ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮೊಬೈಲ್

March 24, 2006 - 1:51am — hpn

ಆಸೆ

ನಾನು ಶಾಲೆಯಲ್ಲಿದ್ದಾಗ ಅಪ್ಪ ಒಮ್ಮೆ ಮೊಬೈಲ್ ಕೊಂಡುಕೊಂಡಿದ್ದರು. ರಾಜ್ಯವಿಡೀ ನಮಗಾಗ ಇದ್ದದ್ದು ಒಂದೇ ಒಂದು ಸರ್ವೀಸ್ - 'spice'ಟೆಲಿಕಾಮ್. ಎಲ್ಲೋ ಕೆಲವರು ಹೊತ್ತುಕೊಂಡು ತಿರುಗಾಡುತ್ತಿದ್ದ ಭಾರವಾದ ಮೊಬೈಲ್ ಫೋನುಗಳು ಆಗ ಆಭರಣಗಳಂತೆ. ನೋಕಿಯ ಇದ್ದವರಂತೂ ಸಾಕ್ಷಾತ್ 'ಯಜಮಾನ'ರೇ. ಆಗ incoming callsಗೂ ದುಡ್ಡು!
ಅಪ್ಪನ ಬಳಿ ಇದ್ದ ಮೊಬೈಲ್ ನೋಡಿ ನನಗೂ ಒಂದು ಮೊಬೈಲ್ ಬೇಕೆಂದೆನಿಸಿತ್ತು. ನಮ್ಮ ಕೈಗೆ ಮೊಬೈಲ್ ಸಿಕ್ಕಾಗಲೆಲ್ಲ ಅದರ ಗುಂಡಿಗಳನ್ನು ಅದುಮಿ ಅದನ್ನ explore ಮಾಡುವುದು, ಅಪ್ಪ ಊಟ ಮಾಡಲು ಕುಳಿತಾಗ ಮೊಬೈಲನ್ನ ಯಾರು ಇಟ್ಟುಕೊಂಡಿರಬೇಕು ಎಂದು ನಾನು ಮತ್ತು ನಮ್ಮಣ್ಣ ಕಿತ್ತಾಡುವುದೂ, ಅದನ್ನ ನೋಡಿ ಅಪ್ಪ ಮೊಬೈಲನ್ನ ನಮ್ಮಿಬ್ಬರಿಗೂ ಬೇಡವೆಂದು ಕಿತ್ತುಕೊಂಡು ಊಟ ಮಾಡುತ್ತ ಕುಳಿತಲ್ಲಿಯೇ ದೂರ ಇಟ್ಟುಕೊಳ್ಳುತ್ತಿದ್ದುದು ಸಾಮಾನ್ಯವಾಗಿ ಹೋಗಿತ್ತು. ನನಗಂತೂ ಮೊಬೈಲ್ ಮೇಲೇ ಕಣ್ಣು. ಸಮಯ ಸಿಕ್ಕಾಗಲೆಲ್ಲ ಅದನ್ನ ಹಿಡಿದು ಗೇಮ್ಸ್ ಆಡುತ್ತಲೋ ಇಲ್ಲ ಸುಮ್ಮನೆ ಅದರಲ್ಲಿದ್ದ ಸವಲತ್ತುಗಳನ್ನು ನೋಡುತ್ತಲೋ ಕುಳಿತಿರುತ್ತಿದ್ದೆ. ನನಗೊಂದು ಮೊಬೈಲ್ ಬರೋದಿರಲಿ, ಮೂರನೆಯ ತಿಂಗಳು ಬಂದ ಬಿಲ್ ಎಷ್ಟರಮಟ್ಟಿಗೆ ಗರ ಬಡಿಯಿತೆಂದರೆ ಅಪ್ಪನ ಹತ್ತಿರ ಇದ್ದ ಮೊಬೈಲನ್ನೇ ಹೊರಗೋಡಿಸಿತು.

****

ಮಸ್ತಿ

ನಾನು ಇಂಜಿನೀಯರಿಂಗ್ ಓದುತ್ತಿದ್ದಾಗ, ನಮ್ಮ ಮನೆಗೆ ಮತ್ತೊಮ್ಮೆ ಮೊಬೈಲ್ ಫೋನು ಪ್ರವೇಶ ಮಾಡಿತ್ತು. ಈ‌ ಬಾರಿ ರಿಲಯನ್ಸ್ 'ಕ್ರಾಂತಿ'ಯಿಂದ ಇದು ಸಾಧ್ಯವಾದದ್ದು. ಅಪ್ಪನೂ ಬಿಲ್ ಬಗ್ಗೆ ಚಿಂತೆ ಮಾಡದೆ ತೆಗೆದುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಿತ್ತು, ಆಗ. ಜೊತೆಗೆ ಅದೆಷ್ಟೋ ತಿಂಗಳು 'ಉಚಿತವಾಗಿ ಕರೆಗಳನ್ನು ಮಾಡಬಹುದು' ಎಂದು ನಮಗೆ ಮಾರಿದ್ದ ರಿಲಯನ್ಸ್ ಆದ್ಮಿ ಹೇಳಿದ್ದ. ಅದರಲ್ಲಿ ಬಿಟ್ಟಿ ಇಂಟರ್ನೆಟ್ ಬೇರೆ! ಅಪ್ಪ ಆಫೀಸಿನಿಂದ ಮನೆಗೆ ಬರೋದೇ ತಡ ಅವರಿಂದ ಮೊಬೈಲು ಕಿತ್ತುಕೊಂಡು ಸ್ನೇಹಿತರಿಗೆಲ್ಲ ಫೋನು ಹೊಡೆಯೋದು... ಕಂಪ್ಯೂಟರಿಗೆ ಸೇರಿಸಿ ಸಿಕ್ಕಾಪಟ್ಟೆ ಇಂಟರ್ನೆಟ್ ಬಳಸೋದು ಸಾಮಾನ್ಯವಾಗಿ ಹೋಯ್ತು.
ಆದರೂ ಮೊಬೈಲ್ ಅಂದರೆ 'ಮಸ್ತಿ' ಎಂಬ ಅನಿಸಿಕೆ ಬಹಳ ದಿನ ಹಾಗೇ ಉಳಿಯಲಿಲ್ಲ. ರಿಲಯನ್ಸಿನ 'ಬಿಟ್ಟಿ ಕಾಲ್ಸ್' ಆಫರ್ ಕೊನೆಗೊಂಡ ಮೇಲೆ ಬಳಕೆಗೆ ತದ್ವಿರುದ್ಧವಾಗಿ ಯದ್ವಾತದ್ವಾ ಬಿಲ್ಲು ಬರೋಕೆ ಪ್ರಾರಂಭವಾದ ನಂತರ ಅವರು ನೀಡಿದ್ದ ಉಚಿತ ಕರೆಗಳು ಎಲ್ಲಿ ವಸೂಲಾಗುತ್ತಿದೆಯೆಂದು ತಿಳಿದುಬಂತು. ಒಂದು ಸಾರಿ ರಿಲಯನ್ಸ್ ೧೫೦೦೦ ರೂ ಬಿಲ್ ಕಳುಹಿಸಿದ್ದೇ ತಡ ಈ‌ ಮೊಬೈಲಿಗೂ ಕತ್ತರಿ ಬಿತ್ತು. ಇಂದಿಗೂ ಆವತ್ತು ರಿಲಯನ್ಸ್ ಕಳುಹಿಸಿದ ಬಿಲ್ ಇತ್ಯರ್ಥವಾಗಿಲ್ಲ. ಮೊಬೈಲು ಫೋನು ಮಾತ್ರ ಹಾಗೆಯೇ ಬಿದ್ದು ಈಗ ಅಣ್ಣನ ಮಗನ ಆಟದ ಸಾಮಾನಾಗಿ ಮಾರ್ಪಟ್ಟಿದೆ.

****

ಅನಿವಾರ್ಯತೆ

ಕಾಲೇಜಿನಲ್ಲಿ ಪ್ರತಿಯೊಬ್ಬರ ಬಳಿಯೂ ಒಂದೊಂದು ಮೊಬೈಲು. ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ನಮ್ಮ ಎರಡರಷ್ಟು ವಯಸ್ಸಾದ ಧಡಿಯನ ಬಳಿ ಅದೇನೋ ಹಾಡು ಹೇಳುತ್ತಿದ್ದ ಮೊಬೈಲು ಬೇರೆ ಇತ್ತು! ಕ್ಲಾಸಿನ ಮಧ್ಯೆ ಒಂದೆರಡು ಸಾರಿ ಸಿನೆಮಾ ಹಾಡುಗಳನ್ನ ಅದರಿಂದ ಹಾಡಿಸಿ ಅವನ್ನನ್ನ ಎದುರು ಹಾಕಿಕೊಳ್ಳೋದಕ್ಕೆ ಹೆಣಗಾಡುತ್ತಿದ್ದ ಲೆಕ್ಚರರ್ರುಗಳನ್ನ ಅತಂತ್ರ ಸ್ಥಿತಿಗೆ ತಂದಿಟ್ಟು ಪೇಚಾಡುವಂತೆ ಮಾಡಿ ಪೀಡೀಸುತ್ತಿದ್ದ.
ಮುಂದೆ ಕುಳಿತವ ಪಾಠ ನಮಗಲ್ಲವೆಂದೇ ನಂಬಿ ತನ್ನ ಮೊಬೈಲಿನಲ್ಲಿಯೇ ಮುಳುಗಿಬಿಡುತ್ತಿದ್ದ. ಅವನ ಪಕ್ಕದಲ್ಲಿದ್ದ ಗುಜರಾತೀ ಹುಡುಗಿಗೆ ಆಗಲೇ ಮದುವೆ ಗೊತ್ತಾಗಿದ್ದರಿಂದ ತನ್ನ fiance ಜೊತೆಗೆ ಮಾತನಾಡುವುದೇ ದಿನವಿಡೀ ಕಸುಬು. ಘಂಟೆಗಟ್ಟಲೆ ಹಾಜರಾತಿ ಹಾಕಿಕೊಂಡು ಸಮಯಕಳೆಯುತ್ತಿದ್ದ ಲೆಕ್ಚರರುಗಳ ಮಧ್ಯೆ ಇನ್ನುಳಿದ, ಸಮಯಕಳೆಯಲು ಗೊತ್ತಿಲ್ಲದ ಪೆಂಗಗಳಿಗೆ, ಸುತ್ತಲು ನಡೆಯುತ್ತಿದ್ದ ಡ್ರಾಮಾ ನೋಡೋ ದೌರ್ಭಾಗ್ಯವೇ ಗತಿ. ಧಡಿಯನ ಪಕ್ಕದಲ್ಲಿದ್ದ ಇನ್ನಿಬ್ಬರು ಧಡಿಯಂದಿರು (ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಅದೂ ಈಗಿನ 'ದುಡ್ಡಿಗೆ ಸೀಟು' ಕಾಲದಲ್ಲಿ ಎಷ್ಟು ವಯಸ್ಸಿನವರೂ ಓದಬಹುದು - ಝಣ ಝಣ ದುಡ್ಡಿರಬೇಕಷ್ಟೆ. ಯಾವ ಕಾಲೇಜಿನ ಗೋಡೆಯೂ ದುಡ್ಡಿನ ಮುಂದೆ ಒಂದಡಿ ಎತ್ತರವೂ ನಿಲ್ಲುವುದಿಲ್ಲ) ಅವರವರ ಫೋನುಗಳಲ್ಲಿ ಸಮಯ ಕಳೆಯೋದಕ್ಕೆ ಅವರವರಲ್ಲೇ sms ಕಳುಹಿಸಿಕೊಂಡು ನಗಾಡುವುದು, ಅವರವರ ಮೊಬೈಲುಗಳನ್ನೇ exchange ಮಾಡಿಕೊಂಡು ನೋಡುತ್ತಾ ಕುಳಿತಿರುವುದು - ಇಷ್ಟೆಲ್ಲಾ ಅಷ್ಟೇನು ರಹಸ್ಯವಾಗಿ ಮಾಡಲಾಗದ ಕ್ಲಾಸಿನಲ್ಲಿಯೇ ನಡೆಯುತ್ತಿತ್ತು.

ಹೀಗಿದ್ದಾಗ, ಅಪ್ಪನಿಗೆ ಮತ್ತೊಮ್ಮೆ ಮೊಬೈಲ್ 'ಬೇಕೇ ಬೇಕು' ಎಂಬ ಪರಿಸ್ಥಿತಿ ಎದುರಾಯಿತು. ಆಗಲೇ ಮೊಬೈಲ್ ಬಿಲ್ಲುಗಳನ್ನು ನೋಡಿ ಸಾಕಷ್ಟು ಹೆದರಿದ್ದ ಅಪ್ಪನಿಗೆ ಏನನ್ನಿಸಿತೋ ಏನೋ ನನಗೊಂದು ಮೊಬೈಲ್ ತಂದುಕೊಟ್ಟು 'ಅದೇನೋ ಕಾರ್ಡ್ ಹಾಕಿಕೊಂಡು ತಿಂಗಳುಗಟ್ಟಲೇ ಬಳಸಬಹುದಂತೆ, ಹಾಗೆ ಹಾಕಿಸಿಕೊಂಡು ಇಟ್ಟುಕೋ. ನನಗೆ ಬೇಕಾದಾಗ ಕೊಡು' ಎಂದಿದ್ದರು. ಕೊನೆಗೂ‌ ನನಗೊಂದು ಮೊಬೈಲ್ ಸಿಕ್ಕಿತ್ತು.

****

ಗೋಳು
ಮೊಬೈಲು ಕಿವಿಗೆ ಹೊಲೆದರೆ?
ಮೊದಮೊದಲು ಬಹಳ ಖುಷಿಯಿಂದ ಮೊಬೈಲನ್ನ ಕೈಯಲ್ಲಿ ಹಿಡಿದು ತಿರುಗಾಡಿಕೊಂಡಿರುತ್ತಿದ್ದ ನನಗೆ ಮೊಬೈಲು ಬೇಜಾರಿನ ವಿಷಯವೂ ಆಗುತ್ತದೆ ಎಂದು ಆಗ ಯಾವತ್ತೂ ಅನ್ನಿಸಿದ್ದಿಲ್ಲ. ಹಾಗೆ ಅನ್ನಿಸಿದ್ದರೂ ಇವತ್ತಿನ ಪರಿಸ್ಥಿತಿ ತಪ್ಪುತ್ತಿರಲಿಲ್ಲವೇನೋ! ಈಗ ಎಲ್ಲಿ ನೋಡಿದರೂ ಮೊಬೈಲು. ದಾರಿಯಲ್ಲಿ ಹೋಗುತ್ತಿರುವ ಎಲ್ಲರ ಕಿವಿಗೂ ಒಂದೊಂದು ಅಂಟಿಕೊಂಡಿರುತ್ತೆ. ಕಿವಿಗೆ ಅಂಟಿಸಿಕೊಂಡಿರದವರಿದ್ದರೆ ಅವರ ಜೇಬಿನಲ್ಲಂತೂ ಒಂದು ಮೊಬೈಲ್ ಖಂಡಿತ ಇರುತ್ತೆ. ಪತ್ರಕರ್ತರು, ಫೈನಾನ್ಸ್, ಸೇಲ್ಸ್ - ಇಂತದ್ದರಲ್ಲಿರುವವರ ಬಳಿಯಂತೂ ಎರಡೆರಡು ಮೊಬೈಲುಗಳು! ಮೊಬೈಲು ಸದ್ದಾದರೆ ಇಸ್ಮಾಯಿಲ್ ತಮ್ಮ ಪ್ಯಾಂಟಿನ ಎರಡೂ ಜೇಬು ತಡಕಾಡಿಕೊಳ್ಳುತ್ತಿರುತ್ತಾರೆ. ಫೈನಾನ್ಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಕ್ಕ ಮನೆಗೆ ಬಂದಾಗ ಅವಳ ಬ್ಯಾಗು, ಅವಳ ಸ್ಕೂಟಿ - ಹೀಗೆ ಎಲ್ಲೆಲ್ಲಿಂದಲೋ ಫೋನುಗಳ ಸದ್ದು ಕೇಳಿ ಬರುತ್ತಿರುತ್ತೆ. ಯಾವುದರಲ್ಲೋ "ಹಲೋ" ಎಂದು ಕೂಗಿ "ಛೆ! ಇದಲ್ಲ, ಇನ್ನೊಂದು ಹೊಡ್ಕೋತಾ ಇರೋದು" ಅಂತ ಅವಳು ಪೇಚಾಡೋದು commonಉ. ಈಗ ಮನೆಯಲ್ಲಿ ಐದೈದು ಫೋನುಗಳು! ಯಾವುದು ಹೊಡೆದುಕೊಂಡರೂ ದಿನದ ತಲೆನೋವಿಗೆ additionಉ.
'ಅಮ್ಮ ಅಪ್ಪ' ಎಂದು ಹೇಳೋಕೆ ಬರದ ಅಣ್ಣನ ಮಗನಿಗೆ ಆಗಲೇ 'ಅಲೋ' ಅನ್ನೋಕೆ ಬರುತ್ತಿರೋದು ಸೋಜಿಗವೇನಲ್ಲ. ಅವನಿಗೆ ಆಟದ ಸಾಮಾನುಗಳಿಗಿಂತ (ನಮಗೆ) ಕೆಟ್ಟದಾಗಿ ಹೊಡೆದುಕೊಳ್ಳುವ (ಅವನಿಗೆ) ಸುಂದರವಾದ ಮೊಬೈಲ್ ಫೋನೇ ಬೇಕು! ಲಾಕ್ ಮಾಡದೇ ಕೈಗೆ ಕೊಟ್ಟರೆ ಯಾರಿಗೋ ಫೋನು ಹೊಡೆದು ಕೊನೆಗೆ ನಮಗೆ ಇಕ್ಕಟ್ಟಿಗೆ ಸಿಲುಕುವಂತೆ ಮಾಡ್ತಾನೆ! ಲಾಕ್ ಮಾಡಿ ಕೊಟ್ಟರೆ ಲೈಟು ಬರದೆ ನೆಲಕ್ಕೆ ಕುಟ್ಟುತ್ತಾನೆ Eye-wink

ನಿದ್ರೆ ಮಾಡುತ್ತಿರುವಾಗ ಮೊಬೈಲು ಕೊಡೋ ಕಾಟ ಹೇಳತೀರದ್ದು. ಮೊದಲು ಅಲಾರ್ಮ್ ಗಡಿಯಾರ ಇಲ್ಲದ್ದರಿಂದ ಮೊಬೈಲನ್ನೇ ಅಲಾರ್ಮ್ ಆಗಿ ಬಳಸುತ್ತಿದ್ದೆ. ಅದು ಅಲಾರ್ಮ್ ಹೊಡೆಯೋ ಮೊದಲೇ ಯಾರೋ ಅಲಾರ್ಮ್ ಹೊಡೆಸಿ ಬಡಿದೆಬ್ಬಿಸುತ್ತಿದ್ದದ್ದು ಅಲಾರ್ಮಿಗಿಂತ ಹೆಚ್ಚು ಪೇಚಾಟದ ಪರಿಸ್ಥಿತಿ ತರುತ್ತಿತ್ತು. ಕೊನೆಗೆ ಅಲಾರ್ಮ್ ಗಡಿಯಾರವೇ ಮೇಲು - ಅದನ್ನಾದರೂ ಬಂದ್ ಮಾಡಬಹುದು ಅಂತ ಒಂದನ್ನ ಕೊಂಡುತಂದೆ.

ಟಿ ವಿಯ ದಾರಾವಾಹಿಯಲ್ಲಿ ಫೋನು ಹೊಡೆದುಕೊಂಡರೆ ನಮ್ಮ ಮನೆಯಲ್ಲಿರುವವರೆಲ್ಲ ತಮ್ಮ ತಮ್ಮ ಫೋನಿನ ಮುಖ ಒಂದು ಸಾರಿ ನೋಡಿ ಬರುತ್ತಾರೆ. ಮನೆಗೆ ಬಂದವರು ನಮ್ಮ ಜೊತೆ ಹತ್ತು ನಿಮಿಷ ಮಾತನಾಡಿದರೆ ಫೋನಿನಲ್ಲಿ ೩೦ ನಿಮಿಷ ಮಾತನಾಡಿ ನಮ್ಮ ಸಹನೆ ಎಷ್ಟಿದೆ ಎಂದು ಪರೀಕ್ಷೆ ಮಾಡುತ್ತಿರುತ್ತಾರೇನೊ. ಮನೆಗೆ ಬಂದು ನಮ್ಮನ್ನ ಮಾತನಾಡಿಸಲೂ ಸಮಯವಿಲ್ಲದಂತೆ ಡಬ್ಬಿಯೊಂದಕ್ಕೆ ವಟಗುಟ್ಟುವ ಅಕ್ಕಂಗೆ ಫೋನು ಕಿವಿಗಿಟ್ಟು ಹೊಲೆದು ಆಪರೇಶನ್ ಮಾಡಿಸಿದರೆ ಚೆನ್ನಾಗಿರುತ್ತೆ ಅಂತ ಯಾಕೆ ನನಗೆ ಯಾವಾಗಲೂ ಅನ್ನಿಸುತ್ತಿರುತ್ತೆ?

ಒಟ್ಟು, ಮೊಬೈಲ್ ಸದ್ಯಕ್ಕೆ ಬರಿ 'ಗೋಳು'. Smiling

*******

UPDATE: ರಾತ್ರಿ ನಿದ್ರೆಗಣ್ಣಿನಲ್ಲಿ ಗೀಚಿದ ಲೇಖನ ಇದು, ವ್ಯಂಗ ಚಿತ್ರ ಕೂಡ Inkscapeನಲ್ಲಿ ಒಂದು ನಿಮಿಷವೂ ವ್ಯಯಿಸದೇ ಗೀಚಿದ್ದು. ಲೇಖನ ಸಾಧಾರಣವಾಗಿದ್ದಲ್ಲಿ ಓದಲು ಕಷ್ಟಪಟ್ಟವರಲ್ಲಿ ಕ್ಷಮೆ. Eye-wink

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 900 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2006 - 5:01pm — tvsrinivas41

ಮೊಬೈಲ್ ಪುರಾಣ

tvsrinivas41's picture

ಮೊಬೈಲ್ ಪುರಾಣ ಚೆನ್ನಾಗಿದೆ. ಹೊಲಿಗೆ ಹಾಕಿಸಿದ್ದಾಯ್ತಾ? ಮುಂದೆ ಮೊಬೈಲ್ ಕ್ರಾಂತಿ ಹೇಗಿರತ್ತೆ ಸ್ವಲ್ಪ ಅದನ್ನೂ ಬರೆದುಬಿಡಿ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 5:22pm — hpn

ಪುರಾಣ

hpn's picture

tvsrinivas wrote:
ಮೊಬೈಲ್ ಪುರಾಣ ಚೆನ್ನಾಗಿದೆ

ಪುರಾಣ (ನಾ) ೧. ಪುರಾತನವಾದುದು. ೨. ಹಳೆಯ ಕಥೆ ೩. ಅನವಶ್ಯಕ ವಿವರಣೆ.

ಇದರಲ್ಲಿ ಯಾವ ಅರ್ಥ ಬಯಸಿ ಬರೆದದ್ದು? Eye-wink

tvsrinivas wrote:
ಹೊಲಿಗೆ ಹಾಕಿಸಿದ್ದಾಯ್ತಾ?

ಆಗಲೇ ಹಾಕಿಯಾಗಿದೆ. ಮೇಲೆ ಗೀಚಿರುವ ವ್ಯಂಗ ಚಿತ್ರ ನೋಡಿ! Smiling

tvsrinivas wrote:
ಮುಂದೆ ಮೊಬೈಲ್ ಕ್ರಾಂತಿ ಹೇಗಿರತ್ತೆ ಸ್ವಲ್ಪ ಅದನ್ನೂ ಬರೆದುಬಿಡಿ

ಅಂತಹ visionary ನಾನಲ್ಲ, ಮಾರಾಯ್ರೇ. ನೀವು ಬರೆದಿರೋ ಕಾಮೆಂಟು ನೋಡಿದ್ರೆ ನಾನು ಬರೆದದ್ದನ್ನು ಬಹಳ ಕಷ್ಟಪಟ್ಟು ಓದಿರುವ ಹಾಗಿದೆ! ಅಷ್ಟೊಂದು ಕೆಟ್ಟದಾಗಿ ಬರೆದಿದ್ದೀನಾ?‌ Laughing out loud

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 24, 2006 - 5:31pm — tvsrinivas41

ಪುರಾಣ

tvsrinivas41's picture

ಈಗಾಗ್ಲೇ ನಡೆದಿರೋ ಕಥೆಯಾದ್ದರಿಂದ ಇದನ್ನು ಹಳೆಯ ಕಥೆ ಅಂತ ತಿಳಿದುಕೊಳ್ಳಬಹುದು. ವ್ಯಂಗ್ಯ ಚಿತ್ರ ನೋಡಿದೆ. ಅದು ತಮಾಷೆಯಾಗಿದೆ.

ನೀವು ಅಷ್ಟು ಕೆಟ್ಟದಾಗಿ ಬರೆದಿದ್ರೆ ನಾನು ಪ್ರತಿಕ್ರಿಯಿಸ್ತಿದ್ನಾ?

ಚೆನ್ನಾಗಿ ಬರೆದಿದೀರ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 8, 2007 - 6:57pm — sb1966

Re: ಪುರಾಣ

sb1966's picture

ಅಯ್ಯೋ ಅದೇನು ಹೇಳ್ತೀರಾ ಮಾರಾಯ್ರೇ, ಮೊನ್ನೆ ನಮ್ಮ ಸಂಭಂದಿಕರು ಬಂದಿದ್ದಾಗೆ ಹೀಗೇ ಆಯ್ತು. ಅವರ ಮಗ ಏನೂ ಮಾತಾಡ್ದೇ ಸುಮ್ಮನೆ ಕುಳಿತಿದ್ದ. ಕೇಳಿದ್ದಕ್ಕೆ ಅವರಪ್ಪ "ಅವನ ಕಿವೀಗೆ ಒಂದು ಮೊಬೈಲ್ ಇಡಿ, ಆಮೇಲೇನೇ ಅವನ್ನ ಮಾತಾಡಿಸ ಬಹುದು, ಅವ್ನಿಗೆ ನಾರ್ಮಲ್ಲಾಗಿ ಮಾತಾಡೋಕೂ ಕಿವೀಲಿ ಮೊಬೈಲ್ ಇರಲೇಬೇಕು" ಅಂದ್ರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 6, 2007 - 5:32am — hamsanandi

ಉ: Re: ಪುರಾಣ

hamsanandi's picture

ನಾಡಿಗರೆ,

ಈ ಮೊಬೈಲ್ ಪುರಾಣ ಈಗ ಓದಿದೆ. ಚೆನ್ನಾಗಿದೆ Smiling ಇಲ್ಲಿ ನಮ್ಮ ಊರಿನಲ್ಲಿ ಮೊಬೈಲ್ ಕಾಟ ಬೆಂಗಳೂರಿನಷ್ಟು ಇಲ್ಲ. ಎರಡೆರಡು ಮೊಬೈಲ್ ಇರುವರನ್ನು ನಾನು ನೋಡಿಯೇ ಇಲ್ಲ. ನಾನೂ, ತೀರ ಜರೂರಿದ್ದಾಗ ಮೊಬೈಲಲ್ಲಿ ಮಾತಾಡುವೆ ಅಷ್ಟೆ. ಅಲ್ಲದೆ, ಗಂಟೆಗಟ್ಟಲೆ ಫೋನಿನಲ್ಲಿ, ( ಮೊಬೈಲೇ ಆಗಲಿ, ಇಮ್ಮೊಬೈಲೇ ಆಗಲಿ) ಮಾತಾಡಲು ಏನಿರತ್ತೆ ವಿಷಯ ಅನ್ನೋದೇ ಒಂದು ದೊಡ್ಡ ಪ್ರಶ್ನೆ ನನಗೆ Eye-wink

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 6, 2007 - 3:11pm — srinivasps

ಉ: Re: ಪುರಾಣ

srinivasps's picture

"ಮನೆಗೆ ಬಂದವರು ನಮ್ಮ ಜೊತೆ ಹತ್ತು ನಿಮಿಷ ಮಾತನಾಡಿದರೆ ಫೋನಿನಲ್ಲಿ ೩೦ ನಿಮಿಷ ಮಾತನಾಡಿ ನಮ್ಮ ಸಹನೆ ಎಷ್ಟಿದೆ ಎಂದು ಪರೀಕ್ಷೆ ಮಾಡುತ್ತಿರುತ್ತಾರೇನೊ."
ಇದಂತೂ ಅಕ್ಷರಶಃ ಸರಿ ಕಣ್ರೀ...
ತುಂಬಾ ಚೆನ್ನಾಗಿದೆ ನಿಮ್ಮ ಬರಹ.

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಮೊಬೈಲು
  • ಮೊಬೈಲ್ ಫೋನ್ ಗಾದೆಗಳು
  • ಗೂಗಲ್ ನ ಜಿಮೇಯ್ಲ್ ಈಗ ಮೊಬೈಲ್ ಫೋನುಗಳಿಗೆ ಲಭ್ಯ
  • ಹೊಸ ಮೊಬೈಲ್
  • ಮೊಟ್ಟೆಯನ್ನು ಬೇಯಿಸುವ ಮೊಬೈಲ್!
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 134 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator