ಐ.ಟಿ. ಬಿ.ಟಿ. ಬಿಟ್ಟು ಬಾರ
ಐ.ಟಿ. ಬಿ.ಟಿ.
ಬಿಟ್ಟು ಬಾರ
ಮೂರ್ತಿ ಮುಷ್ಟಿ ಬಿಟ್ಟು ಬಾರ.
ಸ್ಪೂರ್ತಿ ಬಾಳ ನಡೆಸು ಬಾರ.
ಮಿಥ್ಯ ಲೋಕ ದಾಟಿ ಬಾರ.
ಸತ್ಯ ಲೋಕ ಕಾಣ ಬಾರ.
ಒ೦ದೇ ಬಾಳು ಬೇಡ ಬಾರ.
ಮು೦ದೆ ಗೋಳು ಕ೦ಡು ಹಾರಾ..
ಸಾಕು ಬಾರ, ಬೇಗ ಬಾರ.
ಆಳಾಗದೆ ನಿನ್ನಾತ್ಮವ ಆಳು ಬಾರ.
ಐ.ಟಿ. ಬಿ.ಟಿ.
ಬಿಟ್ಟು ಬಾರ
***************
ಅರ್ಪಣೆ ನಾರಾಯಣ ಮೂರ್ತಿಗಳಿಗೆ.

- Login or register to post comments
- 890 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಐ.ಟಿ. ಬಿ.ಟಿ. ಬಿಟ್ಟು ಬಾರ
ಕವನ ಸೊಗಸಾಗಿದೆ. ಐ.ಟಿ. ಬಿ.ಟಿ ಬಿಟ್ಟು ಬಾರಾ... ಮೇಟಿ ನಾಟಿ ಮಾಡು ಬಾರಾ... ಎಂದು ಕೃಷಿಯತ್ತ (ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು!) ಯುವಕರನ್ನು ಆಕರ್ಷಿಸಬೇಕಾಗಿದೆ ಎನ್ನುವುದು ಕಹಿಸತ್ಯ.
ಅಂದಹಾಗೆ, 'ಬಾರ' ಪದಪ್ರಯೋಗ ಕುರಿತಂತೆ ಒಂದು ಜಿಜ್ಞಾಸೆ.
'ಬಾರ' ಎಂಬ ಪದವನ್ನು 'ಬರಲಾರ' ಎಂಬರ್ಥದಲ್ಲಿ ಕೆಲವರು/ಕೆಲವೆಡೆ ಉಪಯೋಗಿಸಿದ್ದನ್ನೂ ('ಬಂದಾನೋ ಬಾರನೋ ತಂದಾನೋ ತಾರನೋ...) ಎಲ್ಲೋ ಓದಿದ ನೆನಪಿದೆ. muralihr ಅವರು ಕವನದಲ್ಲಿ 'ಬಾರಾ...' (ಕುಣಿಯೋಣು ಬಾರಾ... ಇದ್ದಂತೆ) ಎಂದು ಆಜ್ಞಾರ್ಥಕರೂಪದಲ್ಲಿ ಬಳಸಿದ್ದಾರೆಯೇ ಅಥವಾ 'ಬರಲಾರ' ಎಂಬ ಹತಾಶಭಾವದ affirmative ರೂಪವೂ ವ್ಯಕ್ತವಾಗಿದೆಯೇ ಅನಿಸುತ್ತಿದೆ!
- ಶ್ರೀವತ್ಸ ಜೋಶಿ
ಐಟಿ ಬಿಟಿ ಬಿಟ್ಟು ಬಾರ...ಅಬ್ಬಬ್ಬ ಎಷ್ಟು ಧೈರ್ಯ
ರೀ, ಇದು ನಾಟಿ ಮಾಡು ಬಾರಾ...ಅಲ್ಲ...
ಐಟಿ ಬಿಟಿ ಬಿಟ್ಟು ಬಾರ...ಅಂದರೆ....
ಐಟಿ ಬಿಟಿ ಉದ್ಯಮಕ್ಕಿಂತ ಭಾರಿ ಭಾರಿ ಫಸಲುಳ್ಳ ಬಾರೋದ್ಯಮವನ್ನು ಸೇರಲು ಕರೆಯಿರಬಹುದು. ಯಾವುದಕ್ಕೂ ಎಚ್ಚರದಲ್ಲಿರಬೇಕು.
ಹೌದು
ಐಟಿ ಬಿಟಿ ಉದ್ಯಮಕ್ಕಿಂತ ಭಾರಿ ಭಾರಿ ಲಾಭ...No Limits...ಇರುವ ಉದ್ಯಮಕ್ಕೆ ಕರೆ ..
ಆದರೆ ಅದು ಯಾವುದೆ೦ದು ಮಾತ್ರ ಕೇಳಬೇಡಿ...ಅಲ್ಲಿಗೂ ಐಟಿ ಕುರಿಗಳು ಬ೦ದು ಬಿಡಬಹುದು...
ಉ: ಐ.ಟಿ. ಬಿ.ಟಿ. ಬಿಟ್ಟು ಬಾರ
ಸತ್ಯ ಲೋಕ ಕಾಣ ಬಾರ.
ಮಿಥ್ಯಲೋಕವೆಂದು ನೀವೆನ್ನುವುದು ಯಾವ ಅರ್ಥದಲ್ಲಿ.... ಐಟಿ ಬಿಟಿಗೂ ತನ್ನದೇ ಆದ ಪ್ರಾಮುಖ್ಯತೆಯಿದೆ... ಅದನ್ನು ಮಿಥ್ಯ ಲೋಕ ಎಂದಿರುವಿರೇ.... ಇದು ಕೇವಲ ಲಘುಹಾಸ್ಯದ ಕವಿತೆಯಾದರೆ ನನ್ನ ತಕರಾರು ಅಪ್ರಸ್ತುತ.