ಒಂದು ಹಳೆಯ ಒಗಟು
ಇದೊಂದು ತುಂಬ ಹಳೆಯ ಒಗಟು. ನಾನು ಶಾಲೆಯಲ್ಲಿ ಕೇಳಿದ್ದು. ಒಂದಾನೊಂದು ಕಾಲದಲ್ಲಿ, ನಾನು ತೈವಾನಿನಲ್ಲಿ ಇದ್ದಾಗ, soc.culture.indian.karnataka ಎಂಬ newsgroupನಲ್ಲಿ ನಾನು ಇದನ್ನು ಪೋಸ್ಟಿಸಿದ್ದೆ.
------------
ಈರಾರು ತಾರೆಯ ತಾಯಿಯ
ತಮ್ಮನ ಇರಿದನ ಅಣ್ಣನ
ಅಯ್ಯನ ವಾಹನವೇ
ಹೋ ಹೋ ಎಂದನು.
------------
ಏನಿದು?
ಸಿಗೋಣ,
ಪವನಜ
ನನ್ನ ಬ್ಲಾಗ್

- Login or register to post comments
- 1193 hits
- Email this page





RSS:
ಪ್ರತಿಕ್ರಿಯೆಗಳು
ಊಹೆ
ಬಸವನೇ?? "ಇರಿದನ" ಪದದ ಅರ್ಥ ಗೊತ್ತಾಗುತ್ತಿಲ್ಲ. ಯಾರದೋ ದೇವತೆಯ ವಾಹನ ಇರಬೇಕು ಎಂದುಕೊಂಡಿದ್ದೀನಿ. ಸರಿಯೇ??
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಊಹೆ
> ಬಸವನೇ??
ಅಲ್ಲ.
> "ಇರಿದನ" ಪದದ ಅರ್ಥ ಗೊತ್ತಾಗುತ್ತಿಲ್ಲ.
ಇರಿದನ ಅಂದರೆ ಕೊಂದವನ
> ದೇವತೆಯ ವಾಹನ ಇರಬೇಕು ಎಂದುಕೊಂಡಿದ್ದೀನಿ. ಸರಿಯೇ??
ಇನ್ನಷ್ಟು ಪ್ರಯತ್ನಿಸಿ. "ಉತ್ತರ"ಕ್ಕೆ ಹತ್ತಿರದಲ್ಲೇ ಇದ್ದೀರಾ.
ಸಿಗೋಣ,
ಪವನಜ
Re: ಒಂದು ಹಳೆಯ ಒಗಟು
ಉತ್ತರ:
ಈರಾರು = ಹನ್ನೆರಡು
ಈರಾರು ತಾರೆ = ಹನ್ನೆರಡನೆಯ ತಾರೆ = ಉತ್ತರೆ
ಈರಾರು ತಾರೆಯ ತಾಯಿ = ಉತ್ತರೆಯ ತಾಯಿ = ಸುಧೇಷ್ಣೆ
ಈರಾರು ತಾರೆಯ ತಾಯಿಯ ತಮ್ಮ = ಕೀಚಕ
ತಮ್ಮನ ಇರಿದನ = ಕೀಚಕನ ಕೊಂದವನ = ಭೀಮನ
ಅಣ್ಣನ = ಯುಧಿಷ್ಠಿರನ
ಅಯ್ಯನ = ಯಮನ
ವಾಹನವೇ = ಕೋಣ
ಸಿಗೋಣ,
ಪವನಜ
ಇನ್ನೊಂದು ಒಗಟು - ಅದೇ ಉತ್ತರ
ಯಾರಿಗಾದರು ಬೈಯಬೇಕೆಂದರೆ.
ಅಗ್ನಿಯ ಸಖನ ಸುತನ ಅಗ್ರಜನ ಪಿತನ ವಾಹನ ನೀನೆ
ಸುಚರ
ಇಲಿಯ ಬಾಲ
ಐಶ್ವರ್ಯ ರೈಯ ಇನ್ನೊಂದು ಹೆಸರು ಗೊತ್ತೆ? ಅದು-
ಪಾರ್ವತಿಪುತ್ರ ವಾಹನ ಶತ್ರು ನೇತ್ರೆ
ಸಿಗೋಣ,
ಪವನಜ
-----------
Vishva Kannada
Think globally, Act locally
ಅರ್ಥವಾಗಲಿಲ್ಲ - ಬಿಡಿಸಿಹೇಳಿ
ಐಶ್ವರ್ಯ ರೈ - ಉರಗನೇತ್ರೆಯೇ ?
-ಸುಚರ
Re: ಅರ್ಥವಾಗಲಿಲ್ಲ - ಬಿಡಿಸಿಹೇಳಿ
-ಸುಚರ
ಅಲ್ಲ. ಅವಳು ಬೆಕ್ಕಿನ ಕಣ್ಣುಳ್ಳವಳು.
ಪಾರ್ವತಿಪುತ್ರ = ಗಣಪ
ಅವನ ವಾಹನ = ಇಲಿ
ಅದರ ಶತ್ರು = ಬೆಕ್ಕು
ಅದರ ಕಣ್ಣುಳ್ಳವಳು = ಐಶ್ವರ್ಯ ರೈ
ಸಿಗೋಣ,
ಪವನಜ
Re: ಅರ್ಥವಾಗಲಿಲ್ಲ - ಬಿಡಿಸಿಹೇಳಿ
ಪಾರ್ವತಿಪುತ್ರ = ಗಣಪ
ಅವನ ವಾಹನ = ಇಲಿ
ಅದರ ಶತ್ರು = ಬೆಕ್ಕು
ಅದರ ಕಣ್ಣುಳ್ಳವಳು = ಐಶ್ವರ್ಯ ರೈ
ಅಬ್ಬ!!
ನನಗೆ ಕೂಡ ಮೊದಲು ಹಾವೆಂದೆ ಅನ್ನಿಸಿತು.
ಪವನಜರ ಸಮಸ್ಯೆಗಳು ಬಹಳ ಸ್ವಾರಸ್ಯಕರವಾಗಿವೆ!!