ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್
ಗೆಳೆಯರೇ, ನಿಮಗೆ ತಿಳಿದಿರಬಹುದು ಸುಧಾ (www.sudhaezine.com) ಮ್ಯಾಗಜೀನ್ ಈ-ಪೇಪರ್ ಆಗಿ ಸಿಗುತ್ತಿದೆ. ನನಗೆ ಸುಧಾ ಅಂದರೆ ತುಂಬಾ ಇಷ್ಟ. ಅದೆಷ್ಟು ವರ್ಷಗಳಿಂದ ನಾನು ಅದನ್ನು ಓದುತ್ತಿದ್ದೇನೆಯೋ ತಿಳಿದಿಲ್ಲ. ಈಗ ಈ ನನ್ನ ನೆಚ್ಚಿನ ಸುಧಾಳಿಗೋಸ್ಕರ ಒಂದು ಫೈರ್ಫಾಕ್ಸ್ ಪ್ಲಗಿನ್ ಬರೆದಿದ್ದೀನಿ. ಇದನ್ನು ನೀವು ಇನ್ಸಟಾಲ್ ಮಾಡಿಕೊಂಡರೆ ಅತ್ಯಂತ ಸುಲಭವಾಗಿ ಸುಧಾಳನ್ನು ಓದಬಹುದು.
ಈ ಪ್ಲಗಿನ್ನಿನ ಪ್ರಯೋಜನಗಳು ಇಂತಿವೆ.
೧. ಬಳಸುವುದು ತುಂಬಾ ಸರಳ - ಯಾವುದೇ ತಾಂತ್ರಿಕ ಅಡಚಣೆಗಳು ಇಲ್ಲ. ನಿಮಗೆ ಯಾವ ವಾರದ ಯಾವ ಪುಟ ಬೇಕು ಅಂತ ಚಿಟುಕಿದರೆ, ಅದು ಅಲ್ಲಿಯೇ ಪ್ರತ್ಯಕ್ಷ.

೨. ಕಡಿಮೆ ಇಂಟರ್ನೆಟ್ ಬಳಕೆ - ಈಗ ನೋಡಿ, "ಕರಿಸಿರಿಯಾನ" ಎಂಬ ಒಂದು ಧಾರಾವಾಹಿ ನಿಮಗೆ ಇಷ್ಟವಾಯಿತು ಅಂತಿಟ್ಟುಕೊಳ್ಳಿ. ಅದನ್ನು ನಿಮಗೆ ಮತ್ತೊಮ್ಮೆ ಓದಬೇಕೆನಿಸುತ್ತದೆ. ಆದರೆ ಆ ಕ್ಷಣ ಮನೆಯಲ್ಲಿ ಇಂಟರ್ನೆಟ್ ಇಲ್ಲ ಅಂತಿಟ್ಟುಕೊಳ್ಳಿ. ಅಥವಾ ಇದ್ದರೂ, ಪ್ರತಿ ಪುಟ ಓದುವಾಗಲೂ ಇಂಟರ್ನೆಟ್ಟಿಗೆ ಇಷ್ಟು ದುಡ್ಡು ಬಿಚ್ಚಬೇಕು. ಬ್ಯಾಂಡ್ವಿಡ್ತ್ ಖರ್ಚಾಗುತ್ತದೆ, ಅಲ್ಲವೇ. ಆದರೆ ಈ ಪ್ಲಗಿನ್ ನಿಮಗೆ "ನೆಟ್ಟಿಲ್ಲದೆ ಓದುವ" ಶಕ್ತಿ ನೀಡುತ್ತದೆ. ಒಮ್ಮೆ ನೀವು ಈ ಪ್ಲಗಿನ ಮೂಲಕ ಒಂದು ಪುಟ ಓದಿದಿರೆಂದರೆ, ಆ ಪುಟ ತಂತಾನೇ ಸಿಸ್ಟಮ್ಮಿನಲ್ಲಿ ಆರ್ಖೈವ್ ಮಾಡುತ್ತದೆ. ಮುಂದಿನ ಬಾರಿ ನೀವು ಆ ಪುಟವನ್ನು ಚಿಟುಕಿದಾಗ, ಇಂಟರ್ನೆಟ್ ಇಲ್ಲದೆಯೇ ನೀವು ಓದಬಹುದು.
ಇದರ ಸುತ್ತ ಇನ್ನೂ ಅನೇಕ ಅಯ್ಡಿಯಾಗಳನ್ನು ಇಂಪ್ಲಿಮೆಂಟ್ ಮಾಡಬಹುದು. ಬಿಡುವಿದ್ದಾಗ, ಇದನ್ನು ಬಳಸಿ ಇನ್ನೂ ಹೇಗೆ ಉತ್ತಮ ಪಡಿಸಬಹುದು ತಿಳಿಸಿ. ಏನೇ ತಾಂತ್ರಿಕ ತೊಂದರೆಯಾದರೂ ತಿಳಿಸಿ.
ಕೊಂಡಿಗಳು
- Login or register to post comments
- 1080 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಸುನಿಲ್ ರಿಗೆ ಧನ್ಯವಾದಗಳು... ಬಹಳ ಚೆನ್ನಾಗಿದೆ... pdf ಫೈಲ್ ಬದಲಿಗೆ.. jpeg image ಇದ್ದಿದ್ರೆ.. ಇನ್ನೂ ಚೆನ್ನಾಗಿರ್ತಿತ್ತು.. ಸಧ್ಯಕ್ಕೆ.. pdf ರೀಡರ್ ಇಲ್ಲದವರಿಗೆ ಸ್ವಲ್ಪ ಕಷ್ಟವಾಗಬಹುದು
ಅದನ್ನೇ ಮೊದಲು ಮಾಡಿದ್ದೆ. pdfನಲ್ಲಿ ಮಾಡಿಕೊಟ್ಟರೆ ಚೆನ್ನಾಗಿರತ್ತೆ ಅಂತ ಅದ್ಯಾಕೋ ಅನ್ನಿಸ್ತು. pdf/jpg ಒಂದು ಆಪ್ಶನ್ನಾಗಿ ಮಾಡಿಕೊಡ್ತೀನಿ ಬಿಡಿ. ಮುಂದಿನ ವರ್ಶನ್ನಿನಲ್ಲಿ.
ಉಪಯೋಗಿಸಲು ಅನುಕೂಲವಾಗುತ್ತಿಲ್ಲ. ಸ್ವಲ್ಪ ವಿವರಿಸಿರಿ
ಧನ್ಯವಾದ
-ಮಹೇಶ
ಏಕೆ ಬಳಸಲಾಗುತ್ತಿಲ್ಲ ?
ಸುಕು - ಕನ್ನಡದಲ್ಲಿ ಸ್ಪೀಕಿ ಅಂತ ರಿಕ್ವೆಸ್ಟಿಸುತ್ತಾ ಇದ್ದೀನಿ ;)
ಸುಧಾ ಪ್ಲಗಿನ್ ಮೇಲೆ Right Click -> Open With -> ಇಲ್ಲಿ "Fire fox" ಆಯ್ಕೆ ಮಾಡಿ. ನಂತರ "Install" ಗುಂಡಿ ಒತ್ತಿ.
ಅಥವಾ..
Firefox ಓಪನ್ ಮಾಡಿ. Tools-> Add-ons ಆಯ್ಕೆ ಮಾಡಿ, ನಂತರ ನಿಮ್ಮ ಡೌನ್ಲೋಡ್ ಮಾಡಿದ ಸುಧಾ ಪ್ಲಗಿನ್ ಫೈಲನ್ನು ಎಳೆದು "Add-ons" ವಿಂಡೋ ಮೇಲೆ ಹಾಕಿ. ನಂತರ "Install" ಗುಂಡಿ ಒತ್ತಿ.
ಹೀಗೆ install ಮಾಡಿದ ಮೇಲೆ, ನಿಮ್ಮ ಫೈರ್-ಫಾಕ್ಸನ್ನು ರೀಸ್ಟಾರ್ಟ್ ಮಾಡಬೇಕಾಗುತ್ತೆ.
ರೀಸ್ಟಾರ್ಟ್ ಮಾಡಿದ ಮೇಲೆ, ಟೂಲ್ಸ್ ಮೆನುವಿನಲ್ಲಿ "Sudha Ezine" ಎಂಬ ಪದ ಕಾಣುತ್ತೆ, ಅಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಕಾಣುತ್ತೆ.
ತಪ್ಪಿದ್ದರೆ ಸರಿಪಡಿಸಿ.
ಇಂತಿ
ರಾಘವೇಂದ್ರ
.zip ಅಲ್ಲಿ ಪ್ಲಗ್-ಇನ್ ಫೈಲ್ ಯಾವುದು ?
ರಾಘವೇಂದ್ರ ಎಸ್.ಅವರೆ..
ನೀವು ಬರೆದ ವಿಧಾನದಿಂದ ನಾನು ಆ ತಂತ್ರಾಂಶಾಧಿಕ್ಯವನ್ನು ಅನುಸ್ಥಾವಿಸುವಲ್ಲಿ ಸಫಲನಾದೆ
ಧನ್ಯವಾದ
-ಮಹೇಶ
ಸುನೀಲರೆ, ಧನ್ಯವಾದಗಳು. ಹಿಂದೊಮ್ಮೆ ತಾವು ಅಂತರ್ಜಾಲ ಗ್ರಂಥಾಲಯದ ಆನಲೈನ್ ಪುಸ್ತಕಗಳನ್ನು ಇಳಿಸಲು ಒಂದು ಜಾವಾದ ಉಪಕರಣವನ್ನು ಮಾಡಿದ ನೆನಪು. ಇನ್ನೊಮ್ಮೆ ಆ ಉಪಕರಣ ಮಾಡಿಕೊಡಲು ಸಾಧ್ಯವೇ?
ಸ್ವಲ್ಪ ವಿಷಯ ಬೇರೆಯೇ ಆದರೂ, ಮಯೂರ ಮಾಸಪತ್ರಿಕೆಯೂ ಇ-ಝೈನ್ ನಲ್ಲಿ ಸಿಗುವುದರಿಂದ, ಓದುಗರಿಗೆ ಸುಗ್ಗಿಯೇ.
ಈ ಬಾರಿ ಮಯೂರದಲ್ಲಿ ಪುಟ ೧೧೨ ರಿಂದ ೧೨೦ ರವರೆಗೆ ಕನ್ನಡ ಚಿತ್ರರಂಗದ ಹಿರಿಯ ಸಾಹಿತಿ, ಸ್ವಾಭಿಮಾನಿ ಕನ್ನಡಕುವರ
ಸಿ.ವಿ.ಶಿವಶಂಕರ್ ಅವರ ಸಂದರ್ಶನವಿದೆ. ಆಸಕ್ತರು ಓದಿನೋಡಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಸುನೀಲ್ ನಿಜಕ್ಕೂ ಚೆನ್ನಾಗಿದೆ.
ಸುಧಾ ಪತ್ರಿಕೆ ಮುಚ್ಚಿದರೆ, ಅದರ ಕ್ರೆಡಿಟ್ ನಿಮಗೆ. :)
*ಅಶೋಕ್