ಕೈಯ್ಯಲ್ಲಿನ ಜಗತ್ತು
ತಾಂತ್ರಿಕತೆ ಎಂಬುದು ಮುನ್ನಡೆದಂತೆ,ನಮ್ಮ ಅನಿವಾರ್ಯತೆಗಳು ಹೇಗೆ ಬೆಳೆಯುತ್ತವೆ ಅಲ್ಲವೇ? ದೂರವಾಣಿಯನ್ನ ತೆಗೆದುಕೊಳ್ಳೋಣಾ. ಮೊನ್ನೆ ಮೊನ್ನೆಯತನಕ ಎಲ್ಲಾ ಮನೆಗಳಲ್ಲೂ ಆ ವ್ಯವಸ್ಥೆ ಇರಲಿಲ್ಲ,ಅದು ನಿದಾನವಾಗಿ ಎಲ್ಲೆಡೆ ತಳವೂರಿತು.ಈಗ ಮೊಬೈಲ್ ಕಾಲ ಅನ್ನೋತರದಲ್ಲಿ ಮೊಬೈಲ್ ಗ್ರಂಥಾಲಯ,ಮೊಬೈಲ್ ಕೇಫ್ಟೇರಿಯಾ ಹೀಗೆ ಎಲ್ಲವೂ ಚಲಿಸುತ್ತಿರುತ್ತವೆ.ಇಂದು ಮನೆಯ ಪ್ರತಿಯೊಬ್ಬರ ಕೈಗೂ ಒಂದೊಂದು ಚಲಿಸುವ ಫೋನ್ ಗಳು.ಅದು ನಮ್ಮ ದೇಹದ ಮತ್ತೋಂದು ಅಂಗವಾಗಿ ಅಂಟಿಕೊಂಡೇ ಇರಬೇಕು.ಮೊಬೈಲ್ ಫೋನ್ ಗಳು ಈಗ ನಮ್ಮ ಅನಿವಾರ್ಯತೆಗಳಲ್ಲೊಂದಾಗಿಬಿಟ್ಟಿವೆ.
ಜಾಹೀರಾತುಗಳಲಿ ಹೇಳುವಂತೆ,ಇಂದು ಜಗತ್ತು ನಮ್ಮ ಕೈಯ್ಯಲ್ಲಿ.ಜನಸಾಮಾನ್ಯರಿಗೆ ಜಗತ್ತು ಸಣ್ಣದಾಗಿ ಕಾಣಲು ಮೊಬೈಲ್ ಗಳೂ ಮೂಲಕಾರಣವೇನೊ!ಅದೆಲ್ಲಿದ್ದರೂ ಸಂಪರ್ಕಿಸಬಹುದು,ಮನಸ್ಸಾದಾಗ ಮಾತನಾಡಬಹುದು.ಅದಕ್ಕೊಂದು ಉದಾಹರಣೆಯಾಗಿ ಮೊನ್ನೆ ನನಗೊಂದು call ಬಂದಿತ್ತು,ಅವಳ ಮಾತು'ಇಂದೇತಕೋ ಯಾರೊಡನೆಯಾದರೂ ಮನದ ಮಾತನ್ನು ಹಂಚಿಕೊಳ್ಳಬೇಕೆಂದೆನಿಸಿ cellಅನ್ನು ಕೈಯ್ಯಲ್ಲಿ ಹಿಡಿದರೆ ನೆನಪಾದವಳು ನೀನು.ತಕ್ಷಣ ನಿನ್ನ phoneನಂಬರ್ ಅನ್ನು ಹುಡುಕಿ ತೆಗೆದು ನನ್ನ ಮೊಬೈಲ್ ನ ಎದೆಯಮೇಲೆ ಅದನ್ನು ಮೂಡಿಸಿದೆ ಅಷ್ಟೇ,ಈಗ ನಿನ್ನ ಪಕ್ಕದಲ್ಲೇ ಕುಳಿತು ಮಾತನಾದಿದಂತೆನಿಸುತ್ತಿದ." ಮೊಬೈಲ್ ಗಳಿಂದಾಗಿ ನಾವು ಈಗ ಮಾತನಾಡಿದೆವು. ಇದರಿಂದಾಗಿ ಸಂಬಂದಗಳು ಜೀವಂತವಾಗುತ್ತಿವೆ,ಪರಿಚಯಗಳು ಸ್ನೇಹವಾಗುತ್ತಿವೆ.ಅದರಿಂದಲೇ ಏನೋ ಆ ಸರಹೊತ್ತಿನಲ್ಲಿ ಹೀಗೊಬ್ಬಳು ಪರಚಿತಳಲ್ಲದ ಪರಿಚಿತಳು ನನ್ನೊಡನೆ ಮಾತನಾಡಿದಳು.ಅವಳು ಕೆಲವು ಅಂತರಂಗದ ಮಾತುಗಳನ್ನು ಹೇಳಿಕೊಳ್ಳುತ್ತಿದ್ದಾಳೆ,ಅದು ನನ್ನೊಡನೆಯೇ ಎಂಬುದು ಖಚಿತವಾಗಿದೆ,ಒಳ್ಳೆಯ ಗೆಳತಿಯಾಗಿ ಮಾತನಾಡಿದ್ದೇನೆ.ಆದರೆ ನಿಜವಾಗಿಯೂ ಹೇಳುತ್ತೇನೆ ಅವಳು ಯಾರೆಂಬುದು ನನಗೆ ತಿಳಿದಿರಲಿಲ್ಲ.ಕೊನೆಗೆ ಮಾತಿನ ಮಧ್ಯೆ ಆ ದಿನದ ಪಯಣದ ಕುರಿತು ಅವಳೇ ಹೇಳಿದ್ದಾಳೆ,ಆಗ ನೆನಪಾಯಿತು ನೋಡಿ ಅವಳು ಆ ದಿನ ಬಸ್ ನಲ್ಲಿ ಜೊತೆಯಾಗಿದ್ದಳು,ಆದರೂ ಆ ನನ್ನ ಹೊಸ ಸ್ನೇಹಿತೆಯ ಮೊಗ ಇನ್ನೂ ನನಗೆ ನೆನಪಾಗಲಿಲ್ಲ.ಮಾತು ಮುಗಿಸುವಾಗ ಅವಳದನಿಯಲ್ಲಿ ನಿರಾಳತೆ ಇತ್ತು,ಅಷ್ಟು ಸಾಕಲ್ಲವೇ? ಹೀಗೆ ಬೇಕೆನಿಸಿದಾಗ ಬೆನ್ನು ತಟ್ಟಿಸಿಕೊಳ್ಳುವ ಅವಕಾಶವನ್ನು ಮೊಬೈಲ್ ಫೋನ್ ಗಳು ನಮಗೆ ಒದಗಿಸಿಕೊಡುತ್ತವೆ.
ಇಷ್ಟರ ನಡುವೆಯೂ ಒಮ್ಮೊಮ್ಮೆ ಈ ವ್ಯವಸ್ಥೆ ಅವಸ್ಥೆ ಎನಿಸಿಬಿಡುತ್ತದೆ.ಜಾಸ್ತಿಯಾದರೆ ಅಮ್ರುತವೂ ವಿಷ ಅನ್ನುತ್ತಾರಲ್ಲಾ ಹಾಗೆ. ಈ ಮೊಬೈಲ್ ಫೋನ್ ಗಳು ಬೆಂಬಿಡದ ಬೂತದಂತೆ ಕಾಡಿ ಸುಂದರ ಏಕಾಂತವನ್ನೇ ಕಸಿದು ಕೊಂದುಬಿಡುತ್ತವೆ.ಒಂಟಿತನವನ್ನು ನೀಗುತ್ತದೆ ಎಂಬುದು ಎಷ್ಟು ಸತ್ಯವೋ ಒಮ್ಮೊಮ್ಮೆ ಮನೆಯೊಳಗಿನ ಮನಸಿನೊಳಗೂ ಮಾತುಗಳಿಲ್ಲದಂತೆ ಸಮಯವನ್ನು ನಿರ್ಧಾಕ್ಷಿಣ್ಯವಾಗಿ ನುಂಗಿಬಿಡುವುದೂ ಅಷ್ಟೇ ಸತ್ಯ.ಎಲ್ಲೋ ಒಮ್ಮೊಮ್ಮೆ switch off ಮಾಡಿದರೆ ಕೆಲವು ಪ್ರಮುಖ ಕರೆಗಳು ಸಮಯಕ್ಕೆ ಸಿಗದಂತಾಗುತ್ತವೆ.ಅಬ್ಬಾ ಎಷ್ಟು ಕಿರಿ ಕಿರಿ ಅನ್ನಿಸುತ್ತೆ ಅಲ್ಲವೆ?
ಮೊಬೈಲ್ ಗಳಲ್ಲಿ FM ಸೌಲಭ್ಯ ಒದಗಿಸಿದ ನಂತರವಂತೂ ಕಿವುಡರ ಉಪಕರಣ ಪ್ರತಿಯೊಬ್ಬರ ಕಿವಿಯನ್ನೂ ಸೇರಿದಂತೆನಿಸುತ್ತದೆ.ಸುಮ್ಮನೆ ನಗುವವರು,ಒಬ್ಬೊಬ್ಬರೆ ಮಾತನಾಡುತ್ತಿರುವವರು ಎಲ್ಲೆಡೆ ಕಂಡುಬರುತ್ತಾರೆ.ಇದು ಈಗ ಸದ್ಯಕ್ಕೆ ಪಟ್ಟಣಗಳಲ್ಲಷ್ಟೇ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಹಳ್ಳಿಯವರು ಪಟ್ಟಣಕ್ಕೆ ಕಾಲಿಟ್ಟ ಮೊದಲು ಅವರಿಗೆ ಹುಚ್ಚಾಸ್ಪತ್ರೆಯ ಒಳ ಬಂದಂತಾಗುವುದು ನಿಜ.
ಇಂದು ನಮಗೆ ಅನಿವಾರ್ಯವಾದ ಈ ಮೊಬೈಲ್ ಫೋನ್ ಗಳು ವರವೋ ಶಾಪವೋ ತಿಳಿಯಿತ್ತಿಲ್ಲ.

- Login or register to post comments
- 636 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಕೈಯ್ಯಲ್ಲಿನ ಜಗತ್ತು
ಜಂಗಮದನಿಯ(mobile phone) ಕುರಿತಿರುವ ಈ ಲೇಖನವು, ನಾವೆಲ್ಲರು ಇಂದು ಅದರಿಂದ ಅನುಭವಿಸುತ್ತಿರುವ ಅನುಕೂಲಾನನುಕೂಲಗಳನ್ನು ವಿವರಿಸಿತು. ಧನ್ಯವಾದಗಳು ರಚಯಿತರಿಗೆ.
ಭಾಷಾಸಂಬಂಧಾನಿಸಿಕೆಗಳು:
1)ತೆಗೆದುಕೊಳ್ಳೋಣಾ = ತೆಗೆದುಕೊಳ್ಳೋಣ
2)ಮೊನ್ನೆಯತನಕ = ಮೊನ್ನೆಯ ತನಕ
3)ಎಲ್ಲಾ = ಎಲ್ಲ, ಬಹಳ ಜನರು "ಎಲ್ಲಾ" ಎಂದು ಬರೆಯುವರು, "ಎಲ್ಲ" ಎಂದರೆ ಸಾಕು ಎಂದು ನನ್ನ ಅಭಿಪ್ರಾಯ.
4)ನಿದಾನವಾಗಿ = ನಿಧಾನವಾಗಿ
5)ಅನ್ನೋತರ = ಅನ್ನ + ಉತ್ತರ = ಅನ್ನೋತರ. ನೀವು ಇಲ್ಲಿ ಹೇಳಬಯಸಿದ್ದು, "ಅನ್ನುವ ತರಹ" ಎಂದು ಅಂದುಕೊಳ್ಳೋಣ.
6)ಎಲ್ಲವೂ = ಎಲ್ಲವು, 3ರಂತೆ.
7)ಮತ್ತೋಂದು = ಮತ್ತೊಂದು = ಮತ್ತೆ + ಒಂದು
9) ಕೈಯ್ಯಲ್ಲಿ = ಕೈಯಲ್ಲಿ
10)call = ಕರೆ, ದೂರವಾಣಿ ಕರೆ,
11)ಕೈಯ್ಯಲ್ಲಿ = ಕೈಯಲ್ಲಿ
12)phoneನಂಬರ್ = ದೂರವಾಣಿ ಸಂಖ್ಯೆ
13ಮಾತನಾದಿದಂತೆ = ಮಾತನಾಡಿದಂತೆ
14)ಸಂಬಂದಗಳು = ಸಂಬಂಧಗಳು
15)ಪರಚಿತಳಲ್ಲದ ಪರಿಚಿತಳು = ಪರಚಿತಳಲ್ಲದ ಅಪರಿಚಿತಳು
16)ಮಧ್ಯೆ = ಮಧ್ಯದಲ್ಲಿ, ಬಹಳ ಜನರು ಹೀಗೆ ಹೇಳುವರು, ಆದರೆ ಸಂಸ್ಕೃತದಲ್ಲಿ "ಮಧ್ಯೆ" ಎಂದರೆ ಮಧ್ಯದಲ್ಲಿ ಎಂದು.
17)ಎನಿಸಿಬಿಡುತ್ತದೆ = ಇಲ್ಲಿ "ಅನ್ನಿಸಿಬಿಡುತ್ತದೆ" ಎಂದರೆ ಸೂಕ್ತವೆಂದು ನನ್ನ ಅನಿಸಿಕೆ.
18)ಅಮ್ರುತವೂ = ಅಮೃತವು ಕೂಡ, ಅಮರ್ದು ಕೂಡ
19)ಬೂತ = ಭೂತ
20)ನಿರ್ಧಾಕ್ಷಿಣ್ಯವಾಗಿ = ನಿರ್ದಾಕ್ಷಿಣ್ಯವಾಗಿ
21)switch off = ನಿಷ್ಕ್ರಿಯಗೊಳಿಸು, ಆರಿಸು(ಆಡು ಮಾತಿನಲ್ಲಿ)
ಕೆಲ ಸೂಚನೆ
ಕೆಲವು ನನ್ನ ನಮ್ರ ಅನಿಸಿಕೆಗಳು.
೧. ಜನರು ಸಂಪದದಲ್ಲಿ ಬರೆಯುತ್ತಿರುವದು ಸ್ವಾಗತಾರ್ಹ ; ಆದರೆ ಪೋಸ್ಟ್ ಮಾಡುವ ಮೊದಲು ಒಂದೆರಡು ಸಾರಿ ಓದಿ ನೋಡಲಿ . - ಕಾಗುಣಿತದ ತಪ್ಪುಗಳನ್ನು - ಅದರ ಬಗ್ಗೆ ಚರ್ಚೆಯನ್ನು - ಸಾಕಷ್ಟು ಕಡಿಮೆ ಮಾಡಬಹುದು . ಇದು ಎಲ್ಲರ ಸಮಯ, ಶಕ್ತಿ ಉಳಿತಾಯವಾಗುತ್ತದೆ.
೨. ಎಲ್ಲಾ ಎನ್ನುವದು ಎಲ್ಲ ಶಬ್ದಕ್ಕೆ ಒತ್ತು ಕೊಟ್ಟು ಹೇಳುತ್ತಿರಬಹುದಲ್ವೆ?
೩. ಅನ್ನೋತರ= ಅನ್ನ+ಉತ್ತರ ಅಲ್ಲ ! ಅನ್ನ+ಉತ್ತರ= ಅನ್ನೋತ್ತರ ಆಗುತ್ತದೆ. ಅನ್ನೋ ತರ ಎಂದರೆ ಅನ್ನುವ ತರಹವೇ.
೪. ಎಲ್ಲವೂ - ೨ ರಂತೆ.
Re: ಕೆಲ ಸೂಚನೆ
೩. ಅನ್ನೋತರ= ಅನ್ನ+ಉತ್ತರ ಅಲ್ಲ ! ಅನ್ನ+ಉತ್ತರ= ಅನ್ನೋತ್ತರ ಆಗುತ್ತದೆ. ಅನ್ನೋ ತರ ಎಂದರೆ ಅನ್ನುವ ತರಹವೇ.
ಧನ್ಯವಾದಗಳು ಶ್ರೀಕಾಂತರೆ,
ನಾನು ತಪ್ಪಾಗಿ ಪದಬಿಡಿಸಿದೆನು. ಹಾಗೆಯೆ ಎಲ್ಲಾ ಮತ್ತು ಎಲ್ಲವೂ ಬಗ್ಗೆ ಕೂಡ, ಅದು ನನ್ನ ಅನಿಸಿಕೆ, ಅದುವೆ ಸರಿಯೆಂದಲ್ಲ.
ನನಗೆ "ಅನ್ನೋತರ" ಅಂದರೇನಂತವಿನ್ನು ಅರ್ಥವಾಗುತ್ತಿಲ್ಲ.
ನಿಮ್ಮ ಅನಿಸಿಕೆಗಳು...!!!
ನಿಮ್ಮ ಅನಿಸಿಕೆಗಳು ಮತ್ತು ಕಾಳಜಿ ಸ್ವಾಗತಾರ್ಹವೆ..ಆದರೆ ಈ ಲೇಖನಕ್ಕಿಂತ ಉದ್ದವಾಗಿರುವ ನಿಮ್ಮ ಆಕ್ಷೇಪಣೆಯ..ತಿದ್ದುಪಡಿಯ ಪಟ್ಟಿ ನನಗೇಕೊ ಸರಿಯೆನಿಸುತ್ತಿಲ್ಲ..
ನೀವು ಲೇಖಕರಿಗೆ ಭಾಷೆಯ ಮೂಲಾಭ್ಯಾಸ ಮಾಡಿಸುತ್ತಿದ್ದೀರೇನೊ ಅನ್ನಿಸುತ್ತಿದೆ...ಇದು ಹೀಗೇ ಇನ್ನೆರಡು ಸಾರಿ ಮುಂದುವರಿದರೆ ಅವರು ಬರೆಯುವುದನ್ನೇ ನಿಲ್ಲಿಸಿದರೂ ಆಶ್ಚರ್ಯವಿಲ್ಲ(ಇಲ್ಲಿ ನನಗೆ ನೀವು ಆಶ್ಚರ್ಯ+ಇಲ್ಲ ಎಂದು ತಿದ್ದುವುದಿಲ್ಲವೆಂದುಕೊಳ್ಳುತ್ತೇನೆ).ಕೂಸಿಗೆ ಹೊಲಿಸಿದ ಕುಲಾವಿ ಒಂದು ಸ್ವಲ್ಪ ದೊಡ್ಡದಿದ್ದರೆ ಕೂಸು ಅದನ್ನು ಹಾಕಿಕೊಳ್ಳಬಹುದು.ಆದರೆ ಕೂಸೇ ಮುಳುಗಿಹೋಗುವಂತಹ ಕುಲಾವಿಯನ್ನು ಹೊಲಿಸಿ ಪ್ರಯೋಜನವೇನು...???? ನೋಡುವವರಿಗೂ ಆಗ ಕುಲಾವಿಯೇ ಕಾಣಿಸುತ್ತದೆ..ಕೂಸಿನ ಅಸ್ತಿತ್ವವನ್ನೇ ಮರೆ ಮಾಡುವ ಕುಲಾವಿ ಹೊಲಿಸುವುದು ನಿಮಗೆ ಸರಿಯೆನಿಸುತ್ತದೆಯೇ..???
ಒಂದು ಭಾಷೆ ಉಳಿಸಿ ಬೆಳೆಸಲು ನಮಗೆ ಅದನ್ನು ಪ್ರೀತಿಸುವ ಪೋಷಿಸುವ ಉಳಿಸಿ ಬೆಳೆಸುವ
ಸಾಹಿತ್ಯಾಸಕ್ತರ ಅವಶ್ಯಕತೆಯಿದೆ. ಸಾಹಿತ್ಯವೆಂದರೆ ಅತಿ ಶುದ್ಧವೆನಿಸುವ ಭಾಷೆಯಲ್ಲಿ ನಮ್ಮ ಭಾವನೆಗಳನ್ನು ತಿಳಿಸುವುದು ಮಾತ್ರವೇ..?? ಆಡು ಭಾಷೆಗೆ ಅಲ್ಲಿ ಸ್ಥಾನವಿಲ್ಲವೇ..?? ಜಗತ್ತಿನ ಜೊತೆ ಜೊತೆಗೆ ನಾವೂ ಸಾಹಿತ್ಯಕ್ಕೆ ತಕ್ಕದಾಗಿ ಭಾಷೆಯ ಸಮರ್ಪಕ ಪ್ರಯೋಗಗಳ ಕಡೆ ಹೆಚ್ಚು ಗಮನ ಹರಿಸಿದರೆ ಒಳ್ಳೆಯದಲ್ಲವೇ.. ಭಾಷೆಯೆನ್ನುವುದು ಸಮರ್ಪಕ ಸಂವಹನಕ್ಕಾಗಿ ನಾವೆ ಕಂಡುಕೊಂಡಿರುವ ಸಾಧನವಲ್ಲವೇ? ಅರ್ಥಾಭಾಸವಾಗದಂತೆ ಪದಗಳ ಸಮರ್ಪಕ ಬಳಕೆ ತಪ್ಪೇ..???ಹಳೆಗನ್ನಡಕ್ಕೂ ನಾವೀಗ ಬಳಸುತ್ತಿರುವ ಕನ್ನಡಕ್ಕೂ ಎಷ್ಟು ವ್ಯತ್ಯಾಸವಿದೆಯಲ್ಲವೇ..???ಆ ವ್ಯತ್ಯಾಸ ತಾನಾಗೇ ಹುಟ್ಟಿಕೊಂಡಿತೇ..? ಹೆಚ್ಚೆಚ್ಚು ಜನರಿಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವಂತೆ ಆಕರ್ಷಕವಾಗಿ ವಿಷಯವನ್ನು ತಿಳಿಸುವುದು ೧೦೦% ಶುದ್ಧ ವ್ಯಾಕರಣಕ್ಕಿಂತಲೂ ಮುಖ್ಯವಲ್ಲವೇ..???
ನೀವು ತಿದ್ದುವ ಸ್ವರ ದೋಷಗಳು ಪ್ರಸ್ತುತವೆನಿಸಿದರೂ ಉಳಿದ ಸಂಧಿ ಸಮಾಸಗಳ ಪ್ರಸ್ತಾಪವೇಕೊ ಸರಿಯೆನಿಸಲಿಲ್ಲ.ಸಿಂಚನಾಅವರೂ ಹೆಚ್ಚು ಕಾಳಜಿಯಿಂದ ತಮ್ಮ ಟೈಪೊ ತಪ್ಪುಗಳನ್ನು ತಿದ್ದಿ ಲೇಖನಗಳನ್ನು ಸೇರಿಸಿದರೆ ಚನ್ನಾಗಿರುತ್ತದೆ.
ಉ: ನಿಮ್ಮ ಅನಿಸಿಕೆಗಳು...!!!
ಈ ಭಯದಿಂದಲೇ ಕೆಲವು ವಾರಗಳ ಹಿಂದೆ ಇದನ್ನು ಪೋಸ್ಟಿಸಿದ್ದೆ. ದಯವಿಟ್ಟು ಇದನ್ನು ಗಮನಿಸಿ.
ಒಂದು ವಿಚಾರ ಮನದಟ್ಟು ಮಾಡಿಕೊಳ್ಳೋಣ. ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಸಣ್ಣವರಲ್ಲ. ನಾವೆಲ್ಲರೂ ಸಮಾನರು. ಆದಷ್ಟು ಜಾಗೃತಿ ವಹಿಸಿ ತಪ್ಪುಗಳಾಗದಂತೆ ನೋಡಿಕೊಳ್ಳೋಣ. ಹಾಗೆಯೇ ಯಾರಾದರು ತಪ್ಪುಗಳನ್ನು ತೋರಿಸಿದರೆ. ಬೇಜಾರು ಮಾಡಿಕೊಳ್ಳುವುದು ಬೇಡ.
ಇನ್ನೊಂದು ವಿಷಯ ಹೇಳುತ್ತೇನೆ. ನಮ್ಮ ಕಛೇರಿಯಲ್ಲಿ ಅವಮಾನ ಗೋಡೆ(ವಾಲ್ ಆಫ್ ಷೇಮ್) ಅಂತ ಇಟ್ಟಿದ್ದಾರೆ. ನಾವು ಕೋಡಿಂಗ್ ನಲ್ಲಿ ಎಷ್ಟೇ ಚಾಣಾಕ್ಷರಾಗಿದ್ದರೂ ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳಿಗೆ ಆ ಪಟ್ಟಿಯಲ್ಲಿ ಬರುವುದುಂಟು. ನಾನು ಇಲ್ಲಿಯವರೆಗೆ ಬಂದಿಲ್ಲ ಮತ್ತೆ.
ಇನ್ನೊಂದು ವಿಷಯ ಗಮನಿಸಿ.
ನಾವು ಕೋಡಿಂಗ್ ನಲ್ಲಿ ಎಷ್ಟೇ ಚಾಣಾಕ್ಷರಾಗಿದ್ದರೂ ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳಿಗೆ ಆ ಪಟ್ಟಿಯಲ್ಲಿ ಬರುವುದುಂಟು.
ಇದನ್ನು ಹೀಗೂ ಹೇಳಬಹುದಿತ್ತು.
ನೀವು ಕೋಡಿಂಗ್ ನಲ್ಲಿ ಎಷ್ಟೇ ಚಾಣಾಕ್ಷರಾಗಿದ್ದರೂ ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳಿಗೆ ಆ ಪಟ್ಟಿಯಲ್ಲಿ ಬರುತ್ತೀರಿ..
ನೋಡಿ ಮೊದಲನೆಯದು ಓದುವವರಲ್ಲಿ ಅಪರಾಧಿ ಭಾವ ಉಂಟುಮಾಡುವುದಿಲ್ಲ, ಏಕೆಂದರೆ ಅಲ್ಲಿ ಬರೆದಿರುವವರೆ ತಪ್ಪುಮಾಡುತ್ತಿರುವುದು. ಓದುವವರಲ್ಲ.
ಆದರೆ ಎರಡನೆಯದು, ಓದುಗರಲ್ಲಿ ತಪ್ಪಿತಸ್ಥ ಭಾವ ಉಂಟುಮಾಡುತ್ತದೆ. ಲೇಖಕ ಮಾತ್ರ ತಾನು ಸರಿ ಎಂದು ಹೇಳಿದಂತಾಗುತ್ತದೆ.
ಪ್ರಿಯ ಶತ್ರು
ಇವೆಲ್ಲಾ ಒ೦ದು ರೀತಿ ಪ್ರಿಯ ಶತ್ರುಗಳು,
ಯಾವುದೇ ವಸ್ತುವಾಗಲಿ ಸುಖ: ಕೊಟ್ಟಷ್ಟು ದು:ಖವನ್ನು ಕೊಡುತ್ತೆ.
ಬರಿ ಪೋನ್ ಅಲ್ಲಾ, ಕಾರ್ ಗಳು , ನಾವು ಕಟ್ಟುವ ಮನೆಗಳು - ಒ೦ದು ರೀತಿ ಜೈಲುಗಳಾಗಿ ಬೇಜಾರ್ ಮಾಡ್ಸತ್ತೆ, ನಮ್ಮ ಸ೦ಬ೦ಧಿಗಳು - ಹೆ೦ಡ್ತಿ, ಗ೦ಡ, ಮಕ್ಕಳು ಎಲ್ಲರೂ ಅಷ್ಟೆ.
ಕೊನೆಗೆ ಈ ದೇಹವು ಕೂಡ -- ೬೦ ದಾಟಿದ ಮೇಲೆ ಸಿಕ್ಕಾಪಟ್ಟೆ ಭಾಧೆ ಕೊಡುತ್ತೆ.