ಹಳೆಯ ಗೆಳೆಯ :
ಹಳೆಯ ಗೆಳೆಯ :
ಗೆಳೆತನ ಅಪೂರ್ವ. ಎಳೆಯಂದಿನಿಂದಿಂದಿಗೂ
ಒಂದೆ ಥರ. ಹಲವಾರು ವರ್ಷ ಉರುಳಿದಮೇಲೆ
ಮುಂಬಯಿಯಲೊಮ್ಮೆಗೇ ಸಿಕ್ಕ ಆ ಹಳೆ ಗೆಳೆಯ
ಕೇಳಿದನು: 'ನಾನು ಯಾರೆಂದು ತಿಳಿಯಿತೆ ನಿನಗೆ ?'
ಕಣ್ಣಲ್ಲಿ ಕಣ್ಣು. ಹುಡುಕಿಡೆ ಬೆನ್ನ ಹಿಂದುಗಡೆ.
ಮರಳ ಹುದುಲಲ್ಲಿ ಬಚ್ಚಿಟ್ಟ ಹೆಜ್ಜೆಗಳನ್ನು
ಬಗೆದೆ ಒಂದೊಂದಾಗಿ ಪುಟ ತೆಗೆದು. ಕತೆಗೆ ಕೊನೆ-
ಯಿರುವಂತೆಯೇ ಉಂಟು ಒಂದೆ ಗ್ರಂಥದಲ್ಲದರ
ಆರಂಭ, ಬೆಳವಣಿಗೆ. ಅಲ್ಲಲ್ಲಿ ನೆನಪಿಗೆಂ-
ದಿರಿಸಿ ಮರೆತಿರುವಂಥ ನವಿಲುಗರಿ.ಬಿಡಿಸಿ ನೋ-
ಡಿದರೆ ಈವತ್ತಿಗೂ ಜೀವಂತ ಚಿತ್ರಗಳು.
ಬೊಕ್ಕತಲೆ, ಕನ್ನಡಕ, ಸುಕ್ಕು, ನೆರೆಗೂದಲಿನ
ಈ ಹೊಸಾಮುಖವಾಡ ಕಿತ್ತು ನಕ್ಕೆನು: 'ಎಲಾ !
ಹುಡುಗು ಬುದ್ದಿಯ ನೀನು ಈಗಲೂ ಬಿಟ್ಟಿಲ್ಲ'
ಗೆಳೆಯ ಶ್ರೀ. ಎಚ್.ಎಸ್.ವೆಂಕಟೇಶಮೂರ್ತಿಯವರು ನಾನೂ ಬಹಳ ವರ್ಷದ ಮೇಲೆ ಮುಂಬೈ ನಲ್ಲಿ ಭೇಟಿಯಾದಾಗ. ಆಗ ರಚಿಸಿದ ಈ ಕವಿತೆ 'ಎಷ್ಟೊಂದು ಮುಗಿಲು,' ಎಂಬ 'ಕವನ ಸಂಗ್ರಹ'ದಲ್ಲಿ ಪ್ರಕಟವಾಗಿದೆ.(ಪುಟ 61),ಅಕ್ಷರ ಪ್ರಕಾಶನ, ಹೆಗ್ಗೋಡು. ದಿಸೆಂಬರ್, 1991.

- Login or register to post comments
- 533 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಹಳೆಯ ಗೆಳೆಯ:
ಹಳೆಯ ಗೆಳೆಯ:
ಶ್ರೀ.ಎಚ್.ಎಸ್. ವೆಂಕಟೇಶ್ ಮೂರ್ತಿಯವರೂ, ನಾನು ಬಾಲ್ಯ ಸ್ನೇಹಿತರು. ಹೈಸ್ಕೂಲ್ ದಿನಗಳನ್ನು ಜೊತೆಯಲ್ಲೇ ಕಳೆದೆವು. ಆಮೇಲೆ ಅವರು ಮಲ್ಲಾಡಿಹಳ್ಳಿಯಲ್ಲಿ ಅದ್ಯಾಪಕ ರಾದಾಗಲೂ ಅವರನ್ನು ಭೇಟಿಮಾಡಿದ್ದೆ.ನಂತರ ಬಹಳಕಾಲದಮೇಲೆ ಮುಂಬೈ ನಲ್ಲಿ, ಭೇಟಿ ಆಯಿತು. ಆ ಸ್ಮರಣೆಗಾಗಿ ಅವರು ತಕ್ಷಣವೇ ಮೇಲಿನ ಕವನ,"ಹಳೆಯ ಗೆಳೆಯ," ಗೀಚಿ ನನಗೆ ತೋರಿಸಿದ್ದರು. ಬೆಂಗಳೂರಿನಲ್ಲಿ ಅವರ ಮನೆಯಲ್ಲಿ ನಾನು ಮತ್ತೆ ಭೇಟಿಯಾಗಿದ್ದಾಗ ಅವರ ಕವನ ಸಂಕಲನ 'ಎಸ್ಟೊಂದು ಮುಗಿಲು' ಪುಸ್ತಕವನ್ನು ಕೊಟ್ಟರು. 'ಹಳೆಯ ಗೆಳೆಯ,' ಅದರಲ್ಲಿ ಅಚ್ಚಾದ ಕವನ; ಮೇಲೆ ಪ್ರಸ್ತುತ ಪಡಿಸಿದ್ದೇನೆ.
-ವೆಂ.
ನಿನ್ನೆ ಏಪ್ರಿಲ್ ೧
ಸಾರ್, ಹೋಗಿ ಹೋಗಿ, ನಿನ್ನೆ ಈ ಸೂತ್ರವನ್ನು ಏರಿಸಿದ್ದೀರ. ನೀವು ಸೀರಿಯಸ್ಸಾಗಿ ಬರೆದಿದ್ದರೂ ನಿನ್ನೆ ಏಪ್ರಿಲ್ ೧ನೇ ತಾರೀಕಲ್ವೇ? ಮೂರ್ಖರನ್ನಾಗಿ ಮಾಡಲು ಬರೆದಿರ್ಬೇಕು ಅಂತ ನಾ ತಿಳಿದಿದ್ದೆ.
ನಿಮ್ಮ ನೆನಪಿನ ಪುಸ್ತಕವನ್ನು ನಮ್ಮೆದುರಿಗೆ ತೆರೆದಿಟ್ಟಿದ್ದಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
'ನಿನ್ನೆ ಅಪ್ರಿಲ್ 1'
'ನಿನ್ನೆ ಅಪ್ರಿಲ್ 1',
ಶ್ರೀನಿವಾಸರಿಗೆ, ನಮಸ್ಕಾರಗಳು.
ಈ ಬಾರಿ ಯಾರೂ, 'ಏಪ್ರಿಲ್ ಫೂಲ್' ಬಗ್ಗೆ ಯೋಚಿಸಲೇ ಇಲ್ಲ. 'ನಾವು ಆಗ್ಲೇ ಫೂಲ್ ಆಗಿದ್ವಿ' ! ಅಂದರೆ, ನನ್ನ ಪತ್ನಿಯವರು ಮನೆಯಲ್ಲೇ ಜಾರಿ ಬಿದ್ದು 'ಕಾಲು ಮೂಳೆ' ಮುರಿದು ಶಸ್ತ್ರ ಚಿಕೆತ್ಸೆಯ ನಂತರ ಗುಣಮುಖರಾಗುತ್ತಿದ್ದಾರೆ.
ಕಂಪ್ಯುಟರ್ ತಿಳುವಳಿಕೆ ಕಡಿಮೆ. ಬರೆದು ಅಂಟಿಸುವದರಲ್ಲಿ ಸ್ವಲ್ಪ ತೊಂದರೆಯೆ ಆಗುತ್ತೆ. ತಪ್ಪು ತಲೆಗೆ ಹೋಗುವದರಲ್ಲೇ -ಅವಸರ ನೋಡಿ. ಆಮೇಲೆ ಈ ತರಹ ಸೂತ್ರ ಬಿಡ ಬೇಕಾಗುತ್ತೆ !
ಮನೆಯಲ್ಲಿ ಎಲ್ಲ ಆರೋಗ್ಯವೇ ?
ವೆಂ.