19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಷ್ಟ ಬರ ಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ?

November 21, 2008 - 11:16am
asuhegde
ಕ್ಷಮೆಯೊಂದೇ ಧರೆಯೊಳಗೇ ಪರಮವೆಂದರೆ ಎಲ್ಲ? ಕ್ಷಮೆಯಾಚಿಸದವನಿಗೆ ಧರೆಯೊಳಗೆ ಕ್ಷಮೆಯೇ ಸಲ್ಲ. ತಪ್ಪನ್ನು ತಪ್ಪೆಂದರುಹದೊಡೆ ಆ ತಪ್ಪ ನಾಗೈದಂತೆ ಬಾಯ್ದೆರೆಯದಿದ್ದೊಡೆ ಅನಾಹುತಕ್ಕೆ ಕಾರಣನಾದಂತೆ ದುರ್ಜನರ ಸಹವಾಸ ಹಾವಿನೊಂದಿಗಿನ ಸರಸದಂತೆ ಯಾವಾಗ ಎಲ್ಲಿ ಕಡಿಯುವುದೋ ನಮಗರಿಯದಂತೆ ಮೇಲೆಳೆದುಕೊಂಡು ಮೈ ಎಲ್ಲಾ ಪರಚಿಕೊಳ್ಳಲೇಕೆ? ಸಂಬಂಧಗಳ ನೆಪದಲ್ಲಿ ಆತ್ಮ ವಂಚನೆ ಮಾಡಲೇಕೆ? ಅವರಿವರ ಮೆಚ್ಚಿಸಿ ಬಾಳಲಾಗದು ಜೀವನದುದ್ದಕ್ಕೂ ದೇವ ಮೆಚ್ಚದಿರೆ ಈ ಆತ್ಮಕ್ಕೆ ಗೋಳೇ ಬಾಳಿನುದ್ದಕ್ಕೂ ಜನರು ಮೂರ್ಖರು ಅವರ ದೇವರೇ ಕ್ಷಮಿಸಲೆನ್ನಲೇಕೆ? ತನ್ನತನವನೇ ಮರೆತು ನಪುಂಸಕನಾಗಿಲ್ಲಿ ಬಾಳಲೇಕೆ? ಕಷ್ಟ ಬರ ಬಹುದೆಂದು ಸತ್ಯ ನನಗನಿಷ್ಟವೆಂದೆನ್ನಲೇ? ಅಸತ್ಯವನೇ ಮೆರೆದು ದೇವನಿಗಿಷ್ಟವಿಲ್ಲದವನಂತಾಗಲೇ? ****************************
ಲೇಖನ ವರ್ಗ (Category): 
No votes yet
To prevent automated spam submissions leave this field empty.