ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ರೂಪ
ಪರಿಚಯ
ಲಹರಿ ಬಂದಂತೆ ಬರಹ. ಸ್ವಲ್ಪ ಮೂಡಿ, ಮಾತು ಬೇಕಿದ್ದಲ್ಲಿ ಮಾತ್ರ . ಗೆಳೆತನ ಇಷ್ಟ ಆದರೆ ಆಯ್ಕೆಯೇ ಕಷ್ಟ.
ಆಗಾಗ ತೆರೆದ ಮನದಲ್ಲಿ (http://www.thereda-m...) ಖುಶಿಗಾಗಿ ಏನಾದರೂ ಗೀಚುತ್ತಿರುತ್ತೇನಿ
ಕತೆಯೋ ಕವನವೋ ಇಲ್ಲ ವೈಯುಕ್ತಿಕ ವಿಷಯವೋ ಯಾವುದೋ ಒಂದು ಅದಲ್ಲದೆ http://yashuputagalu... ನನ್ನ ಮುದ್ದುಮಗಳ ಬಾಲ ಲೀಲೆಗಳನ್ನೂ ಪೇರಿಸುತ್ತೇನೆ
ಮಕ್ಕಳ ಹಾಡು
ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್ ಅನ್ನು ಕನ್ನಡಕ್ಕೆ ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು
ಪುಟ್ಟಿ ಜೊತೆ ಇತ್ತೊಂದು ಕುರಿಮರಿ
ಅದರ ಆಟ ಏನ್ಹೇಳ್ತೀತಿರಿ ರೀ
ಬಣ್ಣ ಅದರದು ಬಿಳುಪು
ಕಣ್ಣ್ಣು ಫಳ ಫಳ ಹೊಳಪು
ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿ
ಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ
ಒಮ್ಮೆ ಹೋಗಿ ಪುಟ್ಟಿ ಶಾಲೆಗೆ
ಮಾಡ್ತು ತುಂಬಾ ದಾಂಧಲೆ
ಟೀಚರಮ್ಮ ಹೊಡ್ಯೋಕೆ ಹೋದರೆ
ಓಡ್ತು ಬ್ಯ್ಬಾ ಬ್ಯಾ ಅಂತಲೇ
ಹೊಳೆ ಹೊಳೆಯುವ ನಕ್ಷತ್ರ
ಬಾರೋ ಒಮ್ಮೆ ನನ್ಹತ್ರ
ಅದು ಹೆಂಗೆ ಹೋಗಿ ಸೇರಿದೆ ಆಕಾಶ
ನನ್ನೂ ಕರ್ಕೊಂಡು ಹೋಗು ಬಾಬಾರಾ
ಗುಂಡ ಗುಂಡಿ ನೀರಿಗೋದ್ರು
ಕೆರೆಯ ಏರಿಗೆ
ಗುಂಡ ಗುಂಡಿ ಜಾರಿ ಬಿದ್ರು
ನಡು ದಾರಿಗೆ
ದೂರ ಹೋಗು ಮಳೆರಾಯ
ಆಟ ಆಡ್ಬೇಕು ನಾನಯ್ಯ
ನೀನು ಬಾ ನಾಳೆ
ಸ್ಕೂಲಿಗೆ ಹೋಗೋ ಟೈಮಲ್ಲೇ
ಅಮ್ಮ ನೋಡಿ ನಿನ್ನ
ಬೇಡ ಸ್ಕೂಲಿಗೆ ಅಂತಾಳೆ
- Login or register to post comments
- 480 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಮುದ್ದಾದ ಪ್ರಾಸಭರಿತ ಸಾಲುಗಳು. ಇ೦ಥ ಪ್ರಯತ್ನಗಳು ಕನ್ನಡ ಸಾಹಿತ್ಯದಲ್ಲಿ ಅವಶ್ಯವಾಗಿ ಆಗಬೇಕು. ನಾವು ಶಿಶುಸಾಹಿತ್ಯವನ್ನು ಕಡೇಗಣಿಸೆದ್ದೇವೇನೋ ಅ೦ತ ಅನಿಸುತ್ತದೆ. ಇದಕ್ಕೆ ಅಪವಾದ ನಿಮ್ಮ ಪ್ರಯತ್ನ. Keep it up Roopa.
ಡಾ|| ಜ್ಞಾನದೇವ್ ಮೊಳಕಾಲ್ಮುರು
ಧನ್ಯವಾದಗಳು
ಬೇಕು ಎನ್ನುವುದೇ ಹೊಸದರ ತಾಯಿ ಎನ್ನುತ್ತಾರಲ್ಲ ಹಾಗೆ
http://thereda-mana....
ರೂಪ
ರೂಪ, ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ನಿಮ್ಮ ಲೇಖನಗಳು ನನಗೆ ತುಂಬ ಇಷ್ಟ. ಹೀಗೆ ಬರಿತಿರಿ.
Lakshdeep!!
ವಂದನೆಗಳು
http://thereda-mana....
ರೂಪ