ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ದಾಸ ಶ್ರೇಷ್ಠ ಕನಕದಾಸ..

ಕರ್ನಾಟಕದಲ್ಲಿ ಹರಿದಾಸ ಪರಂಪರೆ ಸುಮಾರು ೫೦೦ ವರ್ಷಗಳ ಬಹುದೊಡ್ಡ ಇತಿಹಾಸ ಹೊಂದಿದೆ. ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು. ದಾಸ ಪರಂಪರೆ ಸಮಾಜದ ವರ್ಗ ಸಂಘರ್ಷ, ಜಾತಿ ಸಂಘರ್ಷವನ್ನು ಕರ್ಮುಠ ಸಿದ್ಧಾಂತಗಳನ್ನು ಹೆಕ್ಕಿ ಅದರ ನಿರುಪದ್ರವಿ ಗುಣಗಳನ್ನು ತಿಳಿಸಿದರು. ಭಕ್ತಿ ಪರಂಪರೆಯ ಕಾಲದಲ್ಲಿ ಬಂದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ಮನೋಭಾವದಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ, ಸಮಾಜಮುಖಿ ನೆಲಗಟ್ಟನ್ನು ಭದ್ರಗೊಳಿಸಿದವರು..

ಸಂಸ್ಕೃತ- ಕನ್ನಡ ಪದಗಳಿಂದ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ, ಕಾವ್ಯ ಸ್ವರೂಪದಲ್ಲಿದ್ದ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ, ಸಾಮಾನ್ಯರ ಬಳಿ ಸುಳಿದುದೇ ಈ ಶರಣ ಸಾಹಿತ್ಯದಿಂದ. 12 ನೇ ಶತಮಾನದಲ್ಲಿ ಮೊದಲ್ಗೊಂಡು ರಗಳೆ, ವಚನ ಸಾಹಿತ್ಯ ಪ್ರಕಾರದ ಮೂಲಕ ಶಿವಶರಣರ, ವಚನಕಾರರ ಮೂಲಕ ಜನಮನಸ್ಸನ್ನು ಹೊಕ್ಕಿತ್ತು. 13 ನೇ ಶತಮಾನದಿಂದ ದಾಸ ಸಾಹಿತ್ಯ ಮೇರು ಪರ್ವತದಲ್ಲಿದ್ದು ಜನಸಾಮಾನ್ಯರ ಮನೆ-ಮನ ಮುಟ್ಟಿತ್ತು. ಅದರಲ್ಲೂ ಪುರಂದರದಾಸ-ಕನಕದಾಸರ ಕಾಲವನ್ನು "ಸುವರ್ಣ ಯುಗ" ಎಂದೇ ಕರೆಯಬಹುದು..

ಸಾಹಿತ್ಯವನ್ನು ದಾಸಸಾಹಿತ್ಯದ ಮೂಲಕ ಕನಕದಾಸರು ಇನ್ನಷ್ಟು ಸರಳಗೊಳಿಸಿದರು. ಹೀಗಾಗಿಯೇ ಹೊಸಗನ್ನಡ ಸಾಹಿತ್ಯ ಕೋಗಿಲೆ , ’ದಾಸ ಸಾಹಿತ್ಯದ ಬನದ ಕೋಗಿಲೆ ’ ಎಂಬ ಬಿರುದಾಂಕಿತರಾಗಿದ್ದರು.

ಕನಕದಾಸರು (1508 - 1606) ಸಾಮಾನ್ಯ ಕುರುಬ ಜನಾಂಗದಲ್ಲಿ ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದಲೇ ಹಿರಿಮೆಗಳಿಸಿದರು. ಕನಕರು ಕೆಳಸ್ತರದಿಂದ ಬಂದಾಗಲಿಂದ ಕೆಳಜಾತಿಯ ನೋವು, ನಲಿವು ಅವರ ಅರಿವು ಕನಕರ ಸಾಹಿತ್ಯದಲ್ಲಿ ಮಾರ್ದನಿಸಲು ಶುರು ಮಾಡಿತು. ಅಲ್ಲದೆ, ಡಣ್ಣಾಯಕ ಎಂಬ ಅಧಿಕಾರ ಅಪ್ಪನಿಂದ ತಿಮ್ಮಪ್ಪ ನಾಯಕನಿಗೆ ಬಳುವಳಿಯಾಗಿ ಬಂದುದರಿಂದ ಮೇಲ್ವರ್ಗದ ಸ್ಥಿತಿಗತಿಯೂ ಕನಕರಿಗೆ ತಿಳಿದಿತ್ತು. ಈ ಎರಡೂ ಭಿನ್ನತೆಗಳನ್ನು ಸಾಹಿತ್ಯದಲ್ಲಿ ಲೀಲಾಜಾಲವಾಗಿ ಹರಿಸಿದರು.

ತಮ್ಮ ಸಮಕಾಲೀನ ದಾಸರಂತೆ ಹರಿಯನ್ನು ಹೊಗಳದೆ " ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ " ಎಂಬ ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿ, ತಮ್ಮ ವಿಶಿಷ್ಠ ವೈಚಾರಿಕ ದೃಷ್ಟಿಯಿಂದ ಬದುಕಿನ ನೈಜ್ಯ ಚಿತ್ರಣವನ್ನು ನಂತರದ ಪೀಳಿಗೆಗೆ ಬದಲಾಯಿಸಿ ಸಾಹಿತ್ಯ ಹರಿಸಿದರು. ಈ ಕಾರಣವೇ ಕನಕನಿಗೆ ದಾಸರ ದಾಸ ಎಂದೆನಿಸಿಕೊಳ್ಳಲು ಸಾಧ್ಯವಾಗಿಸಿತು.

ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಬಹು ಮುಖ್ಯವಾಗಿ ಎರಡು ಕಾವ್ಯಗಳನ್ನು ರಸವತ್ತಾಗಿ ಚಿತ್ರಿಸುವ ಮೂಲಕ ಜೀವ ತುಂಬಿದ್ದಾರೆ. ಮೋಹನ ತರಂಗಣಿ ( ಶೃಂಗಾರ ರಸ ಕಾವ್ಯ) ಹಾಗೂ ನಳ ಚರಿತ್ರೆ (ನಳ-ದಮಂತಿಯರ ಪ್ರೇಮ ಕಾವ್ಯ) ಪ್ರಮುಖವಾದುವು. ಉಳಿದಂತೆ ಹರಿಭಕ್ತ ಸಾರ, ರಾಮಧಾನ್ಯ ಚರಿತ್ರೆ ಕನಕದಾಸರ ವೈವಿಧ್ಯಮಯ ಸಾಹಿತ್ಯಕ್ಕೆ ಹಿಡಿದ ಕೈಗನ್ನಡಿ..

ಇಂತಹ ದಾಸ ಶ್ರೇಷ್ಠನ ಹುಟ್ಟು ದಿನ ಆಚರಣೆಗೆ ಇದೇ ೧೫ರಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ. ಅಲ್ಲದೆ, ಹುಟ್ಟೂರಾದ ಹಾವೇರಿ ಜಿಲ್ಲಾ ಶಿಗ್ಗಾಂವ್‌ ಸಮೀಪದ ಬಾಡ ಗ್ರಾಮ ಹಾಗೂ ಕಾಗಿನೆಲೆಗೆ ಕಾಯಕಲ್ಪ ನೀಡಲು ಮುಂದಾಗಿದೆ. ಬಸವ ಕಲ್ಯಾಣ ರೀತಿಯಲ್ಲೇ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ಉನ್ನತಿಯತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ.

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ...
ಕುಲದ ನೆಲೆಯೇನಾದರೂ ಬಲ್ಲೆರಾ...

ಕುಲದ ಕುಲವೆನ್ನುತಿಹರು
ಕುಲವನ್ಯಾವುದು ಸತ್ಯ ಸಖ್ಯವುಳ್ಳ ಜನರಿಗೆ...

ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರೀಯ ಕುಲ ಪೇಳಿರಯ್ಯಾ....

-ಬಾಲರಾಜ್ ಡಿ.ಕೆ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Chamaraj's picture

ಮಾಹಿತಿ ಚೆನ್ನಾಗಿದೆ ಬಾಲರಾಜ್‌. ಪತ್ರಕರ್ತರಾದ ನೀವು ಇದನ್ನು ಇನ್ನಷ್ಟು ಸೊಗಸಾಗಿ ಬರೆಯಬಹುದಿತ್ತು ಅನಿಸುತ್ತದೆ.

- ಚಾಮರಾಜ ಸವಡಿ
http://chamarajsavad...

hamsanandi's picture

ಬಾಲರಾಜರೆ, ಈ ಲೇಖನವನ್ನು ಹರಿದಾಸ ಸಂಪದಕ್ಕೂ ಹಾಕಿರಿ.

Quote:
ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು.

ಪುರಂದರದಾಸರಿಗೆ ’ಕರ್ನಾಟಕ’ ಸಂಗೀತ ಪಿತಾಮಹ ಅನ್ನೋದು ರೂಢಿ.

Quote:
ತಮ್ಮ ಸಮಕಾಲೀನ ದಾಸರಂತೆ ಹರಿಯನ್ನು ಹೊಗಳದೆ " ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ " ಎಂಬ ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿ,

ಈ ರೀತಿಯ ಪ್ರಕಾರಕ್ಕೆ ನಿಂದಾಸ್ತುತಿ ಎಂಬ ಹೆಸರಿದೆ. ಈ ರೀತಿಯ ರಚನೆಗಳನ್ನು ಕನಕದಾಸರೊಬ್ಬರೇ ಅಲ್ಲ, ಬೇರೆ ದಾಸರೂ ಮಾಡಿದ್ದಾರೆ. ಅದರಲ್ಲೂ ’ಆರು ಬದುಕಿದರಯ್ಯ’ ಅನ್ನುವ ರಚನೆ ಪುರಂದರ ದಾಸರ ಅಂಕಿತದಲ್ಲೂ ಸಿಕ್ಕಿದೆ. ಯಾರು ನಿಜವಾಗಿ ಬರೆದವರೋ ಹರಿಯೇ ಬಲ್ಲ :)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

mahesha's picture

http://www.carnaticm...

http://en.wikipedia....

ಹಂಸಾನಂದಿಗಳೇ ಪುರಂದರದಾಸರೂ ಹಿಂದೂಸ್ತಾನಿಯ ಪಿತಾಮಹ ಕೂಡ

Purandara Dasa was a vaggeyakara (performer), a lakshanakara (musicologist), and the founder of musical pedagogy. For all these reasons and the enormous influence that he had on Carnatic music, musicologists call him the "Sangeeta Pitamaha" (grandfather) of Carnatic music.[13]

Purandara Dasa had great influence on Hindustani music. The foremost Hindustani musician Tansen's teacher, Swami Haridas was Purandara Dasa's disciple.[14] Purandara Dasa's compositions are equally popular in Hindustani music. Hindustani music legends such as Bhimsen Joshi and Basavaraj Rajguru have made them more popular in recent years. Young, well known artists such as Venkatesh Kumar, Nagaraja Rao Havaldar, Ganapathi Bhatt, and Nachiketa Sharma are continuing the tradition of singing Purandara Dasa's compositions in north Indian music concerts.

http://maaysa.wordpr...

hamsanandi's picture

ಮಹೇಶರೆ,

ಇಲ್ಲಿನ ವಿಷಯ ಇನ್ನೂ ಹೆಚ್ಚು ಆಳವಾಗಿದೆ - ಪುರಂದರರ ಕಾಲದಲ್ಲಿ ಹಿಂದೂಸ್ತಾನಿ ಸಂಗೀತ ಅನ್ನುವ ಹೆಸರೂ ಇರಲೇ ಇಲ್ಲ. - ಈಗ ಅರ್ಥಮಾಡಿಕೊಳ್ಳುವ ಟರ್ಮಿನಾಲಜಿ ಪ್ರಕಾರ ಪುರಂದರರನ್ನು ಹಿಂದೂಸ್ತಾನಿಯ್ತ ಪಿತಾಮಹ ಅನ್ನೋದು ಅಷ್ಟು ಸರಿಯಾಗೋಲ್ಲ. ಮತ್ತೊಮ್ಮೆ ವಿವರವಾಗಿ ಬರೆವೆ,

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

mahesha's picture

ಓ ಹಾಗಾ...

ವಿಜಯನಗರದಲ್ಲಿ ವಿದ್ಯಾರಣ್ಯಯಿಂದ ಸಂಗೀತ ಶಾಸ್ತ್ರ ಹುಟ್ಟಿ ಬೆಳೆಯಿತೆಂದು, ಅದು ವಿಜಯನಗರದ ಬೀಳುವಿಕೆಯ ಬಳಿಕ ಬಡಗಿಗೊಂದು, ತೆಂಕಣಕ್ಕೊಂದು ಕವಲಿತೆಂದು. ಆ ಕವಲುಗಳೇ ಕರ್ನಾಟಕ ಮತ್ತು ಹಿಂದೂಸ್ತಾನಿ ಎಂದೂ ನನ್ನ ತಿಳಿವು...

ಬ್ರಿಟೀಶರು ಹೊಸತರಲ್ಲಿ ಇಡೀ ತೆಂಕಣ ಇಂಡಿಯ-ಉಪಕಂಡವನ್ನ ’ಕರ್ನಾಟ’ ಎಂದು ಕರೆದುದನ್ನು ನೆನೆಪಿಸಿಕೊಳ್ಳಿ. ಹಾಗೇ ಮೊಗಲರ ನಾಡನ್ನು ಹಿಂದೂಸ್ತಾನ ಎಂದುದು ಕೂಡ ಅಲ್ವ?

http://maaysa.wordpr...

hamsanandi's picture

Quote:
ವಿಜಯನಗರದಲ್ಲಿ ವಿದ್ಯಾರಣ್ಯಯಿಂದ ಸಂಗೀತ ಶಾಸ್ತ್ರ ಹುಟ್ಟಿ ಬೆಳೆಯಿತೆಂದು,

ಇಲ್ಲ, ಇದಕ್ಕೂ ಮುಂಚೆಯೂ ಇತ್ತು . ಕರ್ನಾಟಕದಲ್ಲಿ ಸಂಗೀತಶಾಸ್ತ್ರ ದ ಪುಸ್ತಹಗಳನ್ನು ಬರೆದವರ ಪರಂಪರೆಯೇ ಇದೆ. ಕಲ್ಯಾಣ ಚಾಲುಕ್ಯರ ಕಾಲದಿಂದಲೂ, ಅಂದರೆ ವಿಜಯನಗರಕ್ಕೂ ೨-೩ ಶತಮಾನ ಮುಂಚೆಗೂ.

ನಾನೆಂದಂತೆ ಇದರ ಬಗ್ಗೆ ಇನ್ನೂ ಹೆಚ್ಚು ವಿವರವಾಗಿ ಬರೆಯಬೇಕು - ಪುರಂದರದಾಸರರು ಕರ್ನಾಟಕ ಸಂಗೀತ ಪಿತಾಮಹ ಅನ್ನೋ ಹೆಸರು ಬಂದದ್ದೂ ಅವರಕಾಲಕ್ಕೆ ಎಷ್ಟೋ ನಂತರವೇ.

ಇನ್ನು ಬ್ರಿಟಿಷರು ಕಾರ್ನಾಟಿಕ್ (ಕರ್ನಾಟಕ) ವೆಂದದ್ದು ಈಗ ದಕ್ಷಿಣ ರಾಯಲಸೀಮ - ಉತ್ತರ ತಮಿಳ್ನಾಡು ಪ್ರದೇಶ ( ಚಿತ್ತೂರು ವೆಲ್ಲೂರು ಸುತ್ತಮುತ್ತ) - ಅದಕ್ಕೂ ಕರ್ನಾಟಕ ಸಂಗೀತವೆಂಬ ಹೆಸರಿಗೂ ಸಂಬಂಧವಿಲ್ಲ. ಆದರೆ ವಿಜಯನಗರವನ್ನು ಕನ್ನಡ ರಾಜ್ಯಲಕ್ಷ್ಮೀ, ಕರ್ನಾಟ ರಾಜ್ಯ ಲಕ್ಷ್ಮೀ ಎಂದು ಕರೆಯುತ್ತಿದ್ದಿದ್ದಕ್ಕೂ, ಪುರಂದರ ದಾಸರು ಆ ಪ್ರದೇಶದಲ್ಲಿಇದ್ದಿದ್ದಕ್ಕೂ, ಮತ್ತೆ ೧೭-೧೮ನೇ ಶತಮಾನದ ತಂಜಾವೂರಿನ ಸಂಗೀತಗಾರರು, ವಾಗ್ಗೇಯಕಾರರು ಪುರಂದರದಾಸರಿಂದ ಪ್ರಭಾವಿತರಾದದ್ದೂ ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತವೆನ್ನುವ ಹೆಸರುಬರಲು ಒಂದು ಕಾರಣ.

ಪುರಂದರ ದಾಸರು ಕರ್ನಾಟಕ ಸಂಗೀತ ಪಿತಾಮಹ ಅನ್ನುವ ಮಾತನ್ನು ಈ ಎಲ್ಲ ಹಿನ್ನೆಲೆಯಲ್ಲಿ ನೋಡಬೇಕಾಗುತ್ತೆ - ಇಲ್ಲದಿದ್ದರೆ ಅದು ಬರೀ ಚರ್ವಿತ ಚರ್ವಣ ;) ವಾಗುತ್ತೆ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

mahesha's picture

ಓ ಹಾಗಾ..

ಕನ್ನಡಿಗರು ಕಾವ್ಯ ಮತ್ತು ಕಾವ್ಯ ಪ್ರಯೋಗ(ಗಾಯನ ಮತ್ತು ನಾಟ್ಯ;ನಾಟ್ಯಕ್ಕೆ ಗಾಯನ ಬೇಕು) ಪರಿಣತರೇ ಸರಿ! :)

ಸಕ್ಕತ್ ಅಲ್ವ!

http://maaysa.wordpr...