ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗಾದೆಗಳು - ಗಂಡ-ಹೆಂಡತಿ ! (ಗಂಡಸು-ಹೆಂಗಸು- ಸಂಬಂಧಪಟ್ಟ ಗಾದೆಗಳು)

ಕಳೆದ ಬಾರಿ ಸುಮ್ಮನೆ ೧೦ ಗಾದೆಗಳನ್ನು ಬರೆದಿದ್ದೆ. ಈ ಸಾರಿ ಒಂದು ವಿಷಯವನ್ನಿಟ್ಟುಕೊಂಡು ಅದರ ಮೇಲೆ ಗೊತ್ತಿರುವ ಗಾದೆಗಳನ್ನು ಬರೆದರೆ ಇನ್ನೂ ಹೆಚ್ಚು ಮಜ ಸಿಗುತ್ತೆ ಅಂತ ನನ್ನ ಅನಿಸಿಕೆ. ನೀವೆಲ್ಲಾ ಏನಂತೀರಾ? ಅಂದಹಾಗೆ, ನನ್ನ ಗಾದೆಗಳು-ಅರಿವು ಲೇಖನಕ್ಕೆ ಪ್ರತಿಕ್ರಿಯಿಸಿದ ನಿಮಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು! ಕೆಳಗಿದೆ ಇನ್ನಷ್ಟು ಗಾದೆಗಳು!

೧. ಗಂಡ-ಹೆಂಡತಿ ಜಗಳ ಉಂಡು ಮಲಗೂವರೆಗೆ.

೨. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು.

೩. ಗಂಡಂಗಿಂತ ಹೆಂಡತಿ ಮಂಡೋದರಿ.

೪. ಹಳೇ ಚಪ್ಪಲಿ, ಹೊಸ ಹೆಂಡತಿ ಕಚ್ಚಲ್ಲ.

೫. ಹಳೇ ಗಂಡನ ಪಾದವೇ ಗತಿ.

೬. ಅಮ್ಮನವರು ಪಟ್ಟಕ್ಕೆ ಬರೋ ಹೊತ್ತಿಗೆ, ಅಯ್ಯನವರು ಚಟ್ಟಕ್ಕೆ ಏರಿದ್ರು.

೭. ಮದುವೆಯಾಗೋ ಬ್ರಾಹ್ಮಣ ಅಂದ್ರೇ, ನೀನೇ ನನ್ನ ಹೆಂಡತಿ ಅಂದನಂತೆ.

೮. ಗಂಡಸಿಗ್ಯಾಕೆ ಗೌರಿ ಚಿಂತೆ?

೯. ಇಷ್ಟು ಕಂಡ್ರೇ, ಕೃಷ್ಣಭಟ್ಟಂಗೆ ಮುಪ್ಪಿನಕಾಲಕ್ಕೆ ಮೂರು ಜನ ಹೆಂಡ್ರು.
೧೦. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು.

ಓದುಗರೇ, ನಿಮಗೆ ತಿಳಿದಿರುವ ( ಈ ವಿಷಯದಲ್ಲಿ) ಇನ್ನಷ್ಟು ಗಾದೆಗಳನ್ನು ಪಟ್ಟಿ ಮಾಡುವಿರಾ?

Your rating: None Average: 2.5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
amg's picture

ಒಲ್ಲದ ಗ೦ಡನಿಗೆ ಮೊಸರಿನಲ್ಲೂ ಕಲ್ಲು

kudithini's picture
3

* ಹೆಂಡತಿ ಗಂಡನನ್ನು ಕ್ಷಮಿಸುವುದು ಆಕೆ ತಪ್ಪು ಮಾಡಿದಾಗ ಮಾತ್ರ.
* ಹೆಂಡತಿ ಎಂದರೆ ಮೊಬೈಲ್ ಇದ್ದಹಾಗೆ; ಕಿರಿಕಿರಿ-ಖರ್ಚುಎಂದು ಗೊತ್ತಿದ್ದರೂ ಇಟ್ಟುಕೊಳ್ಳುತ್ತೇವೆ.
* ಗಂಡನನ್ನು ಮೆಚ್ಚಿಸಲು ಹೆಂಡತಿ ಆತನನ್ನೇ ಹೊಗಳಬೇಕಿಲ್ಲ; ಆತ ಬರೆದ ನವ್ಯ ಕಾವ್ಯವನ್ನು ಹೊಗಳಿದರೂ ಸಾಕು.
* ಹೆಂಡತಿ ಮಾತು ಕೇಳುವುದೆಂದರೆ ಅವಮಾನ ಎಂದು ಕೆಲವು ಗಂಡಸರು ಭಾವಿಸುತ್ತಾರೆ;
ಬೇರೆಯವರ ಹೆಂಡತಿ ಮಾತು ಕೇಳುವಾಗ ಹೀಗೆನಿಸುವುದಿಲ್ಲ.
* ಗಂಡ-ಹೆಂಡತಿ ಸಂಬಂಧ ಅನ್ಯೋನ್ಯವಾಗಿದ್ದರೆ ಅದನ್ನು ನೀರಸ ದಾಂಪತ್ಯ ಎನ್ನಬಹುದು.
* ಬಹುತೇಕ ಹೆಂಗಸರು ತಮ್ಮ ಗಂಡನಿಗಿಂತ ಕನ್ನಡಿಯನ್ನೇ ಹೆಚ್ಚು ಪ್ರೀತಿಸುತ್ತಾರೆ. ಕಾರಣ ಅದರ ಮುಂದೇ ಹೆಚ್ಚು ಸಮಯ ಕಳೆಯುತ್ತಾರೆ
* ಗಂಡಸರು ಸುಳ್ಳು ಹೇಳಲು ಹೆಂಗಸರೇ ಕಾರಣ. ಏಕೆಂದರೆ ಅವರು ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
* ಪರಿಪೂರ್ಣ ಗಂಡ ಬೇಕೆಂದು ಎಂದೂ ಬಯಸದವಳೇ ಪರಿಪೂರ್ಣ ಹೆಂಡತಿ.
* ಹೆಂಡತಿ ತವರು ಮನೆಗೆ ಆಗಾಗ ಹೋಗುತ್ತಾಳೆಂದರೆ ತಾಯಿ ಮೇಲಿನ ಪ್ರೀತಿಯಿಂದಲ್ಲ; ಗಂಡನ ಮೇಲಿನ ಕೋಪದಿಂದ.
* ಒಳ್ಳೆಯ ಗುಣ, ಬುದ್ಧಿವಂತಿಕೆ, ಸೌಂದರ್ಯ ಈ ಮೂರು ಗುಣಗಳುಳ್ಳ ಹೆಂಡತಿ ಬೇಕಾದರೆ ಮೂರು ಸಲ ಮದುವೆಯಾಗಬೇಕಾಗುತ್ತದೆ.
* ತಾಯಿಯಾಗಲು ಎಲ್ಲ ಸ್ತ್ರೀಯರು ಅವಕಾಶವನ್ನು ಎದುರು ನೋಡುತ್ತಾರೆ; ಆದರೆ ಅವಕಾಶ ಸಿಕ್ಕಿತೆಂದು ತಾಯಿಯಾಗಬಾರದು.
* ಮೂರ್ಖನಾದವನು ಹೆಂಡತಿಗೆ "ಬಾಯ್ಮುಚ್ಚು"ಎನ್ನುತ್ತಾನೆ; ಬುದ್ಧಿವಂತನಾದವನು ಹೆಂಡತಿಗೆ "ಬಾಯಿ ಮುಚ್ಚಿದಾಗ ನಿನ್ನ ತುಟಿ ಕೆಂಪಾಗಿ
ತುಂಬ ಸುಂದರವಾಗಿ ಕಾಣುತ್ತೀಯ" ಎನ್ನುತ್ತಾನೆ.
* ಅಮೆರಿಕದಲ್ಲಿ ಹುಡುಗಿಯರು ಗಂಡನನ್ನು ಹುಡುಕಲು ಕಷ್ಟಪಡುವುದಿಲ್ಲ; ಗಂಡನಿಂದ ವಿಚ್ಛೇದನ ಪಡೆಯುವಾಗ ವಕೀಲನನ್ನು
ಹುಡುಕಲು ಕಷ್ಟಪಡುತ್ತಾರೆ.
* ಯಶಸ್ವಿ ಗಂಡಸಿನ ಹಿಂದೆ ಒಬ್ಬಳು ಹೆಂಗಸಿರುತ್ತಾಳೆ; ಅವನತಿಯತ್ತ ಸಾಗುವವನ ಹಿಂದೆ ಇಬ್ಬರು.
* ಎಲ್ಲರಿಗೂ ಮನೆ, ಹೆಂಡತಿ ಇರಬೇಕು. ಕನಿಷ್ಠ ಪಕ್ಷ ಇವೆರಡಾದರೂ ಸ್ವಂತದ್ದಾಗಿರಬೇಕು.
* ಗಂಡ ಹೆಂಡತಿ ಪ್ರೀತಿ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ; ಎಲ್ಲರಿಗೂ ಗೊತ್ತಾಗುವುದು ಜಗಳ ಮಾಡಿದರೆ ಮಾತ್ರ.
* ಹೆಂಡತಿಗೆ ತೀರ ನಿಷ್ಠರಾಗಿ ಇರಬಾರದು; ನೀವೆಷ್ಟೇ ನಿಷ್ಠರಾಗಿದ್ದರೂ ಆಕೆಗೆ ನಿಮ್ಮ ಮೇಲೊಂದು ಸಂಶಯ ಇದ್ದೇ ಇರುತ್ತದೆ.
* ಒಳ್ಳೆಯ ಗಂಡನಾದವನು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ; ಕಾರಣ ಆತ ಆಗಲೇ ನರಕವಾಸವನ್ನು ಮುಗಿಸಿರುತ್ತಾನೆ.
* ಹೆಂಡತಿ ಡಿ.ಡಿ. ಇದ್ದ ಹಾಗೆ; ಯಾವತ್ತೂ ಖಾತ್ರಿ. ಗರ್ಲ್ಫ್ ಫ್ರೆಂಡ್ ಗಳು ಚೆಕ್ ಗಳ ಹಾಗೆ; ಯಾವಾಗ ಬೇಕಾದರೂ ಬೌನ್ಸ್ ಆಗಬಹುದು.
* ಒಬ್ಬ ಗಂಡಸಿನ ಖಚಿತತೆಗಿಂತ, ಒಬ್ಬ ಮಹಿಳೆಯ ಊಹೇಯೇ ಹೆಚ್ಚು ನಿಖರವಾಗಿರುತ್ತದೆ.