಾಣದಲ್ಲಿದ್ದರೆ ಅದರ ಕೊಂಡಿಯನ್ನು ಕೊಡಿ...

ನಮ್ಮ ಸಂಸ್ಕೃತಿಯು ಎಷ್ಟು ವಿಶಿಷ್ಟವು, ವಿಭಿನ್ನವು ಎಂದು ಇಲ್ಲಿ ತಿಳಿಯಬಹುದು.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2006 - 11:43am — tvsrinivas41

ಇಲ್ಲಿಗೆ ತಾಗಿಕೊಳ್ಳಿ

tvsrinivas41's picture

ಆ ಹಾಡನ್ನು ಕೇಳಲು ಇಲ್ಲಿಗೆ ತಾಗಿಕೊಳ್ಳಿ

http://www.udbhava.com/udbhava/songs.jsp?id=355

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2006 - 11:48am — suchara

ಬಾಲ್ಯದ ಸವಿ ನೆನಪು

suchara's picture

ಕಾಮಣ್ಣ ಮಕ್ಕಳೆ ...ಓದಿದಾಗ, ಬಾಲ್ಯದ ಒಂದು ಘಟನೆ ನೆನಪಿಗೆ ಬಂದಿತು.

ಮಕ್ಕಳು ರಸ್ತೆಯಲ್ಲಿ ಈ ಹಾಡು ಹೇಳಿಕೊಂಡು ಹೋಗುತ್ತಿದ್ದಾಗ ಕಿಡಿಗೇಡಿಯೊಬ್ಬನ ಉಪದೇಶದಂತೆ - ಕಾಮಣ್ಣ ಎನ್ನುವ ಬದಲು, ಶ್ಯಾಮಣ್ಣ ಮಕ್ಕಳೆ.... ಎಂದು ಅರಚಲು ಪ್ರಾರಂಭಿಸಿದರು. ಆಗ ಕೋಪಗಂಡ ನಮ್ಮ ಬೀದಿಯ ಶ್ಯಾಮಣ್ಣ ನವರು ಆ ಮಕ್ಕಳನ್ನು ಅಟ್ಟಿಸಿ ಕೊಂಡು ಹೋಗಿ ಹೊಡೆದು ಬಂದರು Eye-wink

ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಮ್ಯತೆ
  • ಸ್ರೀವಾದ ಮತ್ತು ಸಮಾಜ
  • ಎಲ್ಲಿ ಎಲ್ಲಿ ತೋರಣ , ಅಲ್ಲಿ ಅಲ್ಲಿ ಹೂರಣ !
  • ಶವ
  • ಮುಂಬೈ ಮಳೆ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
  • malenadiga
    ಉ: 'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಎಲ್ಲಿ ಸಿಗಬಹುದು?
    September 8, 2008 - 2:15pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 163 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator