ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಗಾಯತ್ರಿ ಮಂತ್ರ

March 21, 2006 - 12:54pm — tvsrinivas41

ಓಂ ಭೂರ್ಭುವ: ಸ್ವ:
ತತ್ಸರ್ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನ: ಪ್ರಚೋದಯಾತ್

ಪದಭೇದ :
ಓಂ = ಎನ್ನುವುದು ೩ ಅಕ್ಷರಗಳ ಸಂಕೀರ್ಣ. ಅ, ಉ, ಮ್
ಇವುಗಳಲ್ಲಿ ಸಂಕೀರ್ಣತೆ ಇಲ್ಲದಿರುವುದರಿಂದ ಬೀಜಾಕ್ಷರಗಳೆನ್ನುವರು.
ಈ ಮೂರು ಅಕ್ಷರಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪ.
ಇದನ್ನೇ ತ್ರಿಗುಣ ಎನ್ನಬಹುದು, ಬ್ರಹ್ಮನ್ ಎನ್ನಬಹುದು. ಆದ್ದರಿಂದ ದತ್ತಾತ್ರೇಯರನ್ನು ತ್ರಿಗುಣಾತೀತ ಅನ್ನುವರು.
ಈ ಮೂವರು ಯಾರು ಎಂದರೆ ಒಬ್ಬ ಸೃಷ್ಟಿಕರ್ತ, ಇನ್ನೊಬ್ಬ ಕಾಪಾಡುವವನು, ಮತ್ತೊಬ್ಬ ನಾಶಪಡಿಸುವವನು.
ಈ ಜಗತ್ತಿನಲ್ಲಿ ಎಲ್ಲವೂ ಹಾಗೆಯೇ. ಉದಯಿಸುವುದು, ಜ್ವಲಿಸುವುದು, ನಾಶವಾಗುವುದು.

ಭೂ: = ಆತ್ಮ ಪರಮಾತ್ಮದ ಸಂಕೀರ್ಣ ಶಕ್ತಿ
ಭುವ: = ನೋವು ದು:ಖಗಳನ್ನು ನಾಶಪಡಿಸುವವನು
ಸ್ವ: = ನಲಿವು ಸಂತೋಷಗಳ ತುಂಬಿರುವವನು
ತತ್ = ಅದು
ಸವಿತು: = ಸೂರ್ಯನಷ್ಟು ಪ್ರಖರನಾದವನು
ವರೇಣ್ಯಂ = ಉತ್ತಮ ವಿವೇಚನೆಯುಳ್ಳವನು (ವಿವೇಚನೆ = ಒಳಿತು ಕೆಡಕುಗಳನ್ನು ಬೇರ್ಪಡಿಸುವ ಶಕ್ತಿ)
ಭರ್ಗೋ = ಪಾಪಗಳನ್ನು ನಿರ್ಮೂಲನ ಮಾಡುವವನು
ದೇವಸ್ಯ = ದೈವಿಕ ಶಕ್ತಿ (ದೈವಿಕ ಅಂದರೆ ಮಾನವ ಶಕ್ತಿಗಿಂತ ಮಿಗಿಲಾದದ್ದು)
ಧೀಮಹಿ = ಸೇವಿಸಲಿ - ಒಳಗೆ ಸೇರಲಿ
ಧಿಯೋ = ಬುದ್ಧಿವಂತಿಕೆ, ಬುದ್ಧಿ ಶಕ್ತಿ
ಯೋನ: = ಯಾರು ನಮ್ಮವನೋ (ಯೋ = ಯಾರು, ನ: = ನಮ್ಮ)
ಪ್ರಚೋದಯಾತ್ = ಸ್ಫುರಿಸಲಿ, ಉದ್ಭವಿಸಲಿ = ಚಿಲುಮೆಯಂತೆ ಮೇಲೇಳಲಿ

ಓ ಭಗವಂತನೇ, ಜಗತ್ತನ್ನು ಸೃಷ್ಟಿಸುವವನೇ
ನೀನು ಜೀವವನ್ನು ಕೊಡುವವನು
ನೋವು ಮತ್ತು ದು:ಖವನ್ನು ನಿವಾರಿಸುವವನು
ಸುಖ ಸಂತೋಷಗಳನ್ನು ಸುರಿಸುವವನು
ನಿನ್ನಲ್ಲಿರುವ ದೈವಿಕ ಶಕ್ತಿಯನ್ನು ನಮ್ಮಲ್ಲಿ ಚಿಲುಮೆಯಂತೆ ಮೇಲೇಳಿಸು.

ಭಾವಾರ್ಥ:
ಆ ಸರ್ವಶಕ್ತನು ನಮ್ಮ ಬುದ್ಧಿವಂತಿಕೆಯನ್ನು ಬೆಳಗಿಸಿ
ಸನ್ಮಾರ್ಗದ ಹಾದಿಯಲ್ಲಿ ನಡೆಸಲಿ

ಸಾರಾಂಶ : ಕೆಟ್ಟದ್ದನ್ನು ನಾಶ ಪಡಿಸುವವನು
ಒಳ್ಳೆಯದನ್ನು ಸಂರಕ್ಷಿಸುವವನು
ಸೂರ್ಯನಂತೆ ಪ್ರಖರವಾಗಿರುವವನು
ತನ್ನಲ್ಲಿರುವ ಈ ಶಕ್ತಿಯನ್ನು ನಮ್ಮಲ್ಲಿ ಉದಯಿಸಲಿ

  • ಅಧ್ಯಾತ್ಮ
~.~
  • Login or register to post comments
  • 704 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 21, 2006 - 6:53pm — ಮಹೇಶ ಭೋಗಾದಿ

Re: ಗಾಯತ್ರಿ ಮಂತ್ರ

ಮಹೇಶ ಭೋಗಾದಿ's picture

ಯಾವುದೊ ಭಾಷಣದಲ್ಲಿ ಕೇಳಿದ ನೆನಪು.

ಇಲ್ಲಿ "ಯೋ ನಃ"ವನ್ನು ಗಮನಿಸಿದರೆ, ಅಲ್ಲಿ "ನಃ" ಎಂದು ಬಹುವಚನವನ್ನು ಬಳಸಿ, "ನಮಗೆ/ನಮೆಲ್ಲರಿಗೆ" ಎಂಬ ಭಾವನೆಯಿಂದ ಹೇಳಿದ್ದರೆ. ಈ ಮಂತ್ರದಲ್ಲಿಯು ಸಹ ನಮ್ಮ ಭಾರತೀಯ ದೃಷ್ಟಿಕೋನವಾದ, "ಜಗತ್ತಿನಲ್ಲಿ ಕೇವಲ ನಾನೊಬ್ಬನೆಯಿಲ್ಲ, ನನ್ನಂತೆ ಇತರರು ಇರುವರು" ಎಂಬ ಸಂದೇಶವನ್ನು ಬಿಂಬಿಸಲಾಗಿದೆ.

ಅವರು ಇದನ್ನು ಹೇಳುತ್ತಲೆ, ಮತ್ತೊಂದು ಮಾತುಹೇಳಿದರು; ಅಮೆರಿಕೆಯಲ್ಲಿ ಶಾಲೆಗಳಲ್ಲಿ ಮಗುವಿಗೆ "ನೀನು ಒಂದು ವಿಶೇಷ", "you are special" ಎಂದು ಹೇಳಿಕೊಟ್ಟರೆ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ "ಜಗತ್ತಿನಲ್ಲಿ ಕೇವಲ ನಾನೊಬ್ಬನೆಯಿಲ್ಲ, ನನ್ನಂತೆ ಇತರರು"ಎಂದು ಹೇಳಿಕೊಡುವರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಆತ್ಮ ಹೇಡಿಯಲ್ಲ!
  • ಭಕ್ತಿಯ ಶಕ್ತಿ.
  • ಜಲಪಾತ
  • ಪತಂಜಲಿಯ ಯೋಗ : ಭಾಗ ೨
  • ನೋವು ನಲಿವು..
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 143 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator