ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸಮಸ್ಯೆ

March 21, 2006 - 11:35am — pavanaja

ನಾನು ಪೋಸ್ಟಿಸಿದ ಒಗಟನ್ನು ಯಾರೂ ಬಿಡಿಸಲಿಲ್ಲ. ಸ್ವಲ್ಪ ಸುಲಭವಾಗಿರುವ ಇದನ್ನು ಪ್ರಯತ್ನಿಸಿ-

[ಇದನ್ನು ಒಗಟು ಎನ್ನುವುದಕ್ಕಿಂತಲೂ ಸಮಸ್ಯೆ ಎನ್ನುವುದೇ ಸೂಕ್ತ]
ಈ ಸಮಸ್ಯೆಯನ್ನು ಪರಿಹರಿಸಿ-

ಪರ್ವತ ಸುತ್ತಲು
ಶಿಲೆ ಪಾಲ್ಗರೆಯಲು
ಹೆಂಗಸು ಹೇರನೆತ್ತಲು
ಕತ್ತೆ ವೇದವನೋದಲು
ವಿಪ್ರನು ಕಾಗೆ ಮಾಂಸವ ತಿಂಬುದ ಕಂಡೆ.

-ಇವು ಹೇಗೆ ಸಾಧ್ಯ?

ಸಿಗೋಣ,
ಪವನಜ

  • ಒಗಟುಗಳು
~.~
  • Login or register to post comments
  • 798 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 22, 2006 - 5:56pm — pavanaja

ಸಮಸ್ಯೆಗೆ ಉತ್ತರ

pavanaja's picture

ಪರ್ವತ ಸುತ್ತಲು ಶಿಲೆ
ಪಾಲ್ಗರೆಯಲು ಹೆಂಗಸು
ಹೇರನೆತ್ತಲು ಕತ್ತೆ
ವೇದವನೋದಲು ವಿಪ್ರನು
ಕಾಗೆ ಮಾಂಸವ ತಿಂಬುದ ಕಂಡೆ

ಎಲ್ಲವೂ ಸರಿಯಾಗಿಯೇ ಇವೆಯಲ್ಲ? ಸಮಸ್ಯೆ ಎಲ್ಲಿದೆ?

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 6:11pm — ಮಹೇಶ ಭೋಗಾದಿ

ಉ: ಸಮಸ್ಯೆಗೆ ಉತ್ತರ

ಮಹೇಶ ಭೋಗಾದಿ's picture

ಬಹಳ ಚೆನ್ನಾಗಿದೆ.

ಇದು ನೀವು ಬರೆದದ್ದೆ? ಅಥವಾ ಉದ್ಧರಿಸಿದ್ದೆ.

ಧನ್ಯವಾದ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 8:14pm — pavanaja

Re: ಸಮಸ್ಯೆಗೆ ಉತ್ತರ

pavanaja's picture

mahesh_b_s wrote:
ಬಹಳ ಚೆನ್ನಾಗಿದೆ.ಇದು ನೀವು ಬರೆದದ್ದೆ? ಅಥವಾ ಉದ್ಧರಿಸಿದ್ದೆ.

ಉದ್ಧರಿಸಿದ್ದು. ನಾನು 1995-96ರಲ್ಲಿ ತೈವಾನಿನಲ್ಲಿ ಇದ್ದಾಗ, ಇಡೀ ತೈವಾನಿನಲ್ಲಿ ಕನ್ನಡ ಮಾತನಾಡುವವ ನಾನೊಬ್ಬನೇ ಇದ್ದದ್ದು. ಆ ಸಮಯದಲ್ಲಿ soc.culture.inddian.karnataka (SCIK) ಮೂಲಕ ಹಲವು ಕನ್ನಡಿಗರ ಪರಿಚಯ ಮಾಡಿಕೊಂಡಿದ್ದೆ. ಈ SCIKನಲ್ಲಿ ಈಗ ಸಂಪದದಲ್ಲಿ ನಡೆಯುವ ರೀತಿಯಲ್ಲೇ ಚರ್ಚೆಗಳು ನಡೆಯುತ್ತಿದ್ದವು. ಆದರೆ ಲಿಪಿ ಇಂಗ್ಲೀಷ್. ದಿನೇಶ್ ನೆಟ್ಟಾರ್ ಎಂಬವರು ಇದೇ ಸಮಸ್ಯೆಯನ್ನು ಅಲ್ಲಿ ಪೋಸ್ಟಿಸಿದಾಗ ನಾನು ಅದನ್ನು ಪರಿಹರಿಸಿದ್ದೆ (ಸ್ವಲ್ಪ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಿದ್ದೇನೆ Smiling). ಈಗಲೂ ಗೂಗ್ಲ್‌ನ ಸಂಚಯದಲ್ಲಿ ಈ ಸಮಸ್ಯೆ-ಉತ್ತರದ ಸರಪಳಿ ಓದಬಹುದು. ನನಗೆ ಆಗ ಹೊಳ್ಳ ಎಂಬವರು ಪಂಡಿತ ಎಂಬ ಬಿರುದಿತ್ತಿದ್ದರು. ಈಗ ಹೊಳ್ಳ, ದಿನೇಶ್ ಎಲ್ಲಿದ್ದಾರೊ ಗೊತ್ತಿಲ್ಲ.

ದಿನೇಶ್ ನೆಟ್ಟಾರ್ ಬಗ್ಗೆ ಇನ್ನಷ್ಟು: ಗೂಗ್ಲ್‌ನಲ್ಲಿ dinesh nettar ಎಂದು ಹುಡುಕಿ ನೋಡಿ. ತುಂಬ ಸ್ವಾರಸ್ಯಕರವಾದ ಒಂದು ಹಾಸ್ಯ ಲೇಖನ ಸಿಗುತ್ತದೆ. ಅದನ್ನು ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರೆ ನಾನು ಹೊಣೆಯಲ್ಲ.

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 8:50pm — ಮಹೇಶ ಭೋಗಾದಿ

ಅರ್ಥಚಮತ್ಕಾರದ ಸಮಸ್ಯೆಗಳು...

ಮಹೇಶ ಭೋಗಾದಿ's picture

ನಾನು ಈ ರೀತಿಯ ಸಮಸ್ಯೆಗಳನ್ನು ಸಂಸ್ಕೃತದಲ್ಲಿ ಓದಿದ ನೆನಪು...

ಪವನಜರು ಕನ್ನಡದಲ್ಲಿಯು ಇಂಥ ಅರ್ಥಚಮತ್ಕಾರದ ಸಮಸ್ಯೆಗಳು ಇವೆಯೆಂದು, ತೋರಿಸಿಕೊಟ್ಟಿದ್ದಾರೆ...

ಧನ್ಯವಾದ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 23, 2006 - 1:14am — srivathsajoshi

Re: ಸಮಸ್ಯೆಗೆ ಉತ್ತರ

srivathsajoshi's picture

pavanaja wrote:
ದಿನೇಶ್ ನೆಟ್ಟಾರ್ ಎಂಬವರು ಇದೇ ಸಮಸ್ಯೆಯನ್ನು ಅಲ್ಲಿ ಪೋಸ್ಟಿಸಿದಾಗ ನಾನು ಅದನ್ನು ಪರಿಹರಿಸಿದ್ದೆ... ಈಗ ... ದಿನೇಶ್ ಎಲ್ಲಿದ್ದಾರೊ ಗೊತ್ತಿಲ್ಲ.

ದಿನೇಶ್ ನೆಟ್ಟಾರ್ ಬಗ್ಗೆ ಇನ್ನಷ್ಟು: ಗೂಗ್ಲ್‌ನಲ್ಲಿ dinesh nettar ಎಂದು ಹುಡುಕಿ ನೋಡಿ. ತುಂಬ ಸ್ವಾರಸ್ಯಕರವಾದ ಒಂದು ಹಾಸ್ಯ ಲೇಖನ ಸಿಗುತ್ತದೆ. ಅದನ್ನು ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕರೆ ನಾನು ಹೊಣೆಯಲ್ಲ.

ಸಿಗೋಣ,
ಪವನಜ

ದಿನೇಶ್ ನೆಟ್ಟಾರ್ ಈಗ ನ್ಯೂಜೆರ್ಸಿಯಲ್ಲಿದ್ದಾರೆ, ಟೆಲಿಕಾಂ ಫರ್ಮ್‍ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ. (ಅವರ ಪಿ.ಎಚ್.ಡಿ ಕ್ಷೇತ್ರ ರಾಸಾಯನಶಾಸ್ತ್ರ; ಎತ್ತಣ ಕೆಮೆಸ್ಟ್ರಿ ಎತ್ತಣ ಟೆಲಿಕಾಂ...)
ದಿನೇಶ್ ಅವರ ಹಾಸ್ಯಪ್ರಜ್ಞೆ ಈಗಲೂ ಅದೇ ಪ್ರಮಾಣದಲ್ಲಿದೆ. ವಿಚಿತ್ರಾನ್ನದ ಕಾಯಂ ಗಿರಾಕಿಯಾಗಿರುವ ಅವರು ಬಹಳ ಹಾಸ್ಯಮಯ ಪ್ರತಿಕ್ರಿಯೆಗಳನ್ನು ಬರೆದು ಕಳಿಸುತ್ತಾರೆ. ಇವತ್ತು ಪ್ರಕಟವಾಗಿರುವ ಪ್ರತಿಕ್ರಿಯೆ(http://thatskannada.oneindia.in/column/vichitranna/220306chakara_resp.ht...) ಗಳಲ್ಲಿ ದಿನೇಶ್ ಅವರ ಪತ್ರವೂ ಇದೆ. ದಿನೇಶ್ ಅವರೊಡನೆ ಸಂಪರ್ಕ ಸಾಧಿಸಬೇಕೆಂದಿದ್ದವರಿಗೆ ಅವರ ವಿ-ಅಂಚೆ ವಿಳಾಸವನ್ನು ಕೊಡಬಲ್ಲೆ.

ಇತಿ

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಹಳೆಯ ಒಗಟು
  • ವಿಂಡೋಸ್‌ಗೆ ಕನ್ನಡದ ಹೊದಿಕೆ
  • ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು
  • ಸುದ್ದಿ ಸಂಪಾದಕ (RSS aggregator) ನಿಮ್ಮ Browserನಲ್ಲಿ
  • ಮೋಜಿಲ್ಲಾದಲ್ಲಿ ಯಾಕೋ ಸಮಸ್ಯೆ
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 52 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator