20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚುಟುಕ - ೨

August 8, 2005 - 12:38pm
pavanaja

ನನ್ನ ಮನದನ್ನೆಯ
ಮನವ
ನಾ
ಸೂರೆಗೊಳ್ಳಲಾರೆ

ಬೇಕಾಗಿಲ್ಲ ನನಗೆ
ಖಾಲಿ
ಮನದ ನೀರೆ

-ಪವನಜ
http://www.vishvakan...

ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by olnswamy on

ಇಷ್ಟ ಆಯಿತು ಚುಟುಕ. ಯೋಚಿಸಿದಷ್ಟೂ ಆರ್ಥಗಳನ್ನು ಹೊಳೆಯಿಸುವಂತೆ ಈ ಸಾಲುಗಳು ಒಳಗೊಂಡಿರುವ ವಿರೋಧಾಭಾಸ ಅದಕ್ಕೆ ಕಾರಣ. ಸಾಲುಗಳನ್ನು ಕೊಂಚ ಬೇರೆ ರೀತಿ ಜೋಡಿಸಿದರೆ ಹೇಗೆ!

Submitted by pavanaja on

ನಿಮ್ಮ ಪ್ರಶಂಸೆಗಳಿಗೆ ಧನ್ಯವಾದಗಳು. ಬೇರೆ ರೀತಿ ಜೋಡಿಸುವುದು ಹೇಗೆ?

ಈ ಚುಟುಕ ನಾನು ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಮುಂಬಯಿಯಲ್ಲಿದ್ದಾಗ ಬರೆದದ್ದು. ಮುಂಬಯಿಯಿಂದ ಪ್ರಕಟವಾಗುವ ಗೋಕುಲವಾಣಿಯಲ್ಲಿ ಇದು ಪ್ರಕಟವಾಗಿತ್ತು. ಆಗ ಗೋಕುಲವಾಣಿ ಮತ್ತು ಮುಂಬಯಿಯಿಂದ ಪ್ರಕಟವಾಗುವ ಇನ್ನೊಂದೆರಡು ಮಾಸ ಪತ್ರಿಕೆಗಳಿಗೆ ನಾವು (ನಾನು + ಹೆಂಡತಿ) ಬೆರಳಚ್ಚು ಮತ್ತು ಪುಟವಿನ್ಯಾಸ ಮಾಡುತ್ತಿದ್ದೆವು.

ಸಿಗೋಣ,
ಪವನಜ

Submitted by olnswamy on

ಪ್ರಿಯ ಪವನಜ ಅವರೆ,
ನಿಮ್ಮ ಚುಟುಕದಲ್ಲಿ ಎರಡು ವಾಕ್ಯಗಳಿವೆ. ಒಂದೊಂದೂ ವಾಕ್ಯದಲ್ಲಿ ಐದು ಐದು ಪದಗಳಿವೆ. ಅವನ್ನು ಎರಡೇ ಸಾಲಿನಲ್ಲಿ ಜೋಡಿಸಿ ಓದುವ ಲಯಕ್ಕೆ ಅನುಕೂಲ ಮಾಡಿಕೊಡುವುದು ಒಂದು ವಿಧಾನ.
ಪದಗಳ ಅನುಕ್ರಮವನ್ನು ಬದಲಾಯಿಸಿ ಜೋಡಿಸುವುದು ಇನ್ನೊಂದು ವಿಧಾನ.
ಎರಡೂ ವಾಕ್ಯಗಳ ಲಾಜಿಕ್ ಅನ್ನು ತಿರುವು ಮುರುವು ಮಾಡಿ ಜೋಡಿಸುವುದು ಇನ್ನೊಂದು ವಿಧಾನ. ಅಂದರೆ ಎರಡನೆಯ ಸಾಲು ಮೊದಲು, ಮೊದಲನೆಯದು ಆನಂತರ.
ತಂತ್ರಜ್ಞರಾದ ನಿಮಗೆ ಹತ್ತು ಯೂನಿಟ್ ಗಳ ಜೋಡಣೆಯ ಸಾಧ್ಯತೆಗಳ ಬಗ್ಗೆ ವಿವರವಾಗಿ ಹೇಳುವ ಅಗತ್ಯವೇನಿದೆ!
ಈ ಜೋಡಣೆ ಕವಿಗಳ ಒಂದು ಮಾನಸಿಕ ಆಟವೂ ಹೌದು, ಯಾವ ಯಾವ ಬಗೆಯ ಜೋಡಣೆ ಯಾವ ಪ್ರಭಾವ ಓದುಗರ ಮೇಲೆ ಬೀರುತ್ತದೆ ಎಂದು ತಿಳಿಯುವ ಮನೋವೈಜ್ಞಾನಿಕ ಕುತೂಹಲವೂ ಹೌದು, ವಾಕ್ಯ ರಚನೆ, ಅರ್ಥವ್ಯಾಪ್ತಿ ಮತ್ತು ಪರಿಣಾಮಗಳನ್ನು ಕುರಿತ ಕಾವ್ಯಮೀಮಾಂಸೆಯ ಪ್ರಶ್ನೆಯೂ ಹೌದು.
ಸುಮ್ಮನೆ ಕೂದಲು ಸೀಳುತ್ತಿದ್ದೇನಾ!?
ಇರಲಿ, ಕಾವ್ಯವೂ ಒಂದು ಕ್ರೀಡೆಯಲ್ಲವೆ! ಇಷ್ಟಾದರೂ ನಿಮ್ಮ ಚುಟುಕದ ಮನದನ್ನೆ, ಮನಸೂರೆಗೊಳ್ಳು, ಖಾಲಿಮನಗಳ ಸಂಯೋಜನೆ ಮತ್ತು ವಿರೋಧಾಭಾಸ ಇಷ್ಟವಾಯಿತು.