ನಡು ರಾತ್ರಿಯಲಿ ಅತ್ತ ಸಮಯ
ಆಗ ಸಮಯ ಸುಮಾರು ೧೧.೩೦ ಇರಬಹುದೇನೊ .ಲ್ಯಾಪ್ಟಾಪ್‌ನಲ್ಲಿದ್ದ ಆ ಸಾಲುಗಳನ್ನು ಓದಿದ ತಕ್ಷಣ ಮನಸಿಗ್ಗೆ ಅದೇನೋ ನೋವು. ಈ ವರೆಗೂ ಹಾಗೆ ಯಾರ ಬಳಿಯಲ್ಲೂ ಕರೆಸಿಕೊಂಡಿರದ ನನಗೆ ಹಾಗೆ ಆಗುವುದು ಸಹಜವೇ ಆಗಿತ್ತು . ಮನೆಯಲ್ಲಿ ಮಗು ಹಾಗು ಅಮ್ಮ ಇಬ್ಬರೂ ಇರಲಿಲ್ಲ. ಕಣ್ಣಲ್ಲಿ ಸುಮ್ಮ ಸುಮ್ಮನೇ ನೀರು
ರಾತ್ರಿ ೧೨ ಘಂಟೆಗೆ ಮನೆಗೆ ಬಂದ ಇವರು ನನ್ನ ಅವತಾರ ನೋಡಿ ಗಾಭರಿ . ಏನಾಯ್ತು ಎಂದರು. ಹೇಳಿ ಅವರಿಂದ ಮತ್ತೊಮ್ಮೆ ಅಪಹಾಸ್ಯಕ್ಕೆ ಈಡಾಗಲು ಮನಸ್ಸು ಬಯಸಲಿಲ್ಲ.
ಯಾರೋ ಕಂಡರಿಯದವರಿಂದ ಮಾತನ್ನು ಕೇಳುವುದು ಕಷ್ಟವೇ.
ಒಂದು ಸರಳವಾಗಿ ಆಗಬಹುದಾದ ಚರ್ಚೆ ವೈಯುಕ್ತಿಕ ನಿಂದೆ ಕಟು ಟೀಕೆಯಾದಾಗ ನನ್ನ ತರಹದ ಯಾರಿಗೇ ಆಗಲಿ ತುಂಬಾ ವೇದನೆಯೇ ಆಗುತ್ತದೆ.
ಯಾವುದೋ ಲೇಖನದ ಬಗ್ಗೆ ಬರೆಯಲು ಹೊರಟವಳು. ನನಗೆ ಯಾವುದೋ ಭಾಷೆಯೊಂದು ತಿಳಿದಿಲ್ಲ ಎಂದು ಹೇಳಿಸಿಕೊಂಡ ಮೇಲೆ ಇನ್ನು ಅದನ್ನು ಒಳಗೊಂಡ ಲೇಖನ ಬರೆಯುವದರಲ್ಲಿ ಅರ್ಥವಿಲ್ಲ ಎಂದು ಅನ್ನಿಸಿ ಪ್ರಯತ್ನ ಕೈಬಿಟ್ಟೆ .
ದುಖ: ಅಡಗಿಸಿಕೊಳ್ಳುವ ಯಾವ ಪ್ರಯತ್ನವೂ ಕೈ ಗೂಡಲಿಲ್ಲ. ಕಾರಣ ತಿಳಿಯದೆ ಇವರು ನನ್ನನ್ನು ಸ್ವಲ್ಪ ಹೊತ್ತು ಬೈದು ನಿದ್ರೆಗೆ ಜಾರಿದರು.
ನಾನು ಮಲಗಲು ಪ್ರಯತ್ನಿಸಿದೆ. ಆಗಲಿಲ್ಲ
ಕಣ್ಣ ಮುಂದೆ ನನ್ನನ್ನು ಹಿಂಸೆಗೆ ಈಡು ಮಾಡಿದ ಆ ಪದವೇ ಕುಣಿಯುತ್ತಿತ್ತು
ಯಾವತ್ತೂ ರಾತ್ರಿಯಲ್ಲಿ ಹೊರಗೆ ಬಂದು ನಿಂತವಳಲ್ಲ . ಆದರೆ ಮನಸ್ಸು ರೋಸಿ ಹೋಗಿದ್ದ ಕಾರಣ ಬಾಗಿಲು ತೆಗೆದು ಬಾಲ್ಕನಿಯಲ್ಲಿ ಚೇರ್ ಹಾಕಿಕೊಂಡು
ಕುಳಿತೆ.
ವಾಚ್‌ಮೆನ್‍ನ ಮಗು ಅಳುತ್ತಿತ್ತು. ಅದರ ತಾಯಿ ಸುಧಾರಿಸಲು ಹೊರಗೆ ತಂದಿದ್ದಳು
ಕೆಳಗೆ ಯಾವದೋ ಸುಮೊ ಬಂದು ನಿಂತಿತು ಕೆಳಗಿನ ಫ್ಲೋರಿನ ಹುಡುಗಿಯರು ಕೆಲಸ ಮುಗಿಸಿ ಬಂದಿದ್ದರೆಂದು ಕಾಣುತ್ತದೆ.ಅವರೂ ಮೇಲಕ್ಕೆ ಹತ್ತಿದರು
ನಾಯಿಗಳು ಬೊಗಳಲಾರಂಭಿಸಿದವು. ಹಸುವೊಂದು ಮೈನ್ ರೋಡಿನಲ್ಲಿ ಹೋಗುತ್ತಿತ್ತು . ಅದಕ್ಕಾಗಿಯೇ ಈ ಬೊಗಳಾಟ .
ನಮ್ಮ ಅಪಾರ್ಟ್‌ಮೆಂಟ್‍ಗಿಂತ ಸ್ವಲ್ಪ ದೂರದಲ್ಲಿ ಕೆರೆಯೊಂದಿದೆ ಆ ಕೆರೆಯ ಬಳಿ ಇರುವ ಜನರು ದಲಿತರು ಎನ್ನುತ್ತಾರೆ. ಅಲ್ಲಿರುವ ಚರ್ಚ್ ಮೇಲೆ ನಕ್ಷ್ತತ್ರ ದೀಪ ಹಾಕಿದ್ದರು .
ಇವನ್ನೆಲ್ಲಾ ನೋಡುತ್ತಿದ್ದರೂ ಮನಸ್ಸಿಗೆ ಯಾವ ರೀತಿಯಲ್ಲೊ ಶಾಂತಿ ಸಿಗಲಿಲ್ಲ. ಅಷ್ಟು ಹೊತ್ತಿಗಾಗಲೆ ಎರೆಡು ಘಂಟೆಯಾಗಿತ್ತು
ಕೊನೆಗೆ ದೇವರ ಕೋಣೆಯಿಂದ ಅಮ್ಮನ ನಿತ್ಯಾಷ್ಟೋತ್ತರ ಪುಸ್ತಕ ತೆಗೆದುಕೊಂಡು ಬಂದು ಪಠಿಸುತ್ತಾ ಇದ್ದಂತೆ ಮನಸ್ಸು ತಿಳಿಯಾಗುತ್ತಾ ಬಂತು.
ಸುಮಾರು ಹೊತ್ತಿನ ನಂತರ ಮನಸ್ಸು ಒಂದು ಸಹಜ ಸ್ಥಿತಿಗೆ ಬಂತು
ನನಗೆ ನಿರಾಳತೆಯನ್ನು ಕೊಟ್ಟ ಪುಸ್ತಕ ನನ್ನ ನಂಬಿಕೆಯ ಧರ್ಮದ್ದು. ನನ್ನ ಕಷ್ಟ ಕಾಲದಲ್ಲಿ ಕೈ ಹಿಡಿಯುವ ದೇವರು ನನ್ನ ನೆಚ್ಚಿನ ಧರ್ಮದ್ದೇ. ಹಾಗಾಗಿ ಯಾರೇನೆಂದರೂ ನನಗೇನು ಹಾನಿಯಾಗಲಿ, ಲಾಭವಾಗಲಿ ಇಲ್ಲ ಎಂಬುದನ್ನು ಮನಗೊಂಡೆ.
ಯಾರ ಯಾರ ಮಾತಿಗೋ ಬೇಸರಿಸಿಕೊಂಡು ಕೂರುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದನಿಸಿತು.
ಮತ್ತೆ ಸುಮಾರು ಮೂರುವರೆಗೆ ಮಲಗಿದೆ .ಕಣ್ತುಂಬಾ ನಿದ್ರೆ.
ಎದ್ದಾಗ ಬೆಳಗ್ಗೆ ೯.೩೦ . ಪುಣ್ಯಕ್ಕೆ ಅಂದು ಶನಿವಾರ. ಇವರಿಗೊ ನನಗೂ ರಜಾ ದಿನ
- Login or register to post comments
- 698 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಸುಜಾತಾ ವಜ್ರಳ್ಳಿ
ಆತ್ಮೀಯ ರೂಪಾ, ಲೇಖನ ಸೊಗಸಾಗಿ ಮೂಡಿಬಂದಿದೆ. ವಿಷಯ ನಿರೂಪಣೆ ಮನಮುಟ್ಟುವಂತಿದೆ.
ವಂದನೆಗಳು ಸುಜಾತ
ರೂಪ
ಚೆನ್ನಾಗಿದೆ
ರೂಪಕ್ಕ
ನಡು ರಾತ್ರಿಯಲ್ಲಿ ಬ್ಲಾಗ್ನ ನೋಡಿ ಅತ್ತಿರಬೇಕು ಅನ್ನಿಸುತಿದೆ, ಸರಿ ತಾನೆ ? :)
ರಾಕೇಶ್ ಶೆಟ್ಟಿ :)
:) ನಡುರಾತ್ರಿ, ನಿದ್ದೆ ಸಮುಯ, ನಿದ್ದೆ ಮಂಪರು, ಅಕ್ಕರಗಳ ಅರ್ಥ ಗ್ರಹಣದ ಕಷ್ಟ...
ಅದರೂ ಅಳುವ ಹೆಣ್ಣಿಗೆ ಕನಿಕರ ತೋರುವುದು ನಮ್ಮ ಸಮಾಜದ ಸಂಪ್ರದಾಯ..
ರೂಪಾಜೀ,
ವಸ್ತು ಆಗಿರಬಹುದು ಅಥವಾ ಮಾತುಗಳೇ ಆಗಿರಬಹುದು. ನಾವು ಸ್ವೀಕರಿಸದೇ ಇದ್ದದ್ದು ನಮ್ಮದಲ್ಲ.
ನಮ್ಮದಲ್ಲದ್ದನ್ನು ಮನಸ್ಸಿಗೇಕೆ ಹಚ್ಚಿಕೊಳ್ಳಬೇಕು?
ಯಾರೋ ಅಂದ ಮಾತಿಗೆ ನೀವು ನೊಂದು ಕೊಂಡು ಕೂರಬಾರದು.
ನಿಮ್ಮಿಂದ ಅನ್ಯರ ಅಪಹಾಸ್ಯ, ನಿಂದನೆ ಆಗಿದ್ದರೆ ನೊಂದುಕೊಳ್ಳಿ. ಪಶ್ಚಾತಾಪ ಪಟ್ಟುಕೊಳ್ಳಿ. ಪರಿಹಾರ ಕಂಡುಕೊಳ್ಳಿ. ಕ್ಷಮಾಯಾಚನೆ ಮಾಡಿಕೊಳ್ಳಿ. ಅಷ್ಟೇ.
ಅದಿಲ್ಲವಾದರೆ, ನೂರೊಂದು ಮಂದಿ, ನೂರೊಂದು ಮಾತು, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ.
- ಆಸು ಹೆಗ್ಡೆ
ನಿರ್ಧರಿಸಿದ್ದೇನೆ ಇನ್ನು ಮೇಲೆ ಇಂಥ ವಿಷಯಕ್ಕೆಲ್ಲಾ ಅಳುವುದಿಲ್ಲ ಎಂದು.
ನಿಮ್ಮ ಮಾತಿಗೆ ವಂದನೆಗಳು
ರೂಪಾ
ರೂಪಾ,
ಏಕಿಷ್ಟು ಸೂಕ್ಷ್ಮ ಸ೦ವೇದಿಯಾದಿರಿ? ಬಹುಶಃ ನಿಮ್ಮ ಪ್ರಾಮಾಣಿಕ ಅಭಿವ್ಯಕ್ತಿಯನ್ನು ಸಹಿಸದೆ ಅನ್ಯರು ನಿಮ್ಮ ಮನಸ್ಸನ್ನು ನೋಯಿಸಿರಬಹುದು. ಇದು ಅವರ ಹೇಡಿತನ. ಕಲ್ಲುಬ೦ಡೆಯ೦ತಿರಲಿ ನಿಮ್ಮ ಮನಸ್ಸು. ನೀವು ನ೦ಬಿ ನೆಚ್ಚಿದ ಮೌಲ್ಯಗಳು ಅಥವಾ ನ೦ಬಿಕೆಗಳೇ ನಿಮಗೆ ಆಧಾರವಾಗಿರಲಿ. ಇತರರು ಹೇಳಿದ್ದನ್ನು ನೀವು ಒಪ್ಪಲೇಬೇಕಾದ್ದಿಲ್ಲ. ಶ್ರೀ ಕೃಷ್ಣನು ಸಾರಿದ ಸ್ಥಿತಪ್ರಜ್ಞೆಯನ್ನು ನೆನಪಿಗೆ ತ೦ದುಕೊಳ್ಳಿ. ಅಕ್ಕನವರ ವಚನ ನೆನಪಿಸಲೆ? ಸ೦ತೆಯಲಿ ಮನೆಯ ಮಾಡಿ ಗದ್ದಲಕೆ ಅ೦ಜಿದೊಡೆ೦ತಯ್ಯಾ? .....ಈ ಪ್ರಪ೦ಚದ ರೀತಿಯೇ ಹಾಗೆ. ನಾವು ಇತರರನ್ನು ಮೆಚ್ಚಿಸಿ ಬದುಕಲು ಸಾಧ್ಯವಿಲ್ಲ. ನಮ್ಮ ನಮ್ಮ ಅ೦ತಃಸಾಕ್ಶಿಗೆ ಅನುಗುಣವಾಗಿ ನಡೆದುಕೊ೦ಡರೆ, ಬದುಕಿದರೆ ಸಾಕು ರೂಪಾ. ಸತ್ಯದೊ೦ದಿಗೆ ಬದುಕುವವರು ಯಾರಿಗೂ ಹೆದರಬೇಕಾದ್ದಿಲ್ಲ. ಇದು ಗ್ರೀಕ್ ದಾರ್ಶನಿಕ ಸಾಕ್ರೆಟೀಸ್ ನ ವೀರ್ಯವ೦ತ ಮಾತುಗಳು. ಮು೦ದೆ ನಿಮ್ಮ ಆತ್ಮವಿಶ್ವಾಸದಿ೦ದ ತು೦ಬಿದ, ಮೌಲಿಕ ಹಾಗೆಯೇ ತು೦ಟು ತು೦ಟಾದ, ನವಿರಾದ ಬರಹಗಳನ್ನು ನಾವೆಲ್ಲಾ ಸ೦ಪದಿಗರು ನಿರೀಕ್ಷಿಸಬಹುದೇ. ನನ್ನ ನಿರೀಕ್ಷೆ ಅತಿಯೇನಲ್ಲವಲ್ಲ ರೂಪಾರವರೇ...
Be bold nothing is lost. Be yourself. assert yourself.
ಡಾ|| ಜ್ಞಾನದೇವ್ ಮೊಳಕಾಲ್ಮುರು
ನಿಮ್ಮ ಕಾಳಜಿಯ ಮಾತಿಗೆ ಧನ್ಯವಾದಗಳು
ಆ ಸಂದರ್ಭದಲ್ಲಿ ಮನಸ್ಸಿಗೆ ನೋವಾಗಿದ್ದು ನಿಜ ಅದರೆ ಈಗ ಮನಸ್ಸು ಹಗುರವಾಗಿದೆ.
ನನ್ನಂಥ ಕಿರಿಯಳ ಬರಹವನ್ನು ನಿಮ್ಮಂಥ ಹಿರಿಯರು ನಿರೀಕ್ಷಿಸುತ್ತೀರಾ ಎಂಬು ಮಾತೇ ಸಾಕು ನಮ್ಮಂಥವರಿಗೆ ಬರೆಯಲು ಪ್ರೋತ್ಸಾಹ ನೀಡುತ್ತದೆ
ರೂಪ
ಬೀದಿಯಲ್ಲಿ ಬರುವಾಗ ನಾಯಿಯೂ ಬೊಗುಳುತ್ತದೆ, ಕೋಗಿಲೆಯೂ ಕೂಗುತ್ತದೆ. ಎಲ್ಲವನ್ನೂ ಸಮದೃಷ್ಟಿಯಲ್ಲಿ ನೋಡಿ. ನೀವು ಹೋಗುತ್ತಿರುವ ಗುರಿ ನಿಮ್ಮ ಲಕ್ಶ್ಯದಲ್ಲಿರಬೇಕೇ ಹೊರತು ನಾಯಿ, ಕೋಗಿಲೆಗಳ ಮೇಲಲ್ಲ !!
ನಮ್ಮ ಲಕ್ಷ್ಯ ಮಾತ್ರ ಗುರಿಯತ್ತ ಇರಲಿ,
ಆದರೆ ದೃಷ್ಠಿ ಸದಾ ಹಾದಿಯ ಮೇಲಿರಲಿ.
ನಾವು ನಡೆವ ಹಾದಿಯನು ನಿರ್ಲಕ್ಷಿಸಿದರೆ,
ಲಕ್ಷ್ಯದಲ್ಲಿರುವ ಗುರಿಯ ತಲುಪುವುದೆಂತಯ್ಯಾ?
- ಆಸು ಹೆಗ್ಡೆ
ಖಂಡಿತಾ
ನಿಮ್ಮ ಸಲಹೆ ಎಲ್ಲಾ ರೀತಿಯ ಗುರಿಗೂ ಮಾರ್ಗದರ್ಶಿ.
ಹೊಗಳಿಕೆಗೆ ಹಿಗ್ಗದೆ , ತೆಗಳಿಕೆಗೆ ಕುಗ್ಗದೆ ಬದುಕುವುದು ಕೇವಲ ಸ್ತಿತಪ್ರಜ್ನರಿಗೆ ಮಾತ್ರ ಸಾಧ್ಯವೇನೋ?
ರೂಪ
ನಿರಂತರ ಸಾಧನೆಯಿಂದ ಎಲ್ಲವೂ ಸಾಧ್ಯ.
ಛಲ ಇರಬೇಕು, ತಪ್ಪು ಒಪ್ಪುಗಳ ಅರಿವಿರಬೇಕು ಅಷ್ಟೆ.
ಪ್ರಯತ್ನ ಸಾಗಲಿ.
ಕನ್ನಡದ ಸೇವೆಯಲ್ಲಿ ನಿಮ್ಮನ್ನು ಹುರಿದುಂಬಿಸಿ ಸಹಕರಿಸುತ್ತಿರಲು ನಾವು ಸದಾ ಸಿದ್ಧ.
ನೇರ ನುಡಿಗಳು ಖಾರವಾಗಿ ಕಂಡುಬರಬಹುದು.
ಆದರೆ, ಆ ನುಡಿಗಳ ಹಿಂದಣ ಭಾವನೆಗಳಿಗೆ ಬೆಲೆಕೊಡಿ.
ಹಾಸ್ಯವನ್ನು ಹಾಸ್ಯವಾಗಿಯೆ ಪರಿಗಣಿಸಿ.
ಗಂಭೀರ ಸಲಹೆಗಳನ್ನು ಗಂಭೀರವಾಗಿಯೇ ಪರಿಗಣಿಸಿ.
ಹಾಸ್ಯ ಗಂಭೀರವಾಗಿ ಮನಕೆಡಿಸುವಂತಾಗದಿರಲಿ.
ಗಂಭೀರ ಸಲಹೆಗಳು ಹಾಸ್ಯಾಸ್ಪದವಾಗದಿರಲಿ.
ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ.
ಕನ್ನಡದ ಚಾಕರಿಯನ್ನು ಹೀಗೇ ಮುಂದುವರೆಸಿಕೊಂಡು ಹೋಗಿ.
ನೀವು ಬರೆದದ್ದು ನಿಮ್ಮ ಆತ್ಮಕ್ಕೆ ತೃಪ್ತಿಯನ್ನು ನೀಡಲಿ.
ಮಿಕ್ಕವರ ಚಿಂತೆ ಬೇಡ ನಿಮಗೆ.
ನಿಮಗೆ ಶುಭವಾಗಲಿ.
-ಆಸು ಹೆಗ್ಡೆ
ಮನಸಿನೊಳಗೆ ಕಹಿನೋವು
ಕನಸಿನೊಳಗೆ ಬರದಿರಲೆಂದು
ಪ್ರೆಮದೀಪ ಹಚ್ಚು ಗೆಳತಿ
ಒಂದು ಸಾರ್ತಿ ದೀಪ ಹಚ್ಚಿ ಬಿಡಿ ಅಮ್ಮ. ಎಲ್ಲ ಸರಿಹೋಗುತ್ತೆ ಇದು ನನಗೆ ನಾನೇ ಮಾಡಿಕೊಳ್ಳೋ ಚಿಕಿತ್ಸೆ, ನಿಮಗೂ ಸರಿಹೋಗಬಹುದೇನೋ,
ಇತಿ ನಿಮ್ಮ
ಹರೀಶ್ ಆತ್ರೇಯ
ಖಂಡಿತಾ ಆ ದೀಪದೆದುರು ಎಂತಹ ಕಹಿ ಇದ್ದರೂ ದೂರವಾಗುತ್ತದೆ, ಮನಸ್ತಾಪಗಳು ಕರಗುತ್ತವೆ . ಆದರೆ ಹಚ್ಚಲು ಮನಸ್ಸು ಬರಬೇಕಷ್ಟೇ.
ಆದರೆ ನಾನಂತೂ ದೀಪ ಹಚ್ಚುತ್ತೇನೆ
ಅದೂ ಮುಂಜಾನೆ ೪.೩೦ಗೆ
ಏಕೆಂದರೆ ಇಂದಿನಿಂದ ಧನುರ್ಮಾಸದ ಪೂಜೆ ಶುರುವಾಗಿದೆ :)
ನಿಮ್ಮ ಸ್ನೇಹಪೂರ್ವಕ ಸಲಹೆಗೆ ಧನ್ಯವಾದಗಳು
ರೂಪ
ರೂಪಕ್ಕ,
ಹಿಂದೂ ಧರ್ಮದ ಬಗೆಗಿನ ಚರ್ಚೆಯಲ್ಲಿ ನೀವು ನೊಂದುಕೊಂಡಿರಬಹುದು ಎಂದುಕೊಂಡಿದ್ದೆ. ಈ ಬರಹ ಓದಿದ ಮೇಲೆ ಅದು ಖಾತರಿಯಾಯ್ತು.
ನಂಬಿಕೆ, ಪ್ರೀತಿ, ಶ್ರದ್ಧೆ, ದ್ವೇಷ -ಇವೆಲ್ಲಾ ಭಾವನಾತ್ಮಕ ಸಂಗತಿಗಳು ಇವಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುವುದು ಕಷ್ಟ. ಎರಡೂ ಬದಿಯಿಂದ ಕೇವಲ ತಾರ್ಕಿಕ ನಿಲುವುಗಳ ಮಂಡನೆ ನಡೆಯದೆ ಪ್ರತಿಯೊಂದನ್ನೂ ವೈಯಕ್ತಿಕವಾಗಿ ತೆಗೆದುಕೊಂಡು ಪ್ರತಿಕ್ರಿಯಿಸುವ ಅಪಾಯವಿರುತ್ತದೆ. ಹೀಗಾಗಿ ಇಂಥ ಚರ್ಚೆಗಳನ್ನು ನಡೆಸಲು ಮುಂದಾಗುವ ಮುನ್ನ ನಮ್ಮ ನಂಬಿಕೆ, ನಮ್ಮ ಶ್ರದ್ಧೆ, ನಮ್ಮ ಭಕ್ತಿ, ನಮ್ಮ ಭಾವನೆ ಪ್ರಶ್ನೆಯನ್ನು ತಡೆದುಕೊಳ್ಳಬಹುದೇ ಎಂದು ನಾವು ಕೇಳಿಕೊಳ್ಳಬೇಕು ಅನ್ನಿಸುತ್ತದೆ.
ಕಡೆಗೆ, ಎಲ್ಲೋ ಕೂತು ನಾಲ್ಕಕ್ಷರ ಟೈಪಿಸುವುದರಿಂದ ಜಗತ್ತು ಒಂದಷ್ಟು ಸಹನೀಯವಾಗಬಹುದು ಎಂಬ ಕಾರಣಕ್ಕೆ ಈ ಚರ್ಚೆ, ಬ್ಲಾಗು, ಲೇಖನಗಳೆಲ್ಲಾ ಇರುವುದು. ಇದರಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವುದಾದರೆ ಇವನ್ನು ಮುಚ್ಚ ತೆಪ್ಪಗೆ ಕೂರುವುದು ಸೂಕ್ತ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...
http://www.hariharap...
ಏನ್ರಿ ರೂಪ, ಎಷ್ಟೊಂದು ಜನ ನಿಮ್ಮ ಬಗ್ಗೆ ಕಾಳಜಿ ವಹಿಸಿದ್ದಾರೆ!! ನನ್ನ ಮನಸ್ಸೂ ಹಾಗೆಯೇ ,ಯಾರಾದ್ರೂ ಏನಾದ್ರೂ ಅಂದುಬಿಟ್ಟರೆ ನಿದ್ರೆನೇ ಬರುವುದಿಲ್ಲ. ಈಗಂತೂ ನೆಟ್ ಸಹವಾಸ. ಸುಮ್ಸುಮ್ನೆ ಬರೆದು ಬೈಸಿಕೊಳ್ಳುವ ವ್ಯರ್ಥ ಪ್ರಯೋಗಗಳು. ಹೊಗಳಿದ್ರೆ ಖುಷಿಯಾಗುತ್ತೆ. ನಿಂದಿಸಿದರೆ ದು:ಖ ವಾಗುತ್ತೆ. ಎರಡೂ ಆಗದ ಸ್ಥಿತಪ್ರಜ್ಞತೆ ಗಳಿಸುವುದು ತುಂಬಾ ಕಷ್ಟ. ಇದಕ್ಕೆ ಪರಿಹಾರ ಡಾ|| ಜ್ಞಾನದೇವರೇ ತಿಳಿಸಬೇಕು.
ಸಮ: ಶತ್ರೌಚ ಮಿತ್ರೇಚ| ತಥಾ ಮಾನಾಪಮಾನಯೋ: | ಶೀತೋಷ್ಣ ಸುಖ-ದು:ಖೇಶು ಸಮಸಂಗ ವಿವರ್ಜಿತ:|| ಭಗವದ್ಗೀತೆಯ ಶ್ಲೋಕ ಚೆನ್ನ. ಆಚರಣೆ?
ಅಂತೂ ಭಾವನೆಗಳಿಗೆ ಅಕ್ಷರಕೊಡುವುದು ಕಷ್ಟದ ಕೆಲಸ. ಅದನ್ನು ನೀವು ಮಾಡಿದ್ದೀರಿ. ಧನ್ಯವಾದಗಳು. ಮೇಲಿನ ಸಮಾಧಾನಗಳಿಗೆಲ್ಲಾ ನೀವು ಪ್ರತಿಕ್ರಿಯೆ ನೀಡಿದ್ದೀರಿ. ಈಗ ನೀವು ಆನಂದವಾಗಿದ್ದೀರಿ. ಮತ್ತೆ ನಾನು ಸಮಾಧಾನ ಪಡಿಸುವ ಮಾತನಾಡಿದರೆ ಮಲಗಿದ್ದವರನ್ನು ಎಚ್ಚರಗೊಳಿಸಿ "ಚೆನ್ನಾಗಿ ನಿದ್ರೆ ಮಾಡಿರೆಂದು ಹೇಳಿದಂತಾಗುತ್ತದೆ.
ಶ್ರೀಧರ್‌ರವರೇ
ಬರಿಯ ಚರ್ಚೆಗೆಲ್ಲಾ ಹೆದರುವಳಲಲ್ಲಾ ನಾನು . ಇಂತಹ ಲೇಖನ ಬರೆದು ’ರಂಪಾಟ’ ಮಾಡುವುದು ಉದ್ದೇಶವಲ್ಲ
ಆದರೆ ಅಂತಹ ಕಟು ಟೀಕೆಗೆ ಹಾಗು ವ್ಯಕ್ತಿ ಆಧಾರಿತ ಆರೋಪ, ನಿಂದೆ, ವ್ಯಂಗ್ಯ ಬರೆದು ಅವಹೇಳನ ಮಾಡಿದ ಆ ವ್ಯಕ್ತಿಗೆ ಇದರ ಅರಿವು ಆಗಲಿ ಎಂಬುದಕ್ಕಾಗಿ ಬರೆದದ್ದಷ್ಟೆ.
( ನಿಮ್ಮ ಪ್ರತಿಕ್ರಿಯೆಗೆ ಸಂಭಂಧವಿಲ್ಲ ಆದರೂ -:ನಾನು ಈ ಹಿಂದೆ ಒಂದೆರೆಡು ಬೇರೆಯ ಸೋಷಿಯಲ್ ನೆಟ್‌ವರ್ಕ್‌ಗೆ ಸದಸ್ಯಳಾಗಿದ್ದೆ. ಆದರೆ ಅಲ್ಲಿನ ಶೇ 60ರಷ್ಟು ಜನ ಬೇರೆ ಉದ್ದೇಶಕ್ಕಾಗಿಯೇ ಇಂತಹ ನೆಟ್‌ವರ್ಕ್ ಮೆಂಬರ್ ಆಗಿರುತ್ತಾರೆ .
ಆದರೆ ಸಂಪದದ ಎಲ್ಲಾ ಸದಸ್ಯರೂ ಸಭ್ಯ ಹಾಗು ಗುಣಮಟ್ಟದ ಲೇಖನ , ಬ್ಲಾಗ್. ಸ್ನೇಹಪೂರ್ವಕವಾದ ಪ್ರತಿಕ್ರಿಯೆಗಳನ್ನು ಕಂಡು ಮಾರು ಹೋದೆ.
ಈಗಂತೂ ಸಂಪದದ ಯಾವ ಲೇಖನವನ್ನೂ ಬಿಡದೆ ಓದುವುದು ನನ್ನ ಅಭ್ಯಾಸವಾಗಿದೆ.)
ನಿಮ್ಮ ಸಹೃದಯತೆಗೆ ವಂದನೆಗಳು.
ರೂಪ
ಹೌದು ರೂಪ ಅವರೇ, ಕೆಲವರಿರುತ್ತಾರೆ, ಕೇವಲ ಬ್ಲಾಗು ಹುಲಿಗಳು. ಅವರಿಗೆ ನಾಲ್ಕು ಜನದ ಜೊತೆ ಮಾತನಾಡಿ ಚರ್ಚೆ ಮಾಡುವ ಯೋಗ್ಯತೆ ಇರುವುದಿಲ್ಲ. ಏಕೆಂದರೆ ಅವರ ಕೆಲವು ಭಂಡ ವಾದಗಳು ಅಷ್ಟೇ ಟೊಳ್ಳು ಇರುತ್ತವೆ. ಹಾಗಾಗಿ ಬೇಗ ಸೋತುಬಿಡುತ್ತಾರೆ. ಇನ್ನು ಬ್ಲಾಗಿನಲ್ಲಿಯೂ ಅವರನ್ನು ಆಧಾರ ಸಮೇತ ಚರ್ಚೆಯಲ್ಲಿ ಮಣಿಸಿದರೆ ಅವಮಾನಿತರಾಗಿ ವೈಯುಕ್ತಿಕ ನಿಂದನೆ, ವ್ಯಂಗ್ಯಕ್ಕೆ ಮುಂದಾಗುತ್ತಾರೆ.
ಸಾರ್ವಜನಿಕ ಬ್ಲಾಗುದಾಣಗಳಲ್ಲಿ ವಾದಕ್ಕಿಳಿಯುವ ಮುನ್ನ ಇಂತಹ ಎಚ್ಚರಿಕೆ ಇರಲಿ ಇನ್ನುಮುಂದೆ !.
ಸುಪ್ರೀತ್ ಶ್ರೀಧರ್‌ರವರಿಗೆ ಹಾಕಿದ ಪ್ರತಿಕ್ರಿಯೆ ನೋಡೊ
ನಿಮ್ಮ ಪ್ರತಿಕ್ರಿಯೆಯಿಂದ ಈ ತಾರ್ಕಿಕ ನಿಲುವು ಎಂಬ ಪದ ನೆನಪಿಗೆ ಬಂತು. ಮೂರು ದಿನದಿಂದ ಒದ್ದಾಡುತ್ತಿದ್ದೆ.
ಧನ್ಯವಾದಗಳು
ರೂಪ
ಸದ್ಯ! ನಾನು ಏನಾದ್ರೂ ಅಂದು ಅದರಿಂದ ನೊಂದುಕೊಂಡಿದ್ದೀರೇನೋ ಅಂದುಕೊಂಡಿದ್ದೆ!
ನಾನು ಬಚಾವು :ನಗು:
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...