ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್
ಪರಿಚಯ
ವೃತ್ತಿಯಲ್ಲಿ software developer.
೨೦೦೪ರಿಂದ ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬ. ೨೦೦೫ರಲ್ಲಿ ಶುರು ಮಾಡಿದ ಒಂದು ಪ್ರಯತ್ನ ಹೀಗೆ 'ಸಂಪದ' ಆಯಿತು.
ಹುಟ್ಟಿದ್ದು ದಾವಣಗೆರೆ, ಬೆಳದದ್ದು ದುರ್ಗ, ಮೈಸೂರು, ಶಿವಮೊಗ್ಗ, ಶಿವಮೊಗ್ಗ, ದುರ್ಗ ನನ್ನ ಮನಸ್ಸಿಗೆ ಹತ್ತಿರವಾದ ಊರುಗಳು.
ಆಸಕ್ತಿ: ಕನ್ನಡ, ಫೋಟೋಗ್ರಫಿ, ಕಾರ್ಟೂನಿಂಗ್, ಸಿನೆಮಾ, ತಂತ್ರಜ್ಞಾನ, ಪುಸ್ತಕಗಳು, ಸಮುದಾಯ ಮಾಧ್ಯಮ, ಗ್ನು/ಲಿನಕ್ಸ್.
ಉಳಿದಂತೆ:
ಅಂತರ್ಜಾಲದಲ್ಲಿ ನನ್ನ ಪುಟ,
ಸಂಪದದಲ್ಲಿ ನನ್ನ ಬ್ಲಾಗ್
ಟ್ವಿಟ್ಟರಿನಲ್ಲಿ ನಾನು
FlickR ಪುಟ
ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನಾ ಕಚ್ಚುವೆ
ಇವತ್ತು ಪುತ್ತೂರಿನ ರವೀಂದ್ರ ಐತಾಳರ ಮನೆಗೆ ಹೋಗಿ ಬಂದೆವು. ಭೇಟಿ ಕೊಟ್ಟ ನಮಗೆ, ಜನರಲ್ಲಿ ಹಾವಿನ ಭಯ ಕಡಿಮೆ ಮಾಡಲು ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಅನಿಸಿತು: ಕೆಲ ಹಾವು ತಳಿಗಳ ಎರಡೆರಡು ಹಾವುಗಳನ್ನು ಸಾಕಿ ಬೆಳೆಸಿದ್ದಾರೆ. ಅದರಲ್ಲಿ ಹೊಸ ಸೇರ್ಪಡೆ ಈ ಪುಟ್ಟ ಮರಿ ಹಾವುಗಳು. ಯಾರೋ ಕಂಡ ಕೂಡಲೆ ಸಾಯಿಸದೆ ಹಿಡಿದು ತಂದುಕೊಟ್ಟದ್ದಂತೆ ಇದು, ನಾಳೆಯ ದಿನ ಕಾಡಿಗೆ ಬಿಡುವುದು ಎಂದಿದ್ದದ್ದು ಇವತ್ತು ಈ ಮಡಿಕೆಯಲ್ಲಿ ಇಟ್ಟಿದ್ದರು.
ಮಡಿಕೆ ತೆಗೆದು ನಮಗೆ ತೋರಿಸುವಾಗ ಆ ಹಾವಿನ ಮರಿಗೆ ಐತಾಳರು ಮಾಡುತ್ತಿರುವ ಕೆಲಸದ ಅರಿವು ಬಹಳ ಕಡಿಮೆ ಇದ್ದೀತು. ಇವನ್ನು ವಾಪಸ್ ಕಾಡಿಗೆ ಬಿಡುತ್ತಿರುವ ಐತಾಳರಿಗೆ ಮೇಲಿರುವ ಚಿತ್ರದಲ್ಲಿ ಕಚ್ಚಿದಂತೆ ಕಚ್ಚುವುದಿರಲಿ, ಅದರ ಜೀವ ಉಳಿಸಿದವರಿಗೂ ಹೀಗೇ ಕಚ್ಚಬಹುದು ಕೂಡ. ಅದೇ ಅಲ್ಲವ ಪ್ರಕೃತಿ? :-)
ಐತಾಳರು ಹಾವು ಕಚ್ಚಿದವರಿಗೆ ಔಷಧ ಕೊಡುತ್ತ ಜೀವನ ಕಂಡುಕೊಂಡಿದ್ದಾರೆ. ಆದರೆ ಇವರು ಸಾಕಿರುವ ಹಾವುಗಳು ಜನರ ಭಯ, ಮನಸ್ಥಿತಿ ಬದಲಾಯಿಸುವಷ್ಟು. ಒಳ ಹೊಕ್ಕ ಕೂಡಲೆ ಎದುರಿಗೊಂದು ಕಾಳಿಂಗ ಸರ್ಪ. ನನಗೆ ಯಾವುದರಿಂದ ದೂರ ಓಡುತ್ತೇನೆಯೋ ಅದಕ್ಕೇ ಕಟ್ಟಿ ಹಾಕಿದಂತಾಯಿತು, ಆ ಕ್ಷಣ. ಆದರೆ ಸ್ವಲ್ಪ ಹೊತ್ತಿನಲ್ಲೇ ಹಾವುಗಳ ಭಯ ಕಡಿಮೆಯಾದದ್ದಲ್ಲದೆ ಸುಮಾರು ವಿಷಯಗಳು ಹಾವುಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಹಾವುಗಳಷ್ಟೇ ಅಲ್ಲದೆ ಹಾವು ಕಚ್ಚಿದವರಿಗೆ ಔಷಧ ಕುರಿತು ರವೀಂದ್ರನಾಥರಿಟ್ಟಿರುವ ಆಸಕ್ತಿ ಅಮೂಲ್ಯವಾದದ್ದು ಎಂದು ನಮಗೆ ಅನಿಸಿತು.
- Login or register to post comments
- 1121 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಚೆನ್ನಾಗಿದೆ ಚಿತ್ರ - ಕನ್ನಡಿ ಹಾವು ಅನ್ನೋದಾ ಇದು?
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಹಾವಿನ ಹೆಸರು ಮರೆತುಹೋಯ್ತು. :-)
ಕನ್ನಡಿ ಹಾವು ಅಂದರೆ ಹೇಗಿರುತ್ತದೆ?
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಏನ್ರೀ ಹರಿಯವರೇ!!
ಹಾವಿಗೆ ಹೆಸರೂ ಬೇರೆ ಇಡ್ತಾರಾ ಅಥವಾ ಇಟ್ಟಿದ್ದಾರಾ? ಯಪ್ಪಾ!! :೦ ;)
ಧನ್ಯವಾದಗಳೊ೦ದಿಗೆ,
ಮನಹ್ಪಠಲ
ಛೆ, ಈ ರೀತಿಯ ಹಾವಿಗೆ ಇರುವ ಹೆಸರು ಅಂದದ್ದು ಕಣ್ರಿ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಹರಿ,
ಬರಹ ಚೆನ್ನಿದೆ...
> ಅದರ ಜೀವ ಉಳಿಸಿದವರಿಗೂ ಹೀಗೇ ಕಚ್ಚಬಹುದು ಕೂಡ. ಅದೇ ಅಲ್ಲವ ಪ್ರಕೃತಿ?
ಈ ವಾಕ್ಯ ತುಂಬಾ ಹಿಡಿಸಿತು...
ನಮ್ಮನ್ನು ಇಷ್ಟಪಡುವ ಎಷ್ಟೋ ಮಂದಿಗೆ ತಿಳಿದೋ, ತಿಳಿಯದೆಯೋ ನೋವು ಕೊಡುತ್ತೇವೆ ಅಲ್ಲವೇ?
--ಶ್ರೀ
ನಿಜ. ಇನ್ನೂ ಹುಟ್ಟಿ ಒಂದೆರಡೂ ದಿನ ಆಗದ ಹಾವಿನ ಮರಿಯಲ್ಲಿ ಎಷ್ಟು ದ್ವೇಷ, ಕಚ್ಚುವ ಮನಸ್ಸು ಎಂದು ಮಾತನಾಡಿಕೊಳ್ಳುತ್ತಿದ್ದೆವು ನಾವುಗಳು ಅಲ್ಲಿ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಹರಿ,
ಚೆನ್ನಾಗಿದೆ! ಹಾವುಗಳ ಜತೆಗೆ ಒಡೆಯ ರವೀಂದ್ರ ಐತಾಳರ ಚಿತ್ರವೂ ಹಾಕಿದ್ದರೆ ಚೆನ್ನಾಗಿರುತ್ತಿತ್ತು!
ಅದರ ಬಗ್ಗೆ ಮತ್ತೊಂದು ಬ್ಲಾಗಿನಲ್ಲಿ ಸವಿವರವಾಗಿ ಬರೆಯುವ ಐಡಿಯ ಇದೆ. ಇದನ್ನು ವಸಂತ್ ಬರೆಯಬಹುದು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಅನಿವಾಸಿಗಳೆ, ಈಗ ವಸಂತ್ ಈ ಕುರಿತು ಒಂದು ಲೇಖನ ಪೋಸ್ಟ್ ಮಾಡಿದ್ದಾರೆ. ಸಾಧ್ಯವಾದಾಗ ಓದಿ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
http://www.hariharap...
ಹರಿಪ್ರಸಾದ್,
ಫೋಟೋ ಮತ್ತು ಲೇಖನ ಚೆನ್ನಾಗಿದೆ. ಹಾವುಗಳ ಬಗೆಗೆ ಇನ್ನೊಂದಿಷ್ಟು ಬರೆಯಿರಿ.
ನನಗೆ ಗೊತ್ತಿರುವ ಮಟ್ಟಿಗೆ ಈ ಹಾವುಗಳ ಬಗ್ಗೆ ಸುಮಾರು ಮಾಹಿತಿ ಇಂಟರ್ನೆಟ್ಟಿನಲ್ಲಿ ಆಗಲೇ ಲಭ್ಯವಿದೆ.
ಮೇಲಿರುವ ಕಿಂಗ್ ಕೋಬ್ರ ಅಥವ ಕಾಳಿಂಗ ಸರ್ಪ ಕಚ್ಚಿದ ನಿಮಿಷಗಳಲ್ಲಿಯೇ ಮನುಷ್ಯನೊಬ್ಬನ ಪ್ರಾಣ ಹಾರಿ ಹೋಗಬಹುದು ಎಂದು ಓದಿದೆ. ಆನೆಗೆ ಕೂಡ ಸುಮಾರು ೩ ಗಂಟೆ ಸಮಯ ಇದು ಕಚ್ಚಿದರೆ ಎಂದು ಓದಲು ಸಿಕ್ಕಿತು. ಆದರೆ ಭಾರತದಲ್ಲಿ ಹಾವುಗಳಿಂದ ಆದ ಹೆಚ್ಚಿನ ಪ್ರಾಣಹಾನಿ ವೈಪರ್ ಅಥವ ಕೊಳಕುಮಂಡಲದಿಂದ ಆದದ್ದು ಎಂದು ಕೂಡ ಹಲವೆಡೆ ಬರೆದಿದ್ದಾರೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಹರಿ,
ನಾಗರಹಾವಿನ ಚಿತ್ರ ತುಂಬಾ ಚೆನ್ನಾಗಿದೆ.
-ಅನಿಲ್.
ಹೆಡೆ ಎತ್ತಿರುವುದನ್ನು ನೀವು ನಾಗರ ಹಾವು ಎನ್ನುತಿರುವಿರಾ? ಅದು ಕಾಳಿಂಗ...
--ಶ್ರೀ
ಹೆಡೆ ಎತ್ತಿದ್ದರಿಂದ ಅದು ನಾಗರಹಾವೆಂದು ತಿಳಿದೆ.
ನಾಗರಹಾವು ಮತ್ತು ಕಾಳಿಂಗ ಸರ್ಪ ಬೇರೆ ಬೇರೆ ಜಾತಿಯವೇ?
full confusion ಆಗಿದೆ.
ಯಾರಾದರೂ ತಿಳಿಸಿ. ಪ್ಲೀಸ್...
-ಅನಿಲ್.
ಇದು ನಾಗರ ಹಾವು:
http://en.wikipedia....
ಇದು ಕಾಳಿಂಗ:
http://en.wikipedia....
--ಶ್ರೀ
ನನ್ನಿ.
-ಅನಿಲ್.
ಉರಗ ಐತಾಳರೆಂದೆ ಹೆಸರಾಗಿರುವ ಐತಾಳರ ಬಗ್ಗೆ ಬರೆದದ್ದಕ್ಕೆ ನನ್ನಿ.
ಹಾವುಗಳನ್ನು ನೋಡಿ ಖುಷಿಯಾಯಿತು. ಕೆಲವು ನಿಸರ್ಗ ಪ್ರಾಣಿಗಳು (ಎಕ್ಸೋಟಿಕ್) ಎಕ್ಸ್ಟಿಂಕ್ಟ್ ಆಗುವುದು ನೋಡಿದರೆ, ಹೀಗೆ ಹಾವಿನ ಮರಿಗಳು ನೋಡಕ್ಕೆ ಮುಂದೆಯೂ ಸಿಕ್ಕುತ್ತಾ? ಎಂಬ ಪ್ರಶ್ನೆ ಬರುತ್ತದೆ. ಚಿತ್ರ ಮತ್ತು ವ್ಯಕ್ತಿ-ವಿಷಯಕ್ಕೆ ಧನ್ಯವಾದಗಳು!
ಧನ್ಯವಾದಗಳು!
ರಸಿಕತೆ - ನನ್ನ ಬ್ಲಾಗ್: ರಂಗುರಂಗಿನರಸಿಕತೆಯಕಡಲು! ಸಂಪದದಲ್ಲಿ
ಹಾಗೆ ನೋಡಿದರೆ ಮನುಷ್ಯರೂ ಉಳಿಯಲಿಕ್ಕಿಲ್ಲ! ಮನುಷ್ಯರೇ ಮಾಡಿಟ್ಟುಕೊಂಡ ತೊಂದರೆಗಳು ಅವರನ್ನೇ ತಿನ್ನುವುದು ಗ್ಯಾರಂಟಿ ಅನ್ನಿಸುತ್ತದೆ ಒಮ್ಮೊಮ್ಮೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಎರಡನೆ ಹಾವಿನ ಚಿತ್ರ ನೋಡಿದ ತಕ್ಷಣ ನೆನಪಾಗಿದಿದ್ದು ಮೈಸೂರಿನ ನನ್ನ ತೋಟದ ಮನೆಯಲ್ಲಿ ಇದೇ ಕಾಳಿಂಗ ಸರ್ಪ ಹಿಡಿದು ಸ್ಟೀಲ್ ದ್ರಮ್ನಲ್ಲಿ ಹಾಕಿಕೊ೦ಡು ಮೈಸೂರು - ಭೋಗಾದಿ ರಸ್ತೆಯಲ್ಲಿನ ಬೀರಿಹು೦ಡಿಯಿ೦ದ ಆಚೇ ಇರುವ ಜನ ಜ೦ಗುಳಿ ಇರದ ಪಾಳು ಜಾಗದಲ್ಲಿ ಬಳಿ ಬಿಟ್ಟು ಬನ್ದಿದ್ದು. ಅವತ್ತಿನ ಬೆಳಿಗ್ಗೆ ಹಸುವಿನ ಹಾಲು ಕರೆದು ಹೊರಗೆ ಕಟ್ಬೇಕೂ, ಮೂರ್ಮಾರುದ್ದದ ಈ ಹಾವು ಕಾಣ್ಶ್ಕೋಳೋದಾ? ಸರೀ, ಸ್ನೇಹಿತರಾದ ಸ್ನೇಕ್ ಶ್ಯಾಮನನ್ನಾ ಫೋನಾಯಿಸಿದ್ದಾಯ್ತು(ಮು೦ಚೆಲ್ಲಾ ತಕ್ಷಣ ಬರ್ತಿದ್ರೂ). ಬರ್ತೇನೆ ಹೇಳಿ ಸುಮಾರ್ ಹೊತ್ತು ಕಾದ್ರೂ ಬರೋ ಸೂಚನೆ ಕಾಣ್ಲಿಲ್ಲಾ. ಮತ್ತೊಮ್ಮೆ ಫೋನಾಯಿಸಿದಾಗ ಬೇರೆಲ್ಲೋ ಹಾವು ಹಿಡ್ಯೊದ್ರಲ್ಲಿ ಬಿಜಿ ಇದ್ದ್ರೂ ಅ೦ತ ಕಾಣ್ಸುತ್ತೆ, ಸರೀ ನಾನೆ ಫೋನಲ್ಲೇ ಹಾವನ್ನ ಹಿಡಿಯೋದನ್ನ ಹೇಳಿಕೊಡ್ತೇನೆ, ನೀವುಗಳು ಹಿಡಿಯಕ್ಕ್ಕಾದ್ರೇ ಹಿಡಿಯಿರಿ, ಇಲ್ಲಾ ನಾನ್ಬ೦ದು ಹಿಡಿತೇನೆ ಅ೦ತೇಳಿ ಫೋನಿಟ್ರು. ಈ ಹಾವನ್ನಾ ಹಿಡಿಯೋದ್ರಲ್ಲಿ ಕಶ್ಟಪಟ್ಟಿದ್ದು ನೋಡೀದ್ರೆ ಯಾರಿಗೂ ಬೇಡ ಆ ಪಜೀತಿ. :( ನಾನು ನನ್ನ ತಮ್ಮ ಮತ್ತು ಮನೆಯವರೆಲ್ಲರೂ ಸೆರ್ಕೊ೦ಡು ಕಾಳಿ೦ಗನನ್ನ ಹಿಡಿಯೊ ಆಶ್ಟು ಹೊತ್ತಿಗೆ ಎಲ್ಲ್ರೂ ಸುಸ್ತು. ಅತ್ಲಾ ಕಡೆ ನಮ್ಮ ಮನೆಯ ನಾಯಿಗಳ ಕಿರುಚಾಟ, ಇತ್ಲಾ ಕಡೆ ಈ ಹಾವು ಹಿಡಿಯಕ್ಹೋದ್ರೆ ಸ್ನೇಹಿತ ಶ್ಯಾಮನ್ನಿಲ್ಲದೆ ನಮ್ಮ ಕೈಗಳಿ೦ದ ತಪ್ಪಿಸ್ಕೊ೦ಡು ಹೋಗೊದೂ ನೋಡಿ ನಮ್ಮ ಪಾಡು ನಾಯಿ ಪಾಡು ಆಗಿತ್ತು. ಸರೀ ಹತ್ನಿಮ್ಷ ರೆಸ್ಟ್ ತೊಗೊ೦ಡು, ಮತ್ತೆ ಹಾಗು ಹೀಗೂ ಮಾಡಿ ಹಾವಿನ ಮದ್ಯಭಾಗದಡಿ ಉದ್ದದ ಕೋಲ್ದೂರ್ಸಿ ಸ್ಟೀಲ್ ದ್ರಮ್ನ ಒಳಗೆ ಹಾಕಿದಾಯ್ತು. ಡ್ರಮ್ನಾ ಟೈಟಾಗಿ ಮುಚ್ಚಿದಾಗ ಅಷ್ಟೇ ನಮಗೆ ನೆಮ್ಮದಿ........ ಉಹ್!!
ಧನ್ಯವಾದಗಳೊ೦ದಿಗೆ,
ಮನಹ್ಪಠಲ
ಸಧ್ಯ. ಇಂದಿನ ದಿನಗಳಲ್ಲಿ ನಾಗನ ಬಗ್ಗೆ ಮೂಢನಂಬಿಕೆ ಆಮೆಯವೇಗದಲ್ಲಿ, ಹೋಗ್ತಾಇದೆ. ಇದೊಂದು ಧನಾತ್ಮಕ ಬೆಳವಣಿಗೆ. ’ಥ್ಯಾಂಕ್ಸ್ ಟು ’ಡಿಸ್ಕವರಿ ಛಾನೆಲ್.’..ಮತ್ತು ಇತರರು...
ಕನ್ನಡ ನನ್ನ ತಾಯ್ನುಡಿ; ನನ್ನುಸಿರು.
ಲಕ್ಷ್ಮೀ ವೆಂಕಟೇಶ, ಮುಂಬೈ.
ವೆಂಕಟೇಶರೆ,
ಲಕ್ಷ್ಮೀ ವೆಂಕಟೇಶ ?
******
ಮನಹ್ಪಠಲರೆ,
ಕಾಳಿಂಗ ಸರ್ಪ ಹಿಡಿದು ಡ್ರಮ್‌ನೊಳಗೆ ಹಾಕಿದಿರಾ? ಅದೂ ಫೋನ್ ಮೂಲಕ ಹಿಡಿಯುವ ಕ್ರಮವನ್ನು ತಿಳಿದುಕೊಂಡು! ನೀವು ಬಹಳ ದೊಡ್ಡ ರಿಸ್ಕ್ ತೆಗೆದುಕೊಂಡಿರಿ.
ನಿಜ ಹೇಳುತ್ತೇನೆ. ನನಗೆ ಹರಿಯವರು ಹಾಕಿದ ಕಾಳಿಂಗ ಸರ್ಪದ ಫೋಟೋವನ್ನು ದಿಟ್ಟಿಸಿ ನೋಡಲೂ ಭಯವಾಯಿತು. (ಒಮ್ಮೆ ಐತಾಳರ ಬಳಿ ಹೋಗಿ ಹಾವಿನ ಭಯ ಕಮ್ಮಿ ಮಾಡಿಕೊಂಡು ಬರಬೇಕು. ಅಥವಾ ಇಲ್ಲೇ ತಾಯಿತ ಕಟ್ಟಿಸಿದರೆ ಆದೀತಾ :) )
ಹರಿಯವರಿಗೆ ನನ್ನಿ.
-ಗಣೇಶ.
ನನ್ನಹೆಸರು. ಮಿಲಿಯನ್ ಜನರಲ್ಲಿ ಒಂದೇ ? ಗೊತ್ತಿಲ್ಲ.
ಲಕ್ಷ್ಮೀನಾರಾಯಣ, ಲಕ್ಷ್ಮೀಪತಿ, ನಾಥ, ರಮಣ ಇತ್ಯಾದಿಗಳಿವೆ. ಆದರೆ, ಲಕ್ಷ್ಮೀವೆಂಕಟೇಶ್ ಮಾತ್ರ, ಇಲ್ಲವೇ ಇಲ್ಲವೇನೋ ಅಂತ ನನಗನ್ನಿಸಿದೆ. ಒಬ್ಬಟೀವಿ ರಿಪೋರ್ಟರ್, ಶ್ರೀಮತಿ. ಲಕ್ಷ್ಮೀವೆಂಕಟ್ ಇದಾರೆ, ಮುಂಬೈನಲ್ಲಿ. ಇನ್ನು ’ಲಕ್ಷ್ಮೀ ವೆಂಕಟೇಶ ಲಾರಿಸರ್ವೀಸ್” ಗಳು ಬಹಳವಾಗಿವೆ. ಆಂಧ್ರಪ್ರದೇಶದಲ್ಲಿ, ಲಕ್ಷ್ಮೀ ವೆಂಕಟೇಶವೆಂಬ ಒಂದು ದೇವಾಲಯವಿದೆ. ನಮ್ಮತಂದೆಯವರು ಸ್ವಲ್ಪದಿನ ವಾಯಲ್ಪಾಡಿನಲ್ಲಿ ಕೆಲಸದಲ್ಲಿದ್ದರಂತೆ. ಅಲ್ಲಿ ಲಕ್ಷ್ಮೀವೆಂಕಟೇಶ ದೇವಾಲಯವಿತ್ತಂತೆ. ಆ ಹೆಸರನ್ನೇ ನನಗೆ ಇಟ್ಟಿರುವುವು. ಕೊನೆಯಪಕ್ಷ ನಾನು ಹೇಳಬಹುದಲ್ಲವೇ ? ’ಲಾಖೋಂ ಮೆ ಏಕ್ ಎಂದು !
ಕನ್ನಡ ನನ್ನ ತಾಯ್ನುಡಿ; ನನ್ನುಸಿರು.
ಲಕ್ಷ್ಮೀ ವೆಂಕಟೇಶ, ಮುಂಬೈ.
ಲಕ್ಷ್ಮೀ ವೆಂಕಟೇಶರೆ,
ನಂಬಲಾಗುತ್ತಿಲ್ಲ! ನಿಜಕ್ಕೂ ನೀವು ಮಿಲಿಯಕ್ಕೊಬ್ಬರೇ!!
ನೀವು ಹೇಳಿದ ಮೇಲೆ ಬೆಂಗಳೂರಿನ ಟೆಲಿಫೋನ್ ಡೈರೆಕ್ಟರಿ ತೆಗೆದು ನೋಡಿದೆ. ಒಂದು ಹತ್ತು ಮಂದಿಯ ಟೆಲಿಫೋನ್ ನಂಬರ್ ನಿಮಗೆ ಕೊಡಬೇಕೆಂದಿದ್ದೆ. :( ಒಂದೂ ಸಿಗಲಿಲ್ಲ.
-ಗಣೇಶ.
ಹೂನ್ರಿ ಗಣೇಶರೇ!
ಬಹಳ ದೊಡ್ಡ ರಿಸ್ಕೇ ಕಣ್ರಿ ಆಗ ಮಾಡಿದ್ದು... ಈಗ ನಮಗ೦ತೂ ಆ ಧೈರ್ಯ ಬರುತ್ತೋ, ಬಿಡುತ್ತೋ ಗೊತ್ತ್ಲಿರಿ....
ನಮಗೆ ಬೇರೇ ದಾರಿ ಕಾಣ್ಳಿಲ್ಲಾ, ನಾವಾಗ್ನಾವೇ ಹಿಡಿಯೋದ್ ಬಿಟ್ಟ್ಬಿಟ್ಟೂ, ಮತ್ಯಾರಾದ್ರೂ ಅಲ್ಲಿನ ಹಳ್ಳಿಗರನ್ನ ಜತೆಗೆ ಹಿಡಿಯೋಕೆ ಅ೦ತ ಕರ್ದಿದ್ರೇ ಹಿಡಿಯೋಕ್ಬದಲು, ಆ ಪಾಪದ ಜ೦ತುವನ್ನಾ ಕೊ೦ದಾಕ್ಬಿಟ್ಟೀರೋರು.
ಅದೇ ಮೊದುಲು, ಅದೇ ಕೊನೇ...
ಈಗ೦ತೂ ಕೆಟ್ಪಟ್ನ ಸೆರ್‍ಕೊ೦ಡು ಹಾವಿರ್ಲೀ, ಚೇಳನ್ನೂ ನೋಡಕ್ಕ್ ಸಿಗೋದಿಲ್ಲಾ.. :(
ಧನ್ಯವಾದಗಳೊ೦ದಿಗೆ,
ಮನಹ್ಪಠಲ
ಹರಿ, ಆರಾಮವಾಗಿ ಕಡಲತೀರದಲ್ಲಿ ಓಡಾಡ್ಕಂಡಿದ್ದೀರಲ್ಲ, ನಿಮ್ಮನ್ನು ನೋಡಿ ಅಸೂಯೆಯಾಗುತ್ತೆ ಕಣ್ರಿ. ಲೇಖನ-ಫೊಟೊ ಸಕತ್ತಾಗಿವೆ. ಸುಮ್ಮನೇ ಹೊಗಳುತ್ತಿಲ್ಲ ಮಾರಾಯ್ರೇ. ನಿಜವಾಗಿಯೂ ಚೆನ್ನಾಗಿವೆ. ನನ್ನ ಫೀಚರ್ ರೈಟಿಂಗ್ ದಿನಗಳು ನೆನಪಾಗಿ ಬೇಸರವೂ ಆಯ್ತು.
ಮತ್ಯಾವಾಗ ಇತ್ತ ಪಯಣ?
- ಚಾಮರಾಜ ಸವಡಿ
http://chamarajsavad...
ಇಲ್ಲ, ನಿನ್ನೆ ಬೆಳಿಗ್ಗೆಯಿಂದ ಮತ್ತದೇ ಜಾಗ, ಮತ್ತದೇ ಕೆಲಸ, ಮತ್ತದೇ ಪಾಡು. ಬೆಂಗಳೂರಿಗೆ ವಾಪಸ್. ಸೋಮವಾರ ಬೆಳಿಗ್ಗೆ ಸಂಪದಕ್ಕೆ ಬಂದ ಟ್ರಾಫಿಕ್ಕು ಗಾಬರಿ ಹುಟ್ಟಿಸಿ ನನ್ನ ಉಳಿದೆಲ್ಲ ಕೆಲಸಗಳಿಗೆ ಸ್ವಲ್ಪ ಹೊತ್ತು ಇತಿಶ್ರೀ ಹಾಡಿಸಿತ್ತು.
ಇವತ್ತು ನಿನ್ನೆ ಜ್ವರ. ಕೆಮ್ಮುತ್ತ ನಡುಗುತ್ತ ಕಣ್ಣು ಬಿಡಲಾಗದಿದ್ದರೂ ಹಾಗೇ ಈ ವಾರದ ಕೆಲಸಗಳನ್ನು ಮುಗಿಸುವತ್ತ ನೋಡಲೇಬೇಕು!
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಹರಿಯವರಿಗೆ, ನಿಮ್ಮ ಫೋಟೋಗಳಿಗೆ ಧನ್ಯವಾದಗಳು. ಆ... ಶಿರೋನಾಮ, " ನಾನೆಲ್ಲಿ ಕಚ್ಚುವೆ " ? ಎಂದಿದ್ದರೆ ಚೆನ್ನಾಗಿತ್ತೇನೋ.... ಹೇಳಿ...
ಕನ್ನಡ ನನ್ನ ತಾಯ್ನುಡಿ; ನನ್ನುಸಿರು.
ಲಕ್ಷ್ಮೀ ವೆಂಕಟೇಶ, ಮುಂಬೈ.
ಈ ಎರಡನ ಫೋಟೊ ದಲ್ಲಿರುವ ಕಾಳಿ೦ಗನನ್ನ ಎಶ್ಟು ಮುದ್ದ್ಮುದ್ದಾಗಿ, ನಿ೦ತಿದೆ? ಎಶ್ಟು ಸಲ ನೋಡಿದ್ರೂ, ನೋಡ್ತಾ ಇರ್ಬೇಕು ಅ೦ತ ಅನ್ಸುತ್ತೆ..
ಧನ್ಯವಾದಗಳೊ೦ದಿಗೆ,
ಮನಹ್ಪಠಲ
ಹೌದಲ್ರಿ. ಮುಂಚೆಯೆಲ್ಲ ಹಾವಿನ ಫೋಟೋ ನೋಡೋಕೂ ಹೆದರ್ತಿದ್ದೆ. ಈಗ ಒಂದು ಥರಾ ಡಿಫರೆಂಟ್ ಫೀಲಿಂಗ್ - ಪ್ರಕೃತಿಯ ಬಗ್ಗೆ ಕುತೂಹಲ ಹುಟ್ಟಿಸುವಂಥದ್ದು.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಹರಿ,
ಮರಿ ಹಾವುಗಳ ಮಡಕೆಯಲ್ಲಿರೋದು ಹಾವಿನ ಮೊಟ್ಟೆಗಳಾ?
-ಸವಿತ
ಬಹುಶಃ. ಸರಿಯಾಗಿ ಗಮನಿಸಲಿಲ್ಲ. ಫೋಟೋ ತೆಗೆಯುವ ಭರದಲ್ಲಿ ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. :)
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಹರಿ ಸಕ್ಕತ್, ಸ್ವಲ್ಪದರಲ್ಲೇ ಮಿಸ್ ಆಯ್ತು :(
--
PaLa