ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ!

ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ!

ಎರಡು ವಾರಗಳ ಹಿಂದಷ್ಟೇ ಇದೇ ಅಂಕಣದಲ್ಲಿ ನಾನು ಹಿಂದೂವಾದಿ ಗುಂಪುಗಳ ಭಯೋತ್ಪಾದನೆಯ ಬಗ್ಗೆ ಬರೆಯುತ್ತಾ, 'ಇದು ರಾಷ್ಟ್ರಕ್ಕೆ ಅಗ್ನಿ ಪರೀಕ್ಷೆಯ ಕಾಲ' ಎಂದಿದ್ದೆ. ಆದರೆ ಅಂತಹ ಅಗ್ನಿ ಪರೀಕ್ಷೆ ಇಷ್ಟು ಬೇಗ ಹೀಗೆ ಎದುರಾಗುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ. ನಾನೇ ಏನು, ಬಹುಶಃ ಯಾರೂ ನಿರೀಕ್ಷಿಸಿರಲಾರರು. ನವೆಂಬರ್ 26ರ ಸಂಜೆ ಸಮುದ್ರದ ಮೇಲಿಂದ ಬಂದ ಭಯೋತ್ಪಾದಕರ ಗುಂಪೊಂದು ಮುಂಬೈನ ವಿವಿಧೆಡೆ ನಡೆಸಿರುವ ಹಿಂಸಾಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ತಾಜ್, ಒಬೆರಾಯ್ ಹೊಟೆಲ್ಗಳು ಮತ್ತು ನಾರಿಮನ್ ಭವನದಲ್ಲಿದ್ದ ಅನೇಕ ವಿದೇಶೀಯರೂ ಸೇರಿದಂತೆ ಸುಮಾರು ಇನ್ನೂರು ಜನರನ್ನು ಕೊಂದು ಸುಮಾರು ಮುನ್ನೂರು ಜನರನ್ನು ಗಾಯಗೊಳಿಸಿರುವ ಈ ಗುಂಪು, ನಮ್ಮ 20 ಜನ ಸಾಮಾನ್ಯ ಪೋಲೀಸರ ಜೊತೆಗೆ ಮೂವರು ಶ್ರೇಷ್ಠ ಪೋಲೀಸ್ ಅಧಿಕಾರಿಗಳನ್ನೂ ರಾಷ್ಟ್ರೀಯ ರಕ್ಷಣಾ ದಳದ ಇಬ್ಬರು ಕಮಾಂಡೋಗಳನ್ನೂ ಬಲಿ ತೆಗೆದುಕೊಂಡಿದೆ. ಭಯೋತ್ಪಾದನೆ ಎಂಬುದೀಗ ಗುಪ್ತ ಕಾರ್ಯಾಚರಣೆಯ ರೂಪವನ್ನು ಕಳಚಿಕೊಂಡು ಬಹಿರಂಗ 'ಯುದ್ಧ'ದ ರೂಪದಲ್ಲಿ ರುದ್ರ ನರ್ತನ ನಡೆಸುವ ಧಾಷ್ಟ್ರ್ಯ ಪ್ರದರ್ಶಿಸಿದೆ.

ಇದರ ಈ ಭಂಡ ಧೈರ್ಯ, ಸುಯೋಜಿತ ರೀತಿ ನೀತಿ, ಶಸ್ತ್ರಾಸ್ತ್ರ ಪರಿಣಿತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇದರ ಛಲವನ್ನು ಗಮನಿಸಿ, ಈ ರುದ್ರ ಕಾರ್ಯಾಚರಣೆಯ ಹಿಂದೆ ಅಲ್ ಖೈದಾದ ಸ್ಫೂರ್ತಿ ಇದೆ, ಲಷ್ಕರ್ ತೊಯ್ಬಾದ ತರಬೇತಿ ಇದೆ ಮತ್ತು ಕೆಲವು ಪಾಕಿಸ್ತಾನಿ ಶಕ್ತಿಗಳ ಬೆಂಬಲವಿದೆ ಎಂದು ಸಂಶಯಿಸಲಾಗುತ್ತಿದೆ. ಆದರೆ ಯಾವುದೂ ಇನ್ನೂ ಖಚಿತವಿಲ್ಲ. ಐದು ಸಾವಿರ ಜನರನ್ನು ಕೊಲ್ಲುವ ಉದ್ದೇಶದಿಂದ ಸಾಕಷ್ಟು ಶಸ್ತ್ರಸಜ್ಜಿತವಾಗಿ ಬಂದಿತ್ತೆಂದು ಹೇಳಲಾದ ಈ ಗುಂಪು, ನಗರದೆಲ್ಲಡೆ ರಕ್ತದ ಕೋಡಿ ಹರಿಸುವ ಮುನ್ನ ಅದರ ಬೆನ್ನು ಮುರಿದ ನಮ್ಮ ಯೋಧರಿಗೆ ಇಡೀ ದೇಶ ಕೃತಜ್ಞವಾಗಬೇಕಿದೆ. ಈ ವೀರ 'ಯೋಧ'ರಲ್ಲಿ ಒಬ್ಬರಾದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ, ಇತ್ತೀಚೆಗೆ ಹಿಂದೂವಾದಿ ಗುಂಪುಗಳ ಭಯೋತ್ಪಾದನೆಯ ತನಿಖೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಗುಂಪುಗಳಿಂದ ತೀವ್ರ ಅಪಪ್ರಚಾರಕ್ಕೆ ಮತ್ತು ಕೊಲೆ ಬೆದರಿಕೆಗಳಿಗೆ ಈಡಾಗಿದ್ದರು ಎಂಬುದನ್ನೂ ಗಮನಿಸಬೇಕಿದೆ. ಈ ಹಿನ್ನೆಲೆಯಲ್ಲಿ, ಈ ದಾಳಿಯ ಸಂದರ್ಭವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲು ಮುಂಬೈಗೆ ಬಂದಿಳಿದ ನರೇಂದ್ರ ಮೋದಿ ಈ ಯೋಧರಿಗಾಗಿ ಪ್ರಕಟಿಸಿದ ಬೃಹತ್ ಪರಿಹಾರ ಮೊತ್ತವನ್ನು ಸ್ವೀಕರಿಸಲು ಕರ್ಕರೆಯವರ ಪತ್ನಿ ನಿರಾಕರಿಸುವುದು ಸಹಜವೇ ಆಗಿದೆ.

ಮೂರು ದಿನಗಳ ಈ ಅಪೂರ್ವ ಕಾರ್ಯಾಚರಣೆಯಲ್ಲಿ ಬಹುಶಃ ಒಬ್ಬನ ಹೊರತಾಗಿ ಮಿಕ್ಕೆಲ್ಲ ಭಯೋತ್ಪಾದಕರೂ ಸತ್ತಂತಿದೆ. ಹಾಗಾಗಿ, ವಿವಿಧ ರಾಷ್ಟ್ರೀಯತೆಗಳ ಮುಸ್ಲಿಂ ತರುಣರು ಸೇರಿ ನಡೆಸಿದಂತೆ ತೋರುವ ಈ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆಯ ಉದ್ದೇಶವಾದರೂ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ತಿಂಗಳುಗಳ ಹಿಂದೆ ಇಸ್ಲಾಮಾಬಾದ್ನಲ್ಲಿನ ಮ್ಯಾರಿಯೇಟ್ ಹೊಟೆಲ್ನಲ್ಲಿ ನಡೆದ ಆಸ್ಫೋಟದಲ್ಲಿ ವಿದೇಶೀಯರೂ ಸೇರಿದಂತೆ ನೂರಾರು ಜನ ಸಾವೀಗೀಡಾದ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಆ ದೇಶಕ್ಕೆ ತಮ್ಮ ಕ್ರಿಕೆಟ್ ಪ್ರವಾಸವನ್ನು ರದ್ದುಗೊಳಿಸಿದ್ದವು. ಈಗ ಭಾರತವೂ ತನ್ನ ಪ್ರವಾಸವನ್ನು ರದ್ದುಗೊಳಿಸುವ ಸೂಚನೆ ನೀಡಿ ಆ ದೇಶವನ್ನು ಮುಜುಗರಕ್ಕೊಳಪಡಿಸಿದ್ದು, ಅದರ ಗುಪ್ತಚರ ದಳ ಐಎಸ್ಐನ್ನು ಈ ಕೃತ್ಯವನ್ನೆಸಗಲು ಪ್ರೇರೇಪಿಸಿದೆಯೇ? ಅಥವಾ ಇದು ಮುಸ್ಲಿಂ ಭಯೋತ್ಪಾದಕರ ಗುಂಪು, ಭಾರತದಲ್ಲಿ ಹೊಸದಾಗಿ ತಲೆ ಎತ್ತಲಾರಂಭಿಸಿರುವ ಹಿಂದೂವಾದಿ ಗುಂಪುಗಳ ಮುಸ್ಲಿಂ ವಿರೋಧಿ ಭಯೋತ್ಪಾದಕರಿಗೆ ನೀಡಲು ಯತ್ನಿಸಿದ ಎಚ್ಚರಿಕೆಯೇ? ಅಥವಾ ಪಾಕಿಸ್ತಾನದ ಹೊಸ ಪ್ರಜಾಪ್ರಭುತ್ವವಾದಿ ಸರ್ಕಾರದ ಪ್ರಧಾನಿ ಮತ್ತು ಅಧ್ಯಕ್ಷರಿಬ್ಬರೂ ಭಾರತದೊಂದಿಗೆ ಸ್ನೇಹದ ಹೊಸ ಶಕೆಯನ್ನಾರಂಭಿಸುವ ಆಶಯದೊಂದಿಗೆ ಮಾತುಕತೆಗಳಿಗೆ ಮುಂದಾಗಿರುವುದು, ಆ ದೇಶದ ಮುಸ್ಲಿಂ ಮೂಲಭೂತವಾದಿ ಗುಂಪುಗಳನ್ನು ಕೆರಳಿಸಿದೆಯೇ? ಏಕೆಂದರೆ, ಪಾಕಿಸ್ತಾನ ಸರ್ಕಾರ ಕೂಡ ನಮ್ಮ ಸರ್ಕಾರದಂತೆಯೇ ಮತೀಯ ಮೂಲಭೂತವಾದಿ ಗುಂಪುಗಳ ಭಯೋತ್ಪಾದನೆಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ ಮತ್ತು ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವಿರುತ್ತದೆ ಎಂದು ನಂಬುವುದೂ ತಪ್ಪಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು. ಹಾಗಾಗಿ, ಬಂಧನದಲ್ಲಿರುವ ಭಯೋತ್ಪಾದಕನ ವಿವರವಾದ ವಿಚಾರಣೆ ಮತ್ತು ಈವರೆಗೆ ದೊರೆತಿರುವ ಸಾಕ್ಯಗಳ ತಾರ್ಕಿಕ ಜೋಡಣೆಯ ನಂತರವಷ್ಟೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಬಹುದು.

ಆದರೆ ಅದಕ್ಕೆ ಮುನ್ನ ನಮ್ಮ ಕೆಲವು ಕನ್ನಡ ವಾರ್ತಾ ವಾಹಿನಿಗಳು ಮಾಡಲು ಯತ್ನಿಸಿದಂತಹ, ಅಗ್ಗದ ಭಾಷೆಯಲ್ಲಿ ಅವಸರದ ತೀರ್ಮಾನಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸಗಳನ್ನು ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ರಾಷ್ಟ್ರ ವಿರೋಧಿ ಕೆಲಸಗಳೆಂದೇ ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಒಂದು ವಾಹಿನಿಯ ತಲೆಹೋಕ ನಿರೂಪಕನೊಬ್ಬ, ಸೆರೆ ಸಿಕ್ಕಿರುವ ಭಯೋತ್ಪಾದಕ ಪಾಕಿಸ್ತಾನಿ ಎಂದು ಪ್ರಕಟಿಸುತ್ತಾ; ತನ್ನ ವರದಿಗಾರನಿಗೆ ತಕ್ಷಣ ಕೇಳಿದ ಪ್ರಶ್ನೆ ಇದು: 'ಈ ಪಾಕಿಸ್ತಾನವನ್ನು ಮಟ್ಟ ಹಾಕಲು ಸಾಧ್ಯವಿಲ್ಲವಾ?' ಅದಕ್ಕೆ ಆ ಕಡೆಯಿಂದ ವಿಶೇಷ ವರದಿಗಾರನಿಂದ ಬಂದ ಪರಿಣತ ಉತ್ತರ: 'ಅಮೆರಿಕಾ ಸಹಕಾರ ನೀಡಿದರೆ ಸಾಧ್ಯವಾಗಬಹುದು!' ಜೊತೆಗೆ ಈ ನಿರೂಪಕ, 'ಚೀನಾದಲ್ಲಿ ನೋಡಿ, ಭಯೋತ್ಪಾದನೆಯ ಸುಳಿವೇ ಇಲ್ಲ...' ಎಂದು ತನ್ನ ತನ್ನ ಅಪಾರ ಅಜ್ಞಾನದ ಬಾಗಿಲನ್ನು ಬೇರೆ ತೆರೆದಿಟ್ಟ. ಇನ್ನೊಂದು ವಾಹಿನಿ ತನ್ನ ಉಗ್ರ ರಾಷ್ಟ್ರೀಯ ವಾರ್ತೆಯಲ್ಲಿ, ಇಂಗ್ಲೆಂಡ್ ತಂಡ ತನ್ನ ಕ್ರಿಕೆಟ್ ಪ್ರವಾಸವನ್ನು ಮುಂಬೈ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಮೊಟಕುಗೊಳಿಸಿದ್ದನ್ನು ವರ್ಣಿಸಿದ್ದು ಹೀಗೆ: 'ಸೋತು ಸುಣ್ಣವಾದ ಇಂಗ್ಲೆಂಡ್ ತಂಡದ ಪಲಾಯನ!' ಬೀದಿಯಲ್ಲಿ ಹೋಗುವವರನ್ನೆಲ್ಲ ಅಗ್ಗದ ಸಂಬಳಕ್ಕೆ ಕರೆತಂದು ನಿರೂಪಕರೆಂದೋ, ವರದಿಗಾರರೆಂದೋ ತಂದು ಕೂರಿಸುತ್ತಿರುವ ನಮ್ಮ ಕೆಲವು ವಾಹಿನಿಗಳು ಅಂತರಾಷ್ಟ್ರೀಯ ಸಂಬಂಧಗಳ ರಾಜಕಾರಣವನ್ನು ಕಡ್ಲೇಕಾಯಿ ವ್ಯಾಪಾರದ ಮಟ್ಟಕ್ಕೆ ಇಳಿಸಿರುವುದು ಹೀಗೆ.

ಅಷ್ಟೇ ಅಲ್ಲ, ಈ ವಾಹಿನಿಗಳು ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮರಣವನ್ನಪ್ಪಿದ ವೀರ ಪೋಲೀಸ್ ಅಧಿಕಾರಿಗಳ ಮತ್ತು ಯೋಧರ ಅಂತಿಮ ಯಾತ್ರೆಯ ಸಂದರ್ಭಗಳನ್ನು; ಅವುಗಳ ವಿಷಾದ-ಗಾಂಭೀರ್ಯಗಳನ್ನು ಲೆಕ್ಕಿಸದೆ, ಮಧ್ಯಯುಗೀನ ಯುದ್ಧ ವರ್ಣನೆಯ ಪರಿಭಾಷೆಯಲ್ಲಿ ನಿರೂಪಿಸುತ್ತಾ, ಸಂಭ್ರಮಪೂರ್ಣ ದೇಶಪ್ರೇಮ ಗೀತೆಗಳ ತುಣುಕುಗಳ ಮೂಲಕ 'ಆಚರಿಸಿದ' ಶೈಲಿ ಮತ್ತು ಕೋಮುವಾದಿ ಸಂಘಟನೆಯ ಜಾಲವೊಂದು ಚಲಾಯಿಸಿದ ಎಸ್ಎಂಎಸ್ಗಳನ್ನು, ಅವು ಇಡೀ ದೇಶದ ಭಾವನೆಯನ್ನು ಪ್ರತಿಬಿಂಬಿಸುವಂತೆ ಪ್ರಸಾರಿಸಿದ ವಿಶೇಷ ರೀತಿ, ನಮ್ಮ ರಾಷ್ಟ್ರಪ್ರೇಮ ಹೇಗೆ ತನ್ನೆಲ್ಲ ಘನತೆಯನ್ನು ಕಳೆದುಕೊಂಡು ಅಗ್ಗದ ಮಾತಿನ ರಾಜಕಾರಣವಾಗಿ ಅವನತಿಗೊಂಡಿದೆ ಎಂಬುದನ್ನು ಸೂಚಿಸುವಂತಿತ್ತು. ಹಾಗೇ ಇದೇ ಸಮಯವೆಂದು, ದೇಶ ರಕ್ಷಿಸಬೇಕಾದ ಕಮಾಂಡೋಗಳು ಸರ್ಕಸ್ನಲ್ಲಿನ ವಿದೂಷಕರಂತಿರುವ ರಾಜಕಾರಣಿಗಳ ಅಂಗರಕ್ಷಕರಾಗುತ್ತಿದ್ದಾರೆ ಎಂದು ತೆರೆಯ ಹಿಂದೆ ಕೂತು ಹೇಳಿಸುವ ಟಿ.ವಿ.ವಾಹಿನಿಯ ಸುದ್ದಿ ಸಂಪಾದಕನ ಸಿನಿಕತೆ ಮತು ಬೇಜವಾಬ್ದಾರಿತನ ಕೂಡಾ ಇಂತಹ ಅಗ್ಗದ ಮತ್ತು ಸುಲಭ ಮಾತಿನ ದೇಶಪ್ರೇಮದಿಂದ ಹುಟ್ಟಿದುದೇ ಆಗಿದೆ. ಮಾಧ್ಯಮಗಳ ಖಾಸಗೀಕರಣದ ನಿಜವಾದ ಅಪಾಯಗಳೇನು ಎಂಬುದು ನಮ್ಮ ಗಮನಕ್ಕೆ ಬರುವುದು ಇಂತಹ ರಾಷ್ಟ್ರ ಪರೀಕ್ಷೆಯ ಕಾಲದಲ್ಲೇ ಇರಬಹುದು....

ರಾಷ್ಟ್ರ ಮತ್ತೆ ಮತ್ತೆ ಭಯೋತ್ಪಾದನೆಗೆ ಬಲಿಯಾಗುತ್ತಿರುವುದಕ್ಕೂ, ಇಂತಹ ಅಗ್ಗದ ಮತ್ತು ಸುಲಭ ಮಾತಿನ ಉಗ್ರ ರಾಷ್ಟ್ರಪ್ರೇಮಕ್ಕೂ ಸಂಬಂಧವಿದೆ ಎನ್ನುವುದು ಇಲ್ಲಿ ಮುಖ್ಯ ಸಂಗತಿ. ನಿಜವಾಗಿ ರಾಷ್ಟ್ರವನ್ನು ಹೇಗೆ ಮತ್ತು ಯಾರಿಗಾಗಿ ಕಟ್ಟಲಾಗುತ್ತಿದೆ, ಈ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯಾರ ಯಾರ ಮತ್ತು ಯಾವ ಯಾವ ಆಶಯಗಳು ಅಭಿವ್ಯಕ್ತಗೊಳ್ಳುತ್ತಿವೆ ಎಂಬುದರ ಸೂಕ್ಷ್ಮ ಅವಲೋಕನವನ್ನು ಆಧರಿಸದ ಬರೀ ಟೊಳ್ಳು ಘೋಷಣೆಗಳ ರಾಷ್ಟ್ರ ಪ್ರೇಮ, ನಮ್ಮಲ್ಲಿ ಆತ್ಮಘಾತುಕವಾದ ಅಮಲನ್ನು ಮಾತ್ರ ಸೃಷ್ಟಿಸಬಲ್ಲುದು. ಈಗ ಆಗುತ್ತಿರುವಂತೆ. ಸದ್ಯದ ಮುಂಬೈ ಭಯೋತ್ಪಾದನಾ ಪ್ರಕರಣ ನಮ್ಮನ್ನು ಇಂತಹ ಆತ್ಮಘಾತುಕ ರಾಷ್ಟ್ರಪ್ರೇಮದ ಅಮಲಿನಿಂದ, ಮಂಪರಿನಿಂದ ಎಚ್ಚರಿಸಬೇಕು. ಮುಂಬೈ ನಗರವನ್ನು ಹೊಕ್ಕಿದ್ದ ಭಯೋತ್ಪಾದಕರನ್ನು ನಮ್ಮ ವೀರ ಪೋಲೀಸರು ಮತ್ತು ಕಮಾಂಡೋಗಳು ಹುಲಿಗಳಂತೆಯೋ, ಸಿಂಹಗಳಂತೆಯೋ ಕಾದಾಡಿ ಮಣಿಸಿದ್ದಾರೆಂದು 'ಭಾರತ್ ಮಾತಾ ಕಿ ಜೈ' ಎಂದೋ, 'ವಂದೇ ಮಾತರಂ' ಎಂದೋ ಘೋಷಣೆ ಕೂಗಿ ಸುಲಭ ಮತ್ತು ಸುಕ್ಷೇಮ ವೀರಾವೇಶ ಪ್ರಕಟಿಸುವ ಬದಲು, ಈ ಭಯೋತ್ಪಾದನೆ ಮತ್ತೆ ಮತ್ತೆ ಏಕೆ ನಮ್ಮನ್ನು ಕಾಡುತ್ತಿದೆ ಮತ್ತು ಇದನ್ನು ಏಕೆ ಶಾಶ್ವತವಾಗಿ ನಿರ್ಮೂಲನ ಮಾಡಲಾಗುತ್ತಿಲ್ಲ ಎಂಬುದನ್ನು ಯೋಚಿಸಿ, ಅ ಬಗ್ಗೆ ಕ್ರಮ ಕೈಗೊಳ್ಳುವಂತಹ ವಾತಾವರಣವನ್ನು ನಿರ್ಮಿಸುವುದು ಇಂದಿನ ಸಂದರ್ಭದಲ್ಲಿ ನಿಜವಾದ ದೇಶಪ್ರೇಮದ ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ. ಈ ದೃಷ್ಟಿಯಿಂದ ಸದ್ಯದ ಮುಂಬೈ ಭಯೋತ್ಪಾದನೆ ಪ್ರಕರಣ ನಮ್ಮನ್ನು ಈ ಎರಡೂ ಪ್ರಶ್ನೆಗಳ ಸಮೀಪಕ್ಕೆ ಕೊಂಡೊಯ್ಯುತ್ತದೆ.

ಈ ಭಯೋತ್ಪಾದಕರು ಎಷ್ಟು ಆರಾಮವಾಗಿ ಮುಂಬೈ ನಗರವನ್ನು ಪ್ರವೇಶಿಸಿ ಬಹಿರಂಗ ಹಿಂಸಾಚಾರಕ್ಕೆ ಇಳಿದರು ಎಂದರೆ, ಈ ದೇಶ ಮತ್ತು ಈ ನಗರ ಭಯೋತ್ಪಾದನೆಯ ತಲ್ಲಣವನ್ನು ಈ ಮುಂಚೆ ಎದುರಿಸಿಯೇ ಇಲ್ಲವೇನೋ ಎಂಬಷ್ಟು ನಿರಾಂತಕದಲ್ಲಿತ್ತು ಎಂಬುದನ್ನು ನಾವು ಗಮನಿಸಬೇಕು. ಸಾಮಾನ್ಯ ಜನರ, ಆಡಳಿತಗಾರರ, ರಾಜಕಾರಣಿಗಳ ಸಾರ್ವಜನಿಕ ನಿರ್ಲಕ್ಷ್ಯದ ಪರಮಾವಧಿ ಇದು. ಇದರ ಹಿಂದೆ ಇತ್ತೀಚೆಗೆ ಕಟ್ಟಲಾಗುತ್ತಿರುವ ಒಂದು ರಾಷ್ಟ್ರೀಯ ಜೀವನ ದೃಷ್ಟಿಕೋನದ ದೊಡ್ಡ ದೋಷವೇ ಇದೆ. ವಿಶೇಷವಾಗಿ ನಮ್ಮ ನಗರ - ಪಟ್ಟಣಗಳಲ್ಲಿ ಇದು ಎದ್ದು ಕಾಣುವಂತಿದೆ. ಅದೆಂದರೆ, ಜೀವನ ಇರುವುದು ಸ್ಪರ್ಧಾತ್ಮಕ ದುಡಿಮೆಯಲ್ಲಿ ಮುಳುಗಿ ಆದಷ್ಟೂ ಹೆಚ್ಚು ಸಂಪಾದಿಸುವುದು ಮತ್ತು ಇದಕ್ಕೆ ತಕ್ಕ ಹಾಗೆ ಸೃಷ್ಟಿಯಾಗುತ್ತಿರುವ ಹೊಸ ಹೊಸ ರೀತಿಯ ಮೋಜು - ಮಸ್ತಿಗಳಲ್ಲಿ ತೊಡಗಿ ಮೈಮರೆಯುವುದು. ಇದು ಎಲ್ಲರಿಗೂ ಸಾಧ್ಯವಾಗಿಲ್ಲ ಎನ್ನುವುದು ನಿಜವಾದರೂ, ಈ 'ತೀಟೆ' ಎಲ್ಲರ ಮೈ ಹೊಕ್ಕಿದೆ ಎಂಬುದಂತೂ ನಿಜ. ಹಾಗಾಗಿಯೇ ಭಯೋತ್ಪಾದಕರು ರಾಜಾರೋಷವಾಗಿ ಜನರ ಮಧ್ಯೆಯೇ ದೋಣಿಗಳಲ್ಲಿ ಬಂದಿಳಿದು, ಜನರ ಮಧ್ಯೆಯೇ ಶಸ್ತ್ರಾಸ್ತ್ರಗಳ ಚೀಲಗಳನ್ನು ಹೊತ್ತುಕೊಂಡು ತಂತಮ್ಮ ಕಾರ್ಯಾಚರಣೆಗಳ ಜಾಗಗಳನ್ನು ಸೇರಿದ್ದಾರೆ. ಅಷ್ಟೇ ಅಲ್ಲ, ತೆರೆದಿಟ್ಟಿದ್ದ ಪೋಲೀಸ್ ಜೀಪುಗಳನ್ನು ಹೊಕ್ಕು ಪರಾರಿಯಾಗಲೂ ಅವರಿಗೆ ಸಾಧ್ಯವಾಗಿದೆ. ಕುತೂಹಲಗೊಂಡ ಒಂದಿಬ್ಬರು ಭಯೋತ್ಪಾದಕರನ್ನು ನೀವು ಯಾರೆಂದು ವಿಚಾರಿಸುವ ಪ್ರಯತ್ನ ಮಾಡಿದರಾದರೂ, ಅವರು ಕೊಟ್ಟ 'ನಿಮ್ಮ ಕೆಲಸ ನೀವು ನೋಡಿಕೊಳ್ಳಿ' ಎಂಬ ಉತ್ತರದಿಂದ ಸಂತೃಪ್ತಗೊಂಡು, ಇದನ್ನು ಪೋಲೀಸರಿಗೂ ತಿಳಿಸದಷ್ಟು ನಿರಾತಂಕಿತರಾಗಿ ತಮ್ಮ ದಾರಿ ಹಿಡಿದಿದ್ದಾರೆ! ಇಂತಹ ಲೋಕಾಭಿರಾಮೀ ಜನರಿರುವ ದೇಶವನ್ನು ಭಯೋತ್ಪಾದನೆ ಪೀಡಿತ ದೇಶವೆಂದು ಕರೆಯುವುದಾದರೂ ಹೇಗೆ?

ನಗರಗಳೇ ಹಾಗೆ. ಅದರ ಕೈ ಕಾಲು, ಬಾಯಿ ಇತ್ಯಾದಿ ಅಂಗಗಳು ಸದಾ ಕ್ರಿಯಾಶೀಲವಾಗಿದ್ದರೂ, ಮನಸ್ಸು ಮಾತ್ರ ಸ್ಥಗಿತಗೊಂಡಿರುತ್ತದೆ. ನಮ್ಮ ಮಾಧ್ಯಮ ತಜ್ಞರು ಮತ್ತು ಸಾಮಾಜಿಕ ಮುಖಂಡರು ಇದನ್ನು ನಗರಜೀವನದ ವಿಶಿಷ್ಠ 'ಸ್ಥೈರ್ಯ'ವೆಂದೂ ಕರೆಯುವುದುಂಟು! ಈ ಹಿಂದಿನ ಭಯೋತ್ಪದನಾ ಪ್ರಕರಣಗಳ ಸಂದರ್ಭದಲ್ಲಿ, ಭಯೋತ್ಪಾದನೆಯ ಅನಾಹುತಗಳೆಲ್ಲ ಮುಗಿದ ಒಂದೇ ದಿನದಲ್ಲೋ, ಒಂದೇ ತಾಸಿನಲ್ಲೋ ನಗರದ ಜನಜೀವನ ಮತ್ತೆ ಮಾಮೂಲು ಸ್ಥಿತಿಗೆ ಮರಳಿದೆ ಎಂದು ತಮ್ಮ ನಗರದ spiritನ್ನು ಹಾಡಿ ಹೊಗಳಿದವರೇ ಇವರೆಲ್ಲ. ಅಂದರೆ, ಇವರ ಪ್ರಕಾರ ಇವರು ಪ್ರತಿನಿಧಿಸುವ ಹಿತಾಸಕ್ತಿಗಳ ವ್ಯಾಪಾರ-ವ್ಯವಹಾರಗಳಿಗೆ ಯಾವುದೇ ಅಡೆ - ತಡೆಯಾಗದಿರುವುದೇ ನಗರದ spirit! ಇಂತಹ ಆತ್ಮಘಾತುಕ spiritನಲ್ಲಿ ಅಂತರ್ಗತವಾಗಿರುವ ವೇಗ ಮತ್ತು ಗದ್ದಲಗಳೇ ಇಂದು ಮುಂಬೈಯನ್ನು ಯುದ್ಧಭೂಮಿಯಾಗಿಸಲು ಕಾರಣವಾಗಿದ್ದುದು. ಈ ವೇಗ ಮತ್ತು ಗದ್ದಲಗಳು ನಿಂತಿರುವುದೇ ನಾವೊಂದು ಸಮಾಜ ಮತ್ತು ರಾಷ್ಟ್ರ ಎಂಬ ಮರೆವಿನ ಮೇಲೆ. ಈ ಮರೆವೇ ನಮ್ಮ ವ್ಯವಸ್ಥೆಯ ಎಲ್ಲ ಅಸಮಾನತೆ, ಭ್ರಷ್ಟತೆ, ಸಿನಿಕತೆ, ಹಿಂಸೆ ಮತ್ತು ಕೋಮುವಾದಗಳಿಗೆ ಕಾರಣವಾಗಿರುವುದು

ಈ ರೋಗಗಳಿಗೆ ಒಳಗಾದ ವ್ಯವಸ್ಥೆ, ಎಲ್ಲ ರೀತಿಯಲ್ಲೂ ಅಸೂಕ್ಷ್ಮವಾಗಿ, ಬೇಜವಾಬ್ದಾರವಾಗಿ ಹೊರಗಿನ ಆಕ್ರಮಣವನ್ನು ಎದುರಿಸುವ ಪ್ರತಿರೋಧ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಇಂತಹ ಆಕ್ರಮಣಗಳ ಸಾಧ್ಯತೆಗೂ ಜಡವಾಗುವ ಸ್ಥಿತಿಗೆ ಈಡಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇಂದಿನ ಅಭೂತಪೂರ್ವ ಎಂದು ಹೇಳಲಾಗುತ್ತಿರುವ 'ಪ್ರಗತಿ'ಯ ರೀತಿ ನೀತಿಗಳು ಮನುಷ್ಯರನ್ನು ಹಂದಿಗಳನ್ನಾಗಿ ಮಾಡುತ್ತಿದೆ. ಇವರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಬುದ್ಧಿಜೀವಿಗಳು, ಉದ್ಯಮಿಗಳು, ನೌಕರರು, ಬೇಹುಗಾರರು, ಸಾಮಾನ್ಯ ಜನ ಎಲ್ಲ ಸೇರಿದ್ದಾರೆ. ಹೀಗಾಗಿ, ಅನಿವಾರ್ಯವಾದಾಗಲಾದರೂ ಒಂದಿಷ್ಟು ಮೌನಕ್ಕೆ, ಆತ್ಮಾವಲೋಕನಕ್ಕೆ ಅವಕಾಶವಿಲ್ಲದ 'ನಿರಂತರ ದುಡಿಮೆ ಮತ್ತು ಮಜಾ' ಸಂಸ್ಕೃತಿಯೇ ಇಂದು ರಾಷ್ಟ್ರದ ಹೆಮ್ಮೆಯ 'ಅಭಿವೃದ್ಧಿ ಸಂಸ್ಕೃತಿ' ಎನ್ನಿಸಿಕೊಂಡುಬಿಟ್ಟಿದೆ. ಅದು ನಮ್ಮ ಇಡೀ ವ್ಯವಸ್ಥೆಯನ್ನು ಬುಡದಿಂದ ತುದಿವರೆಗೆ ನೈತಿಕವಾಗಿ ದಿವಾಳಿ ಎಬ್ಬಿಸಿ, ನಮ್ಮ ನಗರಗಳು ಪದೇ ಪದೇ ಭಯೋತ್ಪಾದನೆಗೆ ಬಲಿಯಾಗುತ್ತಿರುವುದಕ್ಕೆ ಕಾರಣವಾಗಿದೆ. ಇದಕ್ಕೆ ಯಾವುದೇ ಅಪವಾದವಿಲ್ಲದೆ, ನಮ್ಮ ಎಲ್ಲ ರಾಜಕೀಯ ಪಕ್ಷಗಳ ಸಮಾನ ಕೊಡುಗೆ ಇದೆ ಎಂಬುದನ್ನೂ ನಾವು ಮರೆಯಬಾರದು

ಇನ್ನು ಈ ಬಾರಿ ಭಯೋತ್ಪಾದಕರನ್ನು ಹಿಡಿಯಲು, ಕೊಲ್ಲಲು ನಮ್ಮ ರಕ್ಷಣಾ ದಳ ಪಟ್ಟ ಪರಿಶ್ರಮವನ್ನೇ ಗಮನಿಸಿ. ಚಲಿಸುತ್ತಲೇ ಇರುವ ದಟ್ಟ ಜನಸಂದಣಿ, ಶಾಖೋಪಶಾಖೆಗಳಾಗಿ ಒಡೆದು ವಿಸ್ತರಿಸಿಕೊಳ್ಳುತ್ತಲೇ ಹೋಗುವ ರಸ್ತೆಗಳು, ಒತ್ತೊತ್ತಾಗಿ ಕಟ್ಟಲ್ಪಟ್ಟಿರುವ ಬೃಹತ್ ಕಟ್ಟಡಗಳು, ಅಂತಾರಾಷ್ಟ್ರೀಯ ಆಡಳಿತ ಜಾಲಕ್ಕೆ ಸೇರಿದ ಮತ್ತು ಜಟಿಲ ವಾಸ್ತು ವಿನ್ಯಾಸದ ಹಲವು ಅಂತಸ್ತುಗಳ ನೂರಾರು ಕೋಣೆಗಳ ಹೋಟೆಲ್ಗಳು ಮತ್ತು ಭವನಗಳು. ಇವುಗಳ ಒಳಹೊಕ್ಕ ಹತ್ತು ಜನ ಭಯೋತ್ಪಾದಕರನ್ನು ಹಿಡಿಯಲು, ಕೊಲ್ಲಲು ನಮ್ಮ ಕಮಾಂಡೋಗಳಿಗೆ ನೂರಕ್ಕೂ ಹೆಚ್ಚು ಜನ ಅಮಾಯಕರ ಸಾವು ಮತ್ತು ಮೂರು ದಿನಗಳು ಬೇಕಾದವು! ಹಾಗೆ ನೋಡಿದರೆ, ನಮ್ಮ ನಗರಗಳ ಸ್ವರೂಪವೇ ಭಯೋತ್ಪಾದಕರಿಗೆ ಆಹ್ವಾನ ನೀಡುವಂತಿದೆ. ಗಾಂಧಿ ತಮ್ಮ 'ಹಿಂದ್ ಸ್ವರಾಜ್'ನಲ್ಲಿ ನಗರಗಳು ಎಂದರೆ ಹಾವಿನ ಹುತ್ತಗಳು ಇದ್ದಂತೆ ಎಂದಿದ್ದುದು ಈ ಅರ್ಥದಲ್ಲಿಯೇ. ನಗರ ಎಂದರೆ, ಎಲ್ಲ ಕಳ್ಳಕಾಕರು, ದುಷ್ಟರು, ಭ್ರಷ್ಟರು, ತಲೆಹಿಡುಕರು ಒಬ್ಬರನ್ನೊಬ್ಬರು ಅವಲಂಬಿಸಿಕೊಂಡು ಸುರಕ್ಷಿತವಾಗಿರಲು ವಿನ್ಯಾಸ ಮಾಡಿಕೊಂಡಿರುವ ವ್ಯವಸ್ಥೆ ಎಂದು ವರ್ಣಿಸಿ, ಇಂತಹ ನಗರೀಕರಣವನ್ನು ಪ್ರೋತ್ಸಾಹಿಸುವ-ಆಕಾಶಕ್ಕೆ ಏಣಿ ಹಾಕಿಕೊಂಡ - ಕೈಗಾರಿಕೀಕೃತ ಅಭಿವೃದ್ಧಿಗೆ ಬದಲಾಗಿ, ತನ್ನ ಮಿತಿಗಳಲ್ಲೇ ನೆಮ್ಮದಿಯನ್ನು ಸೃಷ್ಟಿಸಬಲ್ಲ - ಈ ಭೂಮಿಗೇ ಅಂಟಿಕೊಂಡ-ಕೃಷಿ ಸಂಸ್ಕೃತಿ ಆಧಾರಿತ ಗ್ರಾಮ 'ಸ್ವರಾಜ್ಯ'ದ ಹಾದಿಯಲ್ಲಿ ನಡೆಯಬೇಕೆಂದು ಸೂಚಿಸಿದ್ದರು. ಅವರ ಮಾತುಗಳನ್ನು ಕೇಳಿ ನಕ್ಕಿದ್ದ ಭಾರತ, ಇಂದು ಆ ನಗುವಿನ ಹಿಂದಿದ್ದ ವ್ಯಂಗ್ಯಕ್ಕೆ ತಾನೇ ಈಡಾಗುತ್ತಿದೆ!

ಇಂದು ಆಧುನಿಕ ಭಾರತ 'ಪ್ರಗತಿ'ಯ ಹೆಸರಿನಲ್ಲಿ ಚಲಿಸುತ್ತಿರುವ ದಿಕ್ಕಿನಲ್ಲೇ, ಆ ಚಲನೆಯನ್ನು ನಿರ್ದೇಶಿಸುತ್ತಿರುವ ರಾಜಕಾರಣದಲ್ಲೇ ಹಿಂಸೆ ಅಂತರ್ಗತವಾಗಿದೆ. ಅದು ಎಲ್ಲ ರೂಪಗಳ ಮೂಲಕ ಹಾದುಹೋಗಿ ಈಗ ಭಯೋತ್ಪಾದನೆಯ ಅಂತಿಮರೂಪ ತಾಳಿದೆ. ಆದರೆ ಇಂದಿನ ಈ ಪ್ರಗತಿಯ ವೇಗಕ್ಕೆ ಸಿಕ್ಕಿರುವ ನಾವು, ಆ ವೇಗ ಹುಟ್ಟಿಸಿರುವ ಮನಸ್ಸಿನ 'ಗದ್ದಲ'ದಲ್ಲಿ ಇದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವಾಗಲೀ, ಸಹನೆಯಾಗಲೀ ಇಲ್ಲದೆ, ಇದಕ್ಕೆ ಬೇರೇನೋ - Short cutಗಳ - ಪರಿಹಾರಗಳನ್ನು ಹುಡುಕುವ ಯತ್ನದಲ್ಲಿದ್ದೇವೆ. ಮತ್ತು ಈ ಪರಿಹಾರಗಳು ಪದೇ ಪದೇ ವಿಫಲಗೊಳ್ಳುತ್ತಿರುವುದನ್ನು ನೋಡಿ, ಇನ್ನಷ್ಟು ಹತಾಶರಾಗುತ್ತಿದ್ದೇವೆ. ಈ ಹತಾಶೆಯಲ್ಲಿ ಮನಸ್ಸಿನಲ್ಲಿ ಅಡಗಿದ್ದ ಭೂತಗಳೆಲ್ಲ ಎದ್ದು ಮನಸ್ಸಿನ ಕೋಮುವಾದೀಕರಣ, ವಿಕ್ಷಿಪ್ತೀಕರಣ, ಹಿಂಸೀಕರಣಗಳಿಗೆ ಕಾರಣವಾಗುತ್ತಿವೆ. ಮುಸ್ಲಿಂ ಭಯೋತ್ಪಾದನೆಯನ್ನು ಎದುರಿಸಲು ಹಿಂದೂ ಭಯೋತ್ಪಾದನೆಯ ಸೃಷ್ಟಿ, ಪಾಕಿಸ್ತಾನದ ನಾಶಕ್ಕೆ ಕರೆ, ಎಕೆ-47 ಬಂದೂಕು ಇತ್ಯಾದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಅನುಮತಿ ನೀಡುವಂತೆ ಖಾಸಗಿ ಕಂಪನಿಗಳು ಇಡಲಾರಂಭಿಸಿರುವ ಬೇಡಿಕೆ ಇತ್ಯಾದಿಗಳು ಇದಕ್ಕೆ ಉದಾಹರಣೆಗಳಷ್ಟೆ. ಇವು ಭಯೋತ್ಪಾದನೆ ಹೊಸ ಹೊಸ ರೂಪಗಳನ್ನು ತಾಳಿ ಮತ್ತು ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತವಷ್ಟೆ. ಎಷ್ಟು ದಿಕ್ಕುಗಳಲ್ಲಿ ಎಷ್ಟು ಜನರನ್ನು ಕಾಯುತ್ತೀರಿ? ಎಷ್ಟು ಜನರನ್ನು ಎಷ್ಟು ದಿನಗಳವರೆಗೆ ಕೊಲ್ಲುತ್ತಾ ಹೋಗುತ್ತೀರಿ? ಎಕೆ-47 ಕೊಳ್ಳಬಲ್ಲವರಿಗಷ್ಟೆ ರಕ್ಷಣೆ ಸಾಕೆ? ಸದಾ ಆತಂಕದಲ್ಲಿ, ಎಚ್ಚರಿಕೆಯಲ್ಲಿರಬೇಕಾದ ಮನಸ್ಸಿಗೆ ಶಾಂತಿ ಎಲ್ಲಿ?

ಹಾಗಾಗಿ, ಮತ್ತೆ ಮತ್ತೆ ಎದುರಾಗುವ ಭಯೋತ್ಪಾದನಾ ಪ್ರಕರಣಗಳನ್ನು ಸಶಕ್ತವಾಗಿ ಎದುರಿಸುತ್ತಲೇ, ಇದರ ಕಾರಣಗಳನ್ನು ಕೂಲಂಕಶವಾಗಿ ಪರಿಶೀಲಿಸುವ ಸಹನೆ ಮತ್ತು ವ್ಯವಧಾನವನ್ನೂ ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಆಗ ಈ ಗಾಂಧಿ ಸತ್ಯಗಳು ಗೋಚರವಾಗಬಹುದು: ಹಾವಿನ ಹುತ್ತಗಳಂತಹ ನಗರಗಳನ್ನು ಕಟ್ಟುವ ಅಭಿವೃದ್ಧಿ ಪಥವನ್ನು ಆದಷ್ಟು ಬೇಗ ತ್ಯಜಿಸಬೇಕು. ಜನರಲ್ಲಿ ಮಿತಿ ಮೀರಿದ ಸುಖಾಪೇಕ್ಷೆಗಳನ್ನು ಹುಟ್ಟಿಸುವಂತಹ ಸ್ಪರ್ಧಾತ್ಮಕ ದುಡಿಮೆಯ ಮಾದರಿಗಳಿಗೆ ಕಡಿವಾಣ ಹಾಕಬೇಕು. ಭಾರತ ಜಾಗತಿಕ ಶಕ್ತಿಯಾಗಿ ಮೆರೆಯುವ ಕನಸನ್ನೂ, ಹಂಬಲವನ್ನೂ ಕೈ ಬಿಡಬೇಕು. ಇದರ ಭಾಗವಾಗಿ, ತನ್ನ ನೆರೆಹೊರೆಯ ಎಲ್ಲ ದೇಶಗಳೊಂದಿಗೆ ಸಮಾನತೆಯ ಆಧಾರದ ಮೇಲೆ ಸಂಬಂಧಗಳನ್ನು ಪುರ್ನವಿನ್ಯಾಸಗೊಳಿಸಿಕೊಳ್ಳಬೇಕು. ವಿಶೇಷವಾಗಿ ಪಾಕಿಸ್ತಾನದೊಡನೆಯ ಗಡಿಯನ್ನು ಅಪ್ರಸ್ತುತಗೊಳಿಸಿಕೊಳ್ಳುವ ರೀತಿಯಲ್ಲಿ, ಎರಡೂ ಕಡೆ ವಿಶ್ವಾಸವನ್ನು ಕುದುರಿಸುವ ನಿರ್ಣಾಯಕ 'ದುಸ್ಸಾಹಸ'ಕ್ಕೆ ಸಿದ್ಧವಾಗುವ ಧೈರ್ಯ ತೋರಬೇಕು. ಸಂಪತ್ತು ಮತ್ತು ಸೇನೆಯ ಶಕ್ತಿಗಿಂತ ಹೆಚ್ಚಾಗಿ ನೈತಿಕ ಶಕ್ತಿಯ ಆಧಾರದ ಮೇಲೆ ಜಾಗತಿಕವಾಗಿ ತನ್ನ ಸ್ಥಾನದ ಮಹತ್ವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಪಶ್ಚಿಮದ ಕೈಗಾರಿಕಾ ನಾಗರೀಕತೆ ವೈವಿಧ್ಯಮಯ ಹಿಂಸೆಯನ್ನು ಜಗತ್ತಿನಾದ್ಯಂತ ಹುಟ್ಟುಹಾಕಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಇದರಿಂದಾಗಿಯೇ ಸ್ವತಃ ಅಸಹನೀಯ ಹಿಂಸೆಗೆ ಗುರಿಯಾಗಿರುವ ಭಾರತ; ಹೀಗೆ ಜಗತ್ತಿಗೆ ಒಂದು ಪರಿಹಾರದ ಮಾದರಿಯನ್ನು ನಿರ್ಮಿಸಬಹುದಾಗಿದೆ. ಇದು ಗಾಂಧಿ ಕಂಡ ಕನಸೂ ಆಗಿತ್ತು. ಅದನ್ನು ಸ್ವಲ್ಪ ತಡವಾಗಿಯಾದರೂ ಗಾಂಧಿ ನಾಡು ಮಾಡಿ ತೋರಿಸಬಹುದಾಗಿದೆ.

ಇದೊಂದೇ-ಅಸಾಧ್ಯವೆನಿಸುವಷ್ಟು-ದೂರದಲ್ಲಿಯಾದರೂ ಕಾಣುತ್ತಿರುವ ಪರಿಹಾರವಾಗಿದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
uniquesupri's picture

Quote:
ಹಾಗಾಗಿ, ಮತ್ತೆ ಮತ್ತೆ ಎದುರಾಗುವ ಭಯೋತ್ಪಾದನಾ ಪ್ರಕರಣಗಳನ್ನು ಸಶಕ್ತವಾಗಿ ಎದುರಿಸುತ್ತಲೇ, ಇದರ ಕಾರಣಗಳನ್ನು ಕೂಲಂಕಶವಾಗಿ ಪರಿಶೀಲಿಸುವ ಸಹನೆ ಮತ್ತು ವ್ಯವಧಾನವನ್ನೂ ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಆಗ ಈ ಗಾಂಧಿ ಸತ್ಯಗಳು ಗೋಚರವಾಗಬಹುದು: ಹಾವಿನ ಹುತ್ತಗಳಂತಹ ನಗರಗಳನ್ನು ಕಟ್ಟುವ ಅಭಿವೃದ್ಧಿ ಪಥವನ್ನು ಆದಷ್ಟು ಬೇಗ ತ್ಯಜಿಸಬೇಕು. ಜನರಲ್ಲಿ ಮಿತಿ ಮೀರಿದ ಸುಖಾಪೇಕ್ಷೆಗಳನ್ನು ಹುಟ್ಟಿಸುವಂತಹ ಸ್ಪರ್ಧಾತ್ಮಕ ದುಡಿಮೆಯ ಮಾದರಿಗಳಿಗೆ ಕಡಿವಾಣ ಹಾಕಬೇಕು. ಭಾರತ ಜಾಗತಿಕ ಶಕ್ತಿಯಾಗಿ ಮೆರೆಯುವ ಕನಸನ್ನೂ, ಹಂಬಲವನ್ನೂ ಕೈ ಬಿಡಬೇಕು. ಇದರ ಭಾಗವಾಗಿ, ತನ್ನ ನೆರೆಹೊರೆಯ ಎಲ್ಲ ದೇಶಗಳೊಂದಿಗೆ ಸಮಾನತೆಯ ಆಧಾರದ ಮೇಲೆ ಸಂಬಂಧಗಳನ್ನು ಪುರ್ನವಿನ್ಯಾಸಗೊಳಿಸಿಕೊಳ್ಳಬೇಕು. ವಿಶೇಷವಾಗಿ ಪಾಕಿಸ್ತಾನದೊಡನೆಯ ಗಡಿಯನ್ನು ಅಪ್ರಸ್ತುತಗೊಳಿಸಿಕೊಳ್ಳುವ ರೀತಿಯಲ್ಲಿ, ಎರಡೂ ಕಡೆ ವಿಶ್ವಾಸವನ್ನು ಕುದುರಿಸುವ ನಿರ್ಣಾಯಕ 'ದುಸ್ಸಾಹಸ'ಕ್ಕೆ ಸಿದ್ಧವಾಗುವ ಧೈರ್ಯ ತೋರಬೇಕು. ಸಂಪತ್ತು ಮತ್ತು ಸೇನೆಯ ಶಕ್ತಿಗಿಂತ ಹೆಚ್ಚಾಗಿ ನೈತಿಕ ಶಕ್ತಿಯ ಆಧಾರದ ಮೇಲೆ ಜಾಗತಿಕವಾಗಿ ತನ್ನ ಸ್ಥಾನದ ಮಹತ್ವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಪಶ್ಚಿಮದ ಕೈಗಾರಿಕಾ ನಾಗರೀಕತೆ ವೈವಿಧ್ಯಮಯ ಹಿಂಸೆಯನ್ನು ಜಗತ್ತಿನಾದ್ಯಂತ ಹುಟ್ಟುಹಾಕಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಇದರಿಂದಾಗಿಯೇ ಸ್ವತಃ ಅಸಹನೀಯ ಹಿಂಸೆಗೆ ಗುರಿಯಾಗಿರುವ ಭಾರತ; ಹೀಗೆ ಜಗತ್ತಿಗೆ ಒಂದು ಪರಿಹಾರದ ಮಾದರಿಯನ್ನು ನಿರ್ಮಿಸಬಹುದಾಗಿದೆ. ಇದು ಗಾಂಧಿ ಕಂಡ ಕನಸೂ ಆಗಿತ್ತು. ಅದನ್ನು ಸ್ವಲ್ಪ ತಡವಾಗಿಯಾದರೂ ಗಾಂಧಿ ನಾಡು ಮಾಡಿ ತೋರಿಸಬಹುದಾಗಿದೆ.

ಇದೊಂದೇ-ಅಸಾಧ್ಯವೆನಿಸುವಷ್ಟು-ದೂರದಲ್ಲಿಯಾದರೂ ಕಾಣುತ್ತಿರುವ ಪರಿಹಾರವಾಗಿದೆ.

ನಿಜಕ್ಕೂ ಇದು ಒಂದೇ ಪರಿಹಾರವಾಗಿ ಕಾಣುತ್ತಿದೆಯೇ? ಇದು ಎಲ್ಲಾ ಸಮಸ್ಯೆಗಳನ್ನು ಪೂರೈಸಿ ಬಿಡುವ ಮಾಂತ್ರಿಕ ವ್ಯವಸ್ಥೆಯಾಗಿ ಕಾಣುತ್ತಿದೆಯೇ? ಗಾಂಧೀಜಿಯವರ ಕಲ್ಪನೆಯ ಗ್ರಾಮ ಸ್ವರಾಜ್ಯ ‘ಕಲ್ಪನೆ’ಯಲ್ಲಿ ಕಂಡಷ್ಟೇ ಸಶಕ್ತವಾಗಿ ವಾಸ್ತವದಲ್ಲಿ ಇರಲು ಸಾಧ್ಯವೇ? ಸೋಶಿಯಲಿಸಂ ಆದರ್ಶವಾಗಿರಿಸಿಕೊಂಡಿದ್ದ ದೇಶಗಳು ತಲುಪಿದ ಸ್ಥಿತಿಯನ್ನು ನಾವು ಕಂಡಿರುವಾಗ ನಮ್ಮ ಪ್ರಸ್ತುತ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಅಗತ್ಯ ಕಾಣುತ್ತದೆಯೇ?
ಭಯೋತ್ಪಾದನೆಯ ಪ್ರಸ್ತುತ ಚರ್ಚೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಸಂಗತಿಯೊಂದನ್ನು ನೀವು ಪ್ರಸ್ತಾಪಿಸಿಲ್ಲ. ಅಮೇರಿಕಾದಂತಹ ರಾಷ್ಟ್ರದಲ್ಲಿ, ಇಡೀ ಮುಸ್ಲಿಂ ಜಗತ್ತು ದ್ವೇಷಿಸುವ ಅಮೇರಿಕಾದಲ್ಲಿ ಏಕೆ ಇಂಥ ಭಯೋತ್ಪಾದಕ ದಾಳಿಗಳು ನಡೆಯಲು ಸಾಧ್ಯವಿಲ್ಲ? ನಾವು ಕುರುಡಾಗಿ ಅನುಕರಿಸುತ್ತಿರುವ ಎಲ್ಲಾ ಭೋಗಗಳು ಅಲ್ಲಿ ಯಥೇಚ್ಛವಾಗಿದ್ದರೂ ಅವರೇಕೆ ಸದಾ ಎಚ್ಚರವಾಗಿರುತ್ತಾರೆ. ನಾವೇಕೆ ಅವರಂತಾಗಲು ವಿಫಲರಾಗಿದ್ದೇವೆ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

mahesha's picture

೧) ಇಡೀ ಮುಸ್ಲಿಂ ಜಗತ್ತು ಅಮೆರಿಕವನ್ನು ದ್ವೇಶಿಸಲ್ಲ. ದ್ವೇಷಿಸುವವರು ಅರ್ಧಕ್ಕಿಂತ ಕಡಿಮೆ ಮುಸ್ಲಿಂರು.
೨) ಅಮೆರಿಕವು ಬಲು ಚಾಣಕ್ಷ ದೇಶ. ಅಲ್ಲಿ ಮೊದಲಿಂದಲೂ ಭದ್ತತೆಗೆ ತುಂಬಾ ಒತ್ತು. ಅವರ ಹೋಮ್ ಲ್ಯಾಂಡ್ ಸೆಕಿರಿಟಿಯಿಂದ ಹಿಡಿದು FBI ತನಕ ಕಟ್ಟುನಿಟ್ಟಾದ ಕಾವಲನ್ನು ಅವರು ೨ನೇ ವಿಶ್ವ ಯುದ್ಧದಿಂದಲೇ ರೂಪಿಸಿಕೊಂಡಿದ್ದಾರೆ.
೩) ಭೋಗಗಳನ್ನು ಯಥೇಚ್ಛವಾಗಿ ಭೋಗಿಸುವ ಕಾಮಿಸಿವ ಜನಾಂಗವೇ ಹೆಚ್ಚು ಆಕ್ಷಮಣಕಾರಿಯಾಗಿರುತ್ತದೆ. !
೪) ನಾವು ಏಕೆ ವಿಫಲ ಅಂದರೆ ನಮ್ಮ ಒಗ್ಗಟ್ಟಿಲ್ಲ, ಭ್ರಷ್ಟತೆ ಇದೆ. ಒಗ್ಗಟ್ಟು ಯಾಕಿಲ್ಲ ಅಂದರೆ ನಮ್ಮ ಸ್ವಾಭಾವಿಕ ದೇಶವೇ ಅಲ್ಲ. ಬಹುಶಃ ಕರ್ನಾಟಕ, ತಮಿಳು ನಾಡು ಗಳೇ ಸ್ವತಂತ್ರದೇಶಗಳಾಗಿದ್ದರೂ ಇನ್ನು ಯಶಸ್ವಿಯಾಗಿ ನಮಗಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದೆವೇನೋ!( ನನ್ನ ಅನಿಸಿಕೆ)

uniquesupri's picture

>>> ೪) ನಾವು ಏಕೆ ವಿಫಲ ಅಂದರೆ ನಮ್ಮ ಒಗ್ಗಟ್ಟಿಲ್ಲ, ಭ್ರಷ್ಟತೆ ಇದೆ. ಒಗ್ಗಟ್ಟು ಯಾಕಿಲ್ಲ ಅಂದರೆ ನಮ್ಮ ಸ್ವಾಭಾವಿಕ ದೇಶವೇ ಅಲ್ಲ. ಬಹುಶಃ ಕರ್ನಾಟಕ, ತಮಿಳು ನಾಡು ಗಳೇ ಸ್ವತಂತ್ರದೇಶಗಳಾಗಿದ್ದರೂ ಇನ್ನು ಯಶಸ್ವಿಯಾಗಿ ನಮಗಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದೆವೇನೋ!( ನನ್ನ ಅನಿಸಿಕೆ)

ಇದರ ಬಗ್ಗೆ ಗಮನ ಹರಿಸಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

mahesha's picture

ಎಷ್ಟು ಹೊತ್ತು ಗಮನ ಹರಿಸಲು..! :)

ಸಿರಿಲಂಕೆಯ ಎಲ್.ಟಿಟಿ.ಈ ಮಂದಿಗಾಗಿ ಅಶ್ಟು ಕೂಗಾಡುವ, ಸರಕಾರವನ್ನೇ ಬೀಳಿಸುವ ತಮಿಳರು ಈ ಮುಂಬಯ್ ಬಗ್ಗೆ ಏನಾದರು ಕೊಸರು ಎತ್ತಿದ್ದಾರೆಯೇ? ಎತ್ತಲ್ಲ ಏಕೆಂದರೆ ತಮಿಳರ ’ಸ್ವಾಭಾವಿಕ ಜನಾಂಗೀಯ’ ದೇಶದಲ್ಲಿ ಮುಂಬೈ ಇಲ್ಲ.

D.S.NAGABHUSHANA's picture

ಗ್ರಾಮ ಸ್ವರಾಜ್ಯ ಎಲ್ಲಕ್ಕೆ ಮದ್ದು ಎಂದು ನಾನು ಹೇಳಿಲ್ಲ. ನಾನು ಹೇಳುತ್ತಿರುವುದು, ಕೈಗಾರಿಕಾ ಸಂಸ್ಕ್ರತಿಯನ್ನಾಧರಿಸಿದ ನಗರೀಕರಣದ ಅಭಿವ್ರದ್ಧಿ ಮಾದರಿಯ ಪರಿಣಾಮಗಳನ್ನು ನೋಡಿದ ನಾವು ಅದರ ಬಗ್ಗೆ ಪುನರಾಲೋಚಿಸುವ ಕಾಲ ಬಂದಿದೆ ಎಂದು.
ಅಮೆರಿಕಾದಲ್ಲಿ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ತಡೆಯಲು ಈವರೆಗೆ ಸಾಧ್ಯವಾಗಿರುವುದು, ಅಲ್ಲಿ ಪ್ರಜಾ-ಜವಾಬ್ದಾರಿಗಳನ್ನು ಅರಿತ ಒಂದು ನಾಗರಿಕ ಸಮಾಜ(Civil Society) ಬೇರೂರಿದೆ. ಅಲ್ಲದೆ ಅದು ನಮ್ಮಂತೆ ನವ ಶ್ರೀಮಂತಿಕೆಯ ರೋಗಗಳಿಂದ ನರಳುತ್ತಿರುವ ದೇಶವಲ್ಲ. ಅದಕ್ಕಿಂತ ಮುಖ್ಯವಾಗಿ ಅಲ್ಲಿನ ವ್ಯವಸ್ಥೆ ನಮ್ಮ ವ್ಯವಸ್ಥೆಯಂತೆ ಕಡು ಭ್ರಷ್ಟವಾಗಿಲ್ಲ. ಆದರೂ, ಆ ದೇಶ ಭಯೋತ್ಪಾದನೆಯ ಆತಂಕದಿಂದ ಪಾರಾಗಿದೆ ಎನ್ನುವುದು ಸಂದೇಹಾಸ್ಪದವೇ.

manju mysooru's picture

ನಿಮ್ಮ ಈ ಸುದೀರ್ಘವಾದ, ಸುತ್ತಿ ಬಳಸಿ ಹೇಳಿರುವ ಕತೆಯ ಸಾರಾಂಶವನ್ನು ಕೆಲವೇ ವಾಕ್ಯಗಳಲ್ಲಿ ತಿಳಿಸಿದರೆ ಚೆನ್ನಾಗಿರುತ್ತೆ. ಈ ದೇಶದ ೯೦% ಸಮಸ್ಯೆಗೆ ಅಮೇರಿಕಾ, ನರೇಂದ್ರ ಮೋದಿ, ಆರ್ ಎಸ್ಎಸ್ ಕಾರಣ ಅಂತ ನೇರ ಹೇಳಿಬಿಡಿ. ಈ ವಿಶಯದಲ್ಲಿ ನಮ್ಮ ಸೆಕ್ಯುಲರ್ ರಾಜಕಾರಣಿಗಳಲ್ಲಿ ನಿಮಗಿಂತ ಹೆcಚು ದಿಟತನ, ನೇರ ನುಡಿ ಇದೆ.

ನಕ್ಷಲರ್, ಮುಸ್ಲಿಮ್ ಭಯೋತ್ಪಾದಕರು ಗನ್ ಹಿಡಿದು ಬಂದ್ರೆ, ಪೋಲಿಸರು 'ಗಾಂಧಿ ಜಪ' ಮಾಡ್ತಾ ಕೂತ್ಕೋಬೇಕಾ? ಅಹಿಂಸೆ ಪಾಲಿಸೋನ ಹತ್ರ ಅಹಿಂಸೆ ಆಚರಿಸೋದು ಸರಿ.

gnanadev's picture

ಬಹುಶಃ ನಾಗಭೂಷಣ್ ರ೦ಥ ಲೇಖಕಕರಿಗೆ, ಚಿ೦ತಕರಿಗೆ ಹಗಲೂರಾತ್ರಿ ಈ ಹಿ೦ದೂತ್ವ, ಆರ್. ಎಸ್. ಎಸ್, ಭಾರತೀಯ ಸ೦ಸ್ಕೃತಿಯ ಆಧಾರವುಳ್ಳ ರಾಷ್ಟ್ರಪ್ರೇಮ, ಕಲ್ಪನೆ ಭೂತವಾಗಿ ಕಾಡುತ್ತಿದೆಯೇನೋ ಅನಿಸುತ್ತದೆ. ಇದಕ್ಕೆ ಹೊರತಾಗಿ ನಿ೦ತು ಮುಕ್ತ ಮನಸ್ಸಿನಿ೦ದ ಸಾಮಾಜಿಕ ಸಮಸ್ಯೆಗಳನ್ನು, ಸ೦ಗತಿಗಳನ್ನು ಚಿಕ್ಕದಾಗಿ, ಸೂಕ್ತವಾಗಿ ಬರೆದರೆ ಒಳ್ಳೆಯದು ಎನ್ನುವ ನನ್ನ ಪ್ರಾಮಾಣಿಕ ಅನಿಸಿಕೆ. Totally confusing and misleading biased and drifting article.

ಡಾ|| ಜ್ಞಾನದೇವ್ ಮೊಳಕಾಲ್ಮುರು

hariharapurasridhar's picture

http://www.hariharap...
ನನಗೂ ಹೀಗೇ ಅನ್ನಿಸಿದೆ.

D.S.NAGABHUSHANA's picture

ನಿಮ್ಮ ನಂಬಿಕೆಗಳ ಹಿನ್ನೆಲೆಯಲ್ಲಿ ನಿಮ್ಮ ಅಭಿಪ್ರಾಯ ಸರಿಯಾಗಿಯೇ ಇದೆ, ವಂದನೆಗಳು. ನಿಮ್ಮಂಥವರ ಇಂಥಹ ಅಭಿಪ್ರಾಯಗಳೇ ನಮ್ಮಂಥವರಿಗೆ ಸ್ಫೂರ್ತಿ ಮತ್ತು ನಾವು ಸರಿ ದಾರಿಯಲಿದ್ದೇವೆ ಎಂಬುದನ್ನು ಖಚಿತಪಡಿಸುವುದು!
-ಡಿ.ಎಸ್.ನಾಗಭೂಷಣ

manju mysooru's picture

ಇದೇ ಮಾತು ನಿಮಗೂ ಅನ್ವಯವಾಗುತ್ತೆ.. ಜನ ನಿರ್ಧರಿಸ್ತಾರೆ ಬಿಡಿ - ಯಾರದು ಡೋಂಗಿತನ ಅಂತ..

gurubaliga's picture

>>ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವಿರುತ್ತದೆ ಎಂದು ನಂಬುವುದೂ ತಪ್ಪಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು.

ಜನಸಾಮಾನ್ಯರು ಅದು ಪಾಕಿಸ್ತಾನವೇ ಮಾಡಿದ್ದು ಅಂತ ಹೇಳುವುದಕ್ಕೂ ನಿಮ್ಮಂತ ಹಿರಿಯ ಚಿಂತಕರು ಮೆಲಿನವಾಕ್ಯವನ್ನು ಬರೆಯುವುದಕ್ಕೂ ಯಾವುದೇ ವ್ಯತ್ಯಾಸ ನನಗೆ ಕಾಣುವುದಿಲ್ಲ. ಅದರಲ್ಲೂ ಜನಸಾಮಾನ್ಯರಿಗೆ ಅರಿವಿನ ಕೊರತೆ ಸಹಜವಾಗಿರುತ್ತದೆ. ಆದರೆ ಸಮಾಜವಾದಿ ಚಿಂತಕರಿಗೆ ಪರದೆಯ ಹಿಂದಿನ ವಿಷಯಗಳ ಬಗ್ಗೆ ಅರಿವಿರಬೇಕಾದದ್ದು ಅವರ ಪ್ರವೃತ್ತಿಪರ ಅಗತ್ಯಗಳಲ್ಲಿ ಒಂದು.

ಅಂತಾರಾಷ್ಟ್ರೀಯ ರಾಜಕಾರಣವನ್ನು ದಿನ ಬೆಳಗಾದರೆ ಅರಿತುಕೊಳ್ಳಬೇಕಾದ ನಿಮಗೆ ಲಷ್ಕರೆ ತೊಯ್ಬಾವನ್ನು ಯಾರು ಕಟ್ಟಿ ಬೆಳೆಸಿದರು ಎನ್ನುವುದಕ್ಕೆ ಉತ್ತರ ತಿಳಿದಿಲ್ಲವೆಂದರೆ ನಿಮ್ಮ ಈ ಲೇಖನದ ಪ್ರಾಮಾಣಿಕತೆಯ ಬಗ್ಗೆ ನನಗೆ ಅನುಮಾನವಿದೆ.

>> ವಿಶೇಷವಾಗಿ ಪಾಕಿಸ್ತಾನದೊಡನೆಯ ಗಡಿಯನ್ನು ಅಪ್ರಸ್ತುತಗೊಳಿಸಿಕೊಳ್ಳುವ ರೀತಿಯಲ್ಲಿ, ಎರಡೂ ಕಡೆ ವಿಶ್ವಾಸವನ್ನು ಕುದುರಿಸುವ ನಿರ್ಣಾಯಕ 'ದುಸ್ಸಾಹಸ'ಕ್ಕೆ ಸಿದ್ಧವಾಗುವ ಧೈರ್ಯ ತೋರಬೇಕು.

ನಿಮ್ಮ ಈ ಸಲಹೆಯಲ್ಲಿ ಬೆಳಕಿದೆ ಆದರೆ ಇದನ್ನು ಕಾರ್ಯಗತಗೊಳಿಸಲು ಸುಮಾರು ಇನ್ನೂರು ವರ್ಷ ಕಾಯಬೇಕು. :-)

bhasip's picture

"ಇದಕ್ಕೆ ತಕ್ಕ ಹಾಗೆ ಸೃಷ್ಟಿಯಾಗುತ್ತಿರುವ ಹೊಸ ಹೊಸ ರೀತಿಯ ಮೋಜು - ಮಸ್ತಿಗಳಲ್ಲಿ ತೊಡಗಿ ಮೈಮರೆಯುವುದು. ಇದು ಎಲ್ಲರಿಗೂ ಸಾಧ್ಯವಾಗಿಲ್ಲ ಎನ್ನುವುದು ನಿಜವಾದರೂ, ಈ 'ತೀಟೆ' ಎಲ್ಲರ ಮೈ ಹೊಕ್ಕಿದೆ ಎಂಬುದಂತೂ ನಿಜ"

--- ಇದೊಂದೆ ತೀಟೆ ಯಾಕೆ ಬರೆದೀರಾ? ಅಲ್ಪಸಂಖ್ಯಾತರ ಓಲೈಕೆ, ಅವರಿಗೆ ವಿಶೇಷ ಸವಲತ್ತು ಸೌಕರ್ಯ ಒದಗಿಸಿ ಮತ ಕೇಳುವ ಪೊಳ್ಳು ರಾಜಕಾರಣೀಗಳು, ಇವರ ಹಿಂದೆ ಮುಂದೆ ಕುಣಿಯುವ ಕೆಲ "ಲದ್ದಿ" ಜೀವಿಗಳು, ಇವರ "ತೀಟೆ" ಕೂಡ ಈ ಘಟನೆಗಳಿಗೆ ಕಾರಣವಾಗಿದೆ. ದೇಶದಲ್ಲಿ ಮೊದಲು ಆಗಬೇಕಾಗಿರುವುದು ಏಕರೂಪ ಕಾನೂನು, ಎಲ್ಲರಿಗೂ ಸಮಾನ ಸೌಲಭ್ಯ, ಸವಲತ್ತು, ಸಾಚಾರ್ ವರದಿ ಜಾರಿ ಗೊಳಿಸುವ ಆತುರದ ತೀಟೆ ಯಾಕೆ?

"ವಿಶೇಷವಾಗಿ ಪಾಕಿಸ್ತಾನದೊಡನೆಯ ಗಡಿಯನ್ನು ಅಪ್ರಸ್ತುತಗೊಳಿಸಿಕೊಳ್ಳುವ ರೀತಿಯಲ್ಲಿ, ಎರಡೂ ಕಡೆ ವಿಶ್ವಾಸವನ್ನು ಕುದುರಿಸುವ ನಿರ್ಣಾಯಕ 'ದುಸ್ಸಾಹಸ'ಕ್ಕೆ ಸಿದ್ಧವಾಗುವ ಧೈರ್ಯ ತೋರಬೇಕು."

--- ಬಿಳಿ ಬಾವುಟ ತೋರಿಸಿ ಯಾರೋ ಮಾಡಿದ ತಪ್ಪಿಗೆ ಭಾರತ ಸದಾ ನೋವು ಅನುಭವಿಸುತ್ತಿದೆ, ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಅನ್ನುವ ಮಾತು ಹಳೆಯದಾಯಿತು. ೧ ಹಲ್ಲಿಗೆ ಇಡಿ ದವಡೆಯೆ ಉತ್ತರ, ೧ ಕಣ್ಣಿಗೆ ೨ ಕಣ್ಣೂ ಬೇಕು, ಆಗ ಮಾತ್ರ ಮಾನವ ಹಕ್ಕುಗಳು ಎಂದರೇನು ಅಂತ ಅರ್ಥ ಆಗುತ್ತೆ, ನಮಗಲ್ಲ, ಭಯೋತ್ಪಾದನೆ ನಡೆಸುವವರಿಗೆ ಮತ್ತು ಅದನ್ನು ಎತ್ತಿ ಕಟ್ಟುವವರೆಗೆ. ಇದು ಪಾಕಿಸ್ತಾನದ ವಿಷಯ ಆಗಿರಬಹುದು ಅಥವಾ ಸಮಾಜದ ಬಳುವಳಿಯಾದ ನಕ್ಸಲ್ ವಾದ ಇರಬಹುದು ಅಥವಾ ಯಾವುದೇ ಭಯೋತ್ಪಾದನೆ ಇರಬಹುದು. ಭಯೋತ್ಪಾದಕರಿಗೆ ಕಠಿಣ ಶಿಕ್ಷೆ ತ್ವರಿತಗತಿಯಲ್ಲಿ ಸಾಗಬೇಕು, ಅಷ್ಟೆ ಅಲ್ಲ, ಅದನ್ನು ಬೆಂಬಲಿಸುವವರಿಗೆ ಕೂಡ. ಅದೆ ಒಳ್ಳೆಯ ಮಾರ್ಗ.

sudatta's picture

ಡಿ. ಎಸ್ಸೆನ್ ಅವರೇ,
ಕ್ಷಮಿಸಿ. ಎಷ್ಟು ಯೋಚನೆ ಮಾಡಿದರೂ ಗಾಂಧಿವಾದಕ್ಕೂ, ಇಂದಿನ ಭಯೋತ್ಪಾದನೆಗೂ ಸಂಬಂಧ, ಶ್ರಿಂಗೇರಿ ಸ್ವಾಮಿಗಳಿಗು ಈಸ್ಟರ್ ಹಬ್ಬಕ್ಕೂ ಇರುವ ಸಂಬಧದಂತೆ ತೋರುತ್ತಿದೆ.
ಗಮನಿಸಿ, ಕಶ್ಮೀರದ ಗಲಾಟೆ ಇಲ್ಲದಿದ್ದರೂ, ಗೋಧ್ರಾ ಘಟನೆ ಸಂಭವಿಸದೇ ಇದ್ದಿದ್ದರೂ ಈ ಮುಂಬೈ ಘಟನೆ ನಡೆಯುತ್ತಲೇ ಇತ್ತೇನೋ? ಏಕೆಂದರೆ ಪಾಕಿಸ್ತಾನಕ್ಕೆ ಬೇಕಿರುವುದು ನಮ್ಮಲ್ಲಿ ಅಂತರಿಕ ಗೊಂದಲ, ಭಯ ಹಾಗೂ ವಿಭಜನೆ. ಇನ್ನು ಕೋಮು ಘಲಭೆಗಳು ನಾನು ಓದಿ ತಿಳಿದ ಮಟ್ಟಿಗೆ ಗಾಂಧಿಯವರ ಕಾಲದಲ್ಲೂ ನಡೆಯುತ್ತಿತ್ತು. ಜಾತಿಗಳು ಇರುವವರೆಗೆ ಕೋಮು ಘಲಭೆಗಳು ಇದ್ದದ್ದೇ. ಇದು ಜನ ನಿಬಿಡ ನಗರಗಳಲಲ್ಲಿಯಷ್ಟೇ ಅಲ್ಲ, ಅತ್ಯಂತ ಹಿಂದುಳಿದ ಹಳ್ಳಿಗಳಿಗೂ ಸತ್ಯ.
ಇನ್ನು ನಿಮ್ಮ "ಇಂದು ಆಧುನಿಕ ಭಾರತ 'ಪ್ರಗತಿ'ಯ ಹೆಸರಿನಲ್ಲಿ ಚಲಿಸುತ್ತಿರುವ ದಿಕ್ಕಿನಲ್ಲೇ, ಆ ಚಲನೆಯನ್ನು ನಿರ್ದೇಶಿಸುತ್ತಿರುವ ರಾಜಕಾರಣದಲ್ಲೇ ಹಿಂಸೆ ಅಂತರ್ಗತವಾಗಿದೆ. ಅದು ಎಲ್ಲ ರೂಪಗಳ ಮೂಲಕ ಹಾದುಹೋಗಿ ಈಗ ಭಯೋತ್ಪಾದನೆಯ ಅಂತಿಮರೂಪ ತಾಳಿದೆ." ಎನ್ನುವ ವಾಕ್ಯದ ಅರ್ಥ ನನಗೆ ತಿಳಿಯಲಿಲ್ಲ. ನಮ್ಮ ರಾಜಕಾರಣದಲ್ಲಿ ಹಿಂಸೆ ಅಂತರ್ಗತವಾಗಿದೆ ಎನ್ನುವ ಮಾತು ನಿಜ. ಇದು ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. ಆದರೆ ಅವರಿಂದ ನಮ್ಮ ಸಮಾಜದ ಮೇಲೆ ಜರುಗಿದ ಅತ್ಯಾಚಾರಗಳಿಂದ ಈ ಭಯೋತ್ಪಾದನೆ ಹೇಗೆ ಉದ್ಭವಿಸಿದೆ ಎಂದು ತಾವು ತಿಳಿಸಿದರೆ ಒಳ್ಳೆಯದು. ಏಕೆಂದರೆ, ನಮ್ಮ ಸಮಾಜದ ತಪ್ಪುಗಳಿಂದ ಉದ್ಭವವಾದ ನಕ್ಸಲರಿಂದ ಈ ಹಿಂಸೆ ಜರುಗಿಲ್ಲ. ಅಥವಾ ಪಾಕಿಸ್ತಾನಕ್ಕೆ ನಮ್ಮ ಪ್ರಗತಿ ಅರಗಿಸಿಕೊಳ್ಳಲಾಗದಷ್ಟು ವಿಷವಾಗಿ ಅದು ಈ ರೀತಿಯ ಘಟನೆಗೆ ಪ್ರೋತ್ಸಾಹ ನೀಡಿದೆ ಎಂಬುವುದು ನಿಮ್ಮ ವಾದವಾಗಿದ್ದಲ್ಲಿ ಅದು ಖಂಡಿತ ಸರಿ.
ಸೂರಿಯವರು ಕೇಳಿದಂತೆ, ಅಮೇರಿಕಕ್ಕೆ ಏಕೆ ಭಯೋತ್ಪಾದನೆ ತೀರ ತಲೆನೋವಾಗಿ ಪರಿಣಮಿಸಿಲ್ಲ? ಏಕೆಂದರೆ ಅಲ್ಲಿ ಭಯೋತ್ಪಾದಕರನ್ನು ಸಹಿಸಿಕೊಳ್ಳುವ ಮನೋಭಾವನೆ ಇಲ್ಲ. ಪಾಕಿಸ್ತಾನದಲ್ಲಿ ತೀವ್ರ ಭಯೋತ್ಪಾದನೆಗೆ ಅವರ 'ಪ್ರಗತಿ' ಕಾರಣವೇ? ಬಂಡವಾಳಶಾಹಿ ಅಮೇರಿಕದಲ್ಲಿ ನಕ್ಸಲ್ ಸಮಸ್ಯೆ ಏಕಿಲ್ಲ?
ಅಫ್ಜಲ್ ಗುರು ಗಲ್ಲಿಗೆ ಹಾಕುವ ವಿಷಯಕ್ಕೆ ಪತ್ರಕರ್ತ ಜಾವೆದ್ ನಕ್ವಿ ಕೊಟ್ಟ ಸಮರ್ಥನೆ 'ಅವನನ್ನು ಗಲ್ಲಿಗೆ ಹಾಕಿದರೆ ಭಯೋತ್ಪಾದನೆ ಮುಗಿದುಹೋಗುವುದಿಲ್ಲ' ಎಂದು. ಆದರೆ, ಗಲ್ಲಾಗಲೀ, ಜೈಲಾಗಲಿ, ನಮ್ಮ ಸಮಾಜದಲ್ಲಿನ ಸಣ್ಣ ಅಪರಾಧಗಳನ್ನೆ ಹಿಮ್ಮೆಟ್ಟಿಸಲಿಲ್ಲ, ಇನ್ನು ಭಯೋತ್ಪಾದನೆ ನಿಗ್ರಹ ಅಸಾಧ್ಯ. ಆದರೆ ಒಂದು ದೇಶವಾಗಿ ನಾವು ಭಯೋತ್ಪಾದಕರಿಗೆ ಕ್ಷಮೆಯನ್ನೇ ತೋರುತ್ತಿದ್ದರೆ ಅವರ ಧೈರ್ಯ ಹೆಚ್ಚುವುದೇ ವಿನಹ ಕಮ್ಮಿ ಆಗುವ ಸಾಧ್ಯತೆ ನನಗೆ ಕಾಣುತ್ತಿಲ್ಲ.

muralihr's picture

ಎಲ್ಲಾದಕ್ಕೂ ಗಾ೦ಧೀ ಮಾರ್ಗವೇ ಸೂಕ್ತ ಅನ್ನುವುದು ಸರಿಯಲ್ಲಾ.
ಅದೂ ಅಲ್ಲದೇ "ಇಸ್ಲಾ೦ " ಧರ್ಮದ ಹೆಸರಿನಲ್ಲಿ ಮುಸ್ಲಿ೦ ಮ೦ದಿ ಭಯೋತ್ಪಾದನೆ
ಮಾಡುತ್ತಿರುವುದು ಹೊಸತಲ್ಲಾ.ಒ೦ದು ಸಾವಿರ ವರ್ಷ ದಿ೦ದ ಇ೦ತಹ
ದುರ೦ತಗಳು ನಡೆಯುತ್ತಿವೆ. ಹ೦ಪಿ ಕಲ್ಲು ಬ೦ಡೆಗಳು ಹಾಗೂ ದೇಶದ ನೂರಾರು ಮ೦ದಿರಗಳು
ಇದಕ್ಕೆ ಸಾಕ್ಷಿ.
ಎಲ್ಲಾ ದಕ್ಕೂ ಕಾರಣಗಳು ತಿಳಿಯುವುದು ಕಷ್ಟ. ಅದರಲ್ಲಿಯೂ ನೂರಾರು ಮಕ್ಕಳೂ , ಗರ್ಭಿಣಿ ಹೆ೦ಗಸರನ್ನು ಕೊ೦ದು ಓಡುವ ಮ೦ದಿಯ ಬಳಿ ಹೋಗಿ "ನೀನು ಈ ಕೆಲ್ಸವನ್ನು ಮಾಡುವುದಕ್ಕೆ ಕಾರಣವೇನು - ಮಗು ?" ಅನ್ನುವುದು ಎಷ್ಟು ಸೂಕ್ತ.

ಮತ್ತೊ೦ದು ವಿಷಯ ಬಾ೦ಗ್ಲಾ ಯುದ್ಧವಾದಾಗ ಪಕ್ಕಾ ಗಾ೦ಧೀ ವಾದಿಯಾದ ಜಯಪ್ರಕಾಶ್ ನಾರಾಯಣ್ ಕೂಡ ಅ೦ದು ಯುದ್ಧಕ್ಕೆ ಸಮ್ಮತಿಯನ್ನು ಕೊಟ್ಟಿದ್ದರು. ಆದರೆ ಇ೦ದು ಯುದ್ದವನ್ನು ಹೇರುವುದು ಅಷ್ಟು ಸೂಕ್ತವೆನ್ನಿಸುವುದಿಲ್ಲಾ.
ಅಸ್ಪಷ್ಟವಾಗಿ ಸುತ್ತಿ ಸುತ್ತಿ ಅಡ್ಡಾಡುವ ನಿಮ್ಮ ವಿಚಾರ ಲಹರಿ ಓದುವುದಕ್ಕೆ ಕಷ್ಟವಾಗಿದೆ.
ಓದುಗರ ಮೇಲೆ ದಯಮಾಡಿ ಸ್ವಲ್ಪ ತಿಳಿಯಾಗಿ ಬರೆಯಿರಿ.

manju mysooru's picture

ಇಸ್ಲಾಮ್ , ನಕ್-ಸಲ್, ಕಮ್ಯುನಿಸ್ಟ್, ಮತಾಂಧ ಕ್ರಿಸ್ತರನ್ನು, ಸಮಾಜವಾದಿಗಳನ್ನು ಪ್ರಶ್ನಿಸುವುದು ಅನೈತಿಕವಾಗುತ್ತದೆ. ಅವರ ನಂಬಿಕೆಗಳು, ಮೂಲ ಉದ್ದೇಶಗಳು ಕಾಲಕ್ಕೆ ತಕ್ಕಂತೆ ಬದಲಾಗದೆ, ಹಳೇ ತತ್ವಕ್ಕೆ ಜೋತುಬಿದ್ದಿರಲು ಮತ್ತು ಅದರಂತೆ ನಡೆಯಲು ಅವರಿಗೆ ಮಾತ್ರ ಅRಹತೆ ಇದೆ.

ದಯಾನಂದ ಸರಸ್ವತಿ, ವಿವೇಕಾನಂದ, ಪರಮಹಂಸ, ಮೋಹನ್ ರಾಯ್, ಯೋಗಿ ಅರವಿಂದರು, ಭಾರತದ ಹುಳುಕುಗಳನ್ನು ಕಂಡುಹಿಡಿದು, ಅವುಗಳನ್ನು ಪರಿಹರಿಸಲು ಪ್ರಯತ್ನಿಸ್ಸಿದ್ದು ನಗಣ್ಯ. ಆದರೆ ಕೆಲವು 'ಇಸಮ್' ಗಳ ಗುರಿ - ಹಿಂದೂ ಸಮಾಜವನ್ನು ಎಲ್ಲದಕ್ಕೂ ದೂಷಿಸುವುದು. ಆದರೆ ನಮ್ಮ ದೇಶದ ಸಂಸ್ಕ್ಿತಿಗಳಲ್ಲಿ ಆಗಿರುವಷ್ಟು ಸುಧಾರಣೆ, refinement ಬೇರೆ ಎಲ್ಲೂ ಆಗಿಲ್ಲ ಎನ್ನುವುದು ಇವರ ಕಣ್ಣಿಗೆ ಕಾಣುವುದಿಲ್ಲ.

ಮೂಲವಾಗಿ ಇವರೆಲ್ಲ 'spin master'ಗಳು - ವಿತಂಡವಾದ ಮಾತ್ರ ಇವರಿಗೆ ತಿಳಿಯುವುದು. ಇದರ ಒಂದು ಭಾಗ 'ಹಿಂದೂ' ಪದದ ಮೂಲ, ಎಲ್ಲ ದೋಷಗಳು 'ಬ್ರಾಹ್ಮಣಿರಿಂದಲೇ ಬಂದಿದ್ದು', ಹಿಂದೂ ದೇವರುಗಳು ಮಾತ್ರ 'ಮೌಡ್ಯತೆಯ ಸಂಕೇತ' - ಅಲ್ಲಾ, ಜೀಸಸ್' ಹೇಳಿದ್ದನ್ನು ಪ್ರಶ್ನಿಸ್ಸುವಂತಿಲ್ಲ...

ಸುಧಾರಣೆ ಎಲ್ಲವೂ ಸರ್ಕಾರ ಮಾಡಬೇಕು - ತಾವುಗಳೇ 'entrepreneur' ಗಳಾಗಿ, NGO ಗಳನ್ನು ನಡೆಸಿ, ಉತ್ತಮ ಕೆಲಸ ಮಾಡುವುದನ್ನು ಬಿಟ್ಟು, ಎಲ್ಲರನ್ನೂ ದೂಷಿಸುವುದಷ್ಟೇ ಇವರಿಗೆ ತಿಳಿದಿರುವುದು. 'ನುಡಿದಂತೆ ನಡೆ' ಅನ್ನೋದು ಇವರಿಗೆ ಮಾತ್ರ ಅನ್ವ್ಯಿಸುವುದಿಲ್ಲ. ಕತೆ, ಕಾದಂಬರಿಗಳಲ್ಲಿ, ಲೇಖನಗಳಲ್ಲಿ 'ಎಲ್ಲದಕ್ಕೂ 'xxx' ಕಾರಣ' ಅಂತ ಬರೆಯೋದ್ ಬಿಟ್ರೆ , positive ಆಗಿ ಸಮಾಜಕ್ಕೆ ಏನು ಮಾಡಿದ್ದಾರೆ?

ಇವರಂತೆ ಸುತ್ತಿ ಬಳಸಿ ಹೇಳದೇನೆ, ಇವರ ಬಗ್ಗೆ ಹೇಳಲು ಸಾಕಷ್ಟಿದೆ.....

D.S.NAGABHUSHANA's picture

ನಿಮ್ಮ ಪ್ರತಿಕ್ರಿಯೆಯೆಯೂ ನನಗೆ ಅಸ್ಪಷ್ಟವಾಗಿಯೇ ಉಳಿದಿದೆ. ಹಾಗಾಗಿ ಏನೂ ಹೇಳಲಾರೆ, ಕ್ಷಮಿಸಿ.
--ಡಿ.ಎಸ್.ನಾಗಭೂಷಣ.

D.S.NAGABHUSHANA's picture

ಮೇಲಿನದು ಮುರಳಿ ಅವರಿಗೆ ನೀಡಿದ ಪ್ರತಿಕ್ರಿಯೆ!

vinayudupa's picture

ಈಗ ಬುದ್ದಿಜೀವಿಗಳು "ಬರೀ" ಹಿಂದೂ ಸಮಜದಲ್ಲಿರೋ ಕುಂದು ಕೊರತೆಗಳನ್ನ ಎತ್ತಿ ತೋರಿಸೋ ಹಾಗೆ ಮುಸ್ಲಿಂ ಸಮಾಜದ ವಿದ್ಯಾವಂತರು ಇಸ್ಲಾಂನಲ್ಲಿರುವ ಕಾನೂನುಗಳಲ್ಲಿ ಸರಿ-ತಪ್ಪುಗಳನ್ನು ಮುಕ್ತವಾಗಿ ಚರ್ಚೆ ಮಾಡೋ ಧೈರ್ಯ ಮಾಡಬೇಕು. ಇತರರು ಹೇಳಿದರೆ ನಿಂದೆಯ ರೂಪ ಪಡೆಯೋ ಸಾಧ್ಯತೆಯೇ ಹೆಚ್ಚು. ಹಾಗೇ ಇಸ್ಲಾಂ ಇತರರಿಗೆ ಸ್ವಲ್ಪ ಮಟ್ಟಿಗೆ ಪಾರದರ್ಶಕವಾಗಬೇಕು. ಧರ್ಮಗುರುಗಳು ಹೇಳಿದ್ದೆಲ್ಲ ಸರಿ ಎನ್ನದೆ, ನಾನು ಭಾರತೀಯ, ನನ್ನ ದೇಶದಲ್ಲಿ ನಾನು ಹೆದರೋ ಅಗತ್ಯ ಇಲ್ಲ. ನಾನು ಮಾಡೋ ಕೆಲಸದಿಂದ ದೇಶಕ್ಕೆ ಕೆಡುಕಾಗಬಾರದು ಅನ್ನೋ ಪ್ರಜ್ಞೆ ಬೆಳೀಬೇಕು. ಕೆಲ ಹಿಂದೂ ಮುಖಂಡರ ಅಭಿಪ್ರಾಯಗಳನ್ನ ಕಡೆಗಣಿಸಿ ತಮ್ಮ ಕೆಲಸಗಳಿಂದ ಉತ್ತರ ನೀಡಬೇಕು. ಮುಸ್ಲಿಮರೆಂದರೆ ಬರೀ ಭಯೋತ್ಪಾದನೆ ಅನಿಸುವನ್ತಾಗದೆ ಸಾಹಿತಿಗಳು, ವಿಜ್ಞಾನಿಗಳು, ಮತ್ತಿತರ ಉನ್ನತ ಹುದ್ದೆಗಳನ್ನ ಅಲಂಕರಿಸೋ ಎತ್ತರಕ್ಕೆ ಬೆಳೀಬೇಕು. ಹಲವರಲ್ಲಿರುವ, "ಮುಸ್ಲಿಮರೆಲ್ಲ ಧರ್ಮಕ್ಕಾಗಿ ಏನಾದರೂ ಮಾಡಲು ಸಿದ್ದರಿರುವವರು" ಎನ್ನುವ ಭಾವನೆ ಅಳಿಯಬೇಕು.

ಈ ಬೇಕುಗಳ ಪಟ್ಟಿ ಬೆಳೀತಾನೆ ಹೋಗುತ್ತೆ ಅನ್ಸುತ್ತೆ. :-(

ಆದರೆ ಇದ್ದಗದೆ ಉಗ್ರರನ್ನ ಭಾರತೀಯರೆಲ್ಲ ಒಂದಾಗಿ ಎದುರಿಸೋದು ಕನಸಿನ ಮಾತು. ಆಯುಧದಿಂದ ಎದುರಿಸದೆ ದಾರಿಯಿಲ್ಲ ಅನ್ನಿಸುತ್ತೆ
:-(

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

Rakesh Shetty's picture

ನಾಗಭೂಷಣ್

@"ಪಾಕಿಸ್ತಾನದ ನಾಶಕ್ಕೆ ಕರೆ, ಎಕೆ-47 ಬಂದೂಕು ಇತ್ಯಾದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಅನುಮತಿ ನೀಡುವಂತೆ ಖಾಸಗಿ ಕಂಪನಿಗಳು ಇಡಲಾರಂಭಿಸಿರುವ ಬೇಡಿಕೆ ಇತ್ಯಾದಿಗಳು ಇದಕ್ಕೆ ಉದಾಹರಣೆಗಳಷ್ಟೆ. ಇವು ಭಯೋತ್ಪಾದನೆ ಹೊಸ ಹೊಸ ರೂಪಗಳನ್ನು ತಾಳಿ ಮತ್ತು ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತವಷ್ಟೆ."

ಅಂದರೆ ಪಾಕಿಸ್ತಾನವೆಂಬ ದುಷ್ಟ ರಾಷ್ಟ್ರದೊಂದಿಗೆ ಸ್ನೇಹ ಮಾಡಬೇಕೆ? ಇವರು ಸ್ನೇಹಕ್ಕೆ ಅರ್ಹರಾ? ಅಲ್ಲ ಸರ್, ನಗರಗಳು ವೇಗವಾಗಿ ಬೆಳೆಯುವುದಕ್ಕೂ, ಭಯೋತ್ಪಾದನೆಗೂ ಸಂಬಂದ ಕಲ್ಪಿಸುತ್ತಿರಲ್ಲ, ಒಪ್ಪೋಣ , ನಾವು ಜಾಗರೂಕರಾಗಿಲ್ಲ ಅಂತ , ಆದರೆ ನಿಮ್ಮೊಳಗಿನ ಸೆಕ್ಯುಲರ್ ಲೇಖಕ ಎದ್ದು ಕಾಣುತ್ತಾನೆ, ನಿಮ್ಮ ಇಡಿ ಲೇಖನದುದ್ದಕ್ಕೂ ಪಾಕಿಗಳ ಬಗ್ಗೆ , ಅವರ ದ್ರೋಹದ ಬಗ್ಗೆ ಚಕಾರವಿಲ್ಲ, ಅಲ್ವಾ!!

ರಾಕೇಶ್ ಶೆಟ್ಟಿ

roopablrao's picture

ಚಿಂತಕರಿಂದ ಪಾಕಿಗಳ ವಿರುದ್ಧ ಲೇಖನವನ್ನು ನಿರೀಕ್ಶಿಸುವಂತಿಲ್ಲ ರಾಕೇಶ
ಇದು ರೂಲ್ ನಂ ೧ ಮತ್ತು ಕಡೆಯದೂ ಆಗಿದೆ
http://thereda-mana....

ರೂಪ

uniquesupri's picture

ಪಾಕಿಸ್ತಾನದಲ್ಲಿಯೂ ನಮ್ಮ ನಿಮ್ಮಂತಹ ‘ಅಮಾಯಕ’, ‘ಬಸ್ಸು, ರೈಲುಗಳಲ್ಲಿ ಹತ್ತಲು, ಹೊಟೇಲುಗಳಲ್ಲಿ ಇಳಿದುಕೊಳ್ಳಲು ಹೆದರುವ’ ಸಾಮಾನ್ಯ ಜನರಿದ್ದಾರೆ. ಅವರು ತಮ್ಮ ದೇಶದಲ್ಲಿ ರಾಜಕೀಯ ಭದ್ರತೆಯನ್ನು ತರುವುದಕ್ಕೆ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ. ಅವರ ಬಗ್ಗೆ ಸಹಾನುಭೂತಿಯಿರಲಿ. ಯುದ್ಧದಲ್ಲಿ ಹಾಳಾಗುವುದು ಪ್ರಜಾಪ್ರಭುತ್ವಕ್ಕಾಗಿ ಅವರು ನಡೆಸುತ್ತಿರುವ ಪ್ರಯತ್ನಗಳು. ಸದೃಢವಾದ ಪ್ರಜಾಸತ್ತಾತ್ಮಕ ಪಾಕಿಸ್ತಾನ ಕಟ್ಟಿಕೊಳ್ಳಲು ಅವರಿಗೆ ನೆರವಾಗಬೇಕಾದ್ದು ಅಮೇರಿಕಾ, ಭಾರತ ಹಾಗೂ ಜಗತ್ತಿನ ಜವಾಬ್ದಾರಿ ಹಾಗೂ ಅದೊಂದೇ ಪಾಕಿಸ್ತಾನದ ನೆಲದಿಂದ ಹುಟ್ಟಿರುವ ಭಯೋತ್ಪಾದನೆಗೆ ಇರುವ ಪರಿಹಾರ.
ಅಮೇರಿಕಾದ ಈ ಹುಮ್ಮಸ್ಸನ್ನು, ಅತ್ಯುತ್ಸಾಹವನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕು ಅನ್ನಿಸುತ್ತದೆ. ಏಕೆಂದರೆ ತಾಲಿಬಾನ್, ಬಿನ್ ಲ್ಯಾಡನ್‌ರನ್ನು ಸೋವಿಯತ್ ಒಕ್ಕೂಟದ ವಿರುದ್ಧ ಹುಟ್ಟುಹಾಕಿದ್ದು ಅಮೇರಿಕಾ. ಜಗತ್ತಿನಲ್ಲಿ ಎಲ್ಲೇ ಯುದ್ಧವಾಗಲಿ, ಲಾಭವಾಗುವುದು, ಹಣ ಗಳಿಸುವುದು ಅಮೇರಿಕಾ ಹಾಗೂ ಯುರೋಪಿನ ಶಸ್ತ್ರಾಸ್ತ್ರ ಕಂಪೆನಿಗಳು. ಭಾರತ ಪಾಕಿಸ್ತಾನದ ನಡುವಿನ ಸಂಬಂಧ ಸರಿಮಾಡಲಾಗದಷ್ಟು ಹದಗೆಟ್ಟರೆ ಇರಾನಿನಿಂದ ಬರಲಿರುವ ಗ್ಯಾಸ್ ಪೈಪ್ ಲೈನ್ ಯೋಜನೆ ರದ್ದಾಗುತ್ತದೆ ಭಾರತದ ಶಕ್ತಿಯ ಮೂಲಕ್ಕಾಗಿ ಅಮೇರಿಕಾದ ಅಣುಶಕ್ತಿಯ ಮೇಲೆ ಮತ್ತಷ್ಟು ಅವಲಂಬಿತವಾಗಬೇಕಾಗುತ್ತದೆ.
ಹೀಗಾಗಿ ಪಾಕಿಸ್ತಾನವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಯೋತ್ಪಾದಕರನ್ನು ನಿಗ್ರಹಿಸಲು ಯೋಜನೆ ರೂಪಿಸಬೇಕು. ನಮ್ಮ ರಾಜತಾಂತ್ರಿಕರು ಹಾಗೂ ಪಾಲಿಸಿ ರೂಪಿಸುವವರು ಪಾಕಿಸ್ತಾನವನ್ನು ಇವಿಲ್ ರಾಷ್ಟ್ರವಾಗಿ ಕಾಣುವ ಬೇಜವಾಬ್ದಾರಿ ತೋರಿಸಲಾರರು ಎಂದು ಆಶಿಸೋಣ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

Rakesh Shetty's picture

ಸುಪ್ರೀತ್

@"ಪಾಕಿಸ್ತಾನದಲ್ಲಿಯೂ ನಮ್ಮ ನಿಮ್ಮಂತಹ ‘ಅಮಾಯಕ’, ‘ಬಸ್ಸು, ರೈಲುಗಳಲ್ಲಿ ಹತ್ತಲು, ಹೊಟೇಲುಗಳಲ್ಲಿ ಇಳಿದುಕೊಳ್ಳಲು ಹೆದರುವ’ ಸಾಮಾನ್ಯ ಜನರಿದ್ದಾರೆ. ಅವರು ತಮ್ಮ ದೇಶದಲ್ಲಿ ರಾಜಕೀಯ ಭದ್ರತೆಯನ್ನು ತರುವುದಕ್ಕೆ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದಾರೆ."
ಅವರು ಎಷ್ಟು ಕಷ್ಟ ಪಟ್ಟರು, ಉಗ್ರರ ದಮನವಾಗದೆ, ಅಲ್ಲಿ ಪ್ರಜಾಪ್ರಭುತ್ವ ಬರಲು ಸಾದ್ಯವೇ ಇಲ್ಲ. ಅಲ್ಲಿ ಸರ್ಕಾರದ ಆಡಳಿತ ಇರುವುದು ಜನ ಪ್ರತಿನಿದಿಗಳ ಬಳಿ ಅಲ್ಲ, ISI ಹಾಗೂ ಮಿಲಿಟರಿ ಬಳಿ ಅನ್ನುವುದು ನಿನಗೆ ತಿಳಿದಿರುತ್ತೆ ಅಂದುಕೊಂಡಿದ್ದೇನೆ, ಯುದ್ದ ಪಾಕಿಗಳ ಮೇಲೆ ಅಲ್ಲಪ್ಪಾ , ಅಲ್ಲಿರುವ ಉಗ್ರರ ನೆಲೆ ಮೇಲೆ.

ರಾಕೇಶ್ ಶೆಟ್ಟಿ

D.S.NAGABHUSHANA's picture

ಮುಂಬೈ ದಾಳಿಯಂತಹ ಭಯೋತ್ಪಾದನೆಯ ಪ್ರಕರಣಗಳಿಗೆ ಕಾರಣಗಳೇನು ಮತ್ತು ಅವನ್ನು ನಿರ್ಮೂಲನ ಮಾಡುವ ಬಗೆ ಹೇಗೆ ಎಂಬುದು ನನ್ನ ಲೇಖನದ ಮುಖ್ಯ ಕಾಳಜಿಯಾಗಿದೆಯೇ ಹೊರತು, ರಾಜಕೀಯ ದೂಷಣೆಯಲ್ಲ. ಇದು ಜಾಗತಿಕ ಮಟ್ಟದ ಮುಸ್ಲಿಂ ಮತಾಂಧರ ಭಯೋತ್ಪಾದನೆ ಎಂಬುದು ಸ್ಪಷ್ಟವಿರುವಾಗ, ಸ್ಪಷ್ಟವಾಗಿರುವುದನ್ನು ಮತ್ತೆ ಮತ್ತೆ ಹೇಳುವುದು ಮಾನಸಿಕ ತೊಂದರೆಯ ಲಕ್ಷಣವಾಗುತ್ತದಷ್ಟೆ. ಮನೆಗೆ ಕಳ್ಳ ನುಗ್ಗಿದಾಗ ಬರೀ ಮಾನಸಿಕ ತ್ರಪ್ತಿಗಾಗಿ ಕಳ್ಳನನ್ನು ಬೈಯುತ್ತಾ ಕೂರುತ್ತೀರೋ, ಅಥವಾ ಕಳ್ಳನನ್ನು ಎದುರಿಸುವ ಸಿದ್ಧತೆಗೆ ತೊಡಗುತ್ತೀರೋ? ದಯವಿಟ್ಟು ಎಲ್ಲ ಪೂರ್ವಾಗ್ರಹ ತೊರೆದು ಲೇಖನ ಓದಿರಿ.
-ಡಿ.ಎಸ್.ನಾಗಭೂಷಣ

bhasip's picture

ರಾಜಕೀಯ ದೂಷಣೆ ಕಾರಣ ಅಲ್ಲವಾಗಿದಲ್ಲಿ ಮೋದಿ ಹೆಸರು ಈ ಲೇಖನದಲ್ಲಿ ಕಾಣಿಸಿಕೊಳ್ಳಲು ಕಾರಣ?

ಭಯೋತ್ಪಾದಕರನ್ನ ನಿನು ಭಯೋತ್ಪಾದಕ ಅಂದರೆ ಯಾವ ರೀತಿ ಮಾನಸಿಕ ತೊಂದರೆ ಆಗುತ್ತದೆ? ಭಯೋತ್ಪಾದಕರು ಮಾಡುತ್ತಿರುವುದೇ ಅನ್ಯಾಯ, ಇನ್ನು ಅವರ ಬಗ್ಗೆ ಕರುಣೆ ಮರುಕ ಯಾಕೆ? ಮನೆಗ್ ಕಳ್ಳ ನುಗ್ಗಿದಾಗ ಬರೀ ಎದುರಿಸುವ ಸಿದ್ದತೆ ಮಾಡಿ ಕೊಂಡರಷ್ಟೆ ಸಾಲದು, ಅವನು ಜೀವನದಲ್ಲಿ ಕಳ್ಳತನಕ್ಕೆ ಇಳಿಯಬಾರದು ಆ ರೀತಿ ಪಾಠ ಕಲಿಸಬೇಕು. ಇದು ಬಿಟ್ಟು ತಾವು ಹೇಳಿದಂತೆ ಪಾಕೀಸ್ಥಾನದ ಜೊತೆ ಮಾತುಕ ತೆಗೆ ಕೂತರೆ, ಕಳ್ಳನನ್ನು ಪಕ್ಕದಲ್ಲಿ ಕೂರಿಸಿಕೊಂಡು, ಮನೆಯ ಎಲ್ಲಾ ತಿಜೋರಿ ಬೀಗದ ಕೈ ಅವನಿಗೆ ಕೊಟ್ಟು , ನೋಡಪ್ಪ ಕಳ್ಳತನ ಮಹಾಪಾಪ, ಮಾಡಬೇಡ, ಹೊರಟು ಹೋಗು ಅಂತ ಬುದ್ದಿವಾದ ಹೇಳುತ್ತಾ ಕೂತಂತೆ, ಅಕಸ್ಮಾತ್ ಆತ ಇನ್ನು ಹಲ್ಲೆ ಮಾಡದೆ ಬಿಟ್ಟಿದ್ದರೆ. ನೀವೆ ಹೇಳಿದ "ಜಾಗತಿಕ ಮುಸ್ಲೀಮ್ ಮತಾಂದ ಭಯೋತ್ಪಾದಕ" ಗನ್ ಹಿಡಿದು ನಿಮ್ಮ ಮುಂದೆ ನಿಂತರೆ, ತಪ್ಪಿಸಿ ಕೊಳ್ಳಲು ಪ್ರಯತ್ನಿಸುತ್ತೀರೋ ಇಲ್ಲ ಅವನನು ಪಕ್ಕದಲ್ಲಿ ಕೂರಿಸಿ ಬುದ್ದಿವಾದ ಹೇಳುತ್ತೀರೊ?

ನಿಮಗೆ ಅಷ್ಟು ಕಾಳಜಿ ಇದ್ದಲ್ಲಿ, ನೀವೆ ಹೇಳಿದಂತೆ "ಜಾಗತಿಕ ಮುಸ್ಲಿಂ ಮತಾಂಧ ಭಯೋತ್ಪಾದನೆ", ಹಾಗು ಅದಕ್ಕೆ ಸಹಕರಿಸುತ್ತಿರುವವರು, ಅದನ್ನು ಬೆಂಬಲಿಸುತ್ತಿರುವವರು ಇದರ ಬಗ್ಗೆ ಬುದ್ದಿ ಹೇಳಿ ಲೇಖನ ಬರೆಯಿರಿ. ಹಾಗೆಯೆ ಈ "ಜಾಗತೀಕ ಮುಸ್ಲಿಂ ಮತಾಂಧ ಭಯೋತ್ಪಾದನೆ"ಯನ್ನು ಖಂಡಿಸುತಿರುವವರನ್ನು ಬೆಂಬಲಿಸಿ. ಆಗ ನಿಮ್ಮ ಉದ್ದೇಶ ಸಫಲವಾದೀತು.

manju mysooru's picture

ಸಮಾಜವಾದಿ, ಬುದ್ಧಿಜೀವಿಗಳಿಗೆ 'spin masters' ಅಂತ ಕಾರಣ ಇಲ್ಲದೆ ಹೆಸರು ಇಟ್ಟಿಲ್ಲ ನಮ್ಮ ಜನ ಅನ್ನೋದನ್ನ ಪ್ರೂವ್ ಮಾಡಿದೀರ.

prasca's picture

ಮುಸ್ಲಿಂ ತಪ್ಪುಗಳನ್ನು ಎತ್ತಿ ತೋರಿಸಲು ಹೊರಟ ಲಜ್ಜಾ ಲೇಖಕಿಗಾದ ಗತಿ ನಮ್ಮ ಬುದ್ದಿಜೀವಿಗಳಿಗೂ ಆದಾಗಲೆ ಬಹುಶಃ ಇವರಿಗೆಲ್ಲ ಅರಿವಾಗುವುದು

roopablrao's picture

"ಇದರ ಈ ಭಂಡ ಧೈರ್ಯ, ಸುಯೋಜಿತ ರೀತಿ ನೀತಿ, ಶಸ್ತ್ರಾಸ್ತ್ರ ಪರಿಣಿತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇದರ ಛಲವನ್ನು ಗಮನಿಸಿ, ಈ ರುದ್ರ ಕಾರ್ಯಾಚರಣೆಯ ಹಿಂದೆ ಅಲ್ ಖೈದಾದ ಸ್ಫೂರ್ತಿ ಇದೆ, ಲಷ್ಕರ್ ತೊಯ್ಬಾದ ತರಬೇತಿ ಇದೆ ಮತ್ತು ಕೆಲವು ಪಾಕಿಸ್ತಾನಿ ಶಕ್ತಿಗಳ ಬೆಂಬಲವಿದೆ ಎಂದು ಸಂಶಯಿಸಲಾಗುತ್ತಿದೆ. ಆದರೆ ಯಾವುದೂ ಇನ್ನೂ ಖಚಿತವಿಲ್ಲ. ಐದು ಸಾವಿರ ಜನರನ್ನು ಕೊಲ್ಲುವ ಉದ್ದೇಶದಿಂದ ಸಾಕಷ್ಟು ಶಸ್ತ್ರಸಜ್ಜಿತವಾಗಿ ಬಂದಿತ್ತೆಂದು ಹೇಳಲಾದ ಈ ಗುಂಪು, ನಗರದೆಲ್ಲಡೆ ರಕ್ತದ ಕೋಡಿ ಹರಿಸುವ ಮುನ್ನ ಅದರ ಬೆನ್ನು ಮುರಿದ ನಮ್ಮ ಯೋಧರಿಗೆ ಇಡೀ ದೇಶ ಕೃತಜ್ಞವಾಗಬೇಕಿದೆ. ಈ ವೀರ 'ಯೋಧ'ರಲ್ಲಿ ಒಬ್ಬರಾದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ, ಇತ್ತೀಚೆಗೆ ಹಿಂದೂವಾದಿ ಗುಂಪುಗಳ ಭಯೋತ್ಪಾದನೆಯ ತನಿಖೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಗುಂಪುಗಳಿಂದ ತೀವ್ರ ಅಪಪ್ರಚಾರಕ್ಕೆ ಮತ್ತು ಕೊಲೆ ಬೆದರಿಕೆಗಳಿಗೆ ಈಡಾಗಿದ್ದರು ಎಂಬುದನ್ನೂ ಗಮನಿಸಬೇಕಿದೆ. ಈ ಹಿನ್ನೆಲೆಯಲ್ಲಿ, ಈ ದಾಳಿಯ ಸಂದರ್ಭವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲು ಮುಂಬೈಗೆ ಬಂದಿಳಿದ ನರೇಂದ್ರ ಮೋದಿ ಈ ಯೋಧರಿಗಾಗಿ ಪ್ರಕಟಿಸಿದ ಬೃಹತ್ ಪರಿಹಾರ ಮೊತ್ತವನ್ನು ಸ್ವೀಕರಿಸಲು ಕರ್ಕರೆಯವರ ಪತ್ನಿ ನಿರಾಕರಿಸುವುದು ಸಹಜವೇ ಆಗಿದೆ"

ಇದರ ಅರ್ಥ ಮುಂಬೈ ಧಾಳಿ ಹಿಂದೂ (ಹಿಂದೂ ಉಗ್ರವಾದಿ (ಇದ್ದರೆ?))ಗಳೇ ಮಾಡಿದ್ದೇ ?

ಆಯ್ತು ಬಿಡಿ :)

ಮೊದಲು ಹಿಂದೂಗಳನ್ನೆಲ್ಲ ಗುಂಡಿಟ್ಟು ಕೊಂದರೆ ಪಾಕಿಗಳಿಂದ ಅವರ ಪರವಾಗಿ ಮಾತಾಡುವ ಕೆಲವು ಟಾಕೀಗಳಿಂದ. ನಮ್ಮ ದೇಶ ಉದ್ದಾರಾವಾದೀತೇನೋ ನೋಡೋಣ

http://thereda-mana....

ರೂಪ

Rakesh Shetty's picture

ಸರಿಯಾಗಿ ಹೇಳಿದ್ರಿ ರೂಪಕ್ಕ

@"ಪಾಕಿಸ್ತಾನ ಸರ್ಕಾರ ಕೂಡ ನಮ್ಮ ಸರ್ಕಾರದಂತೆಯೇ ಮತೀಯ ಮೂಲಭೂತವಾದಿ ಗುಂಪುಗಳ ಭಯೋತ್ಪಾದನೆಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ ಮತ್ತು ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವಿರುತ್ತದೆ ಎಂದು ನಂಬುವುದೂ ತಪ್ಪಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು"

ಭಾರತದಲ್ಲಿ ಮೂಲಭೂತವಾದ ಅನ್ನುವುದೆನಾದರು ಇದ್ದರೆ , ಅದು ಈ ಸೆಕ್ಯುಲರ್ ಹಾಗು ಬುದ್ದಿಜೀವಿಗಳಿಂದ ಮಾತ್ರ. ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡ ಇರುವುದಿಲ್ಲವಾ? ಸರ್ , ನಿಮ್ಮಂತಹ ಹಿರಿಯರಿಂದ ಇಂತ ಮಾತುಗಳನ್ನು ನಿರೀಕ್ಷಿಸಿರಲಿಲ್ಲ, ಸರ್ಕಾರದ ಗಮನಕ್ಕೆ ಬಾರದಂತೆ ಅದೇ ಸರ್ಕಾರದ ಅಧಿಕಾರಿಗಳು ತರಬೇತಿ ಕೊಡುತ್ತಾರೆಯೇ?, ಮಾತಿನಲ್ಲಿ ಮ್ಯಾಜಿಕ್ ಜೊತೆಗೆ ಸ್ವಲ್ಪ ಲಾಜಿಕ್ ಸೇರಿಸಿ ಬರೆಯಿರಿ.

ರಾಕೇಶ್ ಶೆಟ್ಟಿ

manju mysooru's picture

ಇವರುಗಳು ಬೆಂಬಲಿಸುವ naxala ರ ಇತ್ತೀಚಿನ ಹಲ್ಲೆಯ ಬಗ್ಗೆ ಕೇಳಿ ನೋಡಿ - ಅದು 'ಹಕ್ಕಿಗಾಗಿ ಹೋರಾಟ' ಅಂತ ಬೊಬ್ಬಿಡುತ್ತಾರೆ. ಆಗ ಅಹಿಂಸೆ, ಗಾಂಧಿವಾದ, ಸಮಾಜವಾದದ ನಂಬಿಕೆ, ಸಂವಿಧಾನ ಎಲ್ಲವೂ ಸತ್ತು, ಕೊಳೆತು ಮಲಗಿರುತ್ತದೆ.

prasca's picture

ನಕ್ಸಲರದ್ದು ಹಕ್ಕಿಗಾಗಿ ಹೋರಾಟ ಪಾಕಿಸ್ಥಾನಿಯರದ್ದು ಕಾಶ್ಮೀರದಲ್ಲಿ ಸ್ವಾತಂತ್ರಕ್ಕಾಗಿ, ಭಾರತದಲ್ಲಿ ಹಿಂದೂಗಳದ್ದು ಹಿಂಸೆ ಕೋಮುವಾದ ಎನ್ನುವ ಈ ಅಕ್ಷರ ಭಯೋತ್ಪಾದಕರನ್ನು ಮೊದಲು ನಾವು ಮಟ್ಟ ಹಾಕಬೇಕಾಗಿದೆ.

uniquesupri's picture

>>> ನಕ್ಸಲರದ್ದು ಹಕ್ಕಿಗಾಗಿ ಹೋರಾಟ ಪಾಕಿಸ್ಥಾನಿಯರದ್ದು ಕಾಶ್ಮೀರದಲ್ಲಿ ಸ್ವಾತಂತ್ರಕ್ಕಾಗಿ, ಭಾರತದಲ್ಲಿ ಹಿಂದೂಗಳದ್ದು ಹಿಂಸೆ ಕೋಮುವಾದ ಎನ್ನುವ ಈ ಅಕ್ಷರ ಭಯೋತ್ಪಾದಕರನ್ನು ಮೊದಲು ನಾವು ಮಟ್ಟ ಹಾಕಬೇಕಾಗಿದೆ.

ಹೇಗೆ ಮಟ್ಟ ಹಾಕಬಹುದು? ಸಲಹೆ ಕೊಡಿ...
ಗ್ಯಾಸ್ ಚೇಂಬರಿಗೆ ನೂಕುವುದೇ, ಗುಂಡಿಕ್ಕುವುದೇ, ನೇಣಿಗೆ ಹಾಕುವುದೇ, ನಾಲಿಗೆ ಕತ್ತರಿಸುವುದೇ, ಕಲ್ಲು ಹೊಡೆದು ಕೊಲ್ಲುವುದೇ? ಹೇಗೆ? ದಯವಿಟ್ಟು ತಮ್ಮ ಅಮೂಲ್ಯ ಚಿಂತನೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

bhasip's picture

"ಹೇಗೆ ಮಟ್ಟ ಹಾಕಬಹುದು? ಸಲಹೆ ಕೊಡಿ...
ಗ್ಯಾಸ್ ಚೇಂಬರಿಗೆ ನೂಕುವುದೇ, ಗುಂಡಿಕ್ಕುವುದೇ, ನೇಣಿಗೆ ಹಾಕುವುದೇ, ನಾಲಿಗೆ ಕತ್ತರಿಸುವುದೇ, ಕಲ್ಲು ಹೊಡೆದು ಕೊಲ್ಲುವುದೇ? ಹೇಗೆ?"

ಬಹುಶಃ ಈ ಎಲ್ಲಾ ವಿಧಾನಗಳು "ಇಸಂ"ಗಳ ವಿಧಾನಗಳಿರಬಹುದು.

ಈ ರೀತಿ ಅಕ್ಶರ ಭಯೋತ್ಪಾದಕರನ್ನು ಮಟ್ಟ ಹಾಕಲು, ಬೇರೆ ಹಲವಾರು ವಿಧಾನಗಳಿವೆ. ಆವರ ಔಷದದ ಶುಷುಷ್ರೆ ಅವರಿಗೇ ಕೊಡಬೇಕು.

D.S.NAGABHUSHANA's picture

ನಿಮ್ಮ ಆಧಾರ ರಹಿತ ಉದ್ವಿಗ್ನ ಪ್ರತಿಕ್ರಿಯೆಯನ್ನು ನೋಡಿದರೆ, ಕೊಳೆತು ಮಲಗಿರುವುದು ಅಪಪ್ರಚಾರವನ್ನೇ ಕಸುಬಾಗಿಸಿಕೊಂಡಿರುವ ಕೆಲವು ಮನಸ್ಸುಗಳು ಎಂಬುದು ಸ್ಪಷ್ಟವಾಗುತ್ತದೆ.
-ಡಿ.ಎಸ್.ನಾಗಭೂಷಣ

D.S.NAGABHUSHANA's picture

ಇದು ಮಂಜು ಮೈಸೂರ್ ಅವರ ಮಾತುಗಾಳಿಗೆ ನೀಡಿರುವ ಪ್ರತಿಕ್ರಿಯೆ.

manju mysooru's picture

ಹೌದು. ಪ್ರಪಂಚದಲ್ಲಿ ನೀವು ಹೇಳೋದು ಮಾತ್ರ ಸತ್ಯ ಮತ್ತು ಆಧಾರಸಹಿತ.

D.S.NAGABHUSHANA's picture

ಹೌದು; ಈ ಬಗ್ಗೆ ನನಗೇ ನಂಬಿಕೆ ಇಲ್ಲದಿದ್ದರೂ, ನಿಮ್ಮಂಥವರ ಪ್ರತಿಕ್ರಿಯೆಗಳನ್ನು ನೋಡಿದಾಗ ಹಾಗೇ ಅನ್ನಿಸುತ್ತದೆ!ಬರೀ ಊಹೆಯ ಮೇಲೆ ಕೆಲವು ಅಭಿಪ್ರಾಯಗಳನ್ನು ನನ್ನ ಮೇಲೆ ಹೇರಿದರೆ, ಇನ್ನೇನು ಹೇಳುವುದು?
-ಡಿ.ಎಸ್.ನಾಗಭೂಷಣ

bhasip's picture

ತಾವೂ ಬರೆದಿರುವುದೆಲ್ಲಾ ಸತ್ಯ ಸಂಗತಿಗಳೇ ಎಂದು ಭಾವಿಸಿರುವ ಹಾಗಿದೆ. ನೀವು ನಿಮ್ಮ ಊಹೆ, ಹಿಂದು ವಿರೋಧಿವಾದ ಇಡಿ ಸಂಪದಿಗರ ಮೇಲೆ ಹೇರಲು ಪ್ರಯತ್ನ ಪಡುತ್ತಿದ್ದೀರಲ್ಲ?

uniquesupri's picture

>>>ಹಿಂದು ವಿರೋಧಿವಾದ ಇಡಿ ಸಂಪದಿಗರ ಮೇಲೆ ಹೇರಲು ಪ್ರಯತ್ನ ಪಡುತ್ತಿದ್ದೀರಲ್ಲ?
ನನಗಂತೂ ಯಾವ ಬಗೆಯ ಹೇರಿಕೆಯೂ ಕಾಣುತ್ತಿಲ್ಲ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

D.S.NAGABHUSHANA's picture

ಅಂದರೆ, ಅರ್ಥವಾಯಿತು: ನಿಮ್ಮ ಗುರಿ ನಾನು ಈ ’ಬ್ಲಾಗ್”ನಲ್ಲಿ ಬರೆಯುವುದನ್ನು ನಿಲ್ಲಿಸಬೇಕು!ಅದನ್ನು ಈ ಬ್ಲಾಗ್ ನಿರ್ವಾಹಕರಷ್ಟೇ ನಿರ್ಧರಿಸಬಲ್ಲರು. ಅಲ್ಲದೆ ನಾನು ಬರೆಯುತ್ತಿರುವುದು ನಿಮ್ಮಂಥವರನ್ನು ಉದ್ದೇಶಿಸಿ ಮಾತ್ರವಲ್ಲ. ನನಗೆ, ನಿಮಗಿಂತ ಬೇರೆ ರೀತಿ ಯೋಚಿಸುವ ಓದುಗರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹೆಚ್ಚೆಂದರೆ, ಇಂಥ ಒಬ್ಬ ಓದುಗರು ಇತ್ತೀಚೆಗೆ ಸೂಚಿಸಿದಂತೆ, ನಿಮ್ಮಂಥವರ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬಹುದಷ್ಟೆ-ಅದೂ ನನಗನಿಸಿದಾಗ!
ನಾನು ಹೇಳಿದ್ದು, ನನ್ನ ಲೇಖನಗಳಲ್ಲಿ ಕಂಡು ಬಂದ ಅಭಿಪ್ರಾಯಗಳ ಬಗ್ಗೆ ಟೀಕೆ ಮಾಡಿ, ಚರ್ಚೆ ಮಾಡಿ;ಆದರೆ, ಅಲ್ಲಿಲ್ಲದ ವಿಚಾರಗಳನ್ನು, ಅಭಿಪ್ರಾಯಗಳನ್ನು ಊಹಿಸಿಕೊಂಡು ನನ್ನ ಮೇಲೆ ಆರೋಪಿಸಿ ಚರ್ಚೆಯನ್ನು ಮುಂದುವರಿಸಬೇಡಿರೆಂದು. ಇದರಿಂದ ಯಾರಿಗೂ ಪ್ರಯೋಜನವಿಲ್ಲ.
-ಡಿ.ಎಸ್.ನಾಗಭೂಷಣ

bhasip's picture

ಮಂಜು ಅವರು ಬರೆದದ್ದಕ್ಕೆ ಆಧಾರ ಇಲ್ಲ ಅಂತೀರಲ್ಲ,, ನೀವು ಬರೆದದ್ದಕ್ಕೆ ಅಧಾರಗಳು ಯಾವುವು ಸ್ವಲ್ಪ ಸ್ತುತ ಪಡಿಸಿ ಸ್ವಾಮಿ. ಚೀನಾದಲ್ಲಿ ಭಯೋತ್ಪಾದನಗೆ ಬಗ್ಗೆ ಇಲ್ಲಿ ಬರೆದ್ದ್ದೀರಲ್ಲ ಅದಕ್ಕೆ ಉದಾಹರಣೆ ಕೊಡಿ..

ಆನಂತರ ಕೊಳೆತು ಮಲಗಿರುವವರು ಯಾರು, ದಿನ ಮಲಗಿ ಮಲಗಿ ಕೊಳೆಯುತ್ತಿರುವವರು ಯಾರು ಅನ್ನೋದನ್ನ ನಿರ್ಧರಿಸೋಣ.

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಶಾಂತಮ್ಮ ಮಿಸ್ ಅಂತ ಒಬ್ಬರು ಇದ್ದರು. ಆಗ ಅವರು ಒಂದು ಗಾದೆ ಮಾತು ಹೇಳುತ್ತಾ ಇದ್ದರು ಇನ್ನೊಬ್ಬರ ಬಗ್ಗೆ ಚಾಡಿ ಹೆಳುತ್ತಾ ಇರೋರಿಗೆ
"ಇನ್ನೊಬ್ಬರ ಎಲೆಲಿ ಬಿದ್ದಿರೊ ನೊಣ ನೋಡಕ್ಕೆ ಮುಂಚೆ ನಿನ್ನ ಎಲೆಲಿ ಬಿದ್ದಿರೊ ಎಮ್ಮೆ ನೋಡಿಕೊ"
ಆದರೆ ಎಮ್ಮೆ ಚರ್ಮಗಳಿಗೆ ಎಮ್ಮೆ ಅಂತ ಹೇಳಿದ್ರೆ ಸಾಲಲ್ಲ.. ಡೈನೋಸರ್ ನೋದಿಕೊ ಅಂತ ಗಾದೆನ ಬದಲಿಸಬೇಕಿದೆ.

D.S.NAGABHUSHANA's picture

ಚೀನಾದಲ್ಲಿನ ಭಯೋತ್ಪಾದನೆ ಬಗ್ಗೆ ನಾನು ಹೇಳಿದರೆ ನೀವು ನಂಬುವ ಮನಃಸ್ಥಿತಿಯಲ್ಲಿದ್ದಂತಿಲ್ಲ. ಹೇಗೂ ನಿಮಗೆ ಅಂತರ್ಜಾಲ ಸೌಲಭ್ಯವಿದೆಯಲ್ಲ, ’ಗೂಗಲ್”ಗೆ Terrorism in China ಎಂಬ ವಿಷಯ ಕೊಟ್ಟು ಫಲಿತಾಂಶ ನೋಡಿ. ಆಗ ಗೊತ್ತಾಗುತ್ತದೆ, ತಮ್ಮ ರಾಡಿಯಲ್ಲೇ ಒದ್ದಾಡಿ ಒದ್ದಾಡಿ ಕೊಳೆಯುತ್ತಿರುವ ಸರ್ವಜ್ನ ಗರ್ವದ ಮನಸ್ಸುಗಳು ಯಾವುವು ಎಂಬುದು!
ಇನ್ನಾದರೂ ಇಂತಹ ಸಾರ್ವಜನಿಕ ವೇದಿಕೆಗಳಲ್ಲಿ, ವೈಚಾರಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ಇತರರ ಮಾತುಗಳನ್ನು ಸಹನೆಯಿಂದ ಕೇಳಿ ಸೌಜನ್ಯಯುತ ಭಾಷೆಯಲ್ಲಿ ಪ್ರತಿಕ್ರಿಯಿಸುವುದನ್ನು ಕಲಿಯಿರಿ. ಏನಾದರೂ ಹೊಸ ವಿಚಾರ ಇದ್ದರೆ ಹೇಳಿ, ಕೇಳೋಣ.ನಿಮ್ಮ ಮೇಡಂ ವಿಚಾರ ಬೇಡ. ಏಕೆಂದರೆ, ನಾನೂ ನಮ್ಮ ಹತ್ತಾರು ಮೇಷ್ಟ್ರಗಳ ಮಾತುಗಳನ್ನು ಉದಾಹರಣೆ ನೀಡಿ, ನಿಮಗೆ ನಿಮ್ಮ ರೀತಿಯಲ್ಲೇ ಪ್ರತಿಕ್ರಿಯಿಸಬಲ್ಲೆ! ಆದರೆ ಅದರಿಂದ ಯಾವ ಪ್ರಯೋಜನವೂ ಇರಲಾರದು.
-ಡಿ.ಎಸ್.ನಾಗಭೂಷಣ

mahesha's picture

"ನಾನೂ ನಮ್ಮ ಹತ್ತಾರು ಮೇಷ್ಟ್ರಗಳ ಮಾತುಗಳನ್ನು ಉದಾಹರಣೆ ನೀಡಿ, ನಿಮಗೆ ನಿಮ್ಮ ರೀತಿಯಲ್ಲೇ ಪ್ರತಿಕ್ರಿಯಿಸಬಲ್ಲೆ! ಆದರೆ ಅದರಿಂದ ಯಾವ ಪ್ರಯೋಜನವೂ ಇರಲಾರದು"

ಅಂದವಾದ ಜಾಣ್ಮೆಯ ಒಪ್ಪುವಂತಹ ಮಾತು..!

ನಿಮ್ಮ ಬರಹಕ್ಕೆ ಧನ್ಯವಾದ

ಮನವಿ: ನಾನು ನಾಗಭೂಷಣರ ಎಲ್ಲ ಅನಿಸಿಕೆಗಳಿಗೂ ಬೆಂಬಲ ಮಾಡಲ್ಲ.. ಹಾಗೆ ಎಲ್ಲವನ್ನು ಒಪ್ಪದೇನೇನೂ ಇರಲ್ಲ.

bhasip's picture

"ಇನ್ನಾದರೂ ಇಂತಹ ಸಾರ್ವಜನಿಕ ವೇದಿಕೆಗಳಲ್ಲಿ, ವೈಚಾರಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ಇತರರ ಮಾತುಗಳನ್ನು ಸಹನೆಯಿಂದ ಕೇಳಿ ಸೌಜನ್ಯಯುತ ಭಾಷೆಯಲ್ಲಿ ಪ್ರತಿಕ್ರಿಯಿಸುವುದನ್ನು ಕಲಿಯಿರಿ"

-- ಬಹುಶಃ ಹಿರಿಯರಾಗಿ ಇದು ನಿಮಗೆ ನೀವೆ ಮಾಡಿಕೊಂಡಿರುವ ಸೂಕ್ತ ಪ್ರತಿಕ್ರಿಯೆ ಎಂದು ಭಾವಿಸಿ ವಾಪಾಸ್ ನೀಡುತ್ತಿದ್ದೇನೆ. ಗೂಗಲ್ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದ. ಆ ರೀತಿ ಒಂದು ವೆಬ್ ಸೈಟ್ ಇದೆ ಅಂತ ನನಗೆ ಗೊತ್ತೇ ಇರಲಿಲ್ಲ.

prasca's picture

ಭಾಸ್ಕರ್ ಇವರಂತವರಿಗೆ ವಿವರಿಸಿ ಒಪ್ಪಿಸುವುದು ಸಣ್ಣ ಗುಂಡಿಯ ನೀರಿನಲ್ಲಿರುವ ಕಪ್ಪೆಯನ್ನು (ಮೀನನ್ನಲ್ಲ ಏಕೆಂದರೆ ಮೀನು ನಿರಂತರವಾಗಿ ಈಜುತ್ತದೆ ಕಪ್ಪೆ ಹಾಗಲ್ಲ) ಹಿಡಿದಂತೆ ನೀವು ಒಂದು ವಿಷಯ(ಅಥವ ಅವರ್ ಲೇಖನದ ಒಂದು ಸಾಲು) ಒಪ್ಪಿಸಿದರೆ, ಇನ್ನೊಂದು ವಿಷಯಕ್ಕೆ ಜಿಗಿಯುತ್ತಾರೆ. ಮೈಗೆ ಎಣ್ಣೆ ಹಚ್ಚಿಕೊಂಡೆ ವಾದಕ್ಕೆ ಇಳಿಯುತ್ತಾರೆ. ಆದರೆ ಇವರು ಮಾತ್ರ ನಿಮ್ಮ ಪ್ರತಿಕ್ರಿಯೆಯ ಒಂದೆ ಸಾಲನ್ನು ಹಿಡಿದು ಹಗ್ಗಜಗ್ಗಾಡುತ್ತಾರೆ. ಗೋರ್ಕಲ್ಲ ಮೇಲೆ ಮಳೆ ಸುರಿಸುವ ವ್ಯರ್ಥ ಪ್ರಯತ್ನ ಮಾಡದಿರಿ. ಬೊಕ್ಕ ತಲೆಯವನಿಗೆ ಬಾಚಣಿಗೆ ಮಾರುವ ಪ್ರಯತ್ನವೇಕೆ.

uniquesupri's picture

ಸಂಪದ ವಿಚಾರ ವಿನಿಮಯ ಮಾಡಿಕೊಳ್ಳುವ ಅಂತರ್ಜಾಲ ವೇದಿಕೆ. ಸ್ವಿಮಿಂಗ್ ಕಲಿಸಿಕೊಡುವ ಶಾಲೆಯಲ್ಲ. ಲೇಖಕರೊಂದಿಗೆ ಸೈದ್ಧಾಂತಿಕ ತಕರಾರಿದ್ದರೆ ಅದನ್ನು ಆದಷ್ಟು ಮಟ್ಟಿಗೆ ವಿವರಿಸಲು ಯತ್ನಿಸಬೇಕು. ವಿರುದ್ಧವಾದ ಅಭಿಪ್ರಾಯವನ್ನು ಸಹಿಸುವ ತಾಳ್ಮೆ ಕಳೆದುಕೊಂಡಾಗಲೇ ಫ್ಯಾಸಿಸ್ಟ್ ಹುಟ್ಟುವುದು.. ಅಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

manju mysooru's picture

ಇದೇ ಮಾತು ಮೂಲ ಲೇಖಕರಿಗೆ ಅನ್ವಯ ಆಗೋಷ್ಟು ಇನ್ಯಾರಿಗೂ ಆಗೊಲ್ಲ.. ಅವ್ರು ತಿಳಿದಿದ್ದೇ ಸತ್ಯ, ಅವರ ಆಕರ ಗ್ರಂಥಗಳು, ಅವರ ಚಿಂತನೆಗಳೆ ಸತ್ಯ ಅನ್ನೋ ವಾದ ಅವ್ರು ಮಾಡೋದು ಸರಿ ಇದೆ ಅಲ್ವ?

uniquesupri's picture

ತಾವು ಬರೆದದ್ದು ಸತ್ಯ ಎಂದು ನಂಬಲು ಎಲ್ಲರಿಗೂ ಸ್ವಾತಂತ್ರ್ಯವಿದೆ.
ಲೇಖಕರು ತಮ್ಮ ಲೇಖನದಲ್ಲಿ ನಿಮ್ಮ ಬಗ್ಗೆ ಚರ್ಚೆ ನಡೆಸಿದ್ದರೆ ನೀವು ಅವರ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿದೆ. ಲೇಖನದ ವಿಷಯದ ಬಗ್ಗೆ ಮಾತಾಡೋಣ. ಭಿನ್ನ ಅಭಿಪ್ರಾಯಗಳಿಗೆ ಗೌರವ ಕೊಡುವುದನ್ನು ಕಲಿಯೋಣ ಏನಂತೀರಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

manju mysooru's picture

ನಿಮ್ಮ ಪ್ರತಿಕ್ರಿಯೆ ನೋಡಿದ್ರೆ ನನ್ಗೂ ಹಾಗೆ ಅನ್ಸತ್ತೆ.. ಮೂಲ ಲೇಖಕರು ಹೇಳಿರುವುದು 'objective' ಮತ್ತು ಯಾವುದೇ 'ಇಸಮ್' ಇಂದ ಪ್ರಭಾವಗೊಳದೆ ಬರೆದಿದ್ದಾರೆ ಅನಿಸಿದ್ದು, ಜೊತೆಗೆ ನನ್ನ ಪ್ರತಿಕ್ರಿಯೆಗಳು ವ್ಯಕ್ತಿಯ ದೂಷಣೆ ಅಂತ ನಿಮಗೆ ಅನಿಸುತಿದ್ದರೆ ಏನೂ ಮಾಡಲು ಆಗುವುದಿಲ್ಲ.

ಈ ಲೇಖಕರ ವಿಚಾರಧಾರೆಗಳ / ಆಕರ್ಷಿತರಾಗಿರುವ 'ಸೆಕ್ಯುಲರಿಸ್ಮ್' ಬಗ್ಗೆ, ಅವರ ಹಿಂದಿನ ಲೇಖನಗಳ ಪಟ್ಟಿ ನೋಡಿದ್ರೆ ಸಾಕು - ಇವರ ಟಾರ್ಗೆಟ್ ಯಾರು ಅಂತ.

o ಮಠಗಳು ಮತ್ತು ಜಾತಿವ್ಯವಸ್ಥೆ 2 ಪ್ರತಿಕ್ರಿಯೆಗಳು
o ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ! 91 ಪ್ರತಿಕ್ರಿಯೆಗಳು
o ನಕ್ಸಲ್ ಚಳುವಳಿ: ಸಮಾಜದ್ದೇ ಬಳುವಳಿ? 19 ಪ್ರತಿಕ್ರಿಯೆಗಳು
o ಈಗ... ಭಯೋತ್ಪಾದಕರೆಲ್ಲ ಮುಸ್ಲಿಮರಲ್ಲ....! 34 ಪ್ರತಿಕ್ರಿಯೆಗಳು
o ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ! 121 ಪ್ರತಿಕ್ರಿಯೆಗಳು

uniquesupri's picture

ಸರಿ ಬಿಡಿ,
ನಾನಾದರೂ ಲೇಖನದ ವ್ಯಾಪ್ತಿ ದಾಟಿ ಎಷ್ಟೂಂತ ಪ್ರತಿಕ್ರಿಯಿಸಲಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

D.S.NAGABHUSHANA's picture

ಬರೀ ಪ್ರತಿಕ್ರಿಯೆಗಳ ವಿವರಗಳನ್ನಷ್ಟೇ ಏಕೆ ನೀಡಿದ್ದೀರಿ? ಒಟ್ಟು ಓದುಗರ ವಿವರಗಳನ್ನೂ ನೀಡಿದ್ದರೆ ಚಿತ್ರ ಪೂರ್ಣವಾಗುತ್ತಿತ್ತಲ್ಲ! ಬಹುಶಃ ನಿಮಗೆ ಯಾವುದೂ ಪೂರ್ಣವಾಗಿ ಬೇಕಿಲ್ಲ. ಅದೇ ನಿಮ್ಮ ತೊಂದರೆ ಇರಬಹುದು...
-ಡಿ.ಎಸ್.ನಾಗಭೂಷಣ