ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮುಂಬೈಯಲ್ಲಿ ಕನ್ನಡದ ಪ್ರಚಾರ!

March 22, 2006 - 12:32pm — shreekant.mishrikoti

ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ ಅನೇಕವಿಷಯಗಳು ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ. ಅದನ್ನು ಸಂಪದದಲ್ಲಿ ಹಾಕಬೇಕೆಂದು ರೈಲಿನಲ್ಲಿ ಓದಲು ಹೊರತೆಗೆದೆ. ಅದರಲ್ಲಿ ಮುಖ್ಯವಾಗಿ ಕನ್ನಡ ಭಾಷೆಯ ಪ್ರಾರಂಭಿಕ ಬೆಳವಣಿಗೆಯ ಸಂಕ್ಷಿಪ್ತ ಪರಿಚಯದ ನಂತರ ೩-೪ ಶತಮಾನ ಹೇಗೆ ಕತ್ತಲಯುಗವನ್ನು ಕಂಡಿತು ( ವಿಶೇಷತ: ಉತ್ತರ ಕರ್ನಾಟಕದಲ್ಲಿ ) , ಅದರಿಂದ ಹೇಗೆ ಹೊರಬಂದು ಇಂದಿನ ಸ್ಥಿತಿ ತಲುಪಿತು . ಅದಕ್ಕೆ ಯಾರು ಯಾರು ಕೊಡುಗೆ ಸಲ್ಲಿಸಿದರು . ಎಂಬ ಬಗ್ಗೆ ಕುತೂಹಲಕರ ವಿವರಗಳಿವೆ. ಈ ಪುಸ್ತಕವನ್ನು ಶ್ರೀ ರಾ.ಯ.ಧಾರವಾಡಕರ ಅವರು ಬರೆದಿದ್ದು . ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಯಾಗಿದೆ. ( ಈ ಪುಸ್ತಕ ಯಾರದೋ ಮನೆಯಲ್ಲಿ ಸುಮ್ಮನೆ ಬಿದ್ದಿತ್ತು. ಅವರು ನನ್ನ ಮೂಲಕ ಅನೇಕ ಪುಸ್ತಕಗಳನ್ನು ವಿಲೇವಾರಿ ಮಾಡುತ್ತಿದ್ದಾಗ ನಾನು ಎತ್ತಿಟ್ಟುಕೊಂಡಿದ್ದೇನೆ ಅಂದರೆ ಕದ್ದಿದ್ದೇನೆ. - ಬೆಗ್, ಬೈ , ಬಾರೋ ಆರ್ ಸ್ಟೀಲ್ ಎಂದು ನಾಣ್ಣುಡಿಯೇ ಇದೆಯಲ್ಲ?!) . ತುಂಬ ಅಮೂಲ್ಯ ಪುಸ್ತಕವೇ ಸರಿ.

ಪಕ್ಕದಲ್ಲಿ ಒಬ್ಬ ಹಿರಿಯರು . ಸುಮಾರು ೬೦ ವರ್ಷದವರು. ಪುಸ್ತಕದ ಕಡೆ ಅಗಾಗ ನೋಟ ಹರಿಸುತ್ತಿದ್ದರು. ( ಮುಂಬೈಯಲ್ಲಿ ಹೀಗೆ ಮಾಡುವದು ಅಪೇಕ್ಷಣೀಯವಲ್ಲ; ಕಣ್ಣಿಗೆ ಕಣ್ಣು ಸೇರಿಸುವ ಪದ್ಧತಿ ಸಹಿತ ಇಲ್ಲ. ಇನ್ನು ಅನಗತ್ಯ ಮಾತನಾಡುವದಂತೂ ಇಲ್ಲವೇ ಇಲ್ಲ . ಎಷ್ಟೋ ವ್ಯವಹಾರಗಳು ಸನ್ನೆಯಿಂದಲೇ ಅಥವಾ 'ಶ್ಶ್ ಶ್ಶ್' ಎಂಬ ಭಾಷಾತೀತ ನೆಲೆಯಿಂದಲೇ ನಡೆಯುತ್ತವೆ!.) ಅಲ್ಲಲ್ಲಿ ಇಂಗ್ಲೀಷ್ ಉದ್ಧೃತ ವಾಕ್ಯಗಳಿದ್ದವು. ( ಹೀಗೆ ವಾಕ್ಯಗಳನ್ನು ಎತ್ತಿಕೊಡುವದಕ್ಕೆ ಏನನ್ನುತ್ತಾರೆ? ಉದ್ಧರಣೆ?! ಉದ್ಧಾರ?! ) ಕೊನೆಗೆ ಕೇಳಿದರು ಇಂಗ್ಲೀಷಿನಲ್ಲಿ . ಅದು ಕನ್ನಡವೇ ? ಇತಿಹಾಸದ ಪುಸ್ತಕವೇ ? ಅಂತ. ನಾನೂ ಉತ್ತರಿಸಿದೆ ( ಇದೆಲ್ಲ ಮಾತುಕತೆ ಇಂಗ್ಲೀಷಿನಲ್ಲಿ ಆಯಿತು) 'ಹೌದು , ಕಳೆದ ಎರಡು ಶತಮಾನಗಳ ಭಾಷೆಯ ಬದಲಾವಣೆಗಳ ಬಗ್ಗೆ ಇದೆ' ಅಂದೆ. ' ಹೌದಾ ? ೧೩ ನೇ ಶತಮಾನದ ಭಾಷೆ ಅಲ್ಲವೇ?' ಅಂದರು. ಮನಸ್ಸಿನಲ್ಲಿ -ಅಹಾ, ಒಬ್ಬರ ತಪ್ಪು ಕಲ್ಪನೆಯನ್ನಾದರೂ ದೂರ ಮಾಡಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿವ ಅವಕಾಶ ನನಗೆ ಸಿಕ್ಕಿತು- ಎಂದುಕೊಂಡೆ. ' ಅಲ್ಲ, ೨೦೦೦ ವರ್ಷ ಹಳೆಯದು. ೫ ನೇ ಶತಮಾನದ ಶಾಸನಗಳಿವೆ' ಎಂದೆ. ಸ್ವಲ್ಪ ತಡೆದು ' ನಿಜ ಹೇಳಬೇಕೆಂದರೆ ಇಲ್ಲಿಯ ಭಾಷೆ ಕನ್ನಡವೇ ಆಗಿತ್ತು . ಮರಾಠಿ ೧೨ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬರುವ ಮೊದಲು, ಸಂತ ಜ್ಞಾನೇಶ್ವರರ ಕಾಲಕ್ಕೆ ಜನ ವೈದಿಕ ಸಂಸ್ಕೃತಿಯ ಪುನರುಜ್ಜೀವನಕಾಲಕ್ಕೆ ಕನ್ನಡವನ್ನು ಜೈನರ ಭಾಷೆಯೆಂದು ಕೈಬಿಟ್ಟರು. ಇಷ್ಟಕ್ಕೂ ಜನರಿಗೆ ಭಾಷೆಗಿಂತ ಧರ್ಮ ಮುಖ್ಯ ' ಎಂದು ಹೇಳಿದೆ . ' ಇಲ್ಲಿ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಾವನೂರರು ತಮಗೆ ಪರಿಚಯ ಎಂದು ಹೇಳಿದರು. ಹಾಗೆಯೇ ' ಪೋರ್ತುಗೀಸರ ಕಲಕ್ಕೆ ಮುಂಬೈಯಲ್ಲಿ ಕೊಂಕಣಿ, ಇಂಗ್ಲೀಷ , ಪೋರ್ಚುಗೀಸ್ , ಕನ್ನಡ ಭಾಷೆಗಳು ಅಧಿಕೃತ ಭಾಷೆಗಳಾಗಿದ್ದವು . ಜನರು ತಮ್ಮ ಮನವಿಗಳನ್ನು ಈ ಭಾಷೆಗಳಲ್ಲಿ ಸಲ್ಲಿಸಬೇಕಾಗಿತ್ತು. ' ಎಂದೂ ಹೇಳಿದೆ. ಎಲ್ಲ ಕಾಲಕಾಲಕ್ಕೆ ಬದಲಾಗುತ್ತ ಇರುತ್ತದೆ ಎಂದೂ ಟಿಪ್ಪಣಿ ಸೇರಿಸಿದೆ. ಅಷ್ಟರಲ್ಲಿ ಅವರು ಇಳಿಯಬೇಕಾದ ಸ್ಥಳ ಬಂದಿತು . ಇಳಿದು ಹೋದರು.

ಆಮೇಲೆ ನೆನಪಾಯಿತು. ಮರಾಠಿ ಭಾಷೆಯ ತಳಹದಿ ದ್ರಾವಿಡ ಅಂದರೆ ಕನ್ನಡವೇ ಆಗಿದೆ. ಕ್ರಿ.ಶ. ೫೦೦-೧೫೦೦ ಅವಧಿಯಲ್ಲಿ ಇಂದಿನ ಮಹಾರಾಷ್ಟ್ರವನ್ನು ಕನ್ನಡ ಅರಸರು ಆಳುತ್ತಿದ್ದರು. ಕನ್ನಡದ ಹೆಚ್ಚು ಶಾಸನಗಳು ಸಿಕ್ಕಿರುವದು ಮಹಾರಾಷ್ಟ್ರದಲ್ಲಿಯೇ .ಮಹಾರಾಷ್ಟ್ರದಲ್ಲಿ ಸಿಕ್ಕಿರುವ ೨೦೦೦ ಶಾಸನಗಳಲ್ಲಿ , ೧೭೫ ಮಾತ್ರ ಮರಾಠಿಯವು . ಇವಷ್ಟು ಹೇಳದೆ ಉಳಿದ ಮುಖ್ಯ ವಿಷಯಗಳು.

ಇಲ್ಲಿ ಇದನ್ನೆಲ್ಲ ಏಕೆ ಬರೆದಿದ್ದೇನೆಂದರೆ ಸಂಪದ ಓದುಗರಿಗೂ ಈ ವಿಷಯಗಳು ಗೊತ್ತಿರಲಿಕ್ಕಿಲ್ಲ , ಅವರಿಗೂ ಕನ್ನಡದ ಭವ್ಯ ಇತಿಹಾಸದ ಅರಿವಾಗಲಿ. ಇಂತಹ ಅರಿವಿನಿಂದ ಹೆಮ್ಮೆ ಮೂಡಲಿ . ಕನ್ನಡದ ಪ್ರಚಾರ ಹೆಚ್ಚು ಹೆಚ್ಚು ಆಗಲಿ ಎಂಬ ಆಶಯವೇ ಆಗಿದೆ.

  • ಪ್ರಬಂಧ
~.~
  • Login or register to post comments
  • 1183 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 22, 2006 - 3:57pm — ಮಹೇಶ ಭೋಗಾದಿ

ಅ: ಮುಂಬೈಯಲ್ಲಿ ಕನ್ನಡದ ಪ್ರಚಾರ!

ಮಹೇಶ ಭೋಗಾದಿ's picture

 ಹೀಗೆ ವಾಕ್ಯಗಳನ್ನು ಎತ್ತಿಕೊಡುವದಕ್ಕೆ "ಉದ್ಧರಿಸು" ಎನ್ನುವರು. ಅಲ್ಲಿ "ಧ"ಒತ್ತು ಇರುದು.

ನಿಮ್ಮ ಲೇಖನ ಮತ್ತು ಭಾಷಾಶೈಲಿ ಬಹಳ ಚೆನ್ನಾಗಿದೆ.

 ಶ್ರೀಕಾಂತರಿಗೆ ಧನ್ಯವಾದಗಳು..

ಇಲ್ಲಿ ಗಮನಿಸಿ...

ಭಾರತದ ನದಿಗಳು

 

ನೃಪತುಂಗನ "ಕವಿರಾಜಮಾರ್ಗ"ದಲ್ಲಿ ಕನ್ನಡನಾಡು ಗೋದಾವರಿಯಿಂದ ಕಾವೇರಿಯವರೆಗೆ ವಿಸ್ತರಿಸಿತ್ತು ಎಂದು ಹೇಳಿದೆ. ಅಂದರೆ ಇಂದಿನ ವಿದರ್ಭಪ್ರದೇಶದ ವರೆಗೆ.

ಆಮೇಲೆ ಕೃಷ್ಣದೇವರಾಯನ ಕಾಲದಲ್ಲಿ ಅದು ಭೀಮೆ/ಕೃಷ್ಣೆಯಿಂದ ಕಾವೇರಿವರೆಗಿತ್ತು.

ಒಡೆಯರಕಾಲದಲ್ಲಿ ತುಂಗೆಯಿಂದ ಕಾವೇರಿವರೆಗಿತ್ತು.

ಈಗ ಮತ್ತೆ ಭೀಮೆ/ಕೃಷ್ಣೆಯಿಂದ ಕಾವೇರಿವರೆಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 5:51pm — ಶಿವ

ಪಯಸ್ವಿನಿ

ಶಿವ's picture

ಮಹೇಶ್ ಅವರೆ,ಭಾರತದ ಈ ಭೂಪಟ ಎಲ್ಲಿ ಸಿಕ್ಕಿತು.ಹೆಚ್ಚಾಗಿ ಕರ್ನಾಟಕದ ನಕ್ಷೆಯಲ್ಲು ಪಯಸ್ವಿನಿ ನದಿಯನ್ನು ನಾವು ಕಾಣುವುದಿಲ್ಲ.Smiling.ಕರ್ನಾಟಕದ ಮುಖ್ಯ ನದಿಗಳ ಬಗ್ಗೆ ಮಾತನಾಡುವಾಗ ದಕ್ಷಿಣ ಕನ್ನಡ ಜಿಲ್ಲೆಯನ್ನು ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಪ್ರತಿನಿಧಿಸುತ್ತವೆ.
ಪಯಸ್ವಿನಿಯು ಕೊಡಗು ಜಿಲ್ಲೆಯ ಮದೆನಾಡು ಎಂಬಲ್ಲಿ ಹುಟ್ಟಿ ,(ನಮ್ಮ) ಸುಳ್ಯದ ಮೂಲಕ ಹರಿದು , ಅರಬ್ಬೀ ಸಮುದ್ರವನ್ನು ಕೇರಳ ರಾಜ್ಯದಲ್ಲಿ ಸೇರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 5:58pm — ಮಹೇಶ ಭೋಗಾದಿ

ಉ:ಪಯಸ್ವಿನಿ

ಮಹೇಶ ಭೋಗಾದಿ's picture

ಚಿತ್ರವು ಇಲ್ಲಿ ದೊರೆಯಿತು....

http://www.indianmirror.com/geography/rivers.jpg

ಪಯಸ್ವಿನಿ ನದಿಯ ಮಾಹಿತಿಗಾಗಿ ಧನ್ಯವಾದ.. ನನಗೆ ತಿಳಿದಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 6:00pm — pavanaja

Re: ಪಯಸ್ವಿನಿ

pavanaja's picture

sada wrote:
ಪಯಸ್ವಿನಿಯು ಕೊಡಗು ಜಿಲ್ಲೆಯ ಮದೆನಾಡು ಎಂಬಲ್ಲಿ ಹುಟ್ಟಿ ,(ನಮ್ಮ) ಸುಳ್ಯದ ಮೂಲಕ ಹರಿದು , ಅರಬ್ಬೀ ಸಮುದ್ರವನ್ನು ಕೇರಳ ರಾಜ್ಯದಲ್ಲಿ ಸೇರುತ್ತದೆ.

ಇದನ್ನು ಕೇರಳದಲ್ಲಿ ಚಂದ್ರಗಿರಿ ಎಂದು ಕರೆಯುತ್ತಾರೆ.

ಅಂದ ಹಾಗೆ ನಾನು ಸುಳ್ಯದ ಸಮೀಪದವನು. ಸುಳ್ಯದಲ್ಲಿ 9ನೇ ತರಗತಿಯಂದ ಪಿಯುಸಿ ತನಕ ಕಲಿತಿದ್ದೆ.

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 7:25pm — ಶಿವ

Re;Re:ಪಯಸ್ವಿನಿ

ಶಿವ's picture

ಪವನಜ ಅವರೆ, 'ನುಡಿ' ಸಾಫ್ಟ್‌ವೇರ್‌ನ ವಿವಾದದ ಸಮಯದಲ್ಲೇ ನಿಮ್ಮ ಬಗ್ಗೆ ಗೊತ್ತಾಯಿತು(ಬಹುಶಃ ಸುಮಾರು ೨ ವರ್ಷಗಳ ಹಿಂದೆ)..ನಾನು ಹುಟ್ಟಿದ್ದು,ಓದಿದ್ದು(೧ ರಿಂದ ಇಂಜಿನಿಯರಿಂಗ್) ಎಲ್ಲಾ ಸುಳ್ಯದಲ್ಲಿ.ಈಗ ಐಟಿಐ ,ಲಿಮಿಟೆಡ್,ಬೆಂಗಳೂರುನಲ್ಲಿ ಉದ್ಯೋಗದಲ್ಲಿ ಇದ್ದೇನೆ.ಸುಳ್ಯದಲ್ಲಿ ಎಲ್ಲಿ ಓದಿದ್ದು, ಎನ್.ಎಮ್.ಸಿಯಲ್ಲಾ ಅಥವಾ ಸರಕಾರಿ ಜೂನಿಯರ್ ಕಾಲೇಜ್‌ನಲ್ಲಾ?
ಇವುಗಳೆರಡರಲ್ಲೂ ನಾನು ಹಳೇ ವಿದ್ಯಾರ್ಥಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 8:02pm — pavanaja

Re:ಪಯಸ್ವಿನಿ

pavanaja's picture

sada wrote:
ಪವನಜ ಅವರೆ, ಸುಳ್ಯದಲ್ಲಿ ಎಲ್ಲಿ ಓದಿದ್ದು, ಎನ್.ಎಮ್.ಸಿಯಲ್ಲಾ ಅಥವಾ ಸರಕಾರಿ ಜೂನಿಯರ್ ಕಾಲೇಜ್‌ನಲ್ಲಾ? ಇವುಗಳೆರಡರಲ್ಲೂ ನಾನು ಹಳೇ ವಿದ್ಯಾರ್ಥಿ.

ಸರಕಾರಿ ಜ್ಯೂನಿಯರ್ ಕಾಲೇಜು. ಎನ್.ಎಂ.ಸಿ. ಪ್ರಾರಂಭವಾದುದೇ ನಾನು ಸುಳ್ಯ ಬಿಟ್ಟ ಮೇಲೆ.

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 8:07pm — ಮಹೇಶ ಭೋಗಾದಿ

ಪಯಸ್ವಿನಿ..

ಮಹೇಶ ಭೋಗಾದಿ's picture

ಸದಾ ಮತ್ತು ಪವನಜರಿಗೆ ಒಂದು ಮನವಿ!!!

ದಯೆಯಿಟ್ಟು ಎಲ್ಲರಿಗೆ ಸಂಬಂಧಿಸಿದ ವಿಷಯವನ್ನು ಇಲ್ಲಿ ಬರೆಯಿರಿ.

ಖಾಸಗಿ ಮಾತುಕತೆಗಳಿಗೆ, ಖಾಸಗಿ ಸಂದೇಶಗಳನ್ನು ಬಳಸಬಹುದಲ್ಲವೆ.................

ಇದನ್ನು ತಪ್ಪು ತಿಳಿಯಬೇಡಿರಿ...

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 5:28pm — pavanaja

ಉ: ಮುಂಬಯಿಯಲ್ಲಿ ಕನ್ನಡ

pavanaja's picture

ಡಾ. ಶ್ರೀನಿವಾಸ ಹಾವನೂರ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಈಗ ಮಂಗಳೂರಿನಲ್ಲಿದ್ದಾರೆ. ಅವರು ಮುಂಬಯಿ ಬಿಟ್ಟು ಬೆಂಗಳೂರಿಗೆ ಬಂದಾಗ ಬೆಂಗಳೂರಿನವರಲ್ಲಿ ಕಂಡ ವಿಚಿತ್ರ ಗುಣಗಳನ್ನು ಈ ಲೇಖನದಲ್ಲಿ ದಾಖಲಿಸಿದ್ದಾರೆ.

ಪಾಪು ಅವರು ಕನ್ನಡಿಗರ ಇತಿಹಾಸದ ಬಗ್ಗೆ ಬರೆದಿರುವ ಪುಸ್ತಕ ಓದಿದ್ದೀರಾ?

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
  • ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)
  • ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?
  • ಹೆಮ್ಮೆಯಿ೦ದ ಹೇಳಿ "ನಾನು ಕನ್ನಡಿಗ"
  • ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹನಿಗವನಗಳು
    July 9, 2008 - 3:28pm
  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator