Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

March 29, 2006 - 2:03pm — shreekant.mishrikoti

ಬಾಗಿಲು ಮುರಿದು ಹೋಗುವವರಿಗೆ ಬೀಗದ ಕೈ ಏಕೆ?
ಬಾವಿ ಬಳಸದೆ ಕೆಟ್ಟಿತು ; ನೆಂಟಸ್ತಿಕೆ ಹೋಗದೆ ಕೆಟ್ಟಿತು.
ತಾಯಿ ಹೊಟ್ಟೆ ನೋಡಿದಳು , ಹೆಂಡತಿ ಮೊಟ್ಟೆ( ಹಣದ ಗಂಟು) ನೋಡಿದಳು.
ಜರೆದು ಕೊಳ್ಳಬೇಕು ; ಹೊಗಳಿ ಮಾರಬೇಕು. ( ವ್ಯಾಪಾರದ ಗುಟ್ಟು)
ಗುಡಿಸಿದ ಮೇಲೆ ಕಸವಿರಬಾರದು , ಬಡಿಸಿದ ಮೇಲೆ ಹಸಿವಿರಬಾರದು.
ಕೆಟ್ಟ ಅಡಿಗೆ ಅಟ್ಟವಳೇ ( ಸರಿಪಡಿಸಿದವಳೇ) ಜಾಣೆ.
ಕಾಲು ಬಿದ್ದು ಕಾಲುಂಗುರ ಉಚ್ಚಿಕೊಂಡರಂತೆ.
ಜೀನ ಗಳಿಸಿದ , ಜಾಣ ಉಂಡ.
ಕಡುಕೋಪ ಬಂದಾಗ ತಡಕೊಂಡವನೇ ಜಾಣ.
ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

  • ಗಾದೆಗಳು
Ornamental seperator
  • Login or register to post comments
  • 635 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 31, 2006 - 2:50pm — ಮಹೇಶ ಭೋಗಾದಿ

Re: ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

ಮಹೇಶ ಭೋಗಾದಿ's picture

shreekant.mishrikoti wrote:

ತಾಯಿ ಹೊಟ್ಟೆ ನೋಡಿದಳು , ಹೆಂಡತಿ ಮೊಟ್ಟೆ( ಹಣದ ಗಂಟು) ನೋಡಿದಳು.
ಜರೆದು ಕೊಳ್ಳಬೇಕು ; ಹೊಗಳಿ ಮಾರಬೇಕು. ( ವ್ಯಾಪಾರದ ಗುಟ್ಟು)
ಕೆಟ್ಟ ಅಡಿಗೆ ಅಟ್ಟವಳೇ ( ಸರಿಪಡಿಸಿದವಳೇ) ಜಾಣೆ.
ಕಾಲು ಬಿದ್ದು ಕಾಲುಂಗುರ ಉಚ್ಚಿಕೊಂಡರಂತೆ.
ಜೀನ ಗಳಿಸಿದ , ಜಾಣ ಉಂಡ.
ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

ಶ್ರೀಕಾಂತ್ ಮಿಶ್ರಿಕೋಟಿಗಳೆ!!!

ಇಲ್ಲಿ ನನಗೆ ಕೆಲವು ಗೊಂದಲಗಳಿವೆ, ದಯವಿಟ್ಟು ಪರಿಹರಿಸಿ.

ಮೊಟ್ಟೆ = ಇಲ್ಲಿ "ಮೂಟೆ" ಎಂದು ನನಗನ್ನಿಸುವುದು,
ಜರೆದು = ಇಲ್ಲಿ "ಜರಿದು"ಎಂದು ನನಗನ್ನಿಸುವುದು, "ಜರಿ" ಎಂದರೆ, ಹಳಿ, ತೆಗಳು, ಬಯ್ಯಿ ಎಂದು.
ಅಡಿಗೆ = ಇಲ್ಲಿ "ಅಡುಗೆ" ಎಂದು ನನಗನ್ನಿಸುವುದು. "ಅಡಿಗೆ" ಎಂದರೆ ಕಾಲಿಗೆ, ಪಾದಕ್ಕೆ ಎಂದಾಗುವುದು.

ಉಚ್ಚಿ ಎಂದರೆ?ಇಲ್ಲಿ ಅದು "ಬಿಚ್ಚಿ" ಆಗಬೇಕೆ?
ಜೀನ ಅಂದರೆ ಜಿಪುಣ?

ವಲ್ಲಿ ಎಂದರೆ ಗಂಡಸರು ಹೊದೆಯುವ ಅಂಗವಸ್ತ್ರ(ಶಲ್ಯ, ಉತ್ತರೀಯ) ಎಂದು ನಾನು ಅಂದುಕೊಂಡಿದ್ದೇನೆ. ಆದ್ದರಿಂದ ಇಲ್ಲಿ "ವಲ್ಲಿ ಒಡ್ಡಿದನಂತೆ"ಎಂದಿರಬೇಕು ಎಂದು ಅನ್ನಿಸುತ್ತಾ ಇದೆ. ಇದು ಸರಿಯೆ?

ಧನ್ಯವಾದ

  • Login or register to post comments
  • link
  • Email this ಪ್ರತಿಕ್ರಿಯೆ
March 31, 2006 - 6:00pm — shreekant.mishrikoti

Re: ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

shreekant.mishrikoti's picture

ಮಹೇಶರೆ ,

೧. ಪುಸ್ತಕದೊಳಗ ಮೊಟ್ಟೆ ಆಂತS ಅದ.
೨. ಜರೆದು , ಜರಿದು ಎರಡೂ ಒಂದS .
೩. ಮಂದಿ ಅಡುಗೆ , ಅಡಿಗೆ ಎರಡೂ ಉಪಯೋಗಿಸ್ತಾರ.
೪. ಉಚ್ಚುವದು , ಬಿಚ್ಚುವದು ಎರಡೂ ಒಂದS. ಉಗುಚುವದು ಅಂದ್ರೂ ಅದS ಇರ್‍ಬೇಕು.
೫. ಜೀನ ಅಂದ್ರ ಜಿಪುಣ.
೬. ವಲ್ಲಿಯನ್ನು ಹೆಂಗಸರು ಉಪಯೋಗಿಸುವದಿಲ್ಲೇನು ? ನನಗ ಗೊತ್ತಿಲ್ಲ.

ನಿಮ್ಮ ಗೊಂದಲ ಕಡಿಮೆ ಆದೂನೋ , ಹೆಚ್ಚಿಗಿ ಆದೂನೋ ಗೊತ್ತಿಲ್ಲ.

ಧನ್ಯವಾದಗಳು.

  • Login or register to post comments
  • link
  • Email this ಪ್ರತಿಕ್ರಿಯೆ
March 31, 2006 - 7:14pm — ಮಹೇಶ ಭೋಗಾದಿ

ಒಲ್ಲೆನೆಂದು ಹೇಳಿ , ವಲ್ಲಿ ಒಡ್ಡಿದಳಂತೆ.

ಮಹೇಶ ಭೋಗಾದಿ's picture

ನಮ್ಮ ಕಡೆಯಾಗೆ ಒಂದು ಪದ ಐತೆ.

ಗಲ್ಲು ಗಲ್ಲೆನುತ ಗೆಜ್ಜೆ, ಗಲ್ಲು ತಾದಿಮಿತ,

ನಮ್ಮ  ಬಲ್ಲಿದ ರಂಗನ್ ವಲ್ಲಿಯ ಮ್ಯಾಗೆ ಚೆಲ್ಲಿದರೋಕುಳಿಯೊ.|

ಅದಕ್ಕೆನೆಯಾ ನಾನು ವಲ್ಲೀನ ಬರಿ ಗಂಡಸರು ಹಾಕ್ಕೊಳದು ಅಂದೆ. ನಿಮ್ ಸೀಮೆಯಾಗೆ ಹೆಂಗಸರು ಉಡಬೋದೇನೋ, ನಮ್ ಕಡೆನಾಗೆ ಬರಿ ಗಂಡಸರೆ ಹೊದ್ಗೊಳೋದು.

ನಮ್ಮೂರ್ನಲ್ಲಿ "ಉಚ್ಚೋದು" ಅಂತ ಅಂದ್ರೆ ಶಾನೆ ಗಬರ್ಥ ಬರತೈತೆ.

ಸರಿಬುಡರಪ್ಪೋ.. ನಂಗೆ ಗೊತ್ತಾಯ್ತು.

ನಮ್ ಗೊಂದಲಗಳೋ, ಇದ್ದೇ ಇರತ್ತಾವೆ, ಎಲ್ಗೋಗ್ತಾವೆ..

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಲ್ಲಿ ಎಂದರೆ ಬಳ್ಳಿ ಎಂದು ಅಥ೯ವೆ?
  • ಮತ್ತಷ್ಟು ಗಾದೆಗಳು - ೭
  • ಇನ್ನಷ್ಟು ಆಯ್ದ ಗಾದೆಮಾತುಗಳು(೩೧-೪೦) :
  • ಕಲ್ಲರಳಿ ಹೂವಾಗಿ - ನನ್ನ ನೆಚ್ಚಿನ ಕೋಟೆಯಾ
  • ಅವಳು...
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator