22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!

November 13, 2008 - 3:40am
Anonymous User (not verified)
ನನ್ನ ಸ್ನೇಹಿತೆಯೊಬ್ಬಳಿಗೆ ೬ ತಿಂಗಳು ತುಂಬಿದಾಗ, ಮನೆಯವರೆಲ್ಲ ಸಂತೋಷದಿಂದ ಮುಂಬರೋ ಮಗುವಿನ ಕನಸು ಕಾಣೋ ಹೊತ್ತು. ಪ್ರತೀ ದಿನ ಮನೆಯವರೊಂದಿಗೆ ಇಂಟರ್‌ನೆಟ್ ಮುಖಾಂತರ ಮಾತು, ಅಮ್ಮ ಭಾರತದಿಂದ ಮಗಳಿಗೆ ಅದು ತಿನ್ನು, ಇದು ತಿನ್ನು, ಹೀಗೆ ಮಾಡು, ಹಾಗೆ ಮಾಡು ಅಂತ ಪ್ರತೀ ದಿನ ಸಲಹೆ ನೀಡುತ್ತಿದ್ದರು. ಸ್ನೇಹಿತೆಗೆ ೯ನೇ ತಿಂಗಳು ಪ್ರಾರಂಭವಾದಾಗ, ನಮ್ಮ ಅಕ್ಕ-ಪಕ್ಕದ ಸ್ನೇಹಿತರೆಲ್ಲಾ ಸೇರಿ ಸೀಮಂತ ಮಾಡೋಣ ಅಂತ ನಿರ್ಧಾರ ಮಾಡಿ ಒಂದು ಶನಿವಾರ ಗುರುತಿಸಿದ್ವಿ. ಆ ಸಮಯದಲ್ಲಿ, ಸ್ನೇಹಿತೆ ಗಂಡನಿಗೆ ಹೆಂಡತಿಯ ಮನೆಯವ್ರಿನ್ದ ಸುದ್ದಿ ಮುಟ್ಟತ್ತೆ, ಹೆಂಡತಿ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಅಂತ. ಗಂಡ ಗಾಬರಿ ಆಗ್ತಾನೆ. ಈ ಪರಿಸ್ಥಿತಿ ನಲ್ಲಿ ಹೆಂಡತಿಗೆ ಈ ವಿಷಯ ತಿಳಿಸಿದ್ರೆ ಆಘಾತ ಆಗ ಬಹುದೆಂದು, ಹೆಂಡತಿಗೆ ಅವಳ ತಂದೆ ಆರೋಗ್ಯದ ಸ್ಥಿತಿ ತಿಳಿಸದೇ, ಅವಳಿಂದ ಮುಚ್ಚಿಡುತ್ತಾನೆ. ನಮಗೆ ವಿಷಯ ತಿಳಿದರೂ, ಅವಳಿಗೆ ಹೇಳುವಂತಿಲ್ಲ. ಸೀಮಂತದ ದಿನ ಬಂದೆ ಬಿಟ್ತು. ಅಪ್ಪ ಅಲ್ಲಿ ಐ.ಸೀ.ಯು ನಲ್ಲಿ, ಅದನ್ನು ತಿಳಿಯದ ಮಗಳು ಇಲ್ಲಿ ಸೀಮಂತಕ್ಕೆ ತಯಾರಾಗ್ತಾ ಇದ್ದಾಳೆ. ಆ ದಿನ ನನಗೆ ಮನಸ್ಸಿಗೆ ತುಂಬಾ ನೋವಾಗ್ತಿತ್ತು, ನನ್ನ ಜೀವನದ ಒಂದು ಕಹಿ ಘಟನೆ ನೆನೆಸಿ ಇನ್ನೂ ನೋವು. ಸೀಮಂತದ ಸಂಭ್ರಮ-ಸಡಗರ ಮುಗಿದ ಮಾರನೆ ದಿನ ಗಂಡನಿಗೆ ತನ್ನ ಹೆಂಡತಿಯ ತಂದೆ ಸಾವಿನ ಸುದ್ದಿ ಮುಟ್ಟತ್ತೆ. ಈ ವಿಷಯವನ್ನ ಮಗಳಿಗೆ ತಿಳಿಸದೇ ಇದ್ರೆ ಹೇಗೆ ಹೇಳಿ? ಗಂಡ ಧೈರ್ಯ ಮಾಡಿ ಅವಳಿಗೆ ಈ ಘೋರ ಸಂದೇಶ ತಿಳಿಸ್ತಾನೆ. ಪಾಪ, ಆ ಹೆಣ್ಣು ಮಗಳು ತನ್ನ ದುಃಖ ತಡೆಯಲಾರದೇ ತುಂಬಾ ಅತ್ತು, ಸಮಾಧಾನ ಮಾಡಿಕೊಳ್ತಾಳೆ. ಆದರೆ ಈ ಪರಿಸ್ಥಿತಿನಲ್ಲಿ ತಾನು ಇಲ್ಲಿಂದ ಹೊರಡೋ ಆಗಿಲ್ಲ, ತುಂಬು ಗರ್ಭಿಣಿ ಅಲ್ವೇ ಪ್ರಯಾಣಕ್ಕೆ ಕಾನೂನು ಒಪ್ಪೋದಿಲ್ಲ. ಅದರಿಂದ, ಮನಸ್ಸಿಗೆ ಸಮಾಧಾನ ತಂದುಕೊಂಡು, ಮನೆಯವರೊಂದಿಗೆ ಮಾತಾಡ್ತಾಳೆ. ಹಾಗೆ ದಿನ ಕಳೆದಂತೆ, ಮಗು ಡೆಲಿವರೀನೂ ಸುಸೂತ್ರವಾಗಿ ಮುಗಿಯತ್ತೆ. ತಾಯಿ-ಮಗು ಇಬ್ಬರು ಆರೋಗ್ಯದಿಂದ ಇದ್ದಾರೆ. ಇನ್ನೊಂದು ನೋವಿನ ಸಂಗತಿ ಏನಂದ್ರೆ, ಈ ಪರಿಸ್ಥಿತಿಯಲ್ಲಿ ಅವಳ ತಾಯಿ ಮಗಳನ್ನು ಮತ್ತು ಮೊಮ್ಮಗಳನ್ನು ನೋಡಿ ಕೊಳ್ಳಲು, ಅಮೆರಿಕಾಕ್ಕೆ ೬ ತಿಂಗಳ ಮಟ್ಟಿಗೆ ಬರಬೇಕಾಯ್ತು . ಆ ತಾಯಿಗೆ ನನ್ನ ವಂದನೆ, ತನ್ನ ಮನಸ್ಸಿನ ನೋವನ್ನು ಸಹಿಸಿಕೊಂಡು ಇಲ್ಲಿಗೆ ಬಂದು ತನ್ನ ಮಗಳು-ಮೊಮ್ಮಗಳ ಆರೈಕೆ ಮಾಡಿದ್ದಕ್ಕೆ. ಎಷ್ಟಾದ್ರೂ, ತಾಯಿ ಕರುಳಲ್ವೇ? ಕಳೆದ ತಿಂಗಳು, ನನ್ನ ಸ್ನೇಹಿತೆ ಮಗುವಿನೊಂದಿಗೆ ಭಾರತಕ್ಕೆ ಭೇಟಿ ನೀಡಿ, ಒಂದು ತಿಂಗಳ ನಂತರ ಮರಳಿ ಬಂದಿದ್ದಾಳೆ. ದೇವರು ಯಾರಿಗೂ ಈ ಪರಿಸ್ಥಿತಿ ಕೊಡದಿರಲಿ ಅಂತ ಬೇಡಿಕೊಳ್ಳುತ್ತಾ.... ಲಕ್ಷ್ಮಿ
ಲೇಖನ ವರ್ಗ (Category): 
Average: 3.6 (11 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hariharapurasridhar on
ಜೀವನವೇ ಹೀಗೆ.ಸ್ನೇಹಿತೆಗೆ ಆದ ನೋವು ನಿಮಗೇ ಆದಂತೆ ದು:ಖ ತೋಡಿಕೊಂದಿದ್ದೀರಿ. ವಿದೇಶದಲ್ಲಿದ್ದಾಗ ತುಂಬಾಜನರಿಗೆ ತಮ್ಮ ಕುಟುಂಬದಿಂದ ದೂರ ಇರುವುದು ಬಲು ಕಷ್ಟವೆನಿಸುತ್ತೆ. ವಿಧಿಇಲ್ಲ. ಕಾಲಾಯ ತಸ್ಮೈ ನಮ: ಹರಿಹರಪುರಶ್ರೀಧರ್, ಹಾಸನ visit: www.hariharapurasrid...

Submitted by mahesha on
ಹುಂರಿ ಸೀಮಂತ ( ಮಡಿಲು ತುಂಬೋದು ). ಸೀಮಂತ ಮಾಡ್ತಾರೆ ಅಂತಾರೆ. ’ಶ್ರೀಮಂತ’ ಮಾಡ್ತಾರೆ ಅನ್ನಲ್ಲ ನಮ್ ಕಡೆ. ಪರವಾ ಇಲ್ಲ.. ಇದೆಲ್ಲ ಇರತ್ತೆ.. http://maaysa.wordpr...

Submitted by ASHOKKUMAR on
ಹುಡುಕು ಪದ: ಸೀಮಂತ ೧. ಬಯಕೆ (ದೇ) (ನಾ) ೧ ಇಚ್ಛೆ, ಆಸೆ ೨ ಬಸಿರಿಯರಿಗೆ ಉಂಟಾಗುವ ಆಸೆ, ಹಂಬಲ ೩ ಸ್ತ್ರೀಯರಿಗೆ ಸೀಮಂತ, ಬಾಣಂತನ ಮುಂತಾದ ಸಂದರ್ಭಗಳಲ್ಲಿ ವಿಶೇಷವಾಗಿ ಕಣ್ಣಿಗೆ ಹಚ್ಚುವ ಕಾಡಿಗೆ ೨. ಸೀಮಂತ (ಸಂ) (ನಾ) ೧ ಬೈತಲೆ ೨ (ಚೊಚ್ಚಿಲು) ಬಸಿರಿಗೆ ಮಾಡುವ ಸಂಸ್ಕಾರಗಳಲ್ಲಿ ಒಂದು, ಶ್ರೀಮಂತ *ಅಶೋಕ್

Submitted by ASHOKKUMAR on
ಶ್ರೀಮಂತವೂ ಸರಿ .. ಕ್ಷಮಿಸಿ ತಪ್ಪು ಹುಡುಕುತ್ತಿದ್ದೇನೆ ಅಂದುಕೊಳ್ಳ ಬೇಡಿ.. ನಿಮ್ಮ ತಲೆಬರಹದಲ್ಲಿ ಬಂದು ಬಂಧು ಆಗಬೇಕಲ್ಲವೇ? :) *ಅಶೋಕ್

Submitted by lsiddappa (not verified) on
ನಿಮ್ಮಂತವರ ಪ್ರತಿಕ್ರಿಯೆ, ನನ್ನ ಮುಂಬರುವ ಬರಹಗಳಿಗೆ ಸ್ಪೂರ್ತಿ, ಹಾಗಾಗಿ ಹೊಗಳಿಕೆ-ತೆಗಳಿಕೆ ಎರಡಕ್ಕೂ ಸ್ವಾಗತ. Lakshdeep!!

Submitted by lsiddappa (not verified) on
ಹರಿ ಅಂಕಲ್, ನಾನೂ 2 ವರ್ಶದ ಹಿಂದೆ (ನನ್ನ ಮದುವೆ 8 ತಿಂಗಳ ಹಿಂದೆ) ನನ್ನ ತಂದೆಯನ್ನು ಕಳೆದು ಕೊಂಡೆ. ಅದೂ ಅವರು ನರಳಿ ನರಳಿ ಸಾಯುವುದನ್ನು ನೊಡಿದ ಈ ಕಣ್ಣುಗಳು ಇಂದಿಗೂ ಆ ದಿನಗಳನ್ನು ಪ್ರತಿ ದಿನ ನೆನಪಿಸುತ್ತೆ. ಇನ್ನು ಈರೀತಿಯ ವಿಶಯಗಳನ್ನು ಕೆಳಿದಾಗ ಹೆಗಾಗುವುದೆಂದು ನೀವೆ ಊಹಿಸಿಕೊಳ್ಳಿ. Lakshdeep!!

Submitted by Rajeshwari on
ನನ್ನ ಪರಿಚಯಸ್ತರೊಬ್ಬರು ಗರ್ಭಿಣಿಯಾಗಿದ್ದರು , ಅವರ ಗಂಡ ಮೆಡಿಕಲ್ ಇನ್ಶೂರೆನ್ಸ್ ಇಲ್ಲ ಎಂಬ ಕಾರಣಕ್ಕೆ ಅವಳಿಗೆ ೫ ತಿಂಗಳಾದ್ರೂ ಆಸ್ಪತ್ರೆಗೆ ತೋರಿಸಿಲ್ಲ, ನಂತರ ಅವರಿಗೆ ಮಗು ಇಲ್ಲೇ ಹುಟ್ಟಿದರೆ ಅವ್ರ ಗ್ರೀನ್ ಕಾರ್ಡ್ ಪ್ರಾಸೆಸ್ ಸುಲಭವಾಗುತ್ತೆ ಅಂತ ಅವಳನ್ನು ಭಾರತಕ್ಕೆ ಕಳುಹಿಸಲು ಒಪ್ಪಲ್ಲಿಲ್ಲ. ದುರಾದೃಷ್ಟವೆಂದ್ರೆ ಅವಳ ತಾಯಿಗೆ ವಿಸಾ ಸಿಗಲ್ಲಿಲ್ಲ. ಇದೆಲ್ಲಾದ್ರಿಂದ ಅವಳ ಬಿಪಿ ಜಾಸ್ತಿಯಾಗಿ ಕೊನೆಗೆ ಪ್ರಿಮೆಚುರ್ ಮಗು ಹುಟ್ಟಿತು , ಆದ್ರೆ ಆ ಮಗುವಿಗೆ ತುಂಬ ಸಮಸ್ಯೆಗಳಿತ್ತು ಆ ಮಗುವು ತುಂಬ ದಿನ ಬದುಕಲ್ಲಿಲ್ಲ. ಈ ಎಲ್ಲಾ ಏರಿಳಿತವನ್ನು ನಿಭಾಯಿಸಿಕೊಂಡು ಅವಳು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು , ಈಗ ಭಾರತಕ್ಕೆ ಹೋಗಿ ನೆಲೆಸಿದ್ದಾರೆ ಅಲ್ಲಿ ಇನ್ನೊಂದು ಮಗುವಿಗೆ ಜನ್ಮ ಕೊಟ್ಟು ತಾಯಿಯೊಂದಿಗೆ ಬಾಣಂತನ ಮಾಡಿಸಿಕೊಂಡಳು. ಕೆಲವೊಮ್ಮೆ ಇಲ್ಲಿರುವುದು ಎಷ್ಟು ಸುಲಭವೋ ಹಾಗೆಯೇ ಎಲ್ಲಾ ಅನಿಸಿಕೆ ಅಭಿಪ್ರಾಯಗಳನ್ನು ತಂದೆ,ತಾಯಿಗೆ ಹೇಳಿಕೊಳ್ಳಲಾರದೆ ನೋವನ್ನು ಅನುಭವಿಸಬೇಕಾಗುತ್ತೆ. ಕೆಲವೊಮ್ಮೆ ಎಲ್ಲಾ ಅನಿಸಿಕೆಗಳನ್ನು ಹೇಳಿಕೊಳ್ಳಲಾಗುವುದಿಲ್ಲ.

Submitted by lsiddappa (not verified) on
ರಾಜೇಶ್ವರಿ, ನಿಮ್ಮ ಸ್ನೇಹಿತೆ ವಿಷಯ ತಿಳಿದು ಬೇಜಾರಾಯ್ತು. ಆ ತಾಯಿಗೆ ತನ್ನ ಮಗುವನ್ನು ಕಳ್ಕೊಂಡಿರೋ ದುಃಖಾನ ಸಹಿಸ್‌ಕೊಳ್ಳೋ ಶಕ್ತಿ ದೇವರು ಕೊಡ್ಲಿ. Lakshdeep!!