ಒಂದು ಮುಂಜಾವಿನಲಿ
ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ.............
ಬಹುಶಃ ಈ ಗೀತೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ಈ ಹಾಡಿನಲ್ಲಿ ಒಂದು ಚರಣವಿದೆ.
ಉಷೆಯ ನುಣ್ಗದಪಿನಲಿ ಹರ್ಷಭಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು
ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತ್ತಿತ್ತು.
ಈ ಉಷೆಯ ನುಣ್ಗದಪಿನಲಿ ಎಂದರೇನು ಅರ್ಥವಾಗುತ್ತಿಲ್ಲ. ಯಾರಿಗಾದರು ತಿಳಿದಿದ್ದಲ್ಲಿ ನಮಗೂ ತಿಳಿಸಿಕೊಡಿ.
ಹೀಗೆ ಅರ್ಥವೈಸಬಹುದೇ.
ಉಷೆಯ = ಸೂರ್ಯನ, ನುಣ್ಗದಪಿನಲಿ = ಮೃದು ಕಿರಣಗಳು
ಆ ಸೂರ್ಯನ ಮೃದು ಕಿರಣಗಳನ್ನು ನೋಡುತ್ತಾ, ಮನಸ್ಸು ಮುಂದೆ ತನ್ನದಾಗಲಿರುವ ಸುಂದರಬಾಳುವೆಯನ್ನು ನೆನೆಯುತ್ತಾ ಮೈಮರೆತಿತ್ತು.

- Login or register to post comments
- 478 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ನುಣ್ಗದಪಿನಲಿ
ನುಣ್ಣನೆಯ ಕದಪಿನಲಿ (ಗಲ್ಲದಲ್ಲಿ-ಕೆನ್ನೆಯಲ್ಲಿ)