ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ್ಷಣವನ್ನೂ ಸೂಚಿಸುತ್ತದೆ. ಆದ್ದರಿಂದ ಭಾಜಕ ಹೆಚ್ಚಾದಂತೆಲ್ಲಾ "Shutter Speed" ಜಾಸ್ತಿಯಾಗುತ್ತದೆ ಮತ್ತು ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕನ್ನು ಪಡೆಯುತ್ತದೆ. "Shutter Speed" ೧/೬೦ ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಸಾಮಾನ್ಯವಾಗಿ ತೆಗೆದ ಚಿತ್ರದಲ್ಲಿ ಅಸ್ಪಷ್ಟತೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಟ್ರೈಪೋಡ್ ನ ನೆರವು ಅಗತ್ಯವಿರುತ್ತದೆ.

ನೀವು ತೆಗೆಯ ಹೊರಟ ಚಿತ್ರಕ್ಕೆ ಯಾವ "Shutter Speed" ಎಂದು ಅದರ ಚಲನೆಯನ್ನು ಗಮನಿಸಿ ನಿರ್ಧರಿಸಬಹುದು. ವೇಗವಾಗಿ ಚಲಿಸುವ ವಾಹನ, ಹರಿಯುವ ನೀರು, ಉಯ್ಯಾಲೆಯಲ್ಲಿ ಆಡುತ್ತಿರುವ ಮಕ್ಕಳು ಮುಂತಾದ ಚಲಿಸುವ ವಿಷಯವಾಗಿದ್ದಲ್ಲಿ, ಹೆಚ್ಚಿನ "Shutter Speed" ಬಳಸಿ, ಆ ಚಲನೆಯನ್ನು ನಿಮ್ಮ ಚಿತ್ರದಲ್ಲಿ ಸ್ತಬ್ಧಗೊಳಿಸಬಹುದು. ಗುಡ್ಡ, ಬೆಟ್ಟ, ಮರ ಮುಂತಾದ ಚಲಿಸದ ವಿಷಯವಾಗಿದ್ದಲ್ಲಿ ಇದನ್ನು ಕಡಿಮೆಮಾಡಬಹುದು. ಕೆಳಗಿನ ಚಿತ್ರದಲ್ಲಿ ಜೇನಿನ ಚಲನೆಯನ್ನು ಸ್ತಬ್ಧಗೊಳಿಸಲು ನಾನು ಉಪಯೋಗಿಸಿದ "Shutter Speed" ೧/೫೦೦.

ಮೇಲೆ ತಿಳಿಸಿದಂತೆ ಚಲಿಸುವ ವಸ್ತುಗಳನ್ನು ಸ್ತಬ್ಧಗೊಳಿಸಲು ಹೆಚ್ಚಿನ "Shutter Speed" ಅಗತ್ಯ ಇದೆಯಾದರೂ ಕೆಲವೊಂದು ಸಂದರ್ಭದಲ್ಲಿ, ಕಡಿಮೆ "Shutter Speed" ಉಪಯೋಗಿಸಿ ಚಲನೆಯ ಪರಿಣಾಮವನ್ನು ನಿಮ್ಮ ಚಿತ್ರದಲ್ಲಿ ಸೆರೆಹಿಡಿಯಬಹುದು.
ಈ ಕೆಳಗಿನ ಎರಡು ಚಿತ್ರ ಅದಕ್ಕೆ ಉದಾಹರಣೆ.


ಇಲ್ಲಿ ಸೈಕಲ್ ಸವಾರನನ್ನು ನನ್ನ ವಿಷಯವನ್ನಾಗಿಸಿಕೊಂಡು, ಚಲನೆಯನ್ನು ನನ್ನ ಚಿತ್ರದಲ್ಲಿ ಸೆರೆಹಿಡಿಯಲು ಕಡಿಮೆ "Shutter Speed" (೧/೧೫) ಬಳಸಿದ್ದೇನೆ. ಇಲ್ಲಿ ಸವಾರ ಸ್ಪಷ್ಟವಾಗಿದ್ದು, ಹಿನ್ನೆಲೆ ಅಸ್ಪಷ್ಟವಾಗಿದ್ದು ಚಲನೆಯನ್ನು ಬಿಂಬಿಸುತ್ತಿದೆ (panning).



ಈ ಚಿತ್ರದಲ್ಲಿ ಬೆಂಕಿಯ ಜಾಡನ್ನು ಚಿತ್ರಿಸಲು ನಾನು ಬಳಸಿದ್ದು ೧೫ ಕ್ಷಣಗಳಷ್ಟು ದೀರ್ಘವಾದ "Shutter Speed".

ಹಾಗಾಗಿ ಛಾಯಾಗ್ರಹಣದಲ್ಲಿ "Shutter Speed" ನ್ನು ಬೆಳಕು ಹಾಗು ಚಲನೆಯನ್ನು ನಿಯಂತ್ರಿಸಲು ಉಪಯೋಗಿಸಬಹುದು.

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

harshavardhan v.sheelavant's picture

ಆತ್ಮೀಯ ಫಾಲಚಂದ್ರ,

ಛಾಯಾಗ್ರಹಣ ನಿಜಕ್ಕೂ ಅದ್ಭುತ ಹವ್ಯಾಸ. ಆದರೆ ವೆಚ್ಚದಾಯಕ. ಏನೇ ಇರಲಿ. ಆ ವೈಜ್ನಾನಿಕ ಕಲೆಯ ಬಗ್ಗೆ ನೀವು ಸರಳವಾಗಿ ಹಾಗು ಸುಂದರವಾಗಿ ಛಾಯಾಚಿತ್ರಗಳ ಸಮೇತ ನಿರೂಪಿಸಿದ್ದೀರಿ. ನನ್ನಂತಹ ಮೇಷ್ಟ್ರಿಗೆ ಹಾಗು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಆಕರ ಹಾಗು ಅನುಭವ.

ಧನ್ಯವಾದ.

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

palachandra's picture

ಪ್ರಿಯ ಹರ್ಷವರ್ಧನ್,

ಡಿಜಿಟಲ್ ತಂತ್ರಜ್ನಾನ ಬಂದ ಮೇಲೆ ಆ ವೆಚ್ಚ ಬಹಳ ಮಟ್ಟಿಗೆ ಇಳಿದಿದೆ ಎಂದು ನನ್ನ ಅನಿಸಿಕೆ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ... ಸಾಧ್ಯವಾದರೆ ಛಾಯಾಗ್ರಹಣದ ಬಗ್ಗೆ ನನ್ನ ಇನ್ನಿತರ ಅನುಭವವನ್ನೂ ಮುಂದಿನ ದಿನಗಳಲ್ಲಿ ಪ್ರಕಟಿಸುವೆ.

--
PaLa

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

hpn's picture

ಆದರೆ ಡಿಜಿಟಲ್ ಫೋಟೋಗ್ರಫಿಯಲ್ಲಿ ಬೇಕಾಗುವ initial investment? Smiling

ಲೆನ್ಸು, ಕ್ಯಾಮೆರಾ - ಜೊತೆಗೆ ಹವ್ಯಾಸದಿಂದಾಗುವ collateral damage? (ಲೆನ್ಸ್ ಕಳೆದುಹೋಗುವುದು, ಕ್ಯಾಮೆರ ಒಡೆದುಹೋಗುವುದು, ಬ್ಯಾಟರಿ ಹಾಳಾಗುವುದು, ಕ್ಯಾಮೆರ ಕಳುದುಹೋಗುವುದು ಇತ್ಯಾದಿ - ಕ್ಯಾಮೆರ ಕಳೆದರೆ ಮುಗಿಯಿತು, ಹೊಸತೊಂದು ತೊಗಳ್ಳೋ ತನಕ ಇರೋ ಸಮಯ ತುಂಬ ಪೇಚಾಟ).
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

palachandra's picture

ನೀವು ಹೇಳೋದು ಸರಿ.. ಆದ್ರೆ ಈಗ "Point and Shoot" ಕ್ಯಾಮರಾ ಕೂಡ ಉತ್ತಮ ಗುಣಮಟ್ಟದ್ದಾಗಿದ್ದು ೧೫,೦೦೦ ಹಣ ತೊಡಗಿಸಿ ಹವ್ಯಾಸ ಆರಂಭಿಸಬಹುದು..

--
PaLa

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

smurthygr's picture

ನಿಜ. ಡಿಜಿಟಲ್ ಚಿತ್ರ ತೆಗೆಯಲು ಮೊದಲಿನ investment ಮಾತ್ರ ಬೇಕಾಗುವುದು - ಆಮೇಲೆ ಚಿತ್ರದ processing ಇತ್ಯಾದಿ ರಗಳೆ ಇಲ್ಲ. ಈಗ ೨೦,೦೦೦ದ ಒಳಗೇ ಉತ್ತಮ ದಿಜಿಟಲ್ SLR (Nikon D40) ಕೂಡಾ ಸಿಕ್ಕುವುದರಿಂದ ಆಸಕ್ತರೆಲ್ಲಾ ಉತ್ತಮ ಚಿತ್ರಗ್ರಾಹಕರಾಗಲೂ ಬಹುದು, ಎಲ್ಲ ರೀತಿಯ experientಗಳನ್ನೂ ಮಾಡಬಹುದು - ಫಿಲ್ಮ camera ಕಾಲದಲ್ಲಿ experiment ಮಾಡಲು ಎಲ್ಲರಿಗೂ ಸಾಧ್ಯವಿರಲಿಲ್ಲ.

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

muralihr's picture

ನಿಮ್ ಕಣ್ಣ್ ಗೇ ದೇವರು ಇನ್ನೂ ಜಾಸ್ತಿ ಚೇತನಾ ಕೊಡಲಿ. ತು೦ಬಾ ಖುಷಿಯಾಯ್ತು.. ಅದೂ ಸೈಕಲ್ ನವನಿಗೆ (ನನ್ನ ಜಾತ್ಯಾಭಿಮಾನ)
ಪ್ರಾಮುಖ್ಯ್ ಕೊಟ್ಟೂ ತೆಗೆದದ್ದು ತು೦ಬಾ ಚೆನ್ನಾಗಿದೆ.

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ASHOKKUMAR's picture

ಸೋದಾಹರಣ ಬರಹ ಚೆನ್ನಾಗಿದೆ.
*ಅಶೋಕ್

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

palachandra's picture

ಅಶೋಕ್,

ಸೋದಾಹರಣ ಅಂದ್ರೆ.. ಕ್ಷಮಿಸಿ ಗೊತ್ತಾಗ್ಲಿಲ್ಲ Sad

--
PaLa

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

ASHOKKUMAR's picture

ಉದಾಹರಣೆ ಸಹಿತ Smiling

-----------------------------------

ಹುಡುಕು ಪದ: ಸೋದಾಹರಣ

೧. ಸೋದಾಹರಣ (ಸಂ) (ನಾ) ಉದಾಹರಣೆಯಿಂದ ಕೂಡಿದುದು

೨. ಸೋದಾಹರಣ (ಸಂ) (ಗು) ಉದಾಹರಣೆಯಿಂದ ಕೂಡಿದ
*ಅಶೋಕ್

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

palachandra's picture

ನಾನೂ ಸೈಕಲ್ ಜಾತಿಯವನೇ..

Quote:
ನಿಮ್ ಕಣ್ಣ್ ಗೇ ದೇವರು ಇನ್ನೂ ಜಾಸ್ತಿ ಚೇತನಾ ಕೊಡಲಿ

ಧನ್ಯವಾದ Smiling

--
PaLa

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

keerthi2kiran's picture

ಅಡ್ಡಬಿದ್ದೆ ಗುರು ನಿಮ್ಮ ಟ್ಯಾಲೆಂಟ್ ನೋಡಿ.
ಕೀರ್ತಿ ಕಿರಣ್ ಎಂ

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

savithasr's picture

ಪಾಲಚಂದ್ರರೆ,
ಛಾಯಗ್ರಹಣದ ಮಾಹಿತಿ ಉಪಯುಕ್ತವಾಗಿದೆ, ಮುಂದುವರೆಸಿ.
ಹಾಗೇ ಕ್ಯಾಮೆರಾಗಳ ಬಗ್ಗೆನೂ ಬರೀತೀರ...
-ಸವಿತ

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

anil.ramesh's picture

ಪಾಲ,
ಉಪಯುಕ್ತ ಮಾಹಿತಿ...

ಧನ್ಯವಾದಗಳು...

-ಅನಿಲ್ ರಮೇಶ್.

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

kalpana's picture

ಚೆನ್ನಾಗಿದೆ. ಯಾವ ಕ್ಯಾಮೆರ ಬಳಸಿದ್ದು ಮತ್ತು ಡಿಜಿಟಲ್ ಆಗಿ ಏನಾದರೂ ಬದಲಾಯಿಸಿದ್ದೀರ, ಇದನ್ನು ದಯವಿಟ್ಟು ತಿಳಿಸುತ್ತೀರ?
~ಕಲ್ಪನ

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

palachandra's picture

ಕ್ಯಾಮರಾ Sony DSC H2 (೨೫,೦೦೦ ರೂ ೨.೩ ವರ್ಷಗಳ ಹಿಂದೆ. ಈಗ ಇದು out dated)
೧ ನೇ ಚಿತ್ರ "VCL-M3358" (೧೩೦೦ ರೂಪಾಯಿ) ಎಂಬ ಕ್ಲೋಸ್-ಅಪ್ ಲೆನ್ಸ್ ಬಳಸಿ ತೆಗೆದದ್ದು
೨,೩ ಟ್ರೈಪೋಡ್ (೨೩೦೦ ರೂ) ಉಪಯೋಗಿಸಿ ತೆಗೆದದ್ದು.

ಎಲ್ಲವನ್ನೂ "shutter speed priority" ಯಲ್ಲಿ ತೆಗೆದದ್ದು..

ಚಿತ್ರಾನ ಕ್ರೋಪ್ ಮಾಡಿದ್ದು ಬಿಟ್ರೆ ಇನ್ಯಾವುದೇ ಬದಲಾವಣೆ ಇಲ್ಲ..

--
PaLa

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

girish.rajanal's picture

ಇದರ ಬಗ್ಗೆ ಇನ್ನಶ್ಟು ಮಾಹಿತಿ ಕೊಡಿ...
ನನಗೆ ಫೋಟೊಗ್ರಾಫಿಯಲ್ಲಿ ಆಸಕ್ತಿ ಇದೆ.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ

palachandra's picture

ನನಗೆ ತಿಳಿದದ್ದು ಅವಶ್ಯವಾಗಿ ಹಂಚಿಕೊಳ್ಳುತ್ತೇನೆ..

--
PaLa

Syndicate content