ಮದುವೆಗೆ ಮುಂಚೆ ಮತ್ತು ಮದುವೆಯ ನಂತರ...
ಮದುವೆಗೆ ಮುಂಚೆ...
ಅವನು: ಅಬ್ಬಾ!!!
ಅವಳು: ನಾನು ನಿನ್ನನ್ನು ಬಿಟ್ಟಿರಬೇಕಾ?
ಅವನು: ಇಲ್ಲ!!! ಆ ರೀತಿ ಯೋಚನೆಯೂ ಮಾಡಬೇಡ.
ಅವಳು: ನೀನು ನನ್ನ ಪ್ರೀತಿಸುತ್ತೀಯಾ?
ಅವನು: ಸಂದೇಹವೇ ಬೇಡ... ಹಿಂದೆಯೂ ಮಾಡುತ್ತಿದ್ದೆ, ಮುಂದೆಯೂ ಮಾಡುವೆ.
ಅವಳು: ನನಗೆ ಎಂದಾದರೂ ಮೋಸ ಮಾಡಿದ್ದೀಯಾ?
ಅವನು: ಇಲ್ಲ!!! ಈ ರೀತಿ ಯಾಕೆ ಕೇಳುತ್ತಿದ್ದೀಯಾ?
ಅವಳು: ನನಗೆ ಮುತ್ತು ಕೊಡುತ್ತೀಯಾ?
ಅವನು: ಪ್ರತಿ ಅವಕಾಶಕ್ಕೆ ಕಾಯುತ್ತಿರುತ್ತೇನೆ.
ಅವಳು: ನನಗೆ ಹೊಡೆಯುತ್ತೀಯಾ?
ಅವನು: ಇಲ್ಲ!!! ನಿನಗೇನಾದರೂ ಹುಚ್ಚು ಹಿಡಿದಿದೆಯಾ?
ಅವಳು: ನಾನು ನಿನ್ನನ್ನು ನಂಬಬಹುದಾ?
ಅವನು: ಹಾ...
ಅವಳು: ಪ್ರಿಯತಮ!!!
ಮದುವೆಯ ನಂತರ...
ಬರೆದಿರುವುದನ್ನೇ ಕೆಳಗಿನಿಂದ ಮೇಲಕ್ಕೆ ಓದಿ... :)
- Login or register to post comments
- 1467 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಇದೂ ಒಂದು ನಮೂನೆಯ palindrome!
*ಅಶೋಕ್
ಹಾಗಂತೀರಾ? :)
ಪ್ರತಿಕ್ರಿಯೆಗೆ ನನ್ನಿ ಅಶೋಕ್...
-ಅನಿಲ್.
ಅಶೋಕ ಸರ್ ಕಂಪ್ಯೂಟರ್ ಮೇಷ್ಟ್ರು ಅಂತ ಇದರಲ್ಲೇ ಗೊತ್ತಾಗುತ್ತೆ :-) palindrome ಬಗ್ಗೆ C ಪ್ರೋಗ್ರಾಮ್ ಕಲಿಸಿ ಕಲಿಸಿ ಎಲ್ಲದರಲ್ಲೂ ಅದನ್ನೇ ಹುಡುಕ್ತಾ ಇದ್ದಾರೆ...
ವಿಜಯೇಂದ್ರ,
ನಿಮ್ ಗುರುಗಳಾ ಅಶೋಕ್ ಅವರು?
-ಅನಿಲ್.
ಅಲ್ಲ.. ಆದ್ರೆ ಒಂದು ಲೆಕ್ಕದಲ್ಲಿ ಅವ್ರು ಎಲ್ಲಾ ಸಂಪದಿಗರಿಗೆ ಗುರುಗಳು.. ದಿನಾ ಹೊಸ ಹೊಸ ವಿಷಯ ಕಲಿಸ್ತಾ ಇರ್ತಾರಲ್ಲ.. ಕಂಡಿದ್ದು ಕೇಳಿದ್ದು ಓದಿದ್ದು ಅಂತ..
ಹಾ!!!
ನಿಮ್ಮ ಮಾತು ನಿಜ...
-ಅನಿಲ್.
ನಿನ್ನೆ ಸಂಪದಲ್ಲಿ palindrome ಬಗ್ಗೆ ಚರ್ಚೆಯಾದದ್ದು ಗಮನಿಸಿಲ್ವೇ ವಿಜೇಂದ್ರರೇ?
೧. palindrome (ನಾ) ಗತಪ್ರತ್ಯಾಗತ; ಸಮಾನ ಪೂರ್ವಾಪರ; ಎಡದಿಂದ ಬಲಕ್ಕೂ, ಬಲದಿಂದ ಎಡಕ್ಕೂ ಓದಿದರೆ ಒಂದೇ ಆಗುವ-ಪದ, ಪದ್ಯ, ಸಾಲು (ಉದಾ:ವಿಕಟಕವಿ,
*ಅಶೋಕ್
ಒಂದು ತರಹ ವಿಚಿತ್ರ palindrome ಇದು...
ಅಲ್ವೇ ಅಶೋಕ್?
-ಅನಿಲ್.
"ಶಾದಿ ಕಿ ಪೆಹೆಲೇ" "ಶಾದಿ ಕಿ ಬಾದ್"
ಕುಛ್ ಕುಛ್ ಹೋತಾ ಹೈ ಕುಛ್ ನಹೀ ಹೋತಾ ಹೈ
ದಿಲ್ ತೋ ಪಾಗಲ್ ಹೈ ದಿಲ್ ತೋ ಪಾಗಲ್ ಥಾ
ಹಮ್ ಆಪ್ಕೇ ಹೇ ಕೌನ್ ತೂ ಮೇರಾ ಹೈ ಕೌನ್
ಏಕ್ ದೂಜೇ ಕೇ ಲಿಯೆ ಸಬ್ ಮೇರೇ ಲಿಯೆ
- ಇದೂ Philandrome ಇರಬಹುದಾ ಅಶೋಕ್ ಅವರೇ.
ಒಳ್ಳೆ ಲೇಖನ ಅನಿಲ್ ಅವರೇ !
ಧನ್ಯವಾದ ಅರವಿಂದ್.
-ಅನಿಲ್.
ಸಕ್ಕತ್ ಅನಿಲ್
Lakshdeep!!
ಲಕ್ಷ್ಮಿ,
ಧನ್ಯವಾದಗಳು...
-ಅನಿಲ್.
ಬೊಂಬಾಟಾಗಿದೆರೀ............
ಪ್ರೀತಿಯಿಂದ ನಿಮ್ಮವ,
ಮಾ.ಕೃ.ಮಂಜು
http://makrumanju.bl...
ಹಂಗಂತೀರಾ????????
ಧನ್ಯವಾದಗಳು.
-ಅನಿಲ್.
ತುಂಬಾ ಚೆನ್ನಾಗಿದೆ, ಒಳ್ಳೆಯ ಕಲ್ಪನೆ ಮುಂದುವರೆಸಿ.
ಅರವಿಂದ್
http://aravindnimmav...
http://abhimanihudug...
ಧನ್ಯವಾದ.
-ಅನಿಲ್.
ಬಹಳ ಹಿಂದೆಯೇ ಇದೇ ತರಹದ್ದನ್ನು ಎಲ್ಲೋ ಓದಿದ ನೆನಪು!.. ಚನ್ನಾಗಿದೆ, ಧನ್ಯವಾದಗಳು
ಎಲ್ಲಿ ಓದಿದ್ದು?
ನೆನಪಿಸಿಕೊಂದು ಹೇಳ್ತೀರಾ?
ಧನ್ಯವಾದಗಳು :)
-ಅನಿಲ್.
ಚೆನ್ನಾಗಿದೆ ! ಈ ತರಹದ್ದನ್ನು ಹಿಂದೆ ಯಾವಾಗ್ಲೂ ನೋಡಿಲ್ಲ ; ಇದೇ ಮೊದಲ ಸಲ ನೋಡಿದ್ದು . ಅದ್ಭುತವಾಗಿದೆ !
ಧನ್ಯವಾದಗಳು ಶ್ರೀಕಾಂತ್.
-ಅನಿಲ್
ಸೂಪರ್ ಕಣ್ರೀ.. ಸೂಪರ್!! ;-)
ಧನ್ಯವಾದಗಳು ಪ್ರದೀಪ್ :)
-ಅನಿಲ್