ಬ್ರಾಹ್ಮಣರೆಂದರೆ ಯಾಕ್ರಿ ಕೆಲವರಿಗೆ ಕಣ್ಣುರಿ, ಹೊಟ್ಟೆ ಉರಿ,

ಇತ್ತೀಚಿಗೆ ಬ್ರಾಹ್ಮಣತ್ವ, ಪುರೋಹಿತ ಶಾಹಿ, ವೈದಿಕತೆ ಎಂಬೆಲ್ಲಾ ಶಭ್ಧಗಳು ತುಂಬಾ ಕೇಳಿಸುತ್ತಿವೆ ,
ಅದೂ ಈ ವಿಜಯಕರ್ನಾಟಕದಲ್ಲಿ ಮತಾಂತರದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ , ಸುಮ್ಮ ಸುಮ್ಮನ್ದೆ ಉಗಿಸಿಕೊಳ್ಳುವವರು ಬ್ರಾಹ್ಮಣರೇ, (ಉಗಿಯುತ್ತಿರುವವರಲ್ಲಿ ಕೆಲವರು ಅದೇ ಜಾತಿಯಲ್ಲಿ ಹುಟ್ಟಿದ್ದ್ದು ಮರೆತಂತಹ ಬುದ್ದಿಜೀವಿಗಳೂ ಸೇರಿದ್ದಾರೆ ಅದು ಬೇರೆ ಮಾತು)
ಹಿಂದುತ್ವದ ಪ್ರಶ್ನೆ ಬಂದಾಗಲೆಲ್ಲಾ ಪುರೋಹಿತ ಶಾಹಿ ವ್ಯವಸ್ಥೆ ಅದೂ ಇದೂ ಎಂಬ ದೊಡ್ಡ ದೊಡ್ಡ ಮಾತು ಹೇಳಿ ಚರ್ಚೆಯ ದಿಕ್ಕನ್ನೇ ಬದಲಾಯಿಸುವವರೂ ಇದ್ದಾರೆ
ಬ್ರಾಹ್ಮಣಳಾಗಿ ಹುಟ್ಟಿದ ನನಗೆ ಇಲ್ಲೀವರೆಗೂ ಹಾಗೆ ಹುಟಿದ್ದಕ್ಕೆ ಗ್ರೇಟ್ ಎಂದು ಅನ್ನಿಸುವಂತಹ ಘಟನೆ ನಡೆದಿಲ್ಲ ಮುಂದೆಯೂ ನಡೆಯುವುದಿಲ್ಲ
ಇನ್ನೂ ಕೆಲವೊಮ್ಮೆ ಯಾಕಾದರೂ ಈ ಜಾತಿಯಲ್ಲಿ ಹುಟ್ತಿದ್ದೇನೋ ಎಂಬಷ್ಟು ಬೇಸರ ಮೂಡಿಸುವಂಟಹ ಘಟನೆಗಳೂ ನಡೆದಿವೆ
ಬ್ರಾಹ್ಮಣರು ಯಾರ ತಂಟೆಗೂ ಹೋಗುವವರಲ್ಲ . ಹಾಗೆ ಯಾರಾದರೂ ತಂಟೆಗೆ ಬಂದರೂ ಎದುರಿಸಿ ನಿಲ್ಲುವವರಲ್ಲ. ಒಳ್ಲೆಯ ಮಾತಲ್ಲಿ ಹೇಳಿ ಕೊನೆಗೆ ಸುಮ್ಮನಾಗುವವರು
ಒಳಿತು ಮಾಡಲು ಆಗದಿದ್ದರೂ ಕೇಡನ್ನು ಬಗೆದವರಲ್ಲ.
ಅವರಾಯ್ತು ಅವರ ಓದು, ಕೆಲಸ ಎಂದು ಇರುವವರು
ರಾಷ್ಟ್ರಾಭಿಮಾನ, ರಾಜ್ಯಾಭಿಮಾನ, ಸಂಸ್ಕ್ರುತಿಯ ವಿಷಯಕ್ಕೆ ದನಿ ಎತ್ತಿದಾಗಲೆಲ್ಲಾ ತಮ್ಮ ಜಾತಿಯ ವಿಷಯವಾಗಿ ನಗೆಗೀಡಾಗುವವರು
ನಿಜವಾಗಲೂ ಆಗಿನ ಕಾಲ ಗೊತ್ತಿಲ್ಲ ಆದರೆ ಇಂದಿನ ಕಾಲಕ್ಕಂತೊ ದೌರ್ಜನ್ಯಕ್ಕೆ ಒಳಗಾಗುವವರು ಬ್ರಾಹ್ಮಣರೇ ಜಾಸ್ತಿ
ಇನ್ನೂ ಅಸ್ಪೃಶ್ಯತೆಯ ವಿಷಯಕ್ಕೆ ಬಂದರೂ ನಮ್ಮ ಬೆಂಗಳೂರಿನಲ್ಲಂತೂ ಆ ಪದವೇ ಇಲ್ಲ
ನಮ್ಮ ಮನೆಯಲ್ಲಿ ಕೆಲಸ ಮಾಡುವ ಹುಡುಗಿ ಯಾವ ಜಾತಿ ಎಂದು ನಾವು ಕೇಳಿಲ್ಲ . ಅಡುಗೆ ಮನೆಗೆ ಸಲೀಸಾಗಿ ಬರುತ್ತಾಳೆ, ನಮ್ಮಂತೆ ಓಡಾಡುತ್ತಾಳೆ
ನಮ್ಮ ಅಪಾರ್ಟ್ಮೆಂಟ್‍೬ನ ವಾಚಮೆನ್ ಯಾವ ಜಾತಿ ಎಂದು ಕೇಳಿಲ್ಲ ಮನೆಗೆ ಬಂದು ಆರಾಮವಾಗಿ ಕಾಫೀ ಕುಡಿದು ಹೋಗುತ್ತಾನೆ ಅವನಿಗೆಂದು ಯಾವುದೇ ಬೇರೆ ಗ್ಲಾಸ್ ಇಟ್ಟಿಲ್ಲ
ಸುಮ್ಮನೆ ಯಾವುದೋ ಕಾಲದ ಕತೆ ಹೇಳಿಕೊಂಡು ಬ್ರಾಹಮಣರನ್ನು ಹೀಗೆಳೆಯುವುದು ಎಷ್ಟು ಸರಿ?
ಇಂದಿನ ವಿ ಕ ದಲ್ಲಿ ಇಂದೂಧರ್ರವರ ಲೇಖನ ಓದಿ ಮೈ ಕುದಿಯಿತು ಸ್ವಲ್ಪ ಹೆಚ್ಚೇ ಎನ್ನುವಷ್ಟು ವ್ಯಕ್ತಿ ನಿಂದನೆ, ಜಾತಿ ನಿಂದನೆ ಮತಾಂತರ ವೊಂದನ್ನು ಬಿಟ್ಟು ಮತ್ತೆಲ್ಲಾ ವಿಚಾರಗಳೂ ಅಲ್ಲಿವೆ.
ಬೆಳಗ್ಗೆ ಮನೆಯಲ್ಲಿ ಅದೇ ಚರ್ಚೆ ನಡೆಯಿತು ಅದನ್ನೇ ಇಲ್ಲಿ ಬರೆದಿದ್ದೇನೆ ಅಷ್ಟೆ

ಕೊನೆಯದಾಗಿ
ನಮ್ಮ ವಿಷ್ಯವಾಗಿ ಇಲ್ಲಿನ ರೆಡ್ಡಿಗಳೊಬ್ಬರು ಹೇಳಿದ ಮಾತು
"ಅಯ್ನೋರನ್ನು ಗೋಳು ಹಾಕ್ಕೋಬೇಡ , ಅವರು ಏನೂ ಹೇಳೋದಿಲ್ಲ ಆದರೆ ಮನಸಲ್ಲೇ ಕೊರಗ್ತಾರೆ, ಅದೇ ಕೊರಗು ಶಾಪವಾಗಿ ಕಾಡುತ್ತೆ"

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
msprasad's picture

ರೂಪಕ್ಕ, ನಿಜವಾದ ಮಾತು.
ನಾನು ಕೂಡಾ ಕೆಲವು ಬಾರಿ ವಿನಕರನವಾಗಿ ಬ್ರಾಹ್ಮಣರನ್ನ ನಿಂದಿಸೋದನ್ನು ನೋಡಿದೀನಿ.
ಸಿನೆಮಾಗಳಲ್ಲೂ ಇದು ಇದೆ. "ಏನೋ ಬೊಮ್ಮನ್, ಪುಳ್ಚಾರ್" ಈ ರೀತಿಯ ಡೈಲಾಗು ಇರುತ್ತೆ.
ಇವರುಗಳ ಪ್ರಕಾರ ಪುಳ್ಚಾರ್, ಬೊಮ್ಮನ್ ಅಂದ್ರೆ ಏನೇ ಮಾಡುದ್ರೂ ಸುಮ್ನೆ ಇರೋ ಜನ, ರೋಷ, ಆವೇಶ ಇಲ್ದೇ ಇರೋದು ಅನ್ನೋ ರೀತಿ ಬಿಂಬಿಸುತ್ತಾರೆ.
ಇನ್ನು ಮಹಾನ್ ಲೇಖಕರು, ಸೊ ಕಾಲ್ಡ್ ಬುಧ್ಧಿಜೀವಿಗಳು, ಗಡ್ಡದ ಲೇಖಕರು, ಇವರಿಗೆಲ್ಲ ಬ್ರಾಹ್ಮಣರನ್ನು ಬೈಯ್ಯೋದು ಒಂದು ರೀತಿಯ ದಿನಚರಿ, ಹಾಗು, ತಮ್ಮ ಪ್ರತೀ ಭಾಷಣದಲ್ಲೂ ಇರಲೇಬೇಕಾದ ಅಂಶ ಅನ್ನೋ ಥರ ಆಗೋಗಿದೆ.

ಇಂತಿ,

ಶಂಕರ ಪ್ರಸಾದ

ನಮ್ಮ ಸೋಮಾರಿ ಕಟ್ಟೆಗೆ ಒಮ್ಮೆ ಭೇಟಿ ಕೊಡಿ : http://somari-katte....

mahesha's picture

ರೂಪ ಅವರೇ

ನಾನು ನಿಮ್ಮ ಜಾತಿಯೇ.. ನಿಮ್ಮ ಯೋಚನೆಯೇ ನನಗೂ ಇದೆ..

ಆದರೆ ನಮ್ಮಲ್ಲಿ ಕೆಲವು ಮಂದಿ ನಮ್ಮ ಜಾತಿ ಹೆಸರು ಹೇಳಿಕೊಂಡು, ಬೇರೆ ಜಾತಿಯವರು ನಮ್ಮ ಜಾತಿಯ ಮೇಲೆ ಇಟ್ಟಿರುವ/ಇಟ್ಟಿದ್ದ ಗವ್ರವದ ಕೆಡುಬಳಕೆ(ಕೆಟ್ಟ ಬಳಕೆ) ಮಾಡಿಕೊಂಡು ನಮಗೆ ಈ ಪಾಡು ತಂದಿದ್ದಾರೆ..

ಯೋಚಿಸಿ.. ಬ್ರಾಹ್ಮಣ ಅಂದರೆ ಬರೀ ಸುಳ್ಳು ಜೋತಿಶ್ಯ ಹೇಳೋನು, ದೇವರ ಹೆಸರಲ್ಲಿ ದುಡ್ಡು ಮಾಡೋನು, ಮೇಲೆ-ಕೀಳು ಮಾಡೋನು ಹೀಗೆಲ್ಲ ಮಂದಿ ಎಣಿಸಕ್ಕೆ ನಮ್ಮಲ್ಲಿ ಇರುವ ಕೆಲವು ’ಅತಿ ಬ್ರಾಹ್ಮಣ’ರೇ ಕಾರಣ ಅಲ್ವ..

ಕೊರಗೋರು ಇದ್ದಾರೆ, ಕಿತಾಪತಿ ಮಾಡೋರು ಇದ್ದಾರೆ;

http://maaysa.wordpr...

chandu123's picture

ಇದು ಸತ್ಯದ ಮಾತು, ಮನೆಯವರಿಂದಲೇ ಮನೆಯ ಮಾನ ಹರಾಜು ಇದು ಸಾಮಾನ್ಯವಾಗಿದೆ.

ತುಂಬು ಹೃದಯದ ಹಾರೈಕೆಯೊಂದಿಗೆ
ಚಂದು***

roopablrao's picture

ಜ್ಯೊತಿಶಿಗಳು ಬ್ರಾಹ್ಮಣೇತರರಲ್ಲೂ ಇರುತ್ತಾರೆ . ಈ ಗಿಳಿ ಶಾಸ್ತ್ರದವರಲ್ಲಿ ಅವರೇ ಜಾಸ್ತಿ.
ಇನ್ನು ಪುರೋಹಿತರ ವಿಷ್ಯಕ್ಕೆ ಬಂದರೆ ಒಂದು ದಿನಕ್ಕೆ ಅವರು ಪಡೆಯುವ ಕಾಸು ಎಷ್ಟೋ ಸಾಫ್ಟ್‌ವೇರ್ ಮಂದಿಯ ಒಂದು ನಿಮಿಷದ ಸಂಪಾದನೆಗೆ ಸರಿ
ಪುರೋಹಿತರನ್ನು ಹಾಗೆ ಚಿತ್ರಿಸುತ್ತಿರುವುದು ಸಿನಿಮಾ ಹಾಗು ಮಾಧ್ಯಮದವರಷ್ಟೆ.
ಮೇಲು ಕೀಳು ಎನ್ನುವುದು ಎಲ್ಲಾ ಜಾತಿಗಳಲ್ಲೂ ಇವೆ
ಮೊನ್ನೆ ಹೋಟೆಲ್‍ವೊಂದರಲ್ಲಿ ಹರಿಜರೊಬ್ಬರಿಗೆ ಕಾಫಿ ಕೊಡಲು ಹಿಂದೇಟು ಹಾಕಿದ ಹೋಟೆಲ್ ನವರು ಬ್ರಾಹ್ಮಣರೇನಲ್ಲ

ಅತೀ ಬ್ರಾಹ್ಮಣಿಕೆ ಎಂದರೇನು ಮೊದಲು ಹೇಳಿ ನಮ್ಮ
ಹಾಗೆ ಅತೀ ಗೌಡಿಕೆ, ಅತೀ ರೆಡ್ಡಿತನ ಅತೀ ಲಿಂಗಾಯಿತತನ ಎಂಬುದನ್ನೆಲ್ಲಾ ಹೇಳಬಹುದಲ್ಲವೇ
ಯಾವ ಜಾತಿಯದ್ದೂ ಅತೀ ಆಗೋದಿಲ್ಲ. ಅದನ್ನ ಭಾವಿಸುವವರ ಮೇಲೆ ಆವಲಂಬಿಸಿದೆ.

http://thereda-mana....

ರೂಪ

mahesha's picture

ಸರಿ.. ನಾನು ಈ ಸಂಗತಿಯಲ್ಲಿ ವಕಾಲತ್ತಿಗೆ ಇಳಿಯಲ್ಲ..

ಬೈರಪ್ಪರ ’ದಾಟು’ವಿನ ಸತ್ಯಬಾಮೆಯ ಯೋಚನೆಯು ಒಮ್ಮೆ ನೆನೆಪಾಯ್ತು. :)
http://maaysa.wordpr...

hariharapurasridhar's picture

ರೂಪ,
ನಮಸ್ಕಾರ.
ಅಂತೂ "ನಾನು ಬ್ರಾಹ್ಮಣಳು" ಅಂತಾ ಹೇಳುವ ಧೈರ್ಯ ಮಾಡಿದಿರಿ.ಸಂತೋಷ. ಅನೇಕ ನನ್ನ ಮಿತ್ರರಿಗೆ ನಾನು ಹೇಳುವುದುಂಟು, ನಾನೂ ಕೂಡ ಸದಾ ಅದೇ ಚಿಂತನೆ ನಡೆಸುವುದುಂಟು-ಬ್ರಾಹ್ಮಣತ್ವ ಉಳಿಸಿಕೊಳ್ಳಬೇಕು[ಬ್ರಾಹ್ಮಣ ಅಂದ್ರೆ ಯಾರು ಅಂತ ಈಗಾಗಲೇ ನನ್ನ ಕವನದ ಪ್ರತಿಕ್ರಿಯೆಯಲ್ಲಿ ಚರ್ಚೆ ಯಾಗಿದೆ]

" ಕೊರಗು ಶಾಪವಾಗಿ ಕಾಡುತ್ತೆ" ಅನ್ನೋ ಮಾತು ನನ್ನ ಜೀವನದಲ್ಲೇ ನಡೆದು ಹೋಗಿದೆ. ಆದರೆ ಇಂದು ಬ್ರಾಹ್ಮಣ ಜಾತಿಯ ಮೇಲೆ ದಲಿತರು ಹಾರಾಡಲು ಕಾರಣಗಳು ಇಂದಿನದಲ್ಲ. ಎಂದೋ ನಮ್ಮ ಪೂರ್ವಿಕರು ಮಾಡಿದ ತಪ್ಪು ಇಂದು ನಮ್ಮನ್ನು ಸುಡುತ್ತಿದೆ. ನಮಗೆ ನಮ್ಮ ಹಿಂದಿನವರು ಬಿಟ್ಟುಹೋಗಿರುವ ಒಳ್ಳೆಯ ಸಂಗತಿಗಳಷ್ಟೇ ಸಾಕ? ಕರ್ಮಫಲದಲ್ಲಿ ನಂಬಿಕೆ ಇಡುವ ನಾವು ಕೆಲವನ್ನು ಅನುಭವಿಸಲೇ ಬೇಕು. ಅಷ್ಟೇ ಅಲ್ಲ, ನಮ್ಮ ತಾಳ್ಮೆ, ಸಹಾನುಭೂತಿ, ಪ್ರೀತಿ ಪ್ರೇಮಗಳಿಂದ ಜನರ ಹೃದಯ ಗೆಲ್ಲುವ ಕಾರ್ಯವನ್ನು ಪೂರ್ಣ ಮನಸ್ಸಿನಿಂದ ಮಾಡಬೇಕು,
ನನ್ನ ಬ್ಲಾಗ್ ನೊಮ್ಮೆ ನೋಡಿ. ನನ್ನ ಕೆಲವು ಅನಿಸಿಕೆಗಳು ನಿಮಗೂ ಹಿತವಾಗಬಹುದು.ಅಂದಹಾಗೆ ಅರಸೀಕೆರೆ ಮಾಹಿತಿ ಕೇಳಿದವರು ನೀವೇ ಅಲ್ವಾ? ಮಾಹಿತಿ ನೋಡಿದಿರಾ?
ಹರಿಹರಪುರಶ್ರೀಧರ್, ಹಾಸನ.
www.hariharapurasrid...

uttanka's picture

ಏನು ಮಾಡೋದು ರೂಪ ಅವರೇ, ನಮ್ ದೇಶ ದಲ್ಲಿ ಬುದ್ಡಿ ಜೀವಿ ಗಳು ಅಂತ ಅನ್ನಿಸ್ಕೋ ಬೇಕಾದ್ರೆ ಬ್ರಾಹ್ಮಣರನ್ನ ಬೈಯಬೇಕು. ಅವರಿಗೆ ಪೂರೋಹಿತ ಶಾಹಿ ಅಂತೆಲ್ಲ ಹೇಳಬೇಕು. ಇನ್ನು ಬ್ರಾಹ್ಮಣರೋ ಯಾವುದಕ್ಕೂ ಗಲಾಟೆ ಮಾಡೋಕೆ ಹೋಗೋಲ್ಲ!!! ಮೊನ್ನೆ ಚಂಪಾ ಹೇಳ್ತಾ ಇದ್ರಲ್ಲ.. ಬ್ರಾಹ್ಮಣರನ್ನ ತುಳಿಯಿರಿ ಅಂತ!!!
ಈಗ ಬ್ರಾಹ್ಮಣರೇ ಅಲ್ಪ ಸಂಖ್ಯಾತರು!!!

mnsrao's picture

MNS Rao
¨ಬ್ರಾಹ್ಮಣರನ್ನು ಕಂಡರೆ ಇತರರಿಗೆ ಯಾಕೆ ಕಣ್ಣು ಉರಿ ಅಂದರೆ ನೀವು `ಪುಳಿಚಾರು' ಆದರೂ ಏಳಿಗೆಯಾಗುತ್ತಿದ್ದೀರಲ್ಲ, ಅದಕ್ಕೆ. ಒಂದು ತರಹ ಹೊಟೆ ಉರಿ. ಏನೂ ಮಾಡುವುದಕ್ಕೆ ಆಗುವುದಿಲ್ಲ. ಸಹಿಸಿಕೊಳ್ಳಬೇಕು. ಬ್ರಾಹ್ಮಣರಲ್ಲಿ ಕೆಲವರು ಬಡತನದ ಕಾರಣ ಕೆಲವೊಂದು ಮೋಸದ ಕೆಲಸ ಮಾಡುತ್ತಿದ್ದಾರೆ. ಇದೂ ಒಂದು ಕಾರಣ ಇರಬಹುದು. ಯಾವ ಗುಂಪಿನಲ್ಲಿ ಕೆಟ್ಟವರಿಲ್ಲದೇ ಇಲ್ಲ. ಒಳ್ಳೆಯ ರೀತಿ ಬಾಳುವೆ ಮಾಡುವ ಸನ್ನಿವೇಶ ಬ್ರಾಹ್ಮಣರಿಗೆ ಬೇರೆಯವರಿಗಿಂತ ಹೆಚ್ಚು ಇದೆ ಏಕೆಂದರೆ, ಬಡತನ ಸಹಿಸುವುದು, ಅಷ್ಟಾಗಿ ಆಸೆ ಇಲ್ಲದಿರುವುದು. ಒಳ್ಳೆಯ ನಡುವಳಿಕೆಯ ಹಿನ್ನೆಲೆ. ಇದನ್ನು ಮುಂದುವರಿಸಿಕೊಂಡು ಬೇರೆಯವರನ್ನು ಗೆಲ್ಲಬೇಕಲ್ಲವೆ!

gnanadev's picture

Gnanadev Molakalmuru
i really appreciated your innermost feelings Roopa. you are right, today it has become a fashion to critisice and run down the Brahmins for unneccessary reasons. this Brahmin baiting should stop. my sympathies are with you though i belong to a backward community. my kannada file is not supported. that's why this english letter. the present day brahmin community has tolerated all these insults, embitterment because of their ancestors misdeed. you are right the untouchablilty has been almost wiped out in cities and big towns. in fact as per my knowledge and personal experience, the non brahmins rather than the brahmins are more vociferous and aggressive in treating the dalits as untouchables in rural areas. i have great brahmin freinds who are not at all narrow minded. let the so called intellectuals, progressive thinkers, leftists stop this brahmin baiting, berating. let wisdom and sanity dawn on them.

roopablrao's picture

ತುಂಬಾ ಥ್ಯಾಂಕ್ಸ್ ಸಾರ್

ಹಿಂದುಳಿದವರೆಂದು ಹೇಳಿಕೊಂಡೂ ಎಲ್ಲರಿಗಿಂತಲೂ ಮುಂದಿದ್ದೀರ್ರಿ
ನಮ್ಮವರೇ ನಮ್ಮನ್ನು ಆಡಿಕೊಂಡು ನಗುವ ಈ ಸಂಧರ್ಭದಲ್ಲಿ ನಿಮ್ಮ ಮಾತು ನಲ್ಮೆ , ಹರುಷ ತಂದಿತು.

http://thereda-mana....

ರೂಪ

gnanadev's picture

Gnanadev Molakalmuru
ನಿಮ್ಮ ಲೇಖನ ಓದಿದೆ. ನಿಮ್ಮ ಮನದಾಳದ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿಜ ನಿಮ್ಮ ಅಭಿಪ್ರಾಯಗಳು ಮನನೀಯವಾದುದ್ದೇ. ವೃಥಾ ಬ್ರಾಹ್ಮಣರನ್ನು ಅಪಮಾನಿಸುವುದು, ಹೀಯಾಳಿಸುವುದು ಒ0ದು ಪ್ರಗತಿಪರ ಧೋರಣೆ, ಬೊಉದ್ಧಿಕ ಕಸರತ್ತು ಎ0ದೇ ಭಾವಿಸಿರುವ ನಮ್ಮ ಬುದ್ಧಿಜೀವಿಗಳು ನಿಜಕ್ಕೂ ಪ್ರಾಮಾಣಿಕವಾಗಿ ಚಿ0ತಿಸಲಿ. ಯಾವುದೋ ಕಾಲಘಟ್ಟದಲ್ಲಿ ಈ ಅಸ್ಪೃಶ್ಯತೆಹುಟ್ಟಿಕೊ0ಡದ್ದಕ್ಕೆ ಈಗಿನ ಆಧುನಿಕ ಕಾಲದಲ್ಲೂ ಬ್ರಾಹ್ಮಣರನ್ನೇ ಗುರಿಯಾಗಿಸಿಕೊ0ಡಿರುವುದು ನಿಜಕ್ಕೂ khEdanIya.

hariharapurasridhar's picture

ಶ್ರೀ ಜ್ಞಾನದೇವ್,

ನಮಸ್ತೆ, ನಿಮ್ಮ ವಿಶಾಲ ಹೃದಯಕ್ಕೆ ನನ್ನ ಅಂತ:ಕರಣದ ನಮನಗಳು. ನನ್ನ ಕೆಲವು ವಿಚಾರಗಳನ್ನು ನನ್ನ ಬ್ಲಾಗ್ ನಲ್ಲಿ ಓದಿ ನಿಮ್ಮ ಪ್ರತಿಕ್ರಿಯೆ, ಸಲಹೆ ಕೊಡಿ. ಬಹುಷ: ಸಮಾನ ಮಾನಸಿಕರಿರಬಹುದು.
ಹರಿಹರಪುರಶ್ರೀಧರ್
www.hariharapurasrid...

Rajeshwari's picture

ಸರಿಯಾಗಿ ಬರೆದ್ದಿದ್ದೀರಿ. ಎಲ್ಲಾ ಕಡೆ ಇರುವಂತೆ ನಮ್ಮಲ್ಲಿಯೂ ಎಲ್ಲಾ ತರಹದ ಜನ ಇದ್ದಾರೆ. ಬ್ರಾಹ್ಮಣರ ಬಗ್ಗೆ ಪುಸ್ತಕಗಳನ್ನು ಮನ ಬಂದಂತೆ ಚಿತ್ರಿಸುತ್ತಾರೆ. ಹಿಂದಿನಷ್ಟು ಈಗ ಯಾರು ತುಂಬ (ಹಿಂದಿನಂತೆ) ಮಡಿವಂತಿಕೆ ಮಾಡುವುದಿಲ್ಲ. ನಮ್ಮ ಮನೆಗೆ ಒಂದು ದಿನ ನಮ್ಮ ಪಕ್ಕದ ಮನೆಯ ಹುಡುಗ ಬಂದು ಮನೆಯ ಕೀ ಇಲ್ಲ ನಾನು ನನ್ನ ಲಗೇಜ್ ಇಲ್ಲೇ ಇಟ್ಟು ಹೋಗುತ್ತೇನೆ ಅಂದ. ಅವನಿಗೆ ಸ್ನಾನ , ತಿಂಡಿ ಮಾಡಿಕೊಂಡು ಹೋಗುವಂತೆ ತಿಳಿಸಿದೆವು , ನಂತರ ಅವನು ಹಾಗೆಯೇ ಮಾಡಿದನು (ಅವನು ಉತ್ತರ ಭಾರತೀಯ), ನಂತರ ನನ್ನ ಕ್ರಿಶ್ಚಿಯನ್ , ಗೌಡ , ಲಿಂಗಾಯಿತ , ಮುಸ್ಲೀಂ , ಪ.ಜಾ.ಗೆಳತಿಯರಿಗೆ , ಹೀಗೆ ಯಾರು ಬಂದರು ಅವರಿಗೆ ಸಮಯಕ್ಕೆ ತಕ್ಕಂತೆ ಊಟವೋ , ತಿಂಡಿಯೋ ಅಥವ ಕಾಫಿಯನ್ನು ಕೊಟ್ಟು ಕಳುಹಿಸಿದ್ದೇನೆ. ದುಡ್ಡಿನ ಸಹಾಯ , ಓದುವುದರಲ್ಲಿ ಸಹಾಯವನ್ನು ಮಾಡಿದ್ದೇನೆ. ಅಲ್ಲಿ ಯಾವುದೇ ಕಡೆ ತಾರತಮ್ಯ ಮಾಡಿಲ್ಲ. ಆದ್ರೆ ನಾನು ಯಾವಾಗಲಾದ್ರು ಊಟದ ಬಗ್ಗೆ ಮಾತನಾಡಲು ಹೋದ್ರೆ ಬ್ರಾಹ್ಮಣ ಭೋಜನ ಪ್ರಿಯ ಅಂತ ಹೀಯಾಳಿಸುತ್ತಾರೆ. ಯಾಕೆ ಬೇರೆಯವರು ಊಟವನ್ನೇ ಮಾಡುವುದಿಲ್ಲವೇ?

ಗವಿಪುರಂ ಬಡಾವಣೆಯಲ್ಲಿದ್ದಾಗ ನೀರಿನ ಸಮಸ್ಯೆ ಬಂದಿತ್ತು , ಆಗ BWSSBಯಿಂದ ನೀರು ಸಪ್ಲೆ ಮಾಡುವುದಕ್ಕೆ ಒಬ್ಬರು ಬರುತ್ತಿದ್ದರು , ಅವರು ನನ್ನನ್ನು ನೋಡಿ ನೀವು ಬ್ರಾಹ್ಮಣರಾ ಅಂತ ಪ್ರಶ್ನೆ ಕೇಳಿ ತಕ್ಷಣ ನಿಮ್ಮ ಮನೆಗಳಲ್ಲಿ ಕಾಫಿ ಚೆನ್ನಾಗಿರುತ್ತೆ ಮಾಡಿ ಕೊಡಿ ಅಂತ ಕೇಳಿದ ಆ ವ್ಯಕ್ತಿಗೆ ಕಾಫಿಯನ್ನು ಮಾಡಿ ಕೊಟ್ಟಿದ್ದೇನೆ. ನಂತರ ಅವರು ಬಂದಾಗಲ್ಲೆಲ್ಲಾ ಕಾಫಿ ಕೊಡಿ ಅಂತ ಹಿಂಜರಿಕೆಯಿಲ್ಲದೆ ಕೇಳುತ್ತಿದ್ದರು ಅವರಿಗೆ ಎಂದೂ ಇಲ್ಲಾ ಎನ್ನದೆ ಕಾಫಿ ಕೊಟ್ಟಿದ್ದೇನೆ.

ಬುದ್ದಿಜೀವಿಗಳು ಕೆಲವರನ್ನು ಸಂತೋಷಪಡಿಸುವುದ್ದಕ್ಕಾಗಿ ನಮ್ಮ ಪದ್ದತಿಗಳನ್ನು ಅವರಿಗೆ ಇಷ್ಟ ಬಂದಂತೆ ಚಿತ್ರಿಸುತ್ತಾರೆ. ಈಗ ನಿಜವಾಗಿಯೂ ತುಳಿಯಲ್ಪಟ್ಟಿರುವವರು ನಾವೇ.

mahesha's picture

http://www.vijaykarn...

ರೂಪಕ್ಕ ಹೇಳಿದ ಬರಹ ಇದಿರಬೋದು..

http://maaysa.wordpr...

anil.ramesh's picture

ಹೂಂ ಇದೇ?

anil.ramesh's picture

ರೂಪ,
ನೀವು ಹೇಳಿದ ಮೇಲೆ, ಸಂಜೆ, ನಾನು ನನ್ ಸ್ನೇಹಿತನ ಮನೆಗೆ ಹೋಗಿ ವಿಕ ಓದಿದೆ...

ತುಂಬಾ ಬೇಜಾರ್ ಆಯ್ತು... :( ಜೊತೆಗೇ ಸಿಟ್ಟೂ ಬಂತು.

ಇಂತಿ ನಿಮ್ಮ,
ಅನಿಲ್ ರಮೇಶ್.

vikashegde's picture

ರೂಪಾವ್ರೆ, ನನಗೂ ಹೀಗೆ ಅನಿಸಿದೆ. ನಾನು ಏನೂ ಮಾಡದೇ ಇದ್ರೂ ನಮ್ಮನ್ನೂ ಸೇರ್ಸಿ ಯಾಕೆ ಉಗಿತಾರೆ ಈಜನ ಅಂತ. ! ಕೆಲವರಿಗೆ ಕಣ್ಣುರಿ, ಹೊಟ್ಟೆ ಉರಿ ಜೊತೆಗೆ ಮೈ ಉರಿ , ಮತ್ತೊಂದು ಉರಿಯೂ ಕೂಡ .! ಅದು ಹಿಂದಿನ ಕಾಲದ ಪರಿಣಾಮ ಅನಿಸುತ್ತದೆ, ನೋಡೋಣ . ಹೋಗ್ತಾ ಹೋಗ್ತಾ ಮುಂದಿನ ಪೀಳಿಗೆಗಳಿಗೆ ಸರಿಹೋಗಬಹುದು. ಆದ್ರೆ ಅದು ಆಗದೆ ಇದ್ದಂಗೆ ಕೆಲವು 'ಬುದ್ದಿಜೀವಿ'ಗಳ ( 'ಸಂಪದ'ದಲ್ಲೂ ಆವಾಗಾವಾಗ ಕಾಣಿಸಿಕೊಳ್ತಾರೆ) , ರಾಜಕಾರಣಿಗಳ ಹುನ್ನಾರ ಇರುತ್ತೆ. ಅವರನ್ನ ಮಟ್ಟ ಹಾಕಬೇಕಷ್ಟೆ.

mahesha's picture

http://www.vijaykarn...

ಚಂದ್ರ ಶೇಕರ ಕಂಬಾರ

http://maaysa.wordpr...

anil.ramesh's picture

ಮಹೇಶ,
error 404 ಅಂತ ಬರ್ತಿದೆ...

ಇಂತಿ ನಿಮ್ಮ,
ಅನಿಲ್ ರಮೇಶ್.

mahesha's picture
anil.ramesh's picture

ನನ್ನಿ...

Nagaraj.G's picture

ಮಾಯ್ಸ ರವರೆ ನಿಮ್ಮ ಲಿಂಕ್ Error 404ಬರುತ್ತಿದೆ

ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

uniquesupri's picture

ನನ್ನನ್ನು ಈ ದೇಶದಲ್ಲಿ ಒಬ್ಬ ಬ್ರಾಹ್ಮಣ ಎಂದು ಸಂವಿಧಾನ ಗುರುತಿಸುವುದರಿಂದ ಒಬ್ಬ ಬ್ರಾಹ್ಮಣನಾಗಿ ಈ ಅಭಿಪ್ರಾಯ:
ಬ್ರಾಹ್ಮಣರ ಬಗ್ಗೆ ದಲಿತರಿಗೆ ಸಾವಿರಾರು ವರ್ಷಗಳಿಂದ ಕೋಪವಿದೆ, ಸಿಟ್ಟಾಗಲು ಕಾರಣಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಭೈರಪ್ಪನವರು ಆವರಣದಲ್ಲಿ ಚಿತ್ರಿಸಿರುವ ಹಾಗೆ ಇತಿಹಾಸದಿಂದ ವರ್ತಮಾನ ಬೇರ್ಪಡಲು ಸಾಧ್ಯವಿಲ್ಲ. ಮುಸ್ಲೀಂ ಆಕ್ರಮಣಕಾರರು ಹಾಗೂ ಲೂಟಿಕೋರರ ಬಗ್ಗೆ ಸತ್ಯಶೋಧನೆ ಮಾಡಿದಷ್ಟೇ ಸ್ಪಿರಿಟ್ಟಿನಿಂದ ನಾವು ಅಸ್ಪೃಶ್ಯತೆಯನ್ನು ಪಾಲಿಸಿಕೊಂಡು ಬಂದವರ ಬಗೆಗೂ ತಿಳಿಯಬೇಕು. ಇಲ್ಲಿ ಸೋಕಾಲ್ಡ್ ಸೆಕ್ಯುಲರ್ ಚಿಂತಕರು ಅನುಸರಿಸುವ ಇಬ್ಬಂದಿತನವನ್ನು ನಾವು ಅನುಸರಿಸುವುದು ಬೇಡ.
ಹಾಗೆ ನೋಡಿದರೆ ಇಂಧೂಧರ ಹೊನ್ನಾಪುರರ ವಾದದಲ್ಲಿ ಒಂದು ಅರ್ಥವಿದೆ. ಬಹುಸಂಖ್ಯಾತರಾದ ಹಿಂದುಳಿದವರು ತಿರುಗಿಬಿದ್ದಿದ್ದರೆ ಭಾರತದಲ್ಲಿ ಎಂದೂ ಸರಿಪಡಿಸಲಾಗದ ಕಂದಕ ಏರ್ಪಡುತ್ತಿತ್ತು. ಬಹುದೊಡ್ದ ಅಂತಃಕಲಹಕ್ಕೆ ಎಡೆಮಾಡಿಕೊಡುತ್ತಿತ್ತು. ಆದರೆ ನಾವು ಅಂಬೇಡ್ಕರರಂತಹ ಮುತ್ಸದ್ಧಿಯ ಮಾರ್ಗದರ್ಶನದಲ್ಲಿ ಸಂವಿಧಾನವನ್ನು ಅಪ್ಪಿಕೊಂಡು ಬಚಾವಾದೆವು. ಇದರಲ್ಲಿ ದಲಿತರ ಸಂಯಮದಷ್ಟೇ ಪಾತ್ರವನ್ನು ಬ್ರಾಹ್ಮಣರ ವಿವೇಚನೆ, ತಾಳ್ಮೆ ಹಾಗೂ ಸಹಿಷ್ಣುತೆಯೂ ವಹಿಸಿತು ಎಂಬುದನ್ನು ಮರೆಯಬಾರದು. ಏಕೆಂದರೆ ಸಂವಿಧಾನ ಬದ್ಧವಾಗಿ ಜಾರಿಗೆ ಬಂದಿರುವ ಮೀಸಲಾತಿ ಹಾಗೂ ಅನೇಕ ಸವಲತ್ತುಗಳು ಅಂಬೇಡ್ಕರರು ವಿಧಿಸಿದ ಕಾಲಮಿತಿಯನ್ನು ಮೀರಿ ಎಕ್ಸ್‌ಟೆಂಡ್ ಆಗುತ್ತಿರುವುದು, ತಮ್ಮನ್ನು ಜಾತಿಯ ಹೆಸರಿನಿಂದ ಅವಹೇಳನ ಮಾಡುತ್ತಿರುವುದು, ಜಾತಿಯ ಕಾರಣದಿಂದಾಗಿ ಪ್ರತಿಭೆಯಿದ್ದೂ ಅವಕಾಶದಿಂದ ವಂಚಿತರಾಗುತ್ತಿರುವುದು ಇದನ್ನೆಲ್ಲಾ ಸಹಿಸಿಕೊಳ್ಳುತ್ತಿರುವವರು ಬ್ರಾಹ್ಮಣರು. ಇವರೂ ಸಹ ತಿರುಗಿ ಬೀಳಬಹುದು ಎಂಬುದರ ಅರಿವು ಇದ್ದರೆ ಚೆನ್ನ.
ಒಬ್ಬನ ಅಜ್ಜ ಯಾರನ್ನೇ ರೇಪ್ ಮಾಡಿದ ಎಂಬ ಕಾರಣಕ್ಕೆ ಮೊಮ್ಮಗನನ್ನು ರೇಪಿಸ್ಟ್ ಎಂದು ಕರೆದರೆ ಅದು ಹೇಗೆ ಅಮಾನವೀಯ ಅನ್ನಿಸುತ್ತದೆಯೋ ಹಾಗೆಯೇ ಯಾವುದೋ ಕಾಲದಲ್ಲಿ ಬ್ರಾಹ್ಮಣರು ಶೋಷಣೆ ಮಾಡಿದ್ದರು ಎಂಬ ಕಾರಣಕ್ಕೆ ಬ್ರಾಹ್ಮಣರು ಶೋಷಕರು ಎಂದು ಮಾತನಾಡುವುದು ಅಮಾನವೀಯ. ಆದರೆ ಆ ಅಮಾನವೀಯವಾದ ನಿಂದನೆಯನ್ನೂ ನಾವು ಸಹಿಸುವಷ್ಟು ಸಹಿಷ್ಣುಗಳಾಗಿರುವುದು ನಮ್ಮ ಕೊರಗು ಆಗಬೇಕಿಲ್ಲ, ಅದು ನಮ್ಮ ಹೆಮ್ಮೆಯಾಗಲಿ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

srinivasps's picture

> ಬ್ರಾಹ್ಮಣರ ಬಗ್ಗೆ ದಲಿತರಿಗೆ ಸಾವಿರಾರು ವರ್ಷಗಳಿಂದ ಕೋಪವಿದೆ, ಸಿಟ್ಟಾಗಲು ಕಾರಣಗಳಿವೆ ಎಂಬುದನ್ನು ಒಪ್ಪಿಕೊಳ್ಳಬೇಕು.

ಹೆಚ್ಚು ಮಾಹಿತಿ/ಪುರಾವೆ ಕೊಡ್ತೀರಾ? ಸಾವಿರಾರು...ಹ್ಮ್...ಕುತೂಹಲ ಹೆಚ್ಚಿದೆ...

--ಶ್ರೀ

ಸಂಗನಗೌಡ's picture

ಬಹುಶ, ಈ ’ಸಹಿಸೋದು’ ಅನ್ನೋ ಕಾನ್ಸೆಪ್ಟೇ ತಪ್ಪು. ಆಗ ಅಸ್ಪ್ರುಶ್ಯರು ಅನ್ನಿಸಿಕೊಂಡವರು ಸಹಿಸಿಕೊಂಡಿದ್ದರು, ಯಾಕೆ ಸಹಿಸಬೇಕು ಅನ್ನುವ ಕೇಳಿಕೆ ಮೂಡಬೇಕಿತ್ತು, ಆಗಲೇ. ಬಿಕ್ಶುಕನೊಬ್ಬ ಹಿಂದೆ ದೊಡ್ಡ ಸಾಹುಕಾರನಾಗಿದ್ದ ಅಂದರೂ, ಈಗ ಏನಿಗಾದ್ದಾನೆ, ಅದು ಮುಕ್ಕೆ. ಬರೀ ಬ್ರಾಮಣರೇ ಅಲ್ಲ,.. ಇತರ ತಮ್ಮನ್ನು ತಾವು ಮೇಲು ಅಂದುಕೊಂಡಿದ್ದ(ಬ್ರಾಮಣರನ್ನೂ ಸೇರಿಸಿ) ಜಾತಿಯವರೂ ದಲಿತರನ್ನು ಹೀಗಳೆಯುವದರಲ್ಲಿ ಹಿಂದೆ ಪಾಲುದಾರರಾಗಿದ್ದಾರೆ. ಮನೆಯಲ್ಲಿ ಯಾರಿಗಾದರೂ ಕಾಯಿಲೆ-ಕಸಾಲೆ ಆದರೆ ಅವರ ಉಗುರನ್ನು ಅನ್ನದಲ್ಲಿ ಬೆರೆಸಿ ಕೊಡುವದು, ಮೇಲು ಜಾತಿಯವರ ಓಣಿಯಲ್ಲಿ ಹೆಜ್ಜೆ ಮೂಡದಂತೆ ಕಸಬರಿಕೆ ಕಟ್ಟಿಕೊಂಡು ಹೋಗಬೇಕಿತ್ತಂತೆ, ಮೇಲ್ ಜಾತಿಯ ಗಂಡಸು ಕೀಳು ಜಾತಿಯ ಯಾವುದೇ ಹೆಣ್ಣನ್ನು ಇಸ್ಟ ಬಂದಂತೆ ಕೂಡಬಹುದಿತ್ತಂತೆ. ಇವೆಲ್ಲ ಏನು?
ಇದೆಲ್ಲ ಹೋಗಲಿ, ಶೋಶನೆ ಮಾಡೋರಿಗೇನು, ಮಾಡೋಕೆ ಬಿಟ್ಟರೆ ಏನನ್ನಾದರೂ ಮಾಡೋಕೆ ನೋಡುತ್ತಾರೆ, ಆದರೆ ಇದನ್ನೆಲ್ಲಾ ಯಾಕೆ ಸಹಿಸಿಕೊಂಡಿದ್ದರು ಕೆಳಜಾತಿಯವರು?.. ಮುಕ್ಕೆಯಾಗಿ ಆಗಿನ ರಾಜಕೀಯ ವೆವಸ್ತೆ ಹಂಗಿತ್ತು, ಬ್ರಾಮಣ ಮತ್ತು ಇತರೇ ಮೇಲ್ ಜಾತಿಯವರಿಗೆ ರಾಜರ ಬೆಂಬಲ ಜೋರಾಗಿ ಇತ್ತು..
ಆದರೆ ಯಾವುದೇ ಕಾಲಮಾನವಿರಲಿ, ಶೋಶನೆ ಮಾಡೋರು ಮತ್ತು, ಶೋಶನೆಗೊಳಗಾಗುವವರು ಇದ್ದೇ ಇರುತ್ತಾರೆ,.. ಈಗ ಬ್ರಾಮಣರು ಅತವಾ ಇನ್ಯಾವುದೇ ಆಗ ಮೇಲ್ ಜಾತಿಯವರೆನಿಕೊಂಡಿದ್ದವರು ಶೋಶನೆಗೊಳಗಾಗುತ್ತಿದ್ದಾರೆ ಅಂತ ಅನ್ನಿಸುವದಿಲ್ಲ, .. ಈಗಿನ context ಬೇರೆ ಇದೆ,.. ಈಗಿರುವದು ಹಣವಂತರು, ಹಣ ಇಲ್ಲದವರನ್ನು ಶೋಶನೆ ಮಾಡುವದು,.. ಹಣವಂತರ ಮಕ್ಕಳು, ತಂದೆ-ತಾಯಿ ಹಣದಲ್ಲಿ ಒಳ್ಳೇ ವಿದ್ದೆ ಕಲಿತು,.. ಇನ್ನೂ ಹೆಚ್ಚಿನ ಹಣ ಮಾಡುವಲ್ಲಿ ಗೆಲುವು ಹೊಂದುತ್ತಾರೆ,.. ಹಣವಿಲ್ಲದವರ ಮಕ್ಕಳು ಒಳ್ಳೆ ವಿದ್ದೆ ಸಿಗದೇ ಸೋಲುತ್ತಾರೆ, ಇದೂ ಶೋಶನೆಯೇ,.. ಕೋರ್ಟಿನಲ್ಲಿ ನಿಮ್ಮ ಕೇಸಿದೆಯ?.. ನಿಮ್ಮಲ್ಲಿ ಹಣ ಇದೆಯಾ?.. ಗೆಲುವು ನಿಮ್ಮದೇ.. ಇದು ಶೋಶನೆ ಅಲ್ಲದೇ ಮತ್ತೇನು?..
ಈಗಿನ ಜಾತಿಗಳು, ಅಪ್ಪರ್ ಕ್ಲಾಸ್, ಅಪ್ಪರ್ ಮಿಡಲ್ ಕ್ಲಾಸ್, ಮಿಡಲ್ ಕ್ಲಾಸ್, ಲೋವರ್ ಮಿಡಲ್ ಕ್ಲಾಸ್, ಲೋವರ್ ಕ್ಲಾಸ್, ಬಿಲೋವ್ ಪಾವರ್ಟಿ ಲೈನ್... ಈಗಿನ ಬಿಲೋವ್ ಪಾವರ್ಟಿ ಲೈನ್‍ನವರು ಆಗಿನ ಶೂದ್ರರು...

kalpana's picture

"ಈಗಿನ ಜಾತಿಗಳು, ಅಪ್ಪರ್ ಕ್ಲಾಸ್, ಅಪ್ಪರ್ ಮಿಡಲ್ ಕ್ಲಾಸ್, ಮಿಡಲ್ ಕ್ಲಾಸ್, ಲೋವರ್ ಮಿಡಲ್ ಕ್ಲಾಸ್, ಲೋವರ್ ಕ್ಲಾಸ್, ಬಿಲೋವ್ ಪಾವರ್ಟಿ ಲೈನ್... ಈಗಿನ ಬಿಲೋವ್ ಪಾವರ್ಟಿ ಲೈನ್‍ನವರು ಆಗಿನ ಶೂದ್ರರು..." - ಇಷ್ಟು ಮಾತ್ರ ಇದ್ದಿದ್ರೆ ಚೆನ್ನಾಗಿರ್ತಿತ್ತು. ಆದ್ರೆ, ಭಾರತದಲ್ಲಿ, ಓದು ಮತ್ತು ಕೆಲಸಕ್ಕೆ ಜಾತಿ(SC/ST) ಅವಲಂಬಿತ ಮೀಸಲಾತಿ ಇನ್ನೂ ಇದೆ ಅಲ್ವೆ? ಅದು economic-based ಮೀಸಲಾತಿ ಆಗುವ ತನಕ ನೀವು ಹೇಳಿದ್ದು ನಡೆಯೊಲ್ಲ.
~ಕಲ್ಪನ

Aravind M.S's picture

ಕಲ್ಪನಾರವರೇ,

ಇಂದು ಸರ್ಕಾರೀ ಕೆಲಸಗಳ ಜತೆ ಖಾಸಗಿ ಉದ್ದಿಮೆಗಳಲ್ಲೂ ಮೀಸಲಾತಿ ಕೇಳುತ್ತಿರುವ ಈ ದಿನಗಳಲ್ಲಿ ನೀವು ಹೇಳುತ್ತಿರುವುದು ಅತಿ ಸತ್ಯ. ಜನಸಂಖ್ಯೆ ನಿಗ್ರಹಿಸುವ ಮೂಲ ಸಾಕ್ಷಿ ಪ್ರಜ್ಞೆ ಇವರಿಗೆ ಬೇಡವೇ. ತಮ್ಮ ಆಸೆ ಬಲಿಕೊಟ್ಟು ನ್ಯೂಕ್ಲಿಯಾರ್ ಫ್ಯಾಮಿಲಿ ಇಲ್ಲಾ ಪ್ರತಿಭಾ ಪಲಾಯನ ಆಗುತ್ತಾ ಕುಗ್ಗುತ್ತಿರುವ ಬ್ರಾಹ್ಮಣ ಜನಸಂಖ್ಯೆ ಇವರ ದೌರ್ಜನ್ಯಕ್ಕೆ ಸಾಕ್ಷಿಯೇಕಲ್ಲ. ಬೆರಳಣಿಕೆಯಷ್ಟಿರುವ ಬ್ರಾಹ್ಮಣರು ಎಂದು ಜರೆಯುವ ಚಂಪಾರಂಥವರದು ಎಂಥಾ ಮನುಷ್ಯರು ?

ತಮ್ಮ ಜನಸಂಖ್ಯೆಯನ್ನು ಬೆಳೆಸಲು ಬೇಕಾಗಿರುವ ಮೇಲ್ಜಾತಿಯವರನ್ನು ಅನಿವಾರ್ಯದಿಂದ ಕೆಲಸಕ್ಕಿಟ್ಟುಕೊಂಡಿದ್ದಾರೆಯೇ ಹೊರತು, ಮೇಲ್ಜಾತಿಯ ಬೆಳವಣಿಗೆಗಂತೂ ಅಲ್ಲ. ಇದಕ್ಕೆ, ಮೇಲ್ಜಾತಿಗಳು, ಉಕ್ಕುತ್ತಿರುವ ದಲಿತ ಸೇನೆಗಳೇ ಸಾಕ್ಷಿ.

ಇದರ ಇಂದಿನ, ಮುಂದಿನ ಪರಿಣಾಮ ಅನೇಕ ವಿದೇಶೀ / ಸ್ವದೇಶೀ ಕಂಪೆನಿಗಳ ಕಾಲ್ತೆಗೆತ ಅದರಿಂದಾಗುವ ದುರ್ಭರತೆ, ಅನರ್ಥ. ಮಹೇಶಣ್ಣ ಹೇಳಿದಂತೆ ಇದಕ್ಕೂ ಬ್ರಾಮ್ರ ಹುನ್ನಾರ ಕಾರಣ ಎಂದಾರು :) ಬರ್ತೇನೆ !

- ಅರವಿಂದ್

mahesha's picture

ಯುನಿಕ್ ಸುಪ್ರಿ.. ನಾಮ್ ಕಮೆಂಟಿಗೆ

"ದಲಿತರ ಮೀಸಲಾತಿ ಕಂಡರೆ ಯಾಕ್ರಿ ಬ್ರಾಮ್ರಿಗೆ ಕಣ್ಣುರಿ ಹೊಟ್ಟೆ ಉರಿ" ಎಂದು ಬ್ಲಾಗ್ ಬರಬೋದು ...

ಕೆಲ ಜಾತಿಗಳು ಮತ್ತು ಬುಡಕಟ್ಟುಗಳಿಗೆ ಮೀಸಲಾತಿ ಇಂದಿಗೂ ಬೇಕು.. ಅದಕ್ಕೆ ನಾವು ಆರಿಸಿಕೊಳಿಸಿದವರೇ ಅದನ್ನು ಮುಂದುವರಿಸಿದ್ದೂ. ಆದರೆ ಮತಾಂತರ ಆದವರಿಗೆ ಮೀಸಲಾತಿ ಇರಲ್ಲ..

ಇಲ್ಲಿ ಮೀಸಲಾತಿಗೂ ಮತಾಂತರಕ್ಕೂ ಯಾ ನಂಟೂ ಇಲ್ಲ. ಅಲ್ಲಿ ಇಂದೂದರ ಹೇಳಿದ್ದು ಒಟ್ಟಾರೆ ಹಿಂಗೆ ಎಂದು ನನ್ನ ತಿಳಿವು:
"ಯಾಕೆ ಬರೀ ಬ್ರಾಮ್ರಾದ ಬಯ್ರಪ್ಪ, ಪೇಜಾವರ ಮುನಿ, ರಾ ಗಣೇಶ, ಮುಂತಾದವರು ಮತಾಂತರದ ಬಗ್ಗೆ ಮಾತಾಡ್ತಾರೆ... ಮಿಕ್ಕ ಜಾತಿಯವರು ಯಾಕಿಲ್ಲ’.
ಬರೀ ಬ್ರಾಮ್ರೇ ಮತಾಂತರವನ್ನ ವಿರೋದಿಸಿ ಮಾತಾಡ್ತಾ ಇರೋದರಿಂದ ಹಿಂಗೆ ಗುಮಾನಿ ಬರತ್ತೆ.. ತುಸು ಬೇರೆ ಜಾತಿಯ ಬರಹಗಾರರು ಏನ್ ಹೇಳ್ತಾರೆ ಎಂದು ನೋಡಲು ಬಿಡಬೇಕು.

ಗಮನಿಸಿರಿ.. ಬ್ರಾಮ್ರಲ್ಲದ ಬರಹಗಾರರು, ಚರ್ಚೆಯಾಳುಗಳು ಬಯ್ರಪ್ಪರನ್ನು ತಪ್ಪು ಎಂದಿದ್ದಾರೆ. ಹಾಗು ಬಯ್ರರಪ್ಪನ್ನು ಸರಿ ಎಂದವರಲ್ಲಿ ೯೯% ಬ್ರಾಮ್ರರೇ.
ನಮ್ ನಾಡಿನ ದೊಡ್ಡ ಜಾತಿಗಳಾದ ಲಿಂಗಾಯರು, ಗವ್ಡರು, ಮುಸ್ಲಿಮರು, ಕುರುಬರು ಇದರ ಬಗ್ಗೆ ಏನೂ ಹೇಳದೇ ಸುಮ್ಮನಿದ್ದಾರೆ.

ಇನ್ನು ವಿಕದ ಸಂಪಾದಕರ ಜಾತಿಯೂ ಇಲ್ಲಿಗೆ ಲೆಕ್ಕಕ್ಕೆ ಬಂದು ’ಬ್ರಾಮ್ರ ದಂಡು’ ಎಂದು ಅನ್ನಿಸಿಕೊಳ್ಳಲ್ವ?

ಚಂಪಾ ಅವರ ಮಾತು ಇಂದೂದರರಿಗಿಂತ ಹರಿತವಾಗಿದೆ ನೋಡಿ.. ಹಾಗೇ ಚಂಪಾ ಒಂದು ದೊಡ್ಡ ಜಾತಿಯವರು ಎಂಬುದನ್ನು ಗಮನಿಸಿರಿ.

ಹಾಗೇ ಬರಗೂರು ರಾಮಚಂದ್ರಪ್ಪ ’ಮರ್‍ಯಾದಸ್ತರಾಗಿ’ ಎಂದು ಹೇಳಿದ್ದು ಕಡಮೆಯಾ? ಅದರ ಒಳಹುರುಳು ಅರಿಯಬೇಕಲ್ವ.!

ಈಗ ಸುಮ್ನೆ ಇಲ್ಲದ ಕುರ ಕೆರದಂತೆ ಈ ಚರ್ಚೆ ಎಬ್ಬಿಸಿದ ಮೊದಲಾಳು ಬ್ರಾಮ್ರಾಗಿ, ಅದಕ್ಕೆ ಪರ ಬರೀ ಬ್ರಾಮ್ರಾಗಿ, ಅದಕ್ಕೆ ಆಪೋಸಿಟ್ ಬೇರೆ ಜಾತಿಯ ಬರಹಗಾರರೇ ಆಗಿರುವಾಗ ಇದು ’ಬ್ರಾಮ್ರು vs ಮಿಕ್ಕವರು’ ಆಗೋದಿಲ್ವೇ?

ವಿಕ ಕೂಡಲೇ ಈ ಚರ್ಚೆ ನಿಲ್ಲಿಸಿದ್ರೆ, ರೂಪ ಮೇಡಂ ಅವರಿಗೆ ನಮಗೆಲ್ಲ ನಮ್ಮ ಜಾತಿಯನ್ನ ಹೀನಾ ಮಾನಾ ಬಯ್ಯೋದನ್ನು ಓದೋದು ತಪ್ಪತ್ತೆ ಅಲ್ವೇ?

ಇನ್ನೂ ಈ ಚರ್ಚೆಯಲ್ಲಿ ಎಶ್ಟು ಗದ್ದಲವಿದೆಯೋ!

’ಕರೆದೂ ಕರೆದೂ ಕೆರದಲ್ ಹೊಡೆಸಿಕೊಂಡ್ರೂ ಅನ್ನೋದಕ್ಕೆ’ ಇದು ಮಾದರಿಯಾಗಬೋದು. ವಿಕದ ಚರ್ಚೆಗಳೂ ಯಾವಾಗಲೂ ಬಲು ಅಸಯ್ಯ ಹೇಸಿಗೆಯ ಮಟ್ಟ ತಲುಪಿಬಿಡುತ್ತವೆ(ಹಿಂದಿನ ಚರ್ಚೆಗಳನ್ನು ಗಮನಿಸಿರಿ)..

http://maaysa.wordpr...

roopablrao's picture

ಮಹೇಶರೆ
ಇವತ್ತಿನ ವಿಕದ ಮತಾಂತರದ ಸಂದರ್ಶನ ಓದಿ

ಮತಾಂತರದ ವಿರ್ರುದ್ದ ದನಿ ಎತ್ತಿದವರು ಬ್ರಾಹ್ಮಣರಲ್ಲ ಕೊನೆಗೆ ಭಾರತೀಯರೂ ಅಲ್ಲ
ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ

http://thereda-mana....

ರೂಪ

mahesha's picture

ರೂಪ ಮೇಡಂ ಅದನ್ನು ಓದಿದ್ದೀನಿ...

ನೀವು ಗಮನಿಸಿರಿ... ನಮಗೆ ಅಮೆರಿಕದವರ ಅನಿಸಿಕೆ ಮುಕ್ಯವೋ ಇಲ್ಲವೇ ನಮ್ಮ ಜತೆಯಿರುವ ನಮ್ಮ ನೆಲದ ಬೇರೆ ಜಾತಿಯವರ ಅನಿಸಿಕೆ ಮುಕ್ಯವೋ ಎಂದು.

ನಾನು ಅದನ್ನೇ ಹೇಳಿದ್ದು

ಗಮನಿಸಿರಿ.. ಬ್ರಾಮ್ರಲ್ಲದ ಬರಹಗಾರರು, ಚರ್ಚೆಯಾಳುಗಳು ಬಯ್ರಪ್ಪರನ್ನು ತಪ್ಪು ಎಂದಿದ್ದಾರೆ. ಹಾಗು ಬಯ್ರರಪ್ಪನ್ನು ಸರಿ ಎಂದವರಲ್ಲಿ ೯೯% ಬ್ರಾಮ್ರರೇ.

ನಮ್ ನಾಡಿನ ದೊಡ್ಡ ಜಾತಿಗಳಾದ ಲಿಂಗಾಯರು, ಗವ್ಡರು, ಮುಸ್ಲಿಮರು, ಕುರುಬರು ಇದರ ಬಗ್ಗೆ ಏನೂ ಹೇಳದೇ ಸುಮ್ಮನಿದ್ದಾರೆ.

ಇನ್ನು ವಿಕದ ಸಂಪಾದಕರ ಜಾತಿಯೂ ಇಲ್ಲಿಗೆ ಲೆಕ್ಕಕ್ಕೆ ಬಂದು ’ಬ್ರಾಮ್ರ ದಂಡು’ ಎಂದು ಅನ್ನಿಸಿಕೊಳ್ಳಲ್ವ?

ಚಂಪಾ ಅವರ ಮಾತು ಇಂದೂದರರಿಗಿಂತ ಹರಿತವಾಗಿದೆ ನೋಡಿ.. ಹಾಗೇ ಚಂಪಾ ಒಂದು ದೊಡ್ಡ ಜಾತಿಯವರು ಎಂಬುದನ್ನು ಗಮನಿಸಿರಿ.

ಹಾಗೇ ಬರಗೂರು ರಾಮಚಂದ್ರಪ್ಪ ’ಮರ್‍ಯಾದಸ್ತರಾಗಿ’ ಎಂದು ಹೇಳಿದ್ದು ಕಡಮೆಯಾ? ಅದರ ಒಳಹುರುಳು ಅರಿಯಬೇಕಲ್ವ.!

ಈಗ ಸುಮ್ನೆ ಇಲ್ಲದ ಕುರ ಕೆರದಂತೆ ಈ ಚರ್ಚೆ ಎಬ್ಬಿಸಿದ ಮೊದಲಾಳು ಬ್ರಾಮ್ರಾಗಿ, ಅದಕ್ಕೆ ಪರ ಬರೀ ಬ್ರಾಮ್ರಾಗಿ, ಅದಕ್ಕೆ ಆಪೋಸಿಟ್ ಬೇರೆ ಜಾತಿಯ ಬರಹಗಾರರೇ ಆಗಿರುವಾಗ ಇದು ’ಬ್ರಾಮ್ರು vs ಮಿಕ್ಕವರು’ ಆಗೋದಿಲ್ವೇ?

ಈ ಬ್ರಾಮ್ರೂ ಅಮೆರಿಕದೋರ ಜತೆ ಸೇರಿಕೊಂಡಿದ್ದಾರೆ ಎಂದು ಕಮ್ಯುನಿಶ್ಟರು ಅಂತಾರೆ ನೋಡಿ. ಎಶ್ಟೇ ಆದರೂ ಸಾಪ್ಟ್‌ವೇರ್‍ ಕೆಲಸಗಾರರಲ್ಲಿ, ಅಮೆರಿಕಕ್ಕೆ ಕೆಲಸ ಮಾಡೋದರಲ್ಲಿ ಇವರೇ ಹೆಚ್ಚು. ಸುಮ್ನೆ ಇದು ಇನ್ನೊಂದು ಹಳಿತಕ್ಕೆ ದಾರಿ.
http://maaysa.wordpr...

mahesha's picture

ರೂಪ ಮೇಡಂ ಅದನ್ನು ಓದಿದ್ದೀನಿ...

ನೀವು ಗಮನಿಸಿರಿ... ನಮಗೆ ಅಮೆರಿಕದವರ ಅನಿಸಿಕೆ ಮುಕ್ಯವೋ ಇಲ್ಲವೇ ನಮ್ಮ ಜತೆಯಿರುವ ನಮ್ಮ ನೆಲದ ಬೇರೆ ಜಾತಿಯವರ ಅನಿಸಿಕೆ ಮುಕ್ಯವೋ ಎಂದು.

ನಾನು ಅದನ್ನೇ ಹೇಳಿದ್ದು
[
ಗಮನಿಸಿರಿ.. ಬ್ರಾಮ್ರಲ್ಲದ ಬರಹಗಾರರು, ಚರ್ಚೆಯಾಳುಗಳು ಬಯ್ರಪ್ಪರನ್ನು ತಪ್ಪು ಎಂದಿದ್ದಾರೆ. ಹಾಗು ಬಯ್ರರಪ್ಪನ್ನು ಸರಿ ಎಂದವರಲ್ಲಿ ೯೯% ಬ್ರಾಮ್ರರೇ.
ನಮ್ ನಾಡಿನ ದೊಡ್ಡ ಜಾತಿಗಳಾದ ಲಿಂಗಾಯರು, ಗವ್ಡರು, ಮುಸ್ಲಿಮರು, ಕುರುಬರು ಇದರ ಬಗ್ಗೆ ಏನೂ ಹೇಳದೇ ಸುಮ್ಮನಿದ್ದಾರೆ.

ಇನ್ನು ವಿಕದ ಸಂಪಾದಕರ ಜಾತಿಯೂ ಇಲ್ಲಿಗೆ ಲೆಕ್ಕಕ್ಕೆ ಬಂದು ’ಬ್ರಾಮ್ರ ದಂಡು’ ಎಂದು ಅನ್ನಿಸಿಕೊಳ್ಳಲ್ವ?

ಚಂಪಾ ಅವರ ಮಾತು ಇಂದೂದರರಿಗಿಂತ ಹರಿತವಾಗಿದೆ ನೋಡಿ.. ಹಾಗೇ ಚಂಪಾ ಒಂದು ದೊಡ್ಡ ಜಾತಿಯವರು ಎಂಬುದನ್ನು ಗಮನಿಸಿರಿ.

ಹಾಗೇ ಬರಗೂರು ರಾಮಚಂದ್ರಪ್ಪ ’ಮರ್‍ಯಾದಸ್ತರಾಗಿ’ ಎಂದು ಹೇಳಿದ್ದು ಕಡಮೆಯಾ? ಅದರ ಒಳಹುರುಳು ಅರಿಯಬೇಕಲ್ವ.!

ಈಗ ಸುಮ್ನೆ ಇಲ್ಲದ ಕುರ ಕೆರದಂತೆ ಈ ಚರ್ಚೆ ಎಬ್ಬಿಸಿದ ಮೊದಲಾಳು ಬ್ರಾಮ್ರಾಗಿ, ಅದಕ್ಕೆ ಪರ ಬರೀ ಬ್ರಾಮ್ರಾಗಿ, ಅದಕ್ಕೆ ಆಪೋಸಿಟ್ ಬೇರೆ ಜಾತಿಯ ಬರಹಗಾರರೇ ಆಗಿರುವಾಗ ಇದು ’ಬ್ರಾಮ್ರು vs ಮಿಕ್ಕವರು’ ಆಗೋದಿಲ್ವೇ?
]

ಈ ಬ್ರಾಮ್ರೂ ಅಮೆರಿಕದೋರ ಜತೆ ಸೇರಿಕೊಂಡಿದ್ದಾರೆ ಎಂದು ಕಮ್ಯುನಿಶ್ಟರು ಅಂತಾರೆ ನೋಡಿ. ಎಶ್ಟೇ ಆದರೂ ಸಾಪ್ಟ್‌ವೇರ್‍ ಕೆಲಸಗಾರರಲ್ಲಿ, ಅಮೆರಿಕಕ್ಕೆ ಕೆಲಸ ಮಾಡೋದರಲ್ಲಿ ಇವರೇ ಹೆಚ್ಚು. ಸುಮ್ನೆ ಇದು ಇನ್ನೊಂದು ಹಳಿತಕ್ಕೆ ದಾರಿ.
http://maaysa.wordpr...

vikashegde's picture

--------ನಮ್ ನಾಡಿನ ದೊಡ್ಡ ಜಾತಿಗಳಾದ ಲಿಂಗಾಯರು, ಗವ್ಡರು, ಮುಸ್ಲಿಮರು, ಕುರುಬರು ಇದರ ಬಗ್ಗೆ ಏನೂ ಹೇಳದೇ ಸುಮ್ಮನಿದ್ದಾರೆ.-----------

ವಿ.ಕ. ಇಂಟರ್ನೆಟ್ ಅಲ್ಲ. ಎಲ್ಲರು ಬೇಕಾದ್ದನ್ನು ಹೇಳಲು. ಅದು ಕೆಲವರಿಗೆ ಮಾತ್ರ ವಕ್ತಾರ ಆಗಿದೆಯೇ ಹೊರತು ಜನಸಾಮಾನ್ಯರಿಗಲ್ಲ. ಮಯೇಸ , ವಿಕಾಸ ಕಳಿಸಿದರೆ ಪ್ರಕಟಿಸುವುದಿಲ್ಲ ಎಂದು ನೆನಪಿರಲಿ.
ನಾಡಿನ ದೊಡ್ಡ ಜಾತಿಗಳು ಸುಮ್ಮನಿದ್ದಾರೆ ಅನ್ನೋದು ನಿಮ್ಮ ಕಲ್ಪನೆಯಷ್ಟೇ. ಚಂಪಾ ಮುಂತಾದ ಲಿಂಗಾಯತರು, ಗೌಡ ಬರಹಗಾರರು ಕೆಲವರು ಬರೆದಿದ್ದಾರೆ. ಆದರೆ ಭೈರಪ್ಪ ಬ್ರಾಹ್ಮಣರ ಪ್ರತಿನಿಧಿ ಹೇಗೆ ಅಲ್ಲವೋ ಅದೇ ರೀತಿ ಚಂಪಾ ಲಿಂಗಾಯತರ ಪ್ರತಿನಿಧಿಯಲ್ಲ. ಆದ್ದರಿಂದ ಅವರು ಹೇಳಿದ್ದನ್ನು ಲಿಂಗಯತರೆಲ್ಲರ ಅಭಿಪ್ರಾಯ ಎಂದು ಅರ್ಥೈಸುವ ಕೆಲಸ ಮಾಡಬೇಡಿ. ಈಗ ಇಲ್ಲಿ ನೆಡೆಯುತ್ತಿರುವುದು ವಿ.ಕ.ದಲ್ಲಿ ಯಾರು ಯಾರು ಬರೆದಿದ್ದಾರೆ, ಅವರೆಲ್ಲ ಯಾವ ಜಾತಿಯವರು ಎಂಬುದರ ಬಗ್ಗೆ ಚರ್ಚೆಯಲ್ಲ ಎಂಬುದು ತಿಳಿದಿರಲಿ. ಒಮ್ಮೆ ತಲೆಬರಹವನ್ನು ನೋಡಿ.

**************************
http://vikasavada.bl...
**************************

uniquesupri's picture

ಮಾಯ್ಸಣ್ಣ,
ಲೇಖಕರು ದೊಡ್ಡವರು ಅನ್ನಿಸಿಕೊಂಡವರಲ್ಲಿರುವ ಅಸಹ್ಯ ಹುಟ್ಟಿಸುವ ಗುಂಪುಗಾರಿಕೆಯ ಬಗ್ಗೆ ನಿಮಗೆ ತಿಳಿದಿಲ್ಲವೇ? ಈಗ ಭೈರಪ್ಪನವರು ಚರ್ಚೆಯನ್ನು ಶುರು ಮಾಡಿದ್ದರಿಂದ ಹಾಗೂ ಅವರು ಮತಾಂತರದ ವಿರೋಧವಾಗಿ ಬರೆದದ್ದರಿಂದ ಮತಾಂತರವನ್ನು ವಿರೋಧಿಸಿ ಬರೆದವರೆಲ್ಲರೂ ಭೈರಪ್ಪನವರ ಗುಂಪು ಎಂದು ಗುರಿತಿಸಲ್ಪಡುವ ಅಪಾಯವಿದೆ. ಹೀಗಾಗಿ ಉಳಿದ ಜಾತಿಗಳಲ್ಲಿನ ಲೇಖಕರು ಈ ಬಗ್ಗೆ ಮಾತನಾಡಲು ಹೋಗಿಲ್ಲ.
ಅಂದ ಹಾಗೆ ಲೇಖಕರೆಲ್ಲರನ್ನೂ ಅವರ ಜಾತಿಯಿಂದ ಗುರುತಿಸುವ ಕೆಲಸ ನಾವಿನ್ನೂ ಮಾಡುತ್ತಿದ್ದೇವೆ ಎಂದರೆ ಜೈ ಚಾಚಾ ನೆಹರೂ ಔರ್ ಜೈ ಉಸ್ಕೆ ಸೆಕ್ಯುಲರಿಸಂ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

mahesha's picture

ಸುಪ್ರೀತ್...

"ಹೀಗಾಗಿ ಉಳಿದ ಜಾತಿಗಳಲ್ಲಿನ ಲೇಖಕರು ಈ ಬಗ್ಗೆ ಮಾತನಾಡಲು ಹೋಗಿಲ್ಲ."

ಇದು ಊಹೆ ತಾನೆ? ಯಾಕೆ ಅಂದರೆ ಕುಮಾರಸ್ವಾಮಿ, ದೇವಗೌಡರು ಇವರನ್ನೆಲ್ಲ ಒಂದು ಪಂಗಡದ ಒಂದು ಜಿಲ್ಲೆಯ ಮುಂದಾಳುಗಳು ಮಾತ್ರ ಅನ್ನುವವರಿದ್ದಾರೆ ಬಯ್ರಪ್ಪರ ಕಡೆ. ಅವರು ಚರ್ಚು ದಾಳಿಯನ್ನು ತಪ್ಪೆಂದಿದ್ದಾರಲ್ಲ. ಇನ್ನು ಸಿದ್ದರಾಮಯ್ಯರದೂ ಇದೇ ಅನಿಸಿಕೆ.

ನಾನು ಹೇಳಿಲ್ಲ ಅಂತ ಅಂದರೆ ಹೇಳಿಲ್ಲ ಅಂತಾನ? :) ಹೆ ಹೆ...!

ಸುಪ್ರೀತ್.. ಊಹೆ ಎಲ್ಲ ದಿಟವಲ್ಲಪ್ಪ...!

ನಿಮ್ಮ ಬರವಣಿಗೆಯ ಹರಿತ ಚನ್ನಾಗಿದೆ.. ಆದರೆ.. ನೀವು ಹೇಳೋದು ತುಸು ಅತ್ತ ಕಡೆ ವಾಲಿ ಇತ್ತ ಕಡೆಯೇ ನಿಲ್ಲತ್ತಲ್ಲ.!

ಇನ್ನು ಗುಂಪುಗಾರಿಕೆಯ ಮಾತು... ’ಹಿಂದು’ ಅನ್ನೋದು ಒಂದು ಗುಂಪಲ್ವೆ!? ಬ್ರಾಹ್ಮಣ ಅನ್ನೋದು ಒಂದು ಗುಂಪಲ್ವೆ? ಆ ಗುಂಪಿಗೆ ಹಳಿತ ಕಂಡು ತಾನೆ ನಮ್ ರೂಪಕ್ಕ ಮರುಗಿರೋದಿಲ್ಲಿ.

ಅಂದ ಹಾಗೆ ಸುದ್ದಿ ಮಾತಲ್ಲಿ ಏನೋ ಬಂದಿದೆ ನೋಡಪ್ಪ..

http://maaysa.wordpr...

Aravind M.S's picture

ಮಾಯ್ಸಣ್ಣ,

ತಮ್ಮ ಲಿಂಕ್, ಸಂವಾದಕ್ಕೆ ತುಂಬ ನನ್ನಿ.

ದಲಿತರ ಉದ್ಧಾರಕರಾದ ಅಂಬೇಡ್ಕರ್ ರವರು ಹಿಂದೂ (ಚಂಪಾ ಪ್ರಕಾರ ಬ್ರಾಹ್ಮಣರು) ವಿರೋಧೀ ಬಂಡಾಯದ ಪ್ರತೀಕವೆಂದು, ಜಾಜ್ವಲ್ಯ ಉದಾಹರಣೆ ಎಂದು ಬಿಂಬಿಸುವ ಜನರಿಗೆ ಒಂದು ವಿಷಯ ತಿಳಿದಿರಲಿಕ್ಕಿಲ್ಲ. ಗೋಡ್ಸೆಯನ್ನು ಕೊಲೆಯಿಂದ ಖುಲಾಸೆಗೊಳಿಸಲು ಕೇಳಿಕೊಂಡ ಮೊದಲ ವ್ಯಕ್ತಿ ಅಂಬೇಡ್ಕರ್. ಪಾಕಿಸ್ತಾನದ ವಿಭಜನೆಗೆ ವಿರೋಧಿಸಿದವರಲ್ಲಿಯೂ ಇವರು ಮೊದಲಿಗರಂತೆ. ಇದರಿಂದ ಅಂಬೇಡ್ಕರ್ ಹಿಂದೂವಾದಿಗಳಾಗಿದ್ದರೆಂದು ಹೇಳಲಾಗದು, ಆದರೆ ಇದು ಅವರಲ್ಲಿದ್ದ ಹಿಂದೂ ಪರ ಅಂತಃಕರಣವನ್ನಂತೂ ತೋರಿಸುತ್ತದೆ.

ಹೀಗೆ ಓದಿದ್ದು ಎಂ. ವಿ. ಕಾಮತರ ಲೇಖನವೊಂದರಲ್ಲಿ. . ಕ್ಷಮಿಸಿ ಲಿಂಕ್ ಇಲ್ಲ. ಆದರೆ ಚಂಪಾರವರು ಕಾಮತನ್ನೂ ಭೈರಪ್ಪ ಪಟಾಲಂ ಎಂದರೆ ಕಷ್ಟ :)

- ಅರವಿಂದ್

roopablrao's picture

"ನನ್ನನ್ನು ಈ ದೇಶದಲ್ಲಿ ಒಬ್ಬ ಬ್ರಾಹ್ಮಣ ಎಂದು ಸಂವಿಧಾನ ಗುರುತಿಸುವುದರಿಂದ "
ನೀವು ಒಪ್ಪುವುದಿಲ್ಲವೇ ಸುಪ್ರೀತ್?
http://thereda-mana....

ರೂಪ

uniquesupri's picture

ನಾನು ಹೇಗೆ ಬ್ರಹ್ಮಣ ನಾಗುವೆ ರೂಪ ಮೇಡಂ? ನಾನು ಇಂಜಿನಿಯರ್ ಆಗುವುದಕ್ಕೆ ಎಷ್ಟೆಲ್ಲಾ ಪುಸ್ತಕ ಓದಿ, ಫೀಸು ಕಟ್ಟಿ ನಾನು ಇಷ್ಟ ಪಟ್ಟು ಕಷ್ಟ ಪಡಬೇಕು. ಒಳ್ಳೆಯವನಾಗುವುದಕ್ಕೆ ನಾನು ಪ್ರಯತ್ನ ಪಡಬೇಕು. ಕೆಟ್ಟವನು, ಪೋಲಿ ಆಗುವುದಕ್ಕೂ ನಾನು ಆಯ್ಕೆ ಮಾಡಿಕೊಳ್ಳಬೇಕು.
ಹೀಗಿರುವಾಗ ನನಗೆ ಆಯ್ಕೆಯ ಅವಕಾಶವೇ ಇಲ್ಲದೆ, ಆಕಸ್ಮಿಕವಾಗಿ ಸಿಕ್ಕ ಈ ಗುರುತನ್ನು ಯಾವ ಕಾರಣಕ್ಕಾಗಿ ಒಪ್ಪಿಕೊಳ್ಳಲಿ? ಊಹುಂ, ನಾನು ಬ್ರಾಹ್ಮಣ ಅಂತ ಒಪ್ಪಿಕೊಳ್ಳುವುದಿಲ್ಲ. ನನಗೆ ಜಾತಿಗಳಿಲ್ಲ ಎಂದು ಹೇಳಲು ಬಯಸುತ್ತೇನೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

mahesha's picture

"ಊಹುಂ, ನಾನು ಬ್ರಾಹ್ಮಣ ಅಂತ ಒಪ್ಪಿಕೊಳ್ಳುವುದಿಲ್ಲ. "

ಸುಪ್ರೀತ್.. ಹಾಗಾದರೆ ಬ್ರಾಹ್ಮಣಾನುರಾಗಿ ಎಂದು ಒಪ್ಪಿಕೊಳ್ತೀರ? :)

ನೀವು ಒಪ್ಪೀ ಬಿಡಿ ಹುಟ್ಟಿನಿಂದಲೇ ಜಾತಿಯ ತೀರ್ಮಾನ ನಮ್ ದೇಶದಲ್ಲಿ. ನಿಮ್ಮ ಒಪ್ಪುಗೆ ಯಾರು ಕೇಳಲ್ಲ.. ಯಾಕೆಂದರೆ ಜಾತಿ ಹುಟ್ಟಿನಿಂದ ದರ್ಮ ಒಪ್ಪುಯಿಂದ ನಮ್ಮ ದೇಶದಲ್ಲಿ.

ಆ ಒಪ್ಪುಗೆಯಿಂದ ಒಂದು ದರ್ಮಕ್ಕೆ ಕೆಲವರು ಸೇರೋದೇ ಈ ಮತಾಂತರ. ಅವರು ಒಪ್ಪುಗೆಯಿಂದ ಸೇರಿಲ್ಲ ಅವರು ಆಸೆಯಿಂದ ಹೆದರಿಕೆಯಿಂದ ಸೇರಿರೋದು ಎಂದು ಸೇರದೇ ಇರೋದು ಹೇಳೋದು. ಇದುವರೆಗೂ ಒಬ್ಬ ಮತಾಂತರಗೊಂಡವನು ಬಂದು ಒಂದು ಮಾತಾಡಿಲ್ಲ.. ಇಲ್ಲ ಅವನನ್ನು ಮಾತಾಡಲು ಬಿಟ್ಟಿಲ್ಲ.

ನಾನು ’ಹಿಂದು’ ಒಪ್ಪಿಕೊಳ್ಳಲ್ಲ ಎಂದು ಹಿಂದೆ ಹಲವು ಸರತಿ ಇಲ್ಲಿ ಹೇಳಿದ್ದೆ.. ಆದರೆ ಏನು ಮಾಡಲಿ.. ಅಮೆರಿಕೆ ಆಸ್ಪತ್ರೆಯಲ್ಲಿ ನಾನು ಒಂದು ತುರ್ತು ಚಿಕಿತ್ಸೆಯಲ್ಲಿದ್ದಾಗ ನನ್ನ ಹೆಸರನ್ನು ಕಂಡು ನನ್ನ ಕ್ರಿಶ್ಚಿಯನ್ ಗೆಳೆಯನೇ ಅರ್ಜಿಯಲ್ಲಿ ’ಹಿಂದು ಎಂಬ ದರ್ಮದವನೆಂದು ಇವನು ಒಪ್ಪಿಕೊಳ್ಳುತ್ತಾನೆ’ ಎಂದು ಬರೆದಿದ್ದ. ಹಾಗೆ ನಿಮ್ಮ ಕತೆಯೂ!

ಆದರೂ ನಿಮಗೆ ಬೇಡವಾದ ಬ್ರಾಹ್ಮಣತ್ವಕ್ಕೆ ಇಶ್ಟೊಂದು ವಕಾಲತ್ತು ಮಾಡ್ತೀರಲ್ಲ. :) ದಲಿತರಿಗೆ ಕೊಟ್ಟ ಮೀಸಲಾತಿಗೆ ಮಿಸುಕಾಡ್ತೀರಲ್ಲ..

http://maaysa.wordpr...

vikashegde's picture

ತಾವು ಯಾವುದಕ್ಕೆ ಮಿಸುಕಾಡ್ತಿದ್ದೀರಿ ಸುಮ್ಸುಮ್ನೆ ?

uniquesupri's picture

ಮಾಯ್ಸಣ್ಣ,
ಜಾತಿ ಗೀತಿ ಎಂಬುವುದು ನಮ್ಮಂತಹ ದೇಶದಲ್ಲಿ ಇಲ್ಲ ಎಂದು ನಿಮ್ಮಷ್ಟು ತಿಳಿದವರು ಹೇಳಿದರೆ ನಾವು ಏನು ಮಾಡೋಕೆ ಸಾಧ್ಯ?
ಮೊದಲಿಗೆ, ನಾನು ಮೇಲಿನ ಪ್ರತಿಕ್ರಿಯೆ ಬರೆದದ್ದು ರೂಪಾ ಮೇಡಂ ಕೇಳಿದ ಪ್ರಶ್ನೆಗೆ ಉತ್ತರವಾಗಿ. ನನ್ನನ್ನು ಬ್ರಾಹ್ಮಣಾನುರಾಗಿ ಎಂದರಿ, ಚಿಂತೆಯಿಲ್ಲ. ಆದರೆ ನಾನು ಕೇವಲ ಬ್ರಾಹ್ಮಣಾನುರಾಗಿಯಲ್ಲ.
ನಿಮಗೆ ನೇರವಾಗಿ ಹೇಳಬೇಕೆಂದರೆ, ನಾನು ಕನ್ನಡಿಗನೂ ಅಲ್ಲ, ಭಾರತೀಯನೂ ಅಲ್ಲ. ಇವೆರಡೂ ನನ್ನ ಆಯ್ಕೆಗಳಲ್ಲ. ಕನ್ನಡ ಮಾತಾಡುವ ಕಾರಣಕ್ಕೆ, ಕರ್ನಾಟಕದ ನೆಲದಲ್ಲಿ ಜೀವಿಸುತ್ತಿರುವ ಕಾರಣಕ್ಕೆ ನಾನು ಕನ್ನಡಿಗನಾಗುವೆ.. ಭಾರತದಲ್ಲಿ ಹುಟ್ಟಿರುವ ಕಾರಣಕ್ಕೆ ಭಾರತೀಯನಾಗುವೆ.. ನನ್ನ ಹುಟ್ಟಿನದೊಂದೇ ಕಾರಣಕ್ಕೆ ನಾನು ಕನ್ನಡಾಭಿಮಾನಿಯಾದಂತೆ, ದೇಶಪ್ರೇಮಿಯಾದಂತೆ ಬ್ರಾಹ್ಮಣಾನುರಾಗಿಯಾದರೆ ಅದರಲ್ಲಿ ಅಪರಾಧವಿದೆಯೆಂದಾದರೆ ನಾನೂ ಈ ಮೂರನ್ನೂ ತಿರಸ್ಕರಿಸುವೆ.
ನಾನೊಬ್ಬ ಕನ್ನಡಿಗನಾಗಿ ತಮಿಳರ ದುರ್ವರ್ತನೆಯ ಬಗ್ಗೆ ಬಗ್ಗೆ ಮಾತನಾಡಬಹುದು, ಲಾಲೂ ಕನ್ನಡಿಗರಿಗೆ ಮಾಡಿದ ಅನ್ಯಾಯವನ್ನು ಟೀಕಿಸಬಹುದು, ಭಾಷೆಯ ಮೇಲಿನ ಆಕ್ರಮಣದ ಬಗ್ಗೆ ಯಾರನ್ನಾದರೂ ನಿಂದಿಸಬಹುದು, ಕನ್ನಡಿಗನಾಗಿರುವುದಕ್ಕೆ ಸಂಸ್ಕೃತವನ್ನು ಹೀಗಳೆಯಬಹುದು ಎನ್ನುವುದಾದರೆ, ಬ್ರಾಹ್ಮಣನಾಗಿ ನಾನು ಮೀಸಲಾತಿಗಳ ಬಗ್ಗೆ ಮಾತನಾಡುವುದಕ್ಕೆ ಏಕೆ ಹೆದರ ಬೇಕು? ನೆನಪಿರಲಿ, ಕನ್ನಡಿಗನಾಗಿರುವುದು, ಬ್ರಾಹ್ಮಣನಾಗಿರುವುದು ನನ್ನ ಆಯ್ಕೆಯಲ್ಲ.
ನನ್ನ ಹೆಸರನ್ನು ಕೇಳಿದವರ್ಯಾರೂ ನನ್ನ ಬ್ರಾಹ್ಮಣ ಎಂದು ಗುರುತಿಸುವುದಿಲ್ಲ ಬಿಡಿ :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

mahesha's picture

ಒಳ್ಳೇದು..

ನನಗೆ ನಿಮ್ಮ ಮಾತಿಂದ ಸಂತೋಷ/ನಲಿವಾಗಿದೆ.! ನಾನು ಬಯಸಿದ್ದೇ ಬಂತು! :)

ನಿಶ್ಪಕ್ಷಪಾತ, ನಿರ್ಲಿಪ್ತ, ನಿರ್ಜಾತೀಯ, ರ್ನಿಭಾಷೀಯ, ರ್ನಿರಾಷ್ಟ್ರೀಯ, ನಿರ್ಜನಾಂಗೀಯ, ನಿರ್ಧಮೀಯ ಸ್ಥಾನಮಾನ ಮುಂದುವರಿಯಲಿ. ಅದು ಒಳ್ಳೇದೇ...

ಇಶ್ಟೊಂದು ಸಕ್ಕದ ಬಳಸಿ ಕಮೆಂಟು ಬರೆಯುವುದು ನಾನು ಅಪರೂಪ.! ಕ್ಷಮೆ.

http://maaysa.wordpr...

uniquesupri's picture

ಏನು ಮಾಯ್ಸಣ್ಣ ನಾರ್ಕೋ ಅನಲಿಸಿಸ್ ಮಾಡ್ತಿದ್ದೀರೋ ಹೇಗೆ? :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

mahesha's picture

ಹಾಗೇನಿಲ್ಲ. ಗುಮಾನಿ ಬೇಡ!

ನಿಮ್ಮನ್ ನಾರ್ಕೋ ಪರೀಕ್ಶೆ ಮಾಡ ಆಸೆ ನನಗೆ ಇಲ್ಲ.

ನೀವು ಬರೆದುದು ನನಗೆ ದಿಟವಾಗಲು ಹಿಡಿಸಿತು. ಸೀರಿಯಸ್ಸಾಗಿ ’ನಂಬಿ ನಂಬಿ ಪ್ಲೀಸ್’ :)

ಟಾಟಾ

http://maaysa.wordpr...

savithru's picture

ಸುಪ್ರೀತ್ ..

ಓದಿ ನಲಿವಾಯ್ತು!

ಸವಿತೃ

uniquesupri's picture

:ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

ಗಣೇಶ's picture

ಆಸ್ಟ್ರೇಲಿಯಾ ಟೀಮಿಗೂ ಇವರಿಗೂ ವ್ಯತ್ಯಾಸವಿಲ್ಲ.

ಅವರ ಬಾಯಲ್ಲಿ 'ಬಬಲ್‌ಗಮ್'. ಇವರ ಬಾಯಲ್ಲಿ 'ಬ್ರಾಹ್ಮಣಗಮ್'
ಅವರು ಯಾರಿಗೂ ಸ್ಲೆಡ್ಜ್ ಮಾಡಬಹುದು. ಬಾಕಿಯವರು ಮಾಡಬಾರದು.
ಅವರು ಔಟ್ ಎಂದರೆ ಔಟ್.

ಹೋಗಲಿಬಿಡಿ. ಯಾಕೆ ಸಿಟ್ಟು ಮಾಡಿಕೊಳ್ಳುತ್ತೀರಿ. ಪೇಪರಿಗೆ ನಾಲ್ಕು ಹನಿ ತುಳಸಿ ನೀರು ಹಾಕಿ.ಅವರಂದ ಕೆಟ್ಟ ಮಾತೆಲ್ಲಾ ತೊಳೆದು ಹೋಗುವುದು. :) ಜಗಳಕ್ಕೆ ಹೋದರೆ ಜಾತಿನಿಂದನೆ ಮಾಡಿದರೆಂದು ಜೈಲಲ್ಲಿ ರಬೇಕಾದೀತು.

-ಗಣೇಶ.

Rajeshwari's picture

ನಾನು ಈಗ ಆ ಆರ್ಟಿಕಲನ್ನು ಓದಿದೆ. ( ಶೆಣೈ ಅವರು ಹೇಳಿದ ಹಾಗೆ ) ಕೆಲವರಿಗೆ ವಿಷಯಕ್ಕೆ ಸರಿಯಾಗಿ ಪ್ರತ್ಯುತ್ತರ ಕೊಡುವುದಕ್ಕೆ ಸಾಧ್ಯವಾಗದಿದ್ದಾಗ ಅದರ ದಿಕ್ಕನ್ನೇ ತಪ್ಪಿಸುತ್ತಾರೆ.
ಅವರಿಗೆ ಮತಾಂತರದ ಜೊತೆ ರಿಸರ್ವೇಷನ್ ಕೂಡ ಬೇಕು. ಸತ್ಯವನ್ನು ಹಿಡಿದೆತ್ತಿ ತೋರಿಸಲೇಬಾರದು ಅಂತಹದುರಲ್ಲಿ ಒಬ್ಬ ಬ್ರಾಹ್ಮಣ ಈ ಕೆಲಸ ಮಾಡಿದ್ರೆ ಹೇಗೆ ತಾನೆ ಸಹಿಸಿಕೊಳ್ಳುತ್ತಾರೆ?

gurubaliga's picture

ವಿಕ ದ ಚರ್ಚೆಯಲ್ಲಿ ಒಂದು ಬೇಸಿಕ್ ದೋಷವಿದೆ.

ಒಂದು ಚರ್ಚಾ ಗೋಷ್ಠಿಗೆ ಇರಬೇಕಾದ ಪ್ರಸ್ತಾವನೆಯನ್ನು ಮಾಡದೆ ಭೈರಪ್ಪರಿಂದಲೇ ಈ ಚರ್ಚೆಯನ್ನು ಶುರು ಹಚ್ಚಿದ್ದು ಈ ದೋಷ. ಇದರಿಂದಾಗಿ ಚರ್ಚೆ ವಿಷಯವನ್ನು ಬಿಟ್ಟು ಹಳಿ ತಪ್ಪಿ ಭೈರಪ್ಪರನ್ನು ಹಳಿಯುವುದರಲ್ಲೇ ಮತ್ತು ಸಮರ್ಥಿಸುವುದರಲ್ಲೇ ಸುಖ ಕಾಣುತ್ತಿದೆ.

ರೂಪಕ್ಕ....

ಬ್ರಾಹ್ಮಣ ಜಾತಿಯನ್ನು ನಿಂದಿಸಿದಾಗ ನೀವು ನೊಂದಿದ್ದಿರಿ. ಆದರೆ ಅದೇ ಬ್ರಾಹ್ಮಣ ಕಟ್ಟು ಕಟ್ಟಳೆಗಳು ಬ್ರಾಹ್ಮಣ ಹೆಂಗಸನ್ನು ಹೇಗೆ ಶೋಶಿಸಿದ್ದವು ಎನ್ನುವುದನ್ನು ಯೋಚಿಸಿದಾಗ ಅದಕ್ಕಿಂತಲೂ ಹೆಚ್ಚು ನೋವು.

vikashegde's picture

ಹಾಗೆ ಯೋಚಿಸುತ್ತಾ ಹೋದ್ರೆ ಎಲ್ಲಾದರಲ್ಲೂ ನೋವು ಕಾಣತ್ತೆ ಬಿಡ್ರಿ. ಕೊನೆಗೆ ನನ್ನ ಕುಟುಂಬದ ಕಟ್ಟಳೆಗಳು ನನ್ನನು ಹೇಗೆ ಶೋಶಿಸಿದ್ದವು ಅಂತ ಬೇಕಿದ್ರೂ ವಾದ ಮಾಡ್ಬೋದು. ಇಲ್ಲಿ ವಿಷಯ ಅದಲ್ಲ.
**************************
http://vikasavada.bl...
**************************

roopablrao's picture

ಶೋಷಣೇ ಎಂದುಕೊಂದರೆ ಅದು ಶೋಷಣೆ ಆಗುತ್ತದೆ
ಈಗಲೂ ನಮ್ಮ ಅಮ್ಮ ಹೇಳುವ ಅವರ ತಾಯಿ ಹಾಗು ಅವರ ಅಜ್ಜಿಯ ಅನುಭವಗಳನ್ನು ಕೇಳಿದಾಗ ಆ ಜಗತ್ತೇ ಸುಖವಾಗಿತ್ತು ಎನಿಸದಿರಲಾರದು.
ನಮ್ಮ ತಾಯಿಯ ಅಜ್ಜಿಯಂತೂ ಈ ಕಾಲದ ಯಾವ ಹೆಂಗಸೂ ಅನುಭವಿಸದಷ್ಟು ಸಂತೋಷವನ್ನು ಹೊಂದಿದ್ದರು ಎಂಬುದು ಅಮ್ಮ ಹೇಳುವ ಪ್ರಸಂಗಗಳಿಂದ ತಿಳಿಯುತ್ತಿದೆ. ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ

http://thereda-mana....

ರೂಪ